For Quick Alerts
ALLOW NOTIFICATIONS  
For Daily Alerts

LIC Scheme: ಪಿಎಂವಿವಿವೈ ಅಡಿಯಲ್ಲಿ ವಿವಾಹಿತ ಜೋಡಿಗೆ 18,500 ರೂ ಪಿಂಚಣಿ, ಅರ್ಹತೆ ತಿಳಿಯಿರಿ

|

ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಎಲ್ಲಿ ಹೂಡಿಕೆ ಮಾಡಿದರೆ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯ ಎಂದು ನೋಡುತ್ತೇವೆ. ಅಧಿಕ ರಿಟರ್ನ್ ಜೊತೆಗೆ ಹೆಚ್ಚು ಸುರಕ್ಷಿತ ಹೂಡಿಕೆ ಯಾವುದು ಎಂದು ಕೂಡಾ ನಾವು ನೋಡುತ್ತೇವೆ. ಹಾಗೆ ನೋಡುವಾಗ ನಮ್ಮ ಮುಂದೆ ಬರುವ ಆಯ್ಕೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಸರ್ಕಾರದ ಯೋಜನೆಗಳು ಆಗಿದೆ.

ಸರ್ಕಾರವು ಹಲವಾರು ಉಳಿತಾಯ ಹಾಗೂ ಪಿಂಚಣಿ ಯೋಜನೆಗಳನ್ನು ಹೊಂದಿದೆ. ಆ ಪೈಕಿ ಪ್ರಧಾನ ಮಂತ್ರಿ ವಯ ವಂದನ ಯೋಜನೆ ಕೂಡಾ ಒಂದಾಗಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಯ ವಂದನ ಯೋಜನೆಯನ್ನು (ಪಿಎಂವಿವಿವೈ) 2020ರ ಮೇ 26ರಂದು ಆರಂಭ ಮಾಡಿದೆ. ಇದರ ಹೆಸರೇ ಹೇಳುವಂತೆ ಈ ಯೋಜನೆಯು ವಿವಾಹಿತ ಜೋಡಿಗೆ ಮಾಸಿಕ ಪಿಂಚಣಿಯ ಯೋಜನೆಯಾಗಿದೆ.

ಹಿರಿಯ ನಾಗರಿಕರಿಗಾಗಿ ಪ್ರಧಾನ ಮಂತ್ರಿ ವಯ ವಂದನ ಯೋಜನೆ, ಏನಿದೆ ಲಾಭ?ಹಿರಿಯ ನಾಗರಿಕರಿಗಾಗಿ ಪ್ರಧಾನ ಮಂತ್ರಿ ವಯ ವಂದನ ಯೋಜನೆ, ಏನಿದೆ ಲಾಭ?

ಈ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಈ ಯೋಜನೆಯನ್ನು ನಿರ್ವಹಣೆ ಮಾಡುತ್ತದೆ. ವಿವಾಹಿತ ಜೋಡಿಯು ಈ ಯೋಜನೆಯಡಿಯಲ್ಲಿ ಮಾರ್ಚ್ 31, 2023ರವರೆಗೆ ಹೂಡಿಕೆಯನ್ನು ಮಾಡಬಹುದು. ತಮಗೆ 60 ವರ್ಷವಾದಾಗ ವಿವಾಹಿತ ಜೋಡಿಯು ಈ ಯೋಜನೆಯಡಿಯಲ್ಲಿ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಯೋಜನೆ ಬಗ್ಗೆ ಮಾಹಿತಿ

ಯೋಜನೆ ಬಗ್ಗೆ ಮಾಹಿತಿ

ಪ್ರಧಾನ ಮಂತ್ರಿ ವಯ ವಂದನ ಯೋಜನೆಯಡಿಯಲ್ಲಿ ವಿವಾಹಿತ ಜೋಡಿಯು ಈ ಯೋಜನೆಯಡಿಯಲ್ಲಿ 60 ವರ್ಷವಾಗುವವರೆಗೂ ಸುಮಾರು 15 ಲಕ್ಷ ರೂಪಾಯಿ ಹೂಡಿಕೆಯನ್ನು ಮಾಡಲು ಸಾಧ್ಯವಾಗುತ್ತದೆ. ಈ ಹಿಂದೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಠ ಮೊತ್ತ 7.5 ಲಕ್ಷ ರೂಪಾಯಿ ಆಗಿತ್ತು. ಆದರೆ ಸರ್ಕಾರ ಈ ಗರಿಷ್ಠ ಮಿತಿಯನ್ನು ಏರಿಕೆ ಮಾಡಿದ್ದು, ಪ್ರಸ್ತುತ ಈ ಯೋಜನೆಯಡಿಯ್ಲಲಿ 15 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಲು ಅವಕಾಶವಿದೆ. 60 ವರ್ಷಕ್ಕೂ ಅಧಿಕ ವಯಸ್ಸಾದಾಗ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಉಳಿದ ಎಲ್ಲ ಯೋಜನೆಗಳ ಪೈಕಿ ಹಿರಿಯ ನಾಗರಿಕರಿಗೆ ಅಧಿಕ ಬಡ್ಡಿದರವನ್ನು ನೀಡುವ ಯೋಜನೆ ಇದಾಗಿದೆ.

ಬಡ್ಡಿದರ ಎಷ್ಟಿದೆ ನೋಡಿ

ಬಡ್ಡಿದರ ಎಷ್ಟಿದೆ ನೋಡಿ

ಪತ್ನಿ ಹಾಗೂ ಪತಿ ಇಬ್ಬರೂ ಕೂಡಾ ಪ್ರಧಾನ ಮಂತ್ರಿ ವಯ ವಂದನ ಯೋಜನೆಯಡಿಯಲ್ಲಿ 15 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ, ಮಾಸಿಕವಾಗಿ 18,500 ರೂಪಾಯಿ ಪಿಂಚಣಿಯನ್ನು ಪಡೆಯಲು ಸಾಧ್ಯವಾಗಲಿದೆ. ಒಟ್ಟಾಗಿ ದಂಪತಿಯು ಯೋಜನೆಯಡಿಯಲ್ಲಿ 30 ಲಕ್ಷ ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ವಾರ್ಷಿಕ ಬಡ್ಡಿದರವು ಶೇಕಡ 7.40 ಆಗಿದೆ. ದಂಪತಿಯು ವಾರ್ಷಿಕವಾಗಿ 2,22,000 ರೂಪಾಯಿ ಪಡೆಯುತ್ತದೆ.

ಮಾಸಿಕ 18500 ಪಿಂಚಣಿ ಪಡೆಯುವುದು ಹೇಗೆ?

ಮಾಸಿಕ 18500 ಪಿಂಚಣಿ ಪಡೆಯುವುದು ಹೇಗೆ?

ದಂಪತಿಯು ಯೋಜನೆಯಡಿಯಲ್ಲಿ 30 ಲಕ್ಷ ರೂಪಾಯಿ ಹೂಡಿಕೆ ಮಾಡಿದಾಗ ಬಡ್ಡಿದರ ಸೇರಿ 2,22,000 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. 2,22,000 ರೂಪಾಯಿಯನ್ನು 12ರಿಂದ ಭಾಗಾಕಾರ ಮಾಡಿದಾಗ, ಮಾಸಿಕವಾಗಿ ನೀವು 18,500 ರೂಪಾಯಿ ಪಿಂಚಣಿಯನ್ನು ಪಡೆಯಲು ಸಾಧ್ಯವಾಗಲಿದೆ. ಈ ಯೋಜನೆಯಲ್ಲಿ ದಂಪತಿಯಲ್ಲಿ ಒಬ್ಬರು ಮಾತ್ರ ಹೂಡಿಕೆ ಮಾಡಿದರೆ, ಒಟ್ಟು 15 ಲಕ್ಷ ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಮಾಸಿಕವಾಗಿ 9,250 ರೂಪಾಯಿ ಪಿಂಚಣಿ ಲಭ್ಯವಾಗಲಿದೆ. ಈ ಯೋಜನೆಯು 10 ವರ್ಷಗಳ ಯೋಜನೆಯಾಗಿದೆ.

English summary

PM Vaya Vandana Yojana: Married couples can get Rs 18,500 monthly pension, How check eligibility criteria

Pradhan Mantri Vaya Vandana Yojana pension scheme allows married couples to get a secured monthly pension. The scheme is operated by Life Insurance Corporation of India (LIC).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X