For Quick Alerts
ALLOW NOTIFICATIONS  
For Daily Alerts

ಟ್ರೆಂಡ್ ಬದಲಾಗಿದೆ, ಚಿನ್ನಾಭರಣ ಆನ್ ಲೈನ್ ಖರೀದಿಯ ಲಾಭಗಳೇನು?

|

ಆನ್ ಲೈನ್ ನಲ್ಲಿ ಅಥವಾ ಆಫ್ ಲೈನ್ ನಲ್ಲಿ (ನೇರವಾಗಿ ಮಳಿಗೆ ಖರೀದಿ ಮಾಡುವುದು) ಚಿನ್ನ ಖರೀದಿ ಮಾಡುವುದಕ್ಕೆ ಏನಾದರೂ ವ್ಯತ್ಯಾಸ ಇದೆಯಾ? ಜಾಗೃತ ಗ್ರಾಹಕರಿಗೆ ಈ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಈ ಎರಡು ವಿಧಾನದಲ್ಲಿ ಯಾವ ಬಗೆಯ ಖರೀದಿ ಉತ್ತಮ? ಅವುಗಳ ಅನುಕೂಲ- ಅನನುಕೂಲಗಳೇನು ಎಂಬುದನ್ನು ತಿಳಿದುಕೊಳ್ಳಬಹುದು. ಜತೆಗೆ ಗ್ರಾಹಕರ ಅಭಿರುಚಿ ಏನು ಎಂಬುದು ಸಹ ಮುಖ್ಯವಾಗುತ್ತದೆ.

ಈಗಂತೂ ಇಂಟರ್ ನೆಟ್ ತಲುಪದ ಜಾಗವುಂಟಾ ಎಂದು ಹುಡುಕಬೇಕಿದೆ. ಆ ಕಾರಣಕ್ಕೆ ಆನ್ ಲೈನ್ ಶಾಪಿಂಗ್ ದಿನದಿನಕ್ಕೂ ಜನಪ್ರಿಯ ಆಗುತ್ತಿದೆ. ಗ್ರಾಹಕರಲ್ಲಿ ಬಹುಪಾಲು ಮಂದಿ ಇದನ್ನು ಅನುಕೂಲಕರ ಅಂತಲೂ ಭಾವಿಸುತ್ತಿದ್ದಾರೆ. ತಜ್ಞರ ಪ್ರಕಾರ, ಆನ್ ಲೈನ್ ಶಾಪಿಂಗ್ ಉತ್ತಮ. ಏಕೆಂದರೆ ಪಾವತಿ ಸಲೀಸು. ಹಿಂತಿರುಗಿಸುವ ನಿಯಮಗಳು ಚೆನ್ನಾಗಿವೆ. ಡಿಸ್ಕೌಂಟ್- ಆಫರ್ ಗಳು ದೊರೆಯುತ್ತವೆ.

ಚಿನ್ನದ ಮೇಲೆ ಹೂಡಿಕೆ ಮಾಡಬಹುದಾ? ಏನಂತಾರೆ ಆಭರಣ ವ್ಯಾಪಾರಿಗಳು?ಚಿನ್ನದ ಮೇಲೆ ಹೂಡಿಕೆ ಮಾಡಬಹುದಾ? ಏನಂತಾರೆ ಆಭರಣ ವ್ಯಾಪಾರಿಗಳು?

ಆನ್ ಲೈನ್ ನಲ್ಲಿ ದಿನಸಿಯಿಂದ ಗ್ಯಾಜೆಟ್ ತನಕ ಎಲ್ಲವನ್ನೂ ಖರೀದಿ ಮಾಡಬಹುದು. ಆನ್ ಲೈನ್ ನಲ್ಲಿನ ಸುಲಭ ಪಾವತಿ ವಿಧಾನ, ವೇಗವಾದ ಡೆಲಿವರಿ ಮತ್ತು ನಾನಾ ಬಗೆಯಲ್ಲಿ ಡಿಸ್ಕೌಂಟ್ ಗಳು ಈ ಎಲ್ಲ ಕಾರಣಗಳಿಗೆ ಭಾರತೀಯರು ಆನ್ ಲೈನ್ ಶಾಪಿಂಗ್ ವ್ಯವಹಾರಗಳು ಇಷ್ಟಪಡುತ್ತಾರೆ.

ಟ್ರೆಂಡ್ ಬದಲಾಗಿದೆ, ಚಿನ್ನಾಭರಣ ಆನ್ ಲೈನ್ ಖರೀದಿಯ ಲಾಭಗಳೇನು?

ಆದರೆ, ಆಫ್ ಲೈನ್ ಶಾಪಿಂಗ್ ಅನುಭವವೇ ಬೇರೆ. ಗ್ರಾಹಕರು ಆ ವಸ್ತುವನ್ನು ಕಣ್ಣಾರೆ ನೋಡಿ, ಮುಟ್ಟಿ ಪರೀಕ್ಷಿಸಬಹುದು. ಆ ನಂತರ ಮನಸಿಗೆ ಸಮಾಧಾನ ಆದರಷ್ಟೇ ಖರೀದಿ. ಡಿಸೈನ್ ವಿಚಾರಕ್ಕೆ ಬಂದರೆ ಬಹಳ ಆಯ್ಕೆಗಳು ಇರುವುದಿಲ್ಲ. ಒಂದೇ ಕಡೆ ಹಲವು ಆಯ್ಕೆಗಳು ಸಿಗುವುದಿಲ್ಲ. ಆದರೆ ಆನ್ ಲೈನ್ ನಲ್ಲಿ ಆಯ್ಕೆಗೆ ಬಹಳ ಅವಕಾಶಗಳು ಇರುತ್ತವೆ. ರಾಜೀ ಮಾಡಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ.

ಆನ್ ಲೈನ್ ನಲ್ಲಿ ಖರೀದಿ ಚಿನ್ನದ ಆಭರಣ ಖರೀದಿ ಮಾಡುವಾಗ ಈ ಅಂಶಗಳು ಗಮನದಲ್ಲಿ ಇರಬೇಕು. ಆ ವೆಬ್ ಸೈಟ್ ವಿಶ್ವಾಸಾರ್ಹವಾದುದೇ ಎಂಬುದನ್ನು ಪರೀಕ್ಷಿಸಿ. ಆರ್ಡರ್ ಮಾಡಿರುವ ಆಭರಣಗಳ ಶುದ್ಧತೆಯನ್ನು ಪರಿಶೀಲಿಸಿ. ಮಾರಾಟಗಾರರು ಹಾಲ್ ಮಾರ್ಕ್ ಸರ್ಟಿಫಿಕೇಟ್ ನೀಡುತ್ತಿದ್ದಾರಾ ತಿಳಿದುಕೊಳ್ಳಿ. ಖರೀದಿಗೂ ಮುನ್ನ ಮೇಕಿಂಗ್ ಚಾರ್ಜಸ್ ಎಂಬುದನ್ನು ತಿಳಿಯಿರಿ. ಬೈ ಬಾಕ್ ಅಥವಾ ವಾಪಸು ಪಡೆಯುವುದರ ನಿಯಮಗಳ ಮಾಹಿತಿ ಕಲೆಹಾಕಿ. ಅಧಿಕೃತವಾದ ಬಿಲ್ ಪಡೆದುಕೊಳ್ಳಿ.

ತಲೆತಲೆಮಾರುಗಳಿಂದಲೂ ಚಿನ್ನಾಭರಣ ಖರೀದಿಯು ಭಾರತೀಯರ ಪರಂಪರೆ ಮತ್ತು ಸಂಸ್ಕೃತಿಯಲ್ಲೇ ಬಂದಿದೆ. ತಂತ್ರಜ್ಞಾನ ಮುಂದುವರಿದ ಹಾಗೇ ಚಿನ್ನದ ಆಭರಣಗಳ ಖರೀದಿ ಅನುಭವವೇ ಬದಲಾಗುತ್ತಿದೆ.

English summary

What Are The Advantages Of Purchasing Gold Jewelry Online?

Here are the advantages of purchasing gold through online.
Story first published: Thursday, January 9, 2020, 17:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X