ಒಮ್ಮೆ ಡೆಪಾಸಿಟ್ ಮಾಡಿ ಪ್ರತಿ ತಿಂಗಳು ಆದಾಯ ಪಡೆಯುವುದು ಹೇಗೆ?
ನಾವು ಹಣದ ವಿಚಾರಕ್ಕೆ ಬಂದಾಗ ಸ್ವಲ್ಪ ಹೂಡಿಕೆ ಮಾಡಿ ಅಧಿಕ ಲಾಭವನ್ನು ಪಡೆಯುವ ಯೋಜನೆಗೆ ಅಧಿಕ ಮಹತ್ವ ನೀಡುತ್ತೇವೆ. ಹಾಗೆಯೇ ಆ ಯೋಜನೆ ಸುರಕ್ಷಿತವೇ ಎಂದು ಕೂಡಾ ನಾವು ನೋಡುತ್ತೇವೆ. ಈ ಸಂದರ್ಭದಲ್ಲಿ ನಮಗೆ ಒಮ್ಮೆ ಡೆಪಾಸಿಟ್ ಮಾಡಿ ಪ್ರತಿ ತಿಂಗಳು ಆದಾಯವನ್ನು ಪಡೆಯುವ ಆಯ್ಕೆ ಲಭ್ಯವಾದರೆ ಹೇಗೆ?
ಸದ್ಯ ಬಡ್ಡಿದರವು ಅಧಿಕವಾಗುತ್ತಿದೆ. ಈ ನಡುವೆ ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾತ (ಎಸ್‌ಬಿಐ) ಎಸ್‌ಬಿಐ ಅನ್ಯೂಟಿ ಡೆಪಾಸಿಟ್ ಸ್ಕೀಮ್ ಎಂಬ ಯೋಜನೆಯನ್ನು ಪರಿಚಯಿಸುತ್ತಿದೆ.
ಪ್ರತಿದಿನ 45 ರೂ. ಹೂಡಿಕೆ ಮಾಡಿ, 36000 ರೂ. ಗಳಿಸಿ!
ಎಸ್‌ಬಿಐನ ಈ ಯೋಜನೆಯು ಹೂಡಿಕೆಯ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಹೂಡಿಕೆದಾರರು ಕೊಂಚ ಹೆಚ್ಚು ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ. ಆದರೆ ಒ್ರತು ತಿಂಗಳು ನಿಮಗೆ ಅದರ ಬಡ್ಡಿದರವು ಲಭ್ಯವಾಗಲಿದೆ. ಈ ಯೋಜನೆಯ ಬಗ್ಗೆ ಅಧಿಕ ಮಾಹಿತಿ ತಿಳಿಯಲು ಮುಂದೆ ಓದಿ...

ಅರ್ಹತೆ ಏನು ಬೇಕಾಗಿದೆ?
ಎಲ್ಲರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಅಪ್ರಾಪ್ತರು ಕೂಡಾ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ ಎಂದು ಎಸ್‌ಬಿಐ ಅಧಿಕೃತ ವೆಬ್‌ಸೈಟ್ ಹೇಳಿದೆ. ಆದರೆ ಎನ್‌ಆರ್‌ಒ ಹಾಗೂ ಎನ್‌ಆರ್‌ಇಗಳು ಈ ಯೋಜನೆಯನ್ನು ಖರೀದಿ ಮಾಡಲು ಅವಕಾಶವಿಲ್ಲ. ಇನ್ನು ಹಿರಿಯ ನಾಗರಿಕರು ಈ ಯೋಜನೆಯ ಲಾಭವನ್ನು ಪಡೆಯಬಹುದು ಮತ್ತು ಅವರಿಗೆ ಅಧಿಕ ಬಡ್ಡಿದರ ಲಭ್ಯವಾಗಲಿದೆ. ಎಸ್‌ಬಿಐನ ಮಾರ್ಗಸೂಚಿ ಪ್ರಕಾರ ಉಳಿತಾಯ, ಕರೆಂಟ್ ಅಥವಾ ಒಡಿ ಖಾತೆಯ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಮೆಚುರಿಟಿ ಅವಧಿ ಮತ್ತು ಬಡ್ಡಿದರ
ಎಸ್‌ಬಿಐನ ವರ್ಷಾಶನ ಯೋಜನೆಯು ಎಲ್ಲಾ ಎಸ್‌ಬಿಐ ಶಾಖೆಗಳಲ್ಲಿ ಲಭ್ಯವಿದೆ. 36, 60, 84, ಅಥವಾ 120 ತಿಂಗಳ ಅವಧಿ ಯೋಜನೆ ಇದಾಗಿದೆ. 3 ರಿಂದ 10 ವರ್ಷಗಳ ಅವಧಿಯ ಯೋಜನೆಗೆ ಕನಿಷ್ಠ ಡೆಪಾಸಿಟ್ ಮಾಡಬೇಕಾಗುತ್ತದೆ. ಕನಿಷ್ಠ ಮೊತ್ತ ಮಾಸಿಕ ಒಂದು ಸಾವಿರವಾಗಿದೆ. ಆನ್‌ಲೈನ್‌ನಲ್ಲಿ ನಾವು ಸಾಮಾನ್ಯವಾಗಿ ಗರಿಷ್ಠ ಎಷ್ಟು ಪಾವತಿ ಮಾಡಬಹುದೋ ಅಷ್ಟು ಪಾವತಿ ಮಾಡಬಹುದು. ಆದರೆ ಆಫ್‌ಲೈನ್‌ನಲ್ಲಿಯಾದರೆ ಯಾವುದೇ ಗರಿಷ್ಠ ಅವಧಿ ಇರುವುದಿಲ್ಲ. ಎಸ್‌ಬಿಐ ಪ್ರಸ್ತುತ ಮೂರು ವರ್ಷದಿಂದ ಹತ್ತು ವರ್ಷದ ಅವಧಿಯ ಡೆಪಾಸಿಟ್‌ಗೆ ಶೇಕಡ 5.45ರಿಂದ ಶೇಕಡ 5.45ರಷ್ಟು ಬಡ್ಡಿದರ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 5.95ರಿಂದ ಶೇಕಡ 6.30ರಷ್ಟು ಬಡ್ಡಿದರವನ್ನು ನೀಡುತ್ತದೆ. ಇದಕ್ಕೆ ಟಿಡಿಎಸ್ ಅನ್ವಯವಾಗಲಿದೆ.

ಅಕಾಲಿಕ ಹಿಂಪಡೆಯುವಿಕೆ, ಓವರ್‌ಡ್ರಾಫ್ಟ್ ಸೌಲಭ್ಯ
ಠೇವಣಿದಾರರ ಮರಣದ ಸಂದರ್ಭದಲ್ಲಿ ಅಕಾಲಿಕವಾಗಿ ಈ ಡೆಪಾಸಿಟ್ ಅನ್ನು ಮುಚ್ಚಬಹುದು. ಎಸ್‌ಬಿಐನ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ರೂ 15.00 ಲಕ್ಷಗಳವರೆಗಿನ ಠೇವಣಿಗಳಿಗೆ ಅಕಾಲಿಕ ವಾಪಾಸ್ ಪಡೆಯುವುದಕ್ಕೆ ಅವಕಾಶ ನೀಡಲಾಗುತ್ತದೆ. ಇದಕ್ಕೆ ದಂಡವಿದೆ. ಐದು ಲಕ್ಷಕ್ಕಿಂತ ಹೆಚ್ಚಿನ ಅವಧಿಯ ಠೇವಣಿಗಳಿಗೆ, ಶೇಕಡ 1ರಷ್ಟು ದಂಡವಿದೆ. ವರ್ಷಾಶನದ ಬಾಕಿ ಮೊತ್ತದ 75% ವರೆಗಿನ ಓವರ್‌ಡ್ರಾಫ್ಟ್/ಸಾಲವನ್ನು ಶಿಕ್ಷಣ, ಮದುವೆ ಅಥವಾ ಯಾವುದೇ ಇತರ ತುರ್ತು ಪರಿಸ್ಥಿತಿಯಂತಹ ನಿರ್ದಿಷ್ಟ ಸಂದರ್ಭಗಳಿಗಾಗಿ ನೀಡಬಹುದು.