For Quick Alerts
ALLOW NOTIFICATIONS  
For Daily Alerts

ಜಿಯೋದಿಂದ ಏರ್‌ಟೆಲ್‌ವರೆಗೆ: ಈಗ 30 ದಿನಗಳ ರಿಚಾರ್ಜ್ ಲಭ್ಯ

|

ಎಲ್ಲ ಟೆಲಿಕಾಂ ಸಂಸ್ಥೆಗಳು 30 ದಿನಗಳ ಒಂದು ಪ್ಲ್ಯಾನ್ ವೋಚರ್, ಒಂದು ಟಾರಿಫ್ ವೋಚರ್, ಒಂದು ಕೋಂಬೋ ವೋಚರ್ ಅನ್ನು ನೀಡಬೇಕು ಎಂದು ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಹೇಳಿದೆ. ಇದಾದ ಬೆನ್ನಲ್ಲೇ ಹಲವಾರು ಟೆಲಿಕಾಂ ಸಂಸ್ಥೆಗಳು 30 ದಿನಗಳ ಆಫರ್ ಅನ್ನು ನೀಡಲು ಆರಂಭಿಸಿದೆ. ತಮ್ಮ ತಮ್ಮ ಸಂಸ್ಥೆಯ ನಿಯಮಕ್ಕೆ ಅನುಗುಣವಾಗಿ ಆಫರ್‌ಗಳನ್ನು ನೀಡಲು ಆರಂಭ ಮಾಡಿದೆ.

 

ಟ್ರಾಯ್ ಪ್ರಕಾರ, ಎಲ್ಲ ಟೆಲಿಕಾಂ ವೆಬ್‌ಸೈಟ್‌ಗಳಲ್ಲಿ ಗ್ರಾಹಕರಿಗಾಗಿ 30 ದಿನಗಳ ವೋಚರ್, ರಿನಿವೇಬಲ್ ವೋಚರ್ ಲಭ್ಯವಿದೆ. ಗ್ರಾಹಕರು ಅದನ್ನು ಸಬ್‌ಸ್ಕ್ರೈಬ್ ಮಾಡಬಹುದು. ಈ ವರ್ಷದ ಜನವರಲ್ಲಿ ಟೆಲಿಕಾಂ ನಿಯಮವನ್ನು ಅಥಾರಿಟಿ ಪರಿಚಯಿಸಿದೆ. ಎಲ್ಲ ಸಂಸ್ಥೆಗಳು 30 ದಿನಗಳ ವೋಚರ ಹಾಗೂ ಮಾಸಿಕ ರಿನಿವೇಬಲ್ ಪ್ರಿಪೇಡ್ ಪ್ಲ್ಯಾನ್ ಅನ್ನು ಒದಗಿಸುವುದು ಕಡ್ಡಾಯವಾಗಿದೆ.

ದೀಪಾವಳಿಯೊಳಗೆ ಜಿಯೋ 5ಜಿ ಆರಂಭ: ಮುಕೇಶ್ ಅಂಬಾನಿದೀಪಾವಳಿಯೊಳಗೆ ಜಿಯೋ 5ಜಿ ಆರಂಭ: ಮುಕೇಶ್ ಅಂಬಾನಿ

28 ದಿನಗಳ ಪ್ಲ್ಯಾನ್ ಬಗ್ಗೆ ಗ್ರಾಹಕರಿಂದ ದೂರುಗಳು ಬಂದ ಬೆನ್ನಲ್ಲೇ ಟ್ರಾಯ್ ಈ ಆದೇಶ ಹೊರಡಿಸಿತ್ತು. ಈ ಹಿಂದಿನಂತೆಯೇ 30 ದಿನಗಳ ಪ್ಲ್ಯಾನ್ ಬೇಕಾಗಿದೆ ಎಂದು ಗ್ರಾಹಕರ ಬೇಡಿಕೆಯಾಗಿತ್ತು. ಈ ಬೆನ್ನಲ್ಲೇ ಈಗ 30 ದಿನಗಳ ಪ್ಲ್ಯಾನ್ ಜಾರಿ ಮಾಡಲಾಗುತ್ತಿದೆ. ಇನ್ನು ಪ್ರಿಪೇಡ್ ರಿಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಪೋಸ್ಟ್‌ಪೇಡ್‌ನಂತಹ ಆಯ್ಕೆಯು ಲಭ್ಯವಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಪೋಸ್ಟ್‌ಪೇಡ್‌ ಬಿಲ್ಲಿಂಗ್ ಆಯ್ಕೆ

ಪೋಸ್ಟ್‌ಪೇಡ್‌ ಬಿಲ್ಲಿಂಗ್ ಆಯ್ಕೆ

ಪ್ರಿಪೇಡ್ ರಿಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರು ಪೋಸ್ಟ್‌ಪೇಡ್‌ ಬಿಲ್ಲಿಂಗ್ ಅನ್ನು ಮಾಡಿಸಿಕೊಳ್ಳಬಹುದು. ಇದರಲ್ಲಿ ಪ್ರತಿ ತಿಂಗಳು ಬಿಲ್ ಜನರೇಟ್ ಆಗುತ್ತದೆ. ತಿಂಗಳಲ್ಲಿ ಎಷ್ಟು ದಿನಗಳು ಇದೆ ಎಂಬ ಲೆಕ್ಕಾಚಾರವಿಲ್ಲದೆ ಬಿಲ್ ಜನರೇಟ್ ಆಗಲಿದೆ. ಟ್ರಾಯ್‌ ಆದೇಶಕ್ಕೂ ಮುನ್ನ ಟೆಲಿಕಾಂ ಸಂಸ್ಥೆಗಳು 28/56/84 ದಿನಗಳ ರಿಚಾರ್ಜ್ ಆಯ್ಕೆಯನ್ನು ನೀಡುತ್ತಿದ್ದವು. ಇನ್ನು ಈ 28 ದಿನಗಳ ರಿಚಾರ್ಜ್ ಅನ್ನು ಮಾಸಿಕ ರಿಚಾರ್ಜ್‌ನಂತೆಯೇ ಪರಿಗಣಿಸಲಾಗುತ್ತದೆ. ಆದೆ ವರ್ಷಕ್ಕೆ 13 ಬಾರಿ ರಿಚಾರ್ಜ್ ಮಾಡಬೇಕಾಗುತ್ತದೆ ಎಂದು ಗ್ರಾಹಕರು ಆರೋಪ ಮಾಡಿದ್ದರು. ಮಾಸಿಕ ಆಧಾರದಲ್ಲಿ ನೋಡುವಾಗ 10 ರಿಚಾರ್ಜ್ ಮಾತ್ರ ಮಾಡಬೇಕಾಗುತ್ತದೆ. ಆದರೆ ರಿಚಾರ್ಜ್ ಅವಧಿಯನ್ನು 30 ದಿನದಿಂದ 28ಕ್ಕೆ ಇಳಿಕೆ ಮಾಡಿದಾಗ ವರ್ಷಕ್ಕೆ 12ರ ಬದಲಾಗಿ 13 ಬಾರಿ ರಿಚಾರ್ಜ್ ಮಾಡಬೇಕಾಗುತ್ತದೆ.

 ಜಿಯೋದಲ್ಲಿನ ರಿಚಾರ್ಜ್ ಆಯ್ಕೆ ಹೇಗಿದೆ ನೋಡಿ
 

ಜಿಯೋದಲ್ಲಿನ ರಿಚಾರ್ಜ್ ಆಯ್ಕೆ ಹೇಗಿದೆ ನೋಡಿ

296 ರೂಪಾಯಿ ಪ್ಲ್ಯಾನ್: ಫ್ರೀ ಅನ್‌ಲಿಮಿಡೆಟ್ ವಾಯಿಸ್ ಕಾಲಿಂಗ್, ದಿನಕ್ಕೆ 100 ಎಸ್‌ಎಂಎಸ್, 25 ಜಿಬಿ ಡೇಟಾ, 30 ದಿನಗಳ ಅವಧಿಗೆ ಲಭ್ಯವಾಗಲಿದೆ. ಜೊತೆಗೆ ಜಿಯೋ ಆಪ್‌ಗಳಾದ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ, ಜಿಯೋಕ್ಲೌಡ್ ಉಚಿತ ಸಬ್‌ಸ್ಕ್ರೀಪ್‌ಶನ್ ಲಭ್ಯ
301 ರೂಪಾಯಿ ಪ್ಲ್ಯಾನ್: ಇದು ಕೂಡಾ 30 ದಿನಗಳ ಪ್ಲ್ಯಾನ್ ಆಗಿದೆ. 50 ಜಿಬಿ ಡೇಟಾ ಲಭ್ಯವಾಗಲಿದೆ. ಇದನ್ನು ಜಿಯೋ ವರ್ಕ್ ಫ್ರಮ್ ಹೋಮ್ ಪ್ಲ್ಯಾನ್ ಎಂದು ಕರೆಯುತ್ತದೆ. ಇದನ್ನು ಯೂಸರ್ ಡೇಟಾ ವೋಚರ್ ಎಂದು ಪರಿಗಣನೆ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ಉಚಿತ ಕರೆ, ಎಸ್‌ಎಂಎಸ್‌ ಸೇವೆ ಲಭ್ಯವಿಲ್ಲ. ಆದರೆ 149 ರೂಪಾಯಿಯ ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್‌ ಸಬ್‌ಸ್ಕ್ರೀಬ್‌ಶನ್ ಲಭ್ಯವಿದೆ.
241 ರೂಪಾಯಿ ಪ್ಲ್ಯಾನ್: 30 ದಿನಗಳಿಗೆ 40 ಜಿಬಿ ಲಭ್ಯವಾಗಲಿದೆ. ಇದನ್ನು ಕೂಡಾ ಜಿಯೋ ವರ್ಕ್ ಫ್ರಮ್ ಹೋಮ್ ಪ್ಲ್ಯಾನ್ ಎಂದು ಕರೆಯುತ್ತದೆ. ಇದನ್ನು ಡೇಟಾ ವೋಚರ್ ಎಂದು ಪರಿಗಣನೆ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ಉಚಿತ ಕರೆ, ಎಸ್‌ಎಂಎಸ್‌ ಸೇವೆ ಲಭ್ಯವಿಲ್ಲ.

 ಏರ್‌ಟೆಲ್‌ನಲ್ಲಿನ ರಿಚಾರ್ಜ್ ಆಯ್ಕೆ ಹೇಗಿದೆ ನೋಡಿ

ಏರ್‌ಟೆಲ್‌ನಲ್ಲಿನ ರಿಚಾರ್ಜ್ ಆಯ್ಕೆ ಹೇಗಿದೆ ನೋಡಿ

109 ರೂಪಾಯಿ ಪ್ಲ್ಯಾನ್: 99 ರೂಪಾಯಿ ಟಾಕ್‌ಟೈಮ್, ಒಂದು ತಿಂಗಳ ವ್ಯಾಲಿಡಿಟಿ, 200 ಎಂಬಿ ಡೇಟಾ,
181 ರೂಪಾಯಿ ಪ್ಲ್ಯಾನ್: ದಿನಕ್ಕೆ 1 ಜಿಬಿ, 30 ದಿನ ವ್ಯಾಲಿಡಿಟಿ ಇದರಲ್ಲಿ ಯಾವುದೇ ಉಚಿತ ಕರೆ, ಎಸ್‌ಎಂಎಸ್‌ ಸೇವೆ ಲಭ್ಯವಿಲ್ಲ.
299 ರೂಪಾಯಿ ಪ್ಲ್ಯಾನ್: ಅನ್‌ಲಿಮಿಟೆಡ್ ಕರೆ, 30 ದಿನ ವ್ಯಾಲಿಡಿಟಿ, 25 ಜಿಬಿ ಲಭ್ಯ, ದಿನಕ್ಕೆ 100 ಎಸ್‌ಎಂಎಸ್‌, 3 ತಿಂಗಳ ಅವಧಿ ಅಪೋಲೋ ಮೆಡಿಕಲ್ ಸೇವೆ, ಫಾಸ್‌ಟ್ಯಾಗ್‌ನಲ್ಲಿ 100 ರೂಪಾಯಿ ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್
128 ರೂಪಾಯಿ ಪ್ಲ್ಯಾನ್: 2.5 ಪೈಸೆ/ ಸೆಕೆಂಡ್ ಕರೆ, ವಿಡಿಯೋ ಕರೆ 5 ಪೈಸೆ/ಸೆಕೆಂಡ್, ಡೇಟಾ 50 ಪೈಸೆ/ಸೆಕೆಂಡ್, ಸ್ಥಳೀಯ ಎಸ್‌ಎಂಎಸ್‌ 1 ರೂಪಾಯಿ, ಎಸ್‌ಟಿಡಿ 1.5 ರೂಪಾಯಿ, ಐಎಸ್‌ಡಿ 5 ರೂಪಾಯಿ, ನ್ಯಾಷನಲ್ ರೋಮಿಂಗ್ 80 ಪೈಸೆ/ಸೆಕೆಂಡ್, ಎಸ್‌ಟಿಡಿ 1.5 ರೂಪಾಯಿ/ಸೆಕೆಂಡ್, ಎಸ್‌ಎಂಎಸ್‌ ಸ್ಥಳೀಯ 25 ಪೈಸೆ, ಎಸ್‌ಟಿಡಿ 38 ಪೈಸೆ

 ವೊಡಾಫೋನ್ ರಿಚಾರ್ಜ್ ಆಯ್ಕೆ ಹೇಗಿದೆ ನೋಡಿ

ವೊಡಾಫೋನ್ ರಿಚಾರ್ಜ್ ಆಯ್ಕೆ ಹೇಗಿದೆ ನೋಡಿ

151 ರೂಪಾಯಿ ಪ್ಲ್ಯಾನ್: 30 ದಿನಗಳ ವ್ಯಾಲಿಡಿಟಿ, 8 ಜಿಜಿ ಡೇಟಾ, 89 ದಿನಕ್ಕೆ ಡಿಸ್ನಿ+ಹಾಟ್‌ಸ್ಟಾರ್ ಸಬ್‌ಸ್ಕ್ರೀಪ್‌ಶನ್ ಲಭ್ಯ, ಇದರಲ್ಲಿ ಯಾವುದೇ ಉಚಿತ ಕರೆ, ಎಸ್‌ಎಂಎಸ್‌ ಸೇವೆ ಲಭ್ಯವಿಲ್ಲ.
337 ರೂಪಾಯಿ ಪ್ಲ್ಯಾನ್: ಅನ್‌ಲಿಮಿಟೆಡ್ ಕರೆಗಳು+28 ಜಿಬಿ ಡೇಟಾ ಲಭ್ಯವಾಗಲಿದೆ. ದಿನಕ್ಕೆ 100 ಎಸ್‌ಎಂಎಸ್‌ ಲಭ್ಯ. ಒಂದು ತಿಂಗಳ ವ್ಯಾಲಿಡಿಟಿ. ಪ್ರತಿ ತಿಂಗಳು ಅದೇ ದಿನಕ್ಕೆ ಪ್ಯಾಕ್ ರಿನಿವಲ್ ಆಗಲಿದೆ
195 ರೂಪಾಯಿ ಪ್ಲ್ಯಾನ್: 2 ಜಿಬಿ ಡೇಟಾ+ ಅನ್‌ಲಿಮಿಟೆಡ್ ಕರೆಗಳು. 1 ತಿಂಗಳಿಗೆ 300 ಎಸ್‌ಎಂಎಸ್‌ ಸೇವೆ ಲಭ್ಯ. ಪ್ರತಿ ತಿಂಗಳು ಮೊದಲು ರಿಚಾರ್ಜ್ ಮಾಡಿದ ದಿನಕ್ಕೆ ಪ್ಯಾಕ್ ರಿನಿವಲ್ ಆಗಲಿದೆ.
319 ರೂಪಾಯಿ ಪ್ಲ್ಯಾನ್: ದಿನಕ್ಕೆ 2 ಜಿಬಿ ಡೇಟಾ, ಅನ್‌ಲಿಮಿಟೆಡ್ ಕರೆಗಳು, ದಿನಕ್ಕೆ 100 ಎಸ್‌ಎಂಎಸ್‌, 1 ತಿಂಗಳ ಅವಧಿಗೆ ಪ್ಯಾಕ್ ಲಭ್ಯ. ಪ್ರತಿ ತಿಂಗಳು ಅದೇ ದಿನ ಪ್ಯಾಕ್ ರಿನಿವಲ್ ಆಗಲಿದೆ.
327 ರೂಪಾಯಿ ಪ್ಲ್ಯಾನ್: ಅನ್‌ಲಿಮಿಟೆಡ್ ಕರೆಗಳು, 25 ಜಿಬಿ ಡೇಟಾ, ದಿನಕ್ಕೆ 100 ಎಸ್‌ಎಂಎಸ್‌, 30 ದಿನ ವ್ಯಾಲಿಡಿಟಿ, ವಿಐ ಮೂವೀಸ್ ಹಾಗೂ ಟಿವಿ ಕ್ಲಾಸಿಕ್ ಆಕ್ಸಸ್ ಲಭ್ಯ
107 ರೂಪಾಯಿ ಪ್ಲ್ಯಾನ್: 107 ರೂಪಾಯಿ ಟಾಕ್‌ಟೈಮ್, ಬಳಿಕ 2.5 ಪೈಸೆ/ಸೆಕೆಂಡ್ ಕರೆ, 200 ಎಂಬಿ ಡೇಟಾ, ಎಸ್‌ಎಂಎಸ್‌ ಸೇವೆ ಲಭ್ಯವಿಲ್ಲ.
111 ರೂಪಾಯಿ ಪ್ಲ್ಯಾನ್: 111 ರೂಪಾಯಿ ಟಾಕ್‌ಟೈಮ್, ಬಳಿಕ 2.5 ಪೈಸೆ/ಸೆಕೆಂಡ್ ಕರೆ, 200 ಎಂಬಿ ಡೇಟಾ, ಪ್ರತಿ ತಿಂಗಳು ಮೊದಲು ರಿಚಾರ್ಜ್ ಮಾಡಿದ ದಿನಕ್ಕೆ ಪ್ಯಾಕ್ ರಿನಿವಲ್ ಆಗಲಿದೆ.

English summary

Now 30-day Validity Pre-Paid Recharge Option Available in Jio to Airtel, Details Here

30 days vouchers and renewable vouchers on the same date of every month are available on the websites of mobile operators and consumers can subscribe to them.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X