ಈ ಹಬ್ಬದ ಸೀಸನ್ ನಡುವೆ ಗ್ರಾಹಕರಿಗೆ ಸಿಹಿಸುದ್ದಿಯೊಂದಿದೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ. 9-ಕೆಜಿ LPG ವಾಣಿಜ್ಯ ಸಿಲಿಂಡರ್‌ನ ಬೆಲೆಗಳನ್ನು 36 ರೂ.ವರೆಗೆ ಕಡಿತ ಮಾಡಲಾಗಿದೆ. ಒಎಂಸಿಗಳ ಹೊಸ ದರಗಳು ಇಂದಿನಿಂದ ಅಂದರೆ ಅಕ್ಟೋಬರ್ 1, 2022 ರಿಂದ ಜಾರಿಗೆ ಬಂದಿವೆ.
ತೈಲ ಮಾರುಕಟ್ಟೆ ಕಂಪನಿಗಳ ಪ್ರಕಾರ ವಾಣಿಜ್ಯ ಬಳಕೆಗಾಗಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 25.5 ರೂಪಾಯಿ ಕಡಿಮೆಯಾಗಿ 1,859.50 ರೂಪಾಯಿ ಆಗಿದೆ. ಇನ್ನು ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈನಂತಹ ನಗರಗಳಲ್ಲೂ ಬೆಲೆ ಇಳಿಕೆಯಾಗಿದೆ.
ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯು 32.5 ರೂ.ಗಳಷ್ಟು ಕುಸಿದು ರೂಪಾಯಿ 1811.50ಕ್ಕೆ ತಲುಪಿದೆ. ಕೋಲ್ಕತ್ತಾದಲ್ಲಿ , 36.5 ರೂಪಾಯಿಯಷ್ಟು ಇಳಿದು ರೂಪಾಯಿ 1959ಕ್ಕೆ ತಲುಪಿದೆ. ಚೆನ್ನೈನಲ್ಲಿ, ವಾಣಿಜ್ಯ ಸಿಲಿಂಡರ್ ದರ 35.5 ರೂಪಾಯಿಯಷ್ಟು ಕುಸಿದಿದ್ದು ರೂಪಾಯಿ 2009.50ಕ್ಕೆ ಇಳಿದಿದೆ.

ಸತತ ಎರಡನೇ ಬಾರಿಗೆ ಬೆಲೆ ಇಳಿಕೆ
ಸೆಪ್ಟೆಂಬರ್ 1 ರಂದು ತೈಲ ಮಾರುಕಟ್ಟೆ ಕಂಪನಿಗಳು 91.5 ರೂಪಾಯಿಗಳಷ್ಟು ಬೆಲೆಯನ್ನು ಕಡಿಮೆ ಮಾಡಿದೆ. ಇದು ಸತತ ಎರಡನೇ ಬಾರಿ ತೈಲ ಕಂಪನಿಗಳು ಮಾಡುತ್ತಿರುವ ಬೆಲೆ ಇಳಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಬೆಲೆ ಇಳಿಕೆಯ ಬಳಿಕ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ದೆಹಲಿಯಲ್ಲಿ ರೂ 1,885, ಕೋಲ್ಕತ್ತಾದಲ್ಲಿ ರೂ 1,995.50, ಮುಂಬೈನಲ್ಲಿ ರೂ 1,844 ಮತ್ತು ಚೆನ್ನೈನಲ್ಲಿ 2,045 ರೂಪಾಯಿ ಆಗಿತ್ತು.
ಇದಕ್ಕೂ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಜೂನ್‌ನಲ್ಲಿ 2,219 ರೂ.ಗೆ ಇಳಿದಿದ್ದರೆ, ಮೇ ತಿಂಗಳಲ್ಲಿ ಗರಿಷ್ಠ ಬೆಲೆ 2,354 ಆಗಿತ್ತು. ಆದರೆ, ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications