For Quick Alerts
ALLOW NOTIFICATIONS  
For Daily Alerts

ಸಿನಿಮಾ ನಿರ್ಮಾಣಕ್ಕೆ ಗ್ರೂಪ್ ಫಂಡಿಂಗ್ ಹೊಸ ದಾರಿ, ಇದೇನ್ರೀ?

|

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಂಡಿಯಾ ವರ್ಸಸ್ ಇಂಗ್ಲೆಂಡ್ ಸಿನಿಮಾ ನೋಡಿದರಾ? ಅಥವಾ ಟ್ರೇಲರ್ ನೋಡಿದರಾ? ಅಲ್ಲಿ ಫ್ಯಾಮಿಲಿ ಫಂಡೆಡ್ ಸಿನಿಮಾ ಅಂತ ಹದಿನೆಂಟು ಕುಟುಂಬಗಳ ಹೆಸರು ಬರುತ್ತವೆ. ಅಂದರೆ ದಂಪತಿ ಫೋಟೋಗಳು ಬರುತ್ತವೆ. ಏನಿದು ಫ್ಯಾಮಿಲಿ ಫಂಡೆಡ್ ಸಿನಿಮಾ ಎಂಬ ಕುತೂಹಲದೊಂದಿಗೆ 'ಗುಡ್ ರಿಟರ್ನ್ಸ್ ಕನ್ನಡ'ದಿಂದ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಮಾತನಾಡಿಸಲಾಗಿದೆ.

ಆ ಬಗ್ಗೆ ಅವರು ನೀಡಿದ ವಿವರಗಳು ಬಹಳ ಆಸಕ್ತಿಕರವಾಗಿವೆ ಮತ್ತು ಸಿನಿಮಾ ನಿರ್ಮಾಣ ಮಾಡಬೇಕು ಎಂದು ಯೋಚಿಸುತ್ತಿದ್ದು, ನಿರ್ಮಾಣದಲ್ಲಿ ತೊಡಕುಗಳನ್ನು ಎದುರಿಸುತ್ತಿರುವವರಿಗೆ ಮಾರ್ಗದರ್ಶನ ಕೂಡ ಆಗಬಹುದು. ನಾಗತಿಹಳ್ಳಿ ಚಂದ್ರಶೇಖರ್ ಏನು ಹೇಳಿದರು ಎಂಬ ಮಾಹಿತಿ ತಿಳಿಯುವುದಕ್ಕೆ ಮುಂದೆ ಓದಿ...

 ಆರ್ಟ್ಸ್ ಮತ್ತು ಕಾಮರ್ಸ್ ನ ಅಪರೂಪದ ಕಾಂಬಿನೇಷನ್

ಆರ್ಟ್ಸ್ ಮತ್ತು ಕಾಮರ್ಸ್ ನ ಅಪರೂಪದ ಕಾಂಬಿನೇಷನ್

ಇದು ಕಲೆ (ಆರ್ಟ್ಸ್) ಮತ್ತು ವಾಣಿಜ್ಯದ (ಕಾಮರ್ಸ್) ಅಪರೂಪದ ಕಾಂಬಿನೇಷನ್. ಇದು ಅಧಿಕೃತವಾಗಿ ಹೇಳಬೇಕು ಅಂದರೆ ಗ್ರೂಪ್ ಫಂಡೆಡ್ ಸಿನಿಮಾವೇ. ಅಂದರೆ ಇಲ್ಲಿ ಹಣ ಹಾಕಿದವರೆಲ್ಲ ಕುಟುಂಬದ ರೀತಿಯಲ್ಲಿ ಕೆಲಸ ಮಾಡಿದ್ದರಿಂದ ದಂಪತಿ ಸಮೇತ ಫೋಟೋ ಬಳಸಿದ್ದೇವೆ. ಯಾವುದೇ ವ್ಯವಹಾರವಾದರೂ ಅಷ್ಟೇ, ಮನೆಯಲ್ಲಿ ಗಂಡಸರಿಗೆ ಹೆಣ್ಣುಮಕ್ಕಳು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಹಾಯಕ್ಕೆ ನಿಂತಿರುತ್ತಾರೆ. ಫ್ಯಾಮಿಲಿ ಅನ್ನೋ ಸಂಸ್ಕೃತಿಯೇ ಹೋಗುತ್ತಿದೆ. ಸಿನಿಮಾಗಳಿಗೂ ಕುಟುಂಬ ಸಮೇತ ಹೋಗುವುದು ಕಡಿಮೆ ಆಗುತ್ತಿದೆ. ಆದ್ದರಿಂದ ಫ್ಯಾಮಿಲಿ ಫಂಡೆಡ್ ಸಿನಿಮಾ ಎಂದು ಕರೆದೆ. ಅದನ್ನು ಅವರೂ ಮೆಚ್ಚಿಕೊಂಡರು. ಎಲ್ಲರೂ ಸಿನಿಮಾ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ. ಆದರೆ ಯಾರು ಎಷ್ಟು ಹಣ ಹಾಕಿದ್ದಾರೆ, ಬಜೆಟ್ ಎಷ್ಟು ಎಂಬ ವಿಚಾರವನ್ನು ಬಹಿರಂಗ ಮಾಡುವುದಿಲ್ಲ. ಆದರೆ ಹಣ ಹಾಕಿದ ಪ್ರಮಾಣದಲ್ಲಿ ಲಾಭದ ವಿತರಣೆ ಆಗುತ್ತದೆ

ಕನ್ನಡ ಚಿತ್ರರಂಗದ 'ಕಾಮಿಡಿ ಕಿಲಾಡಿ'ಗಳ ಸಂಭಾವನೆ ಎಷ್ಟು ಗೊತ್ತಾ?ಕನ್ನಡ ಚಿತ್ರರಂಗದ 'ಕಾಮಿಡಿ ಕಿಲಾಡಿ'ಗಳ ಸಂಭಾವನೆ ಎಷ್ಟು ಗೊತ್ತಾ?

 ಕ್ರೌಡ್ ಫಂಡಿಂಗ್ ಗೂ - ಗ್ರೂಪ್ ಫಂಡಿಂಗ್ ಗೂ ವ್ಯತ್ಯಾಸ

ಕ್ರೌಡ್ ಫಂಡಿಂಗ್ ಗೂ - ಗ್ರೂಪ್ ಫಂಡಿಂಗ್ ಗೂ ವ್ಯತ್ಯಾಸ

ಈ ಸಿನಿಮಾದ ಡಿಸ್ಕಷನ್ ಗಳಲ್ಲೂ ಇವರೆಲ್ಲ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕಾನ್ಫರೆನ್ಸ್ ಕಾಲ್ ಗಳು ಮಾಡಿ, ಮಾತನಾಡಿದ್ದಾರೆ. ಎಲ್ಲರೂ ಸಮಾನಾಸಕ್ತರು ಮತ್ತು ಸಿನಿಮಾ ಎಂಬ ಜೂಜಿನಲ್ಲಿ ಎಂಥ ರಿಸ್ಕ್ ಇದೆ ಎಂಬುದನ್ನು ತಿಳಿದವರು. ಕ್ರೌಡ್ ಫಂಡಿಂಗ್ ಗೂ ಈ ಗ್ರೂಪ್ ಫಂಡಿಂಗ್ ಗೂ ವ್ಯತ್ಯಾಸ ಇದೆ. ಸಣ್ಣ ಸಣ್ಣ ಮೊತ್ತ ಹಾಕಿ, ಒಂದು ಸಿನಿಮಾ ಮಾಡುವುದು ಕ್ರೌಡ್ ಫಂಡಿಂಗ್. ಯಾರೋ ಒಬ್ಬರು ಹಣ ಹಾಕಿದವರು ಕಿರಿಕಿರಿ ಮಾಡಿದರೂ ಸಮಸ್ಯೆ ಆಗುತ್ತದೆ. ಆದರೆ ಈ ಗ್ರೂಪ್ ನಲ್ಲಿ ಇರುವವರಿಗೆ ನನ್ನ ಬಗ್ಗೆ ತಿಳಿದಿದೆ ಮತ್ತು ಅಭಿರುಚಿಗಳು ಒಂದೇ ರೀತಿ ಇವೆ. ಯಾರು ಎಷ್ಟು ಕೊಟ್ಟರೂ ಹಣ ತೆಗೆದುಕೊಂಡು, ಪೇಪರ್ ವರ್ಕ್ ಮಾಡಿಕೊಂಡು ನಿರ್ಮಿಸಿದ ಸಿನಿಮಾ ಇದಲ್ಲ. ವಾರವಾರವೂ ಒನ್ ಟು ಒನ್ ಚರ್ಚೆಗಳು ನಡೆಯುತ್ತಿದ್ದವು. ಶೂಟಿಂಗ್ ನಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವುದು ಇವೆಲ್ಲ ಇದ್ದವು. ವಾಲಂಟರಿ ವರ್ಕ್ ಮಾಡಿಕೊಂಡು ಹೋಗಿದ್ದೀವಿ.

ಕನ್ನಡದಲ್ಲಿ ಒಂದು ಸಿನ್ಮಾ ಮಾಡಲು ಎಷ್ಟು ಖರ್ಚಾಗುತ್ತೆ? ಪಿನ್ ಟು ಪಿನ್ ಲೆಕ್ಕಾಚಾರಕನ್ನಡದಲ್ಲಿ ಒಂದು ಸಿನ್ಮಾ ಮಾಡಲು ಎಷ್ಟು ಖರ್ಚಾಗುತ್ತೆ? ಪಿನ್ ಟು ಪಿನ್ ಲೆಕ್ಕಾಚಾರ

 ಸಿನಿಮಾ ನಿರ್ಮಾಣದ ಬಗ್ಗೆ ಗೊತ್ತಿರಬೇಕು

ಸಿನಿಮಾ ನಿರ್ಮಾಣದ ಬಗ್ಗೆ ಗೊತ್ತಿರಬೇಕು

ಈ ಸಿನಿಮಾಗೆ ಸರ್ಕಾರದ ಎಲ್ಲ ನಿಯಮಗಳನ್ನು ಅನುಸರಿಸಿದ್ದೇವೆ. ಹಣಕಾಸು ವ್ಯವಹಾರ ಪ್ರತಿಯೊಂದನ್ನೂ ಚೆಕ್ ಮೂಲಕವೇ ಮಾಡಲಾಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಯಮಗಳು, ಆಯಾ ದೇಶಗಳ ಹಣಕಾಸು ನಿಯಮ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಗಳು ಎಲ್ಲವನ್ನೂ ಪಾಲಿಸಲಾಗಿದೆ. ಪಾರದರ್ಶಕವಾಗಿ ವ್ಯವಹಾರ ಮಾಡಿದ್ದೇವೆ. ಹೊಸದಾಗಿ ಸಿನಿಮಾ ನಿರ್ಮಾಣ ಮಾಡಬೇಕು ಅಂತ ಇರುವವರು ಈಗಿನ ರೀತಿ ಗ್ರೂಪ್ ಫಂಡಿಂಗ್ ಮೂಲಕ ಸಿನಿಮಾ ಮಾಡಬಹುದು. ಒಂದೊಳ್ಳೆ ಸಿನಿಮಾ ನಿರ್ಮಾಣಕ್ಕೆ ಸಮಾನ ಆಸಕ್ತರು ಒಗ್ಗೂಡಬಹುದು. ಆದರೆ ಆ ಗುಂಪಿಗೆ ಸಿನಿಮಾ ನಿರ್ಮಾಣದ ಬಗ್ಗೆ ಗೊತ್ತಿರಬೇಕು.

 ಎಲ್ಲರಿಗೂ ಲೆಕ್ಕಪತ್ರಗಳ ಮಾಹಿತಿ ನೀಡಲಾಗುತ್ತದೆ

ಎಲ್ಲರಿಗೂ ಲೆಕ್ಕಪತ್ರಗಳ ಮಾಹಿತಿ ನೀಡಲಾಗುತ್ತದೆ

ನಮಗೆ ಸಿಗುವ ಗುಂಪು ಭಾವನಾತ್ಮಕವಾಗಿಯೂ ಸರಿ ಇರಬೇಕು ಹಾಗೂ ಆರ್ಥಿಕವಾಗಿಯೂ ಸರಿ ಇರಬೇಕು. ನನಗೆ ಸಿನಿಮಾವನ್ನು ಕೇವಲ ವ್ಯವಹಾರವಾಗಿ ನೋಡಲು ಸಾಧ್ಯವಿಲ್ಲ. ಅದರ ಆಚೆಗೆ ಗ್ರೌಂಡ್ ವರ್ಕ್, ಡಿಸ್ಕಷನ್ಸ್, ಕಾನ್ಫರೆನ್ಸ್ ಕಾಲ್, ಅಭಿಪ್ರಾಯ ಸಂಗ್ರಹ ಮಾಡುವುದು ಇದೆಲ್ಲ ಆಗಬೇಕು. ನನ್ನ ಸ್ನೇಹಿತರು ಮುಖತಃ ಭೇಟಿ ಆಗಿರಲ್ಲ. ಆದರೂ ಹಣ ಕಳುಹಿಸಿ, ಆ ಮೇಲೆ ನನ್ನ ಫ್ಯಾಮಿಲಿ ಫಂಡಿಂಗ್ ಗೆ ಸೇರ್ಪಡೆ ಆಗಬೇಕು ಅಂದವರಿದ್ದಾರೆ. ಇಂಥದೊಂದು ಬಂಧ ಬೆಸೆಯಬೇಕು. ಎಲ್ಲರಿಗೂ ಲೆಕ್ಕಪತ್ರಗಳ ಮಾಹಿತಿಯನ್ನು ನೀಡಲಾಗುತ್ತದೆ. ಆ ನಂತರ ಹಂತಹಂತವಾಗಿ ಹಣ ಬಿಡುಗಡೆಗೆ ಕೇಳಿಕೊಳ್ತೀನಿ. ಯಾರು, ಎಷ್ಟು ಹಣ ಬಿಡುಗಡೆ ಮಾಡೋದು ಅನ್ನೋದು ನಿರ್ಧಾರ ಆಗುತ್ತದೆ.

ಕನ್ನಡ ಸೀ-ರಿಯಲ್ ಜಗತ್ತಿನ ಎಕನಾಮಿಕ್ಸ್; ಆದಾಯ- ಖರ್ಚು ಹೇಗೆ?ಕನ್ನಡ ಸೀ-ರಿಯಲ್ ಜಗತ್ತಿನ ಎಕನಾಮಿಕ್ಸ್; ಆದಾಯ- ಖರ್ಚು ಹೇಗೆ?

English summary

What Is Group Funding In Film Production: Kannada Explainer

India Versus England Kannada movie director Nagathihalli Chandrashekhar explains group funding. Here is the complete details.
Story first published: Saturday, January 25, 2020, 20:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X