For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಇಟ್ಟರೆ ಚಿನ್ನ, ತೆರಿಗೆ ಬಿದ್ದೀತಾ ಅಣ್ಣಾ? ಸರ್ಕಾರದ ನಿಯಮ ತಿಳಿಯಿರಿ

|

ಚಿನ್ನ ನಮ್ಮ ಬಹುತೇಕ ಭಾರತೀಯರಿಗೆ ಯಾವಾಗಲೂ ಬೇಡಿಕೆ ಇರುವ ವಸ್ತುವೇ. ಚಿನ್ನ ನಮ್ಮ ಭೂಮಿಯಲ್ಲಿ ಸೀಮಿತ ಪ್ರಮಾಣದಲ್ಲಿ ಇರುವುದರಿಂದ ಸಹಜವಾಗಿಯೇ ಬೆಲೆ ಹೆಚ್ಚುತ್ತಲೇ ಹೋಗುತ್ತದೆ. ಭಾರತದಲ್ಲಿ ಮದುವೆ ಸಮಾರಂಭ, ಹಬ್ಬ ಹರಿದಿನಗಳಿಗೆ ಮೈಮೇಲೆ ಚಿನ್ನ ಧರಿಸುವುದು ಶ್ರೇಷ್ಠತೆ ಎನಿಸಿದೆ. ಈಗ ಚಿನ್ನ ಹೂಡಿಕೆಯ ವಸ್ತುವಾಗಿಯೂ ಪರಿಗಣಿಸಲ್ಪಡುತ್ತಿದೆ. ಹೀಗಾಗಿ, ಬಹಳ ಮಂದಿ ಚಿನ್ನವನ್ನು ಒಡವೆ ರೂಪದಲ್ಲಿಯೂ, ನಾಣ್ಯಗಳ ರೂಪದಲ್ಲಿಯೂ ಸಂಗ್ರಹಿಸಿ ಮನಯಲ್ಲೇ ಇಟ್ಟುಕೊಳ್ಳುವುದುಂಟು.

 

ಕೇರಳದಂಥ ರಾಜ್ಯಗಳಲ್ಲಿ ಪರಂಪರಾನುಗತವಾಗಿ ಬಂದ ಚಿನ್ನವನ್ನು ಅನೇಕರು ಹೊಂದಿರುತ್ತಾರೆ. ನೀವು ಚಿನ್ನವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯ ಇದೆಯಾದರೂ ಸರ್ಕಾರ ವಿಧಿಸಿರುವ ನಿರ್ಬಂಧ ಮತ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ.

ಕೊಹ್ಲಿ, ಸಚಿನ್, ವೀರೂ, ಜಡ್ಡು, ಜ್ಯಾಕ್... ಹೋಟೆಲ್ ತೆರೆದ ಕ್ರಿಕೆಟಿಗರಲ್ಲಿ ಸೋತವರೇ ಹೆಚ್ಚಾ?ಕೊಹ್ಲಿ, ಸಚಿನ್, ವೀರೂ, ಜಡ್ಡು, ಜ್ಯಾಕ್... ಹೋಟೆಲ್ ತೆರೆದ ಕ್ರಿಕೆಟಿಗರಲ್ಲಿ ಸೋತವರೇ ಹೆಚ್ಚಾ?

ಚಿನ್ನಕ್ಕೆ ತೆರಿಗೆಗಳನ್ನು ಹಾಕಲಾಗುತ್ತದೆ. ಜಿಎಸ್‌ಟಿ ತೆರಿಗೆ ಇದ್ದೇ ಇದೆ. ಆದರೆ, ಇಲ್ಲಿ ಹೇಳಲಾಗುತ್ತಿರುವುದು ಗೋಲ್ಡ್ ಟ್ಯಾಕ್ಸ್. ಚಿನ್ನದ ಮೇಲಿನ ತೆರಿಗೆ. ಆದರೆ, ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ರಕಾರ ಘೋಷಿತ ಆದಾಯದಿಂದ ಖರೀದಿಸಿದ ಚಿನ್ನ, ಅಥವಾ ತೆರಿಗೆ ವಿನಾಯಿತಿ ಇರುವ ಕೃಷಿಯಂತಹ ಆದಾಯಮೂಲದಿಂದ ಖರೀದಿಸಿದ ಚಿನ್ನ ಇದ್ದರೆ ಅಂಥದ್ದಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ. ಹಾಗೆಯೇ, ಮನೆಯಲ್ಲಿ ಹಣ ಉಳಿತಾಯ ಮಾಡಿ ಖರೀದಿಸಿರುವ ಚಿನ್ನ ಅಥವಾ ಕಾನೂನಾತ್ಮಕವಾಗಿ ಪಡೆದ ಚಿನ್ನಕ್ಕೂ ತೆರಿಗೆ ಇರುವುದಿಲ್ಲ.

ಚಿನ್ನವನ್ನು ಖರೀದಿಸುವಾಗ ಶೇ. 3ರಷ್ಟು ಜಿಎಸ್‌ಟಿ ಕಟ್ಟುವುದು ಇದ್ದೇ ಇರುತ್ತದೆ. ಹಾಗೆ ಖರೀದಿಸಿ ನೀವು ಎಷ್ಟು ಬೇಕಾದರೂ ಚಿನ್ನದ ಸಂಗ್ರಹವನ್ನು ಇಟ್ಟುಕೊಳ್ಳಬಹುದು. ಅದಕ್ಕೆಲ್ಲಾ ತೆರಿಗೆ ಹಾಕಲಾಗುವುದಿಲ್ಲ. ನೀವು ಆ ಚಿನ್ನವನ್ನು ಮಾರುವಾಗ ಮಾತ್ರವೇ ಚಿನ್ನದ ತೆರಿಗೆ ಅಂಶ ಬರುತ್ತದೆ.

ಟ್ವಿಟ್ಟರ್ ಖಾತೆಯಲ್ಲಿ ಬ್ಲ್ಯೂ ಟಿಕ್‌ಗೆ ನೀವು ತೆರೆಬೇಕಾದೀತು ಮಾಸಿಕ 20 ಡಾಲರ್!ಟ್ವಿಟ್ಟರ್ ಖಾತೆಯಲ್ಲಿ ಬ್ಲ್ಯೂ ಟಿಕ್‌ಗೆ ನೀವು ತೆರೆಬೇಕಾದೀತು ಮಾಸಿಕ 20 ಡಾಲರ್!

ಮಾರುವಾಗ ಹೇಗೆ ತೆರಿಗೆ?

ಮಾರುವಾಗ ಹೇಗೆ ತೆರಿಗೆ?

ನೀವು ಚಿನ್ನ ಖರೀದಿಸಿ ಮೂರಕ್ಕೂ ಹೆಚ್ಚು ವರ್ಷಗಳ ನಂತರ ಮಾರುತ್ತಿದ್ದರೆ ಆಗ ಮಾರಾಟದಿಂದ ಬಂದ ಲಾಭಕ್ಕೆ ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್ಸ್ (ಎಲ್‌ಟಿಸಿಜಿ) ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಇದು ಲಾಭಾಂಶದ ಶೇ. 20 ಇರುತ್ತದೆ.

ಒಂದು ವೇಳೆ ನೀವು ಮೂರು ವರ್ಷದೊಳಗೆ ಚಿನ್ನವನ್ನು ಮಾರಾಟ ಮಾಡಿದಲ್ಲಿ ತೆರಿಗೆಯನ್ನು ಮುರಿದುಕೊಳ್ಳುವುದಿಲ್ಲ. ಬದಲಾಗಿ ಚಿನ್ನದ ಮಾರಾಟದಿಂದ ಬಂದ ಲಾಭವನ್ನು ನಿಮ್ಮ ಆದಾಯಕ್ಕೆ ಸೇರಿಸಲಾಗುತ್ತದೆ. ಆ ನಂತರ ಆದಾಯ ತೆರಿಗೆ ನಿಯಮದಂತೆ ನಿಮಗೆ ತೆರಿಗೆ ಅನ್ವಯ ಆಗುತ್ತದೆ.

 

ಸೋವರಿನ್ ಬಾಂಡ್
 

ಸೋವರಿನ್ ಬಾಂಡ್

ಸೋವರಿನ್ ಗೋಲ್ಡ್ ಬಾಂಡ್‌ಗಳನ್ನು ನೀವು ಮಾರುತ್ತಿದ್ದರೆ, ಅದರ ಲಾಭವನ್ನು ನಿಮ್ಮ ಆದಾಯಕ್ಕೆ ಸೇರಿಸಲಾಗುತ್ತದೆ. ಆ ನಂತರ ಆದಾಯ ತೆರಿಗೆ ನಿಯಮದ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.

ಉದಾಹರಣೆಗೆ, ನಿಮಗೆ ಸಂಬಳ ಮಾತ್ರವೇ ಆದಾಯ ಮೂಲವಾಗಿದ್ದು, ವರ್ಷಕ್ಕೆ 7 ಲಕ್ಷ ರೂ ನಿಮ್ಮ ಕೈಸೇರುತ್ತದೆ ಎಂದಿಟ್ಟುಕೊಳ್ಳಿ. ಸರ್ಕಾರದ ಟ್ಯಾಕ್ಸ್ ಸ್ಲಾಬ್‌ನಲ್ಲಿ ನಿಮ್ಮದು 5-7.5 ಲಕ್ಷದ ವಿಭಾಗದಲ್ಲಿ ಬರುತ್ತದೆ. ಇದೇ ವೇಳೆ ನಿಮ್ಮಲ್ಲಿರುವ 100 ಗ್ರಾಮ್ ಚಿನ್ನವನ್ನು ಮಾರುತ್ತೀರಿ. 2 ವರ್ಷಗಳ ಹಿಂದೆ 3.8 ಲಕ್ಷ ರೂಪಾಯಿಗೆ ಇದನ್ನು ಖರೀದಿಸಿರುತ್ತೀರಿ. ಈಗ ನೀವು 4.5 ಲಕ್ಷ ರೂಪಾಯಿಗೆ ಅದನ್ನು ಮಾರುತ್ತೀರಿ. ಆಗ ನಿಮಗೆ 70 ಸಾವಿರ ರೂಪಾಯಿ ಲಾಭ ಬಂದಂತಾಯಿತು. ಈ ಮೊತ್ತವನ್ನು ನಿಮ್ಮ ಆದಾಯಕ್ಕೆ ಸೇರಿಸಲಾಗುತ್ತದೆ. ಅಂದರೆ 7 ಲಕ್ಷ ರೂ ಇದ್ದ ನಿಮ್ಮ ಆದಾಯ ಈಗ 7.7 ಲಕ್ಷ ರೂ ಆಗುತ್ತದೆ.

ಈಗ ನಿಮ್ಮ ಆದಾಯ ತೆರಿಗೆ ಟ್ಯಾಕ್ಸ್ ಸ್ಲಾಬ್ ಬದಲಾಗುತ್ತದೆ. ನಿಮ್ಮದು 7.5-10 ಲಕ್ಷ ರೂ ಸ್ಲಾಬ್‌ಗೆ ಹೋಗುತ್ತದೆ. ಇಲ್ಲಿ ನಿಮ್ಮ ಆದಾಯಕ್ಕೆ ವಿಧಿಸುವ ತೆರಿಗೆ ಶೇ. 15ರಿಂದ ಶೇ. 20ಕ್ಕೆ ಹೆಚ್ಚುತ್ತದೆ.

 

ಅಧಿಕಾರಿಗಳು ರೇಡ್ ಮಾಡಿದಾಗ?

ಅಧಿಕಾರಿಗಳು ರೇಡ್ ಮಾಡಿದಾಗ?

ಒಂದು ವೇಳೆ ತನಿಖಾ ಸಂಸ್ಥೆಗಳ ಅಧಿಕಾರಿಗಳು ಒಬ್ಬ ವ್ಯಕ್ತಿಯ ಮನೆಯನ್ನು ರೇಡ್ ಮಾಡಿದಾಗ ನಗದು, ಚಿನ್ನ ಇತ್ಯಾದಿಯನ್ನು ಜಫ್ತಿ ಮಾಡಿಕೊಳ್ಳುವುದನ್ನು ಗಮನಿಸಿರುತ್ತೇವೆ. ಆದರೆ, ಸುಖಾಸುಮ್ಮನೆ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳಲು ಆಗುವುದಿಲ್ಲ. ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ಚಿನ್ನ ಇದ್ದರೆ ಮಾತ್ರ ಜಫ್ತಿ ಮಾಡಿಕೊಳ್ಳಬಹುದು ಎನ್ನುತ್ತದೆ. ಕಾನೂನು.

ಈ ಕಾನೂನು ಪ್ರಕಾರ ಒಬ್ಬ ವಿವಾಹಿತ ಮಹಿಳೆ 500 ಗ್ರಾಮ್‌ವರೆಗೂ ಚಿನ್ನವನ್ನು ಇಟ್ಟುಕೊಳ್ಳಬಹುದು. ಅವಿವಾಹಿತ ಮಹಿಳೆಯಾದರೆ ಗರಿಷ್ಠ 250 ಗ್ರಾಮ್ ಮಾತ್ರ ಚಿನ್ನವನ್ನು ಇಟ್ಟುಕೊಳ್ಳಬಹುದು. ಇನ್ನು ಪುರುಷರಾದರೆ 100 ಗ್ರಾಂ ಮಿತಿ ಇದೆ. ಇದನ್ನು ಮೀರಿದ ಪ್ರಮಾಣದಲ್ಲಿ ಚಿನ್ನವನ್ನು ಹೊಂದಿದರೆ ಮಾತ್ರ ರೇಡಿಂಗ್ ಅಧಿಕಾರಿಗಳು ಸೀಜ್ ಮಾಡಿಕೊಳ್ಳಲು ಸಾಧ್ಯ.

ಚಿನ್ನವನ್ನು ಜಫ್ತಿ ಮಾಡಿದಾಕ್ಷಣ ಅದು ನಿಮ್ಮ ಕೈತಪ್ಪಿ ಹೋಯಿತು ಎಂದಲ್ಲ. ಹೆಚ್ಚುವರಿ ಚಿನ್ನವನ್ನು ನೀವು ಹೇಗೆ ಖರೀದಿಸಿದಿರಿ, ಯಾವ ಆದಾಯದಿಂದ ಖರೀದಿಸಿದಿರಿ ಎಂದು ಸಮರ್ಪಕವಾಗಿ ಉತ್ತರ ಕೊಟ್ಟರೆ ಚಿನ್ನ ನಿಮಗೆ ವಾಪಸ್ಸಾಗುತ್ತದೆ. ಕಾನೂನಾತ್ಮಕವಾಗಿ ಮಾಡಿದ ಸಂಪಾದನೆಯಿಂದ ನೀವು ಎಷ್ಟು ಬೇಕಾದರೂ ಚಿನ್ನವನ್ನು ಖರೀದಿಸಬಹುದು. ಅದಕ್ಕೆ ಅಗತ್ಯ ಪುರಾವೆ ನಿಮ್ಮ ಬಳಿ ಇರಬೇಕಷ್ಟೇ.

 

English summary

Storing Gold at Home; Know The Limit and Tax Rules

If you have kept gold at home, it is important to know the limit of storing gold and the tax applied to it. Here is details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X