For Quick Alerts
ALLOW NOTIFICATIONS  
For Daily Alerts

ಗೃಹಿಣಿಯರೇ ಗಮನಿಸಿ: ಮನೆಯಲ್ಲೇ ಕೂತು ಹಣ ಹೀಗೆ ಸಂಪಾದಿಸಿ

|

ಗೃಹಿಣಿಯರು ಮನೆಯಲ್ಲಿ ಕೂತು ಆರಾಮವಾಗಿರುತ್ತಾರೆ ಅಂದುಕೊಳ್ಳುವವರು ಅದೆಷ್ಟೋ ಮಂದಿ ಇದ್ದಾರೆ. ಆದರೆ ಗೃಹಿಣಿಯರಿಗೆ ಇರುವ ಜವಾಬ್ದಾರಿ, ಕೆಲಸ ಅಷ್ಟಿಷ್ಟಲ್ಲ. ತಮಗೆ ತಾವು ಸಮಯವನ್ನು ಹೊಂದಿಸಿಕೊಳ್ಳಲು ಕೂಡಾ ಸಾಧ್ಯವಾಗುವುದಿಲ್ಲ. ಅಷ್ಟಕ್ಕೆ ಗೃಹಿಣಿಯರು ಮನೆಯಲ್ಲೇ ಇದ್ದು ಹಣವನ್ನು ಸಂಪಾದಿಸಬಾರದು ಎಂಬ ನಿಮಯವೇನಿಲ್ಲವಲ್ಲವೇ?, ಹೌದು ಗೃಹಿಣಿಯರು ಮನೆಯಲ್ಲೇ ಇದ್ದು ಹಣ ಸಂಪಾದನೆ ಮಾಡಬಹುದು.

 

ಮನೆಯಲ್ಲಿ ಹಲವಾರು ಖರ್ಚುಗಳು ಇರುತ್ತದೆ. ಅದಕ್ಕಾಗಿ ವ್ಯಯಿಸುತ್ತಾ, ತಮ್ಮ ವೈಯಕ್ತಿಕ ಖರ್ಚು, ಅಗತ್ಯಗಳನ್ನು ಬದಿಗೆ ತಳ್ಳುವ ಅದೆಷ್ಟೋ ಗೃಹಿಣಿಯರು ಇದ್ದಾರೆ. ನಾವಿಲ್ಲಿ ಉಲ್ಲೇಖ ಮಾಡಿರುವ 8 ವಿಧಾನಗಳ ಮೂಲಕ ನೀವು ಮನೆಯಲ್ಲೇ ಕೂತು ಹಣವನ್ನು ಸಂಪಾದನೆ ಮಾಡಬಹುದು. ಆದರೆ ಅದು ಭಾರೀ ಮೊತ್ತವಾಗದಿದ್ದರೂ, ಉಳಿತಾಯ ಮಾಡಿಕೊಳ್ಳಲು ಸಾಧ್ಯವಾಗಬಹುದು.

ಈ ಹಣವನ್ನು ಸಂಪಾದನೆ ಮಾಡಲು ಕೊಂಚ ಸಮಯ ತೆಗೆದುಕೊಳ್ಳಬಹುದು. ಆದರೆ ತಾಳ್ಮೆ, ಸಹನೆ ಇದ್ದರೆ, ಇದ್ದಲ್ಲ ನಾಳೆ ಹಣ ಸಂಪಾದನೆ ಮಾಡಲು ಸಾಧ್ಯವಾಗಲಿದೆ. ಮನೆಯಲ್ಲೇ ಇದ್ದು, ಎಲ್ಲ ಕೆಲಸವನ್ನು ಮಾಡಿಕೊಂಡು, ಹಣ ಸಂಪಾದನೆಯನ್ನು ಕೂಡಾ ಮಾಡಬೇಕಾದರೆ ಮುಂದೆ ಓದಿ....

 ಆನ್‌ಲೈನ್ ಸರ್ವೆ, ಫ್ರಿಲ್ಯಾನ್ಸಿಂಗ್

ಆನ್‌ಲೈನ್ ಸರ್ವೆ, ಫ್ರಿಲ್ಯಾನ್ಸಿಂಗ್

ಹಲವಾರು ಸಂಸ್ಥೆಗಳು ಆನ್‌ಲೈನ್ ಸರ್ವೆ ಮಾಡುವುದಕ್ಕೂ ಕೂಡಾ ಹಣ ಪಾವತಿ ಮಾಡುತ್ತದೆ. ತಮ್ಮ ಉತ್ಪನ್ನಗಳ ಬಗ್ಗೆ ಗ್ರಾಹಕರ ಅಭಿಪ್ರಾಯವೇನಿದೆ ಎಂದು ತಿಳಿಯುವ ನಿಟ್ಟಿನಲ್ಲಿ ಸಂಸ್ಥೆಗಳು ಆನ್‌ಲೈನ್ ಸರ್ವೆಯನ್ನು ಮಾಡಿಸುತ್ತದೆ. ಗೃಹಿಣಿಯರು ಈ ಸರ್ವೆ ಮಾಡುವ ವೆಬ್‌ಸೈಟ್‌ಗಳಿಗೆ ಸೈನ್‌ಅಪ್ ಆಗಿ, ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಹಣವನ್ನು ಸಂಪಾದನೆ ಮಾಡಬಹುದು. ಇದು ಅಧಿಕ ಹಣ ಆಗಿರದು. ಆದರೂ ಸಹಾಯಕ್ಕೆ ಬರಲಿದೆ. ಹಾಗೆಯೇ ನೀವು ಫ್ರಿಲ್ಯಾಂನ್ಸಿಗ್ ಕೂಡಾ ಮಾಡಬಹುದು. ಮನೆಯಲ್ಲೇ ಕೂತು ಹಣ ಸಂಪಾದನೆ ಮಾಡುವುದಕ್ಕೆ ಉತ್ತಮ ಮಾರ್ಗ ಫ್ರೀಲ್ಯಾಂನ್ಸಿಗ್ ಆಗಿದೆ. ಬರವಣಿಗೆ, ಗ್ರಾಫಿಕ್ ಡಿಸೈನ್, ವೆಬ್‌ ಡೆವಲಪ್‌ಮೆಂಟ್ ಮೊದಲಾದವುಗಳಲ್ಲಿ ಹಿಡಿತವಿದ್ದರೆ ನೀವು ಫ್ರೀಲ್ಯಾಂನ್ಸಿಗ್ ಮಾಡಲು ಸಾಧ್ಯವಾಗುತ್ತದೆ.

 ಆನ್‌ಲೈನ್‌ನಲ್ಲಿ ಉತ್ಪನ್ನ ಮಾರಾಟ, ಆನ್‌ಲೈನ್ ಟೀಚಿಂಗ್

ಆನ್‌ಲೈನ್‌ನಲ್ಲಿ ಉತ್ಪನ್ನ ಮಾರಾಟ, ಆನ್‌ಲೈನ್ ಟೀಚಿಂಗ್

ಪ್ರಸ್ತುತ ಹಲವಾರು ಗೃಹಿಣಿಯರು ಮಾಡುತ್ತಿರುವ ಕಾರ್ಯವೇ ಆನ್‌ಲೈನ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವುದು. ಹೌದು, ಮನೆಯಲ್ಲೇ ಕುಳಿತು ಗೃಹಿಣಿಯರು ವಾಟ್ಸಾಪ್ ಗ್ರೂಪ್‌ಗಳನ್ನು ಮಾಡಿ, ಅಲ್ಲಿ ಉತ್ಪನ್ನಗಳ ಫೋಟೋವನ್ನು ಶೇರ್ ಮಾಡುತ್ತಾರೆ. ಈ ಮೂಲಕ ವ್ಯಾಪಾರವನ್ನು ಮಾಡುತ್ತಾರೆ. ಅಮೆಜಾನ್ ಮೊದಲಾದವುಗಳಲ್ಲಿ ರಿಯಾಯಿತಿ ದರದಲ್ಲಿ ಪಡೆದ ಉತ್ಪನ್ನವನ್ನು ಕೊಂಚ ಲಾಭವನ್ನು ಪಡೆಯುವ ಮೂಲಕ ವ್ಯಾಪಾರವನ್ನು ಮಾಡುತ್ತಿದ್ದಾರೆ. ಇದು ಉತ್ತಮ ಮಾರ್ಗವಾಗಿದೆ. ಹಾಗೆಯೇ ನೀವು ಆನ್‌ಲೈನ್ ಮೂಲಕ ಟೀಚಿಂಗ್ ಕೂಡಾ ಮಾಡಬಹುದು. ಈಗ ಆನ್‌ಲೈನ್ ಶಿಕ್ಷಣಕ್ಕೆ ಅಧಿಕ ಬೇಡಿಕೆಯಿದೆ. ಹಲವು ಸಂಸ್ಥೆಗಳು ಆನ್‌ಲೈನ್ ಟೀಚರ್‌ಗಳನ್ನು ನೇಮಿಸುತ್ತಿದೆ.

 ಬೇಬಿಸಿಟ್ಟಿಂಗ್, ಪ್ರಾಣಿ ಸಾಕಣೆ
 

ಬೇಬಿಸಿಟ್ಟಿಂಗ್, ಪ್ರಾಣಿ ಸಾಕಣೆ

ಈ ಹಣದುಬ್ಬರದ ಸಂದರ್ಭದಲ್ಲಿ ಒಬ್ಬರ ದುಡಿತ ಸಾಕಾಗದು, ಅದಕ್ಕಾಗಿ ಪತಿ, ಪತ್ನಿ ಇಬ್ಬರೂ ವೃತ್ತಿ ಮಾಡುತ್ತಾರೆ. ಇಂತಹ ದಂಪತಿಗಳು ತಮ್ಮ ಮಕ್ಕಳನ್ನು ಹೆಚ್ಚಾಗಿ ಬೇಬಿಸಿಟ್ಟಿಂಗ್‌ನಲ್ಲಿ ಇರಿಸುತ್ತಾರೆ. ಗೃಹಿಣಿಯರಾದ ನೀವು ಮನೆ ನಿಭಾಯಿಸುವ, ಮಕ್ಕಳನ್ನು ನಿಭಾಯಿಸುವ ಶಕ್ತಿಯನ್ನು ಹೊಂದಿರುವಾಗ ಬೇಬಿಸಿಟ್ಟಿಂಗ್ ಯಾಕೆ ಮಾಡಬಾರದು?. ನೀವು ಬೇಬಿಸಿಟ್ಟಿಂಗ್ ಮಾಡುವ ಮೂಲಕ ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗಲಿದೆ. ಇನ್ನು ಪ್ರಾಣಿ ಸಾಕಣೆ ಕೂಡಾ ಒಂದು ಹಣ ಸಂಪಾದನೆ ಮಾರ್ಗವಾಗಿದೆ. ದನ, ಕೋಳಿ ಮೊದಲಾದವುಗಳ ಸಾಕಣಿಕೆ ಮಾಡಿ, ಅದರ ಹಾಲು, ಮೊಟ್ಟೆಯಿಂದ ಹಣ ಸಂಪಾದನೆ ಮಾಡಬಹುದು.

 ಬ್ಲಾಗಿಂಗ್, ಪಾರ್ಲರ್ ಕಾರ್ಯ

ಬ್ಲಾಗಿಂಗ್, ಪಾರ್ಲರ್ ಕಾರ್ಯ

ನಾವು ಈ ಮೇಲೆ ಹೇಳಿದ ಎಲ್ಲ ಕಾರ್ಯಗಳಿಗಿಂತಲೂ ಹಣ ಸಂಪಾದನೆ ಮಾಡಲು ಅಧಿಕ ಸಮಯ ಬೇಕಾಗುವ ಕಾರ್ಯ ಬ್ಲಾಗಿಂಗ್ ಆಗಿದೆ. ನಾವು ಆಹಾರ, ಫಿಟ್‌ನೆಟ್ ಮೊದಲಾದ ವಿಚಾರದಲ್ಲಿ ಬ್ಲಾಗಿಂಗ್ ಮಾಡಿ, ನಮ್ಮ ಬ್ಲಾಗಿಂಗ್ ಯಶಸ್ವಿಯಾದರೆ ಮಾತ್ರ ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗುತ್ತದೆ. ನಮ್ಮ ಬ್ಲಾಗಿಂಗ್‌ಗೆ ಅಧಿಕ ಲೈಕ್, ವೀವ್ ಬಂದರೆ, ಜಾಹೀರಾತು, ಸ್ಪಾನ್ಸರ್ಸ್ ಲಭ್ಯವಾಗುತ್ತದೆ. ಇನ್ನು ನೀವು ಪಾರ್ಲರ್‌ನ ಕಾರ್ಯವನ್ನು ಮಾಡಿ ಕೂಡಾ ಹಣ ಸಂಪಾದನೆ ಮಾಡಬಹುದು. ಇದಕ್ಕಾಗಿ ನೀವು ಬೇರೇಡೆ ಹೋಗಬೇಕಾಗಿಲ್ಲ. ಪ್ರಸ್ತುತ ಫ್ಯಾಶನ್‌ಗೆ ಅಧಿಕ ಆದ್ಯತೆಯನ್ನು ನೀಡುತ್ತಾರೆ, ಹಾಗಿರುವಾಗ ನೀವು ಮನೆಯ ಕೆಲಸ ಮುಗಿಸಿ ನಿರ್ದಿಷ್ಟ ಸಮಯದಲ್ಲಿ ಮನೆಯಲ್ಲಿಯೇ ಹೇರ್‌ ಸ್ಟೈಲ್, ಐಬ್ರೋ ಶೇಪ್ ಮೊದಲಾದವುಗಳನ್ನು ಮಾಡಿ ಹಣ ಸಂಪಾದನೆ ಮಾಡಬಹುದು. ಇದಕ್ಕೆ ಬೇಕಾದ ಕೆಲವು ವಸ್ತುಗಳ ಖರೀದಿ ಕೊಂಡ ಹಣ ಬೇಕಾಗುತ್ತದೆ.

English summary

Stay-at-home Housewives, Here's 8 Ways to Earn Money Sitting Home, Details in Kannada

Stay-at-home moms often have a lot of responsibilities and not a lot of time to themselves, but that doesn't mean they can't make some extra money. Here's 8 Ways to Earn Money Sitting Home. read on.
Story first published: Wednesday, January 11, 2023, 12:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X