For Quick Alerts
ALLOW NOTIFICATIONS  
For Daily Alerts

ದೀಪಾವಳಿ: ಚಿನ್ನದ ಮೇಲೆ ಹೂಡಿಕೆ ಉತ್ತಮ ಸಮಯವೇ, ಮೋತಿಲಾಲ್ ಓಸ್ವಾಲ್ ಹೇಳುವುದೇನು?

|

ಚಿನ್ನ ಖರೀದಿ ಮಾಡಲು ಈ ದೀಪಾವಳಿಯು ಉತ್ತಮ ಸಮಯ. ಈ ದೀಪಾವಳಿಯಲ್ಲಿ ಚಿನ್ನ ಹೂಡಿಕೆ ಮಾಡಬಹುದು ಎಂದು ಮೋತಿಲಾಲ್ ಓಸ್ವಾಲ್ ತಿಳಿಸಿದೆ. ಪ್ರಸ್ತುತ ಬಡ್ಡಿದರ ಹಾಗೂ ಹಣದುಬ್ಬರ ಮೇಲುಗೈ ಸಾಧಿಸಿದೆ ಈ ಸಂದರ್ಭದಲ್ಲಿ ಚಿನ್ನದ ದರ ಶೀಘ್ರ ಮೇಲಕ್ಕೆ ಏರಬಹುದು. ಕಡಿಮೆ ದರ ಇರುವಾಗಲೇ ಚಿನ್ನದ ಮೇಲೆ ಹೂಡಿಕೆ ಅಥವಾ ಚಿನ್ನದ ಹೂಡಿಕೆ ಉತ್ತಮ ಎಂಬುವುದು ಮೋತಿಲಾಲ್ ಓಸ್ವಾಲ್ ಅಭಿಪ್ರಾಯವಾಗಿದೆ.

ಈ ಬಗ್ಗೆ ಮೋತಿಲಾಲ್ ಓಸ್ವಾಲ್ ಫಿನಾನ್ಶಿಯಲ್ ಸರ್ವಿಸ್ ಲಿಮಿಟೆಡ್ (ಎಂಒಎಫ್‌ಎಸ್‌ಎಲ್) ಗೋಲ್ಡ್ ನೋಟ್ (ಚಿನ್ನ ಖರೀದಿ ಬಗ್ಗೆ ಅಭಿಪ್ರಾಯ) ಬಿಡುಗಡೆ ಮಾಡಿದೆ. ಈ ಪತ್ರದಲ್ಲಿ ಈ ದೀಪಾವಳಿ ಹಾಗೂ ಧನತ್ರಯೋದಶಿ ಸಂದರ್ಭದಲ್ಲಿ ಚಿನ್ನ ಹೂಡಿಕೆ ಉತ್ತಮವೇ ಎಂಬ ಬಗ್ಗೆ ವಿವರವಾಗಿ ಅಭಿಪ್ರಾಯವನ್ನು ತಿಳಿಸಿದೆ.

ಚಿನ್ನದ ಬೆಲೆ ಇಳಿಕೆ: ಭಾರತದಿಂದ ಸ್ವಿಸ್ ಸ್ವರ್ಣದ ಆಮದು ಹೆಚ್ಚಳಚಿನ್ನದ ಬೆಲೆ ಇಳಿಕೆ: ಭಾರತದಿಂದ ಸ್ವಿಸ್ ಸ್ವರ್ಣದ ಆಮದು ಹೆಚ್ಚಳ

"ಸ್ಥಳೀಯವಾಗಿ ಯಾವುದೇ ಹಬ್ಬದ ಸಂದರ್ಭದಲ್ಲಿ ಚಿನ್ನ ಹಾಗೂ ಬೆಳ್ಳಿ ದರವು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ರೂಪಾಯಿ ಮೌಲ್ಯವು ನಿರಂತರವಾಗಿ ಇಳಿಕೆಯಾಗುತ್ತಿದೆ. ಈ ನಡುವೆ ಯಾವುದೇ ತೀವ್ರ ಬದಲಾವಣೆ ಸಾಧ್ಯತೆ ಇದೆ. ಕಾಮೆಕ್ಸ್‌ನಲ್ಲಿ ಉಂಟಾಗುವ ಯಾವುದೇ ಸಣ್ಣ ಏರಿಳಿತವು ಭಾರತದಲ್ಲಿ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ," ಎಂದು ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ.

 ಎಲ್ಲ ಅಂಶಗಳು ಪ್ರಭಾವ

ಎಲ್ಲ ಅಂಶಗಳು ಪ್ರಭಾವ

"ಈ ವರ್ಷ ಆರ್ಥಿಕ ಸ್ಥಿತಿಯು ಸ್ಥಿರವಾಗಿಲ್ಲ. ಆರ್ಥಿಕ ಹಿನ್ನೆಡೆಯೇ ಮೇಲುಗೈ ಸಾಧಿಸಿದೆ. ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ, ಹಣದುಬ್ಬರದ ಒತ್ತಡ ಮತ್ತು ಭೌಗೋಳಿಕ-ರಾಜಕೀಯ ಉದ್ವಿಗ್ನ ಸ್ಥಿತಿಯ ಮೇಲೆ ಆರ್ಥಿಕ ಸ್ಥಿತಿ ಹೆಚ್ಚು ಪ್ರಭಾವ ಬೀರುತ್ತಿದೆ. ಈ ಅಂಶಗಳಲ್ಲಿ ಯಾವುದೇ ಬದಲಾವಣೆಗಳಿದ್ದರೆ, ಚಿನ್ನದ ಬೆಲೆಯ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತದೆ," ಎಂದು ಕೂಡಾ ಹೇಳುತ್ತದೆ.

ಚಿನ್ನ ಬಾಡಿಗೆ ಕೊಟ್ಟು ಆದಾಯ ಮಾಡಿಕೊಳ್ಳಿ; ಸೇಫ್‌ಗೋಲ್ಡ್ ಸ್ಕೀಮ್ಚಿನ್ನ ಬಾಡಿಗೆ ಕೊಟ್ಟು ಆದಾಯ ಮಾಡಿಕೊಳ್ಳಿ; ಸೇಫ್‌ಗೋಲ್ಡ್ ಸ್ಕೀಮ್

 ಚಿನ್ನ, ಬೆಳ್ಳಿ ಖರೀದಿ ಸೂಕ್ತ ಎಂದ ಓಸ್ವಾಲ್

ಚಿನ್ನ, ಬೆಳ್ಳಿ ಖರೀದಿ ಸೂಕ್ತ ಎಂದ ಓಸ್ವಾಲ್

"ಹಣದುಬ್ಬರ, ರೂಪಾಯಿ ಮೌಲ್ಯ ಇಳಿಕೆಯ ನಡುವೆ ಕೇಂದ್ರ ಬ್ಯಾಂಕ್ ರಪೋ ದರವನ್ನು ಏರಿಕೆ ಮಾಡಿದೆ. ಇದು ಆಕ್ರಮಣಕಾರಿಯಾಗಿ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಇದು ಗೋಲ್ಡ್ ರೇಟ್ ಮೇಲಿನ ಒತ್ತಡವನ್ನು ಹೆಚ್ಚಿಸಬಹುದು," ಎಂದು ಸೇರಿಸಲಾಗಿದೆ. ಈ ಅನಿಶ್ಚಿತತೆಗಳ ನಡುವೆ, ಚಿನ್ನ ಮತ್ತು ಬೆಳ್ಳಿಯನ್ನು ಖರೀದಿ ಮಾಡುವುದು ಸೂಕ್ತ ಎಂದು ಮೋತಿಲಾಲ್ ಓಸ್ವಾಲ್ ಈ ನೋಟ್‌ನಲ್ಲಿ ಉಲ್ಲೇಖಿಸಿದೆ. "ಮಧ್ಯಮ ಮತ್ತು ದೀರ್ಘಾವಧಿಯ ದೃಷ್ಟಿಕೋನದೊಂದಿಗೆ ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡಲು ಬಯಸುವವರು ಈಗ ಹೂಡಿಕೆ ಮಾಡಬಹುದು," ಎಂದು ತಿಳಿಸಿದೆ.

 ದೀಪಾವಳಿ ಹಬ್ಬದ ತಿಂಗಳಲ್ಲಿ ಚಿನ್ನದ ಮೌಲ್ಯ

ದೀಪಾವಳಿ ಹಬ್ಬದ ತಿಂಗಳಲ್ಲಿ ಚಿನ್ನದ ಮೌಲ್ಯ

ಕಳೆದ 10 ವರ್ಷದಲ್ಲಿ ದೀಪಾವಳಿ ತಿಂಗಳಲ್ಲಿ ದರ ಏರಿಕೆಯಾದಗಲೂ ಚಿನ್ನದ ರಿಟರ್ನ್ ನೆಗೆಟಿವ್ ಆಗಿತ್ತು. ಹಳದಿ ಲೋಹವು ದೀಪಾವಳಿ ತಿಂಗಳಲ್ಲಿ ದರ ಕಡಿತವಾದರೂ ಕೂಡಾ ಹೆಚ್ಚು ರಿಟರ್ನ್ ನೀಡಿತ್ತು. "ಈ ವರ್ಷ ಹಣದುಬ್ಬರ ಮೊದಲಾದ ಅಂಶಗಳು ಲೋಹದ ಬೆಲೆಗಳಲ್ಲಿನ ಬದಲಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಈ ವಿಶ್ಲೇಷಣೆಯನ್ನು ಸಮರ್ಥಿಸಲು, ನಾವು ಕಳೆದ 10 ವರ್ಷಗಳಲ್ಲಿ ದೀಪಾವಳಿ ತಿಂಗಳ ಆದಾಯವನ್ನು ಹೋಲಿಸಿದ್ದೇವೆ. ದರ ಏರಿಕೆಯ ಸಂದರ್ಭದಲ್ಲಿ, ದೀಪಾವಳಿ ತಿಂಗಳ ಚಿನ್ನದ ಆದಾಯ ಕಡಿಮೆಯಾಗಿದೆ ಎಂದು ಉಲ್ಲೇಖ ಮಾಡಲಾಗಿದೆ.

English summary

Motilal Oswal Thinks It is a Good Time to Buy Gold in this Diwali, Why Explained in Kannada

Diwali 2022: Motilal Oswal Thinks It is a Good Time to Buy Gold in this Diwali, Why Explained in Kannada.
Story first published: Saturday, October 22, 2022, 14:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X