For Quick Alerts
ALLOW NOTIFICATIONS  
For Daily Alerts

ಸೌದಿ ಪ್ರಿನ್ಸ್ ಒಡೆತನದ ವಿಶ್ವದ ಅತ್ಯಂತ ದುಬಾರಿ ಬಂಗಲೆ, ಏನಿದರ ಬೆಲೆ?

|

ಸೌದಿ ಅರೇಬಿಯಾದ ಹಾಲಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಒಡೆತನದ ವಿಶ್ವದ ಅತ್ಯಂತ ದುಬಾರಿ ಬಂಗಲೆ ಎಲ್ಲರ ಗಮನ ಸೆಳೆಯುತ್ತಿದೆ. ಫ್ರಾನ್ಸ್ ಪ್ರವಾಸದ ವೇಳೆ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭೇಟಿ ಮಾತ್ರವಲ್ಲ, ಸಲ್ಮಾನ್ ನೆಲೆಸಿದ್ದ ಬಂಗಲೆ ಶಾಟೋ(Chateau) ಲೂಯಿಸ್ XIV ಬಗ್ಗೆ ವಿವರ ಇಲ್ಲಿದೆ.

ವಿಶ್ವದ 'ಅತ್ಯಂತ ದುಬಾರಿ ಮನೆ' ಎಂದು ಪರಿಗಣಿಸಲ್ಪಟ್ಟಿರುವ ಅದ್ದೂರಿ ಶಾಟೋದಲ್ಲಿ ರಾಜಕುಮಾರ ಸಲ್ಮಾನ್ ಇತ್ತೀಚೆಗೆ ನೆಲೆಸಿದ್ದರು. ಕುತೂಹಲಕಾರಿ ವಿಷಯವೆಂದರೆ 2015 ರಲ್ಲೇ ಈ ಐಷಾರಾಮಿ ಬಂಗಲೆಯನ್ನು ಬಿನ್ ಸಲ್ಮಾನ್ ಖರೀದಿಸಿದ್ದರು.

ಮುಂಬೈನಲ್ಲಿ ದುಬಾರಿ ಬಾಡಿಗೆ ಮನೆ ಪಡೆದ ನಟಿ ಮಾಧುರಿ ದೀಕ್ಷಿತ್ಮುಂಬೈನಲ್ಲಿ ದುಬಾರಿ ಬಾಡಿಗೆ ಮನೆ ಪಡೆದ ನಟಿ ಮಾಧುರಿ ದೀಕ್ಷಿತ್

AFP ವರದಿಯ ಪ್ರಕಾರ, ಶಾಟೋ ಲೂಯಿಸ್ XIVರ ಮೌಲ್ಯವನ್ನು ಬಹಿರಂಗಪಡಿಸದ ಖರೀದಿದಾರರು 2015ರಲ್ಲಿ $300 ಮಿಲಿಯನ್ ನೀಡಿ ಖರೀದಿಸಿದರು ಎನ್ನಲಾಗಿದೆ. ಫಾರ್ಚೂನ್ ನಿಯತಕಾಲಿಕವು ಇದನ್ನು "ವಿಶ್ವದ ಅತ್ಯಂತ ದುಬಾರಿ ಮನೆ" ಎಂದು ಕರೆದಿದೆ.

ಬಿಆರ್ ಚೋಪ್ರಾ ಬಂಗಲೆ ಮಾರಾಟ, ಜುಹು ಪ್ರದೇಶದಲ್ಲಿ ಆಸ್ತಿ ಮೌಲ್ಯ ಹೇಗಿದೆ?ಬಿಆರ್ ಚೋಪ್ರಾ ಬಂಗಲೆ ಮಾರಾಟ, ಜುಹು ಪ್ರದೇಶದಲ್ಲಿ ಆಸ್ತಿ ಮೌಲ್ಯ ಹೇಗಿದೆ?

2018 ರ ಸುಮಾರಿಗೆ, ನ್ಯೂಯಾರ್ಕ್ ಟೈಮ್ಸ್ ಬಿನ್ ಸಲ್ಮಾನ್ ಅವರು ಶೆಲ್ ಕಂಪನಿಗಳ ಸರಣಿಯ ಮೂಲಕ ಶಾಟೋದ ಅಂತಿಮ ಮಾಲೀಕರಾಗಿದ್ದಾರೆ ಎಂದು ವರದಿ ಮಾಡಿದೆ.

ಎಎಫ್‌ಪಿ ಪ್ರಕಾರ, ಸೌದಿ ಸಿಂಹಾಸನದ ಉತ್ತರಾಧಿಕಾರಿ ಸಲ್ಮಾನ್ ಗುರುವಾರದ ನಂತರ ಮ್ಯಾಕ್ರನ್‌ ರೊಂದಿಗೆ ಭೋಜನಕ್ಕೆ ಮುಂಚಿತವಾಗಿ ಆಸ್ತಿಯಲ್ಲಿ ತಂಗಿದ್ದರು. ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಯನ್ನು ಕಾವಲು ಕಾಯುತ್ತಿರುವುದನ್ನು ಮತ್ತು ಅರ್ಧ ಡಜನ್ ವಾಹನಗಳು ಸೇರಿದಂತೆ ದೊಡ್ಡ ಮಟ್ಟದ ಪೊಲೀಸ್ ಪಡೆ ನಿಯೋಜನೆ ಉಪಸ್ಥಿತಿಯನ್ನು ಕಾಣಬಹುದಾಗಿತ್ತು ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಹೊಸದಾಗಿ ನಿರ್ಮಿಸಲಾದ ಮಹಲು

ಹೊಸದಾಗಿ ನಿರ್ಮಿಸಲಾದ ಮಹಲು

ಸುಮಾರು 7,000-ಚದರ-ಮೀಟರ್ ಗ್ರ್ಯಾಂಡ್ ಹೋಮ್ ಪ್ಯಾರಿಸ್‌ನ ಹೊರಗೆ ಲೌವೆಸಿನ್ನೆಸ್‌ನಲ್ಲಿದೆ. ಇದು ಒಂದು ಕಾಲದಲ್ಲಿ ಫ್ರೆಂಚ್ ರಾಜಮನೆತನದ ಆವಾಸ ಸ್ಥಾನವಾಗಿದ್ದ ಹತ್ತಿರದ ವರ್ಸೈಲ್ಸ್ ಅರಮನೆಯ ಅತಿರಂಜಿತ ಐಷಾರಾಮಿಗಳನ್ನು ಪುನರಾವರ್ತಿಸುವ ಉದ್ದೇಶದಿಂದ ಹೊಸದಾಗಿ ನಿರ್ಮಿಸಲಾದ ಮಹಲು ಇದಾಗಿದೆ.

ಬೃಹತ್ ವಿಸ್ತೀರ್ಣದ ಶಾಟೋ

ಬೃಹತ್ ವಿಸ್ತೀರ್ಣದ ಶಾಟೋ

ಅದ್ದೂರಿ ಮತ್ತು ಅಷ್ಟೇ ಬೃಹತ್ ವಿಸ್ತೀರ್ಣದ ಶಾಟೋದಲ್ಲಿ ನೈಟ್ ಕ್ಲಬ್ ಮತ್ತು ಚಿನ್ನದ ಎಲೆಗಳ ಅಲಂಕೃತ ಕಾರಂಜಿಯನ್ನು ಹೊಂದಿದೆ. ಸುಂದರ ಚಿತ್ರಮಂದಿರವನ್ನು ಹೊಂದಿದೆ, ಜೊತೆಗೆ ಬಿಳಿ ಚರ್ಮದ ಹೊದಿಕೆಯುಳ್ಳ ಸೋಫಾಗಳನ್ನು ಹೊಂದಿರುವ ದೈತ್ಯ ಅಕ್ವೇರಿಯಂ ಅನ್ನು ಹೋಲುವ ಕಂದಕದಲ್ಲಿ ನೀರೊಳಗಿನ ಗಾಜಿನ ಕೋಣೆಯನ್ನು ಹೊಂದಿದೆ.

ಶಾಟೋ ಒಳಗೆ ವೈನ್ ಸೆಲ್ಲಾರ್

ಶಾಟೋ ಒಳಗೆ ವೈನ್ ಸೆಲ್ಲಾರ್

ಸೌದಿ ಅರೇಬಿಯಾದಲ್ಲಿ ಮದ್ಯಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ, ಹತ್ಯೆಗೊಳಗಾದ ಎಮಾದ್ ಖಶೋಗಿಯವರ ಕಂಪನಿ, ಕೋಗೆಮಾಡ್‌ನ ವೆಬ್‌ಸೈಟ್‌ನಲ್ಲಿರುವ ಫೋಟೋಗಳ ಪ್ರಕಾರ, ಶಾಟೋ ಒಳಗೆ ವೈನ್ ಸೆಲ್ಲಾರ್ ಕೂಡ ಇದೆ.

ಶಾಟೋ ಲೂಯಿಸ್ XIV ಅನ್ನು ಇಂದಿನ ರೂಪಕ್ಕೆ ತರಲಾಯಿತು

ಶಾಟೋ ಲೂಯಿಸ್ XIV ಅನ್ನು ಇಂದಿನ ರೂಪಕ್ಕೆ ತರಲಾಯಿತು

19ನೇ ಶತಮಾನದ ಕೋಟೆಯ ಅಡಿಪಾಯದ ಮೇಲೆ 2009ರಲ್ಲಿ ಶಾಟೋ ಲೂಯಿಸ್ XIV ಅನ್ನು ಇಂದಿನ ರೂಪಕ್ಕೆ ತರಲಾಯಿತು. ಪ್ರಾಸಂಗಿಕವಾಗಿ, ಫ್ರಾನ್ಸ್‌ನಲ್ಲಿ ಐಷಾರಾಮಿ ಆಸ್ತಿ ಅಭಿವೃದ್ಧಿ ವ್ಯವಹಾರವನ್ನು ನಡೆಸುತ್ತಿರುವ ದಿವಂಗತ ಪತ್ರಕರ್ತ ಜಮಾಲ್ ಖಶೋಗಿ ಅವರ ಸೋದರಸಂಬಂಧಿ ಎಮದ್ ಖಶೋಗ್ಗಿ ಅವರು ಶಾಟೋ ಲೂಯಿಸ್ XIV ಅನ್ನು ನಿರ್ಮಿಸಿದ್ದು ಎಂಬುದು ವಿಶೇಷ.

 ಅತಿರಂಜಿತ ಖರ್ಚು

ಅತಿರಂಜಿತ ಖರ್ಚು

2018ರಲ್ಲಿ ಇಸ್ತಾನ್‌ಬುಲ್‌ನಲ್ಲಿರುವ ಸೌದಿ ಕಾನ್ಸುಲೇಟ್‌ನಲ್ಲಿ ಖಶೋಗ್ಗಿ ಕೊಲ್ಲಲ್ಪಟ್ಟರು ಮತ್ತು ಬಿನ್ ಸಲ್ಮಾನ್ ಅವರು ಭೀಕರ ಹತ್ಯೆ ಅನುಮೋದಿಸಿದ್ದಾರೆ ಎಂದು ಯುಎಸ್ ಗುಪ್ತಚರ ತೀರ್ಪು ನೀಡಿತು.

ಇತ್ತೀಚೆಗೆ, ಸೌದಿ ಅರೇಬಿಯಾದಲ್ಲಿ ಪ್ರಮುಖ ಪವರ್ ಬ್ರೋಕರ್ ಆಗಿ ಹೊರಹೊಮ್ಮಿದ ನಂತರ ಬಿನ್ ಸಲ್ಮಾನ್ ಅವರ ಅತಿರಂಜಿತ ಖರ್ಚು ಮುಖ್ಯಾಂಶಗಳನ್ನು ಮಾಡುತ್ತಿದೆ. 2015ರಲ್ಲಿ, ಕಿಂಗ್ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರ ಮಗ $ 500 ಮಿಲಿಯನ್ ವಿಹಾರ ನೌಕೆಯನ್ನು ಖರೀದಿಸಿದರು ಮತ್ತು 2017 ರಲ್ಲಿ $ 450 ಮಿಲಿಯನ್ ಲಿಯೊನಾರ್ಡೊ ಡಾ ವಿನ್ಸಿ ಪೇಂಟಿಂಗ್‌ನ ನಿಗೂಢ ಖರೀದಿದಾರ ಎಂದು ವರದಿಯಾಗಿದೆ. ಆದಾಗ್ಯೂ, ನಂತರದ ಖರೀದಿಯನ್ನು ಅಧಿಕೃತವಾಗಿ ನಿರಾಕರಿಸಲಾಗಿದೆ.

English summary

Saudi Prince World’s Most Expensive Home in Paris; Know Price, Facilities and other Details in Kannada

Saudi Prince World’s Most Expensive Home Chateau Louis XIV in Paris; Know Price, Facilities and other Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X