For Quick Alerts
ALLOW NOTIFICATIONS  
For Daily Alerts

NPCI: ಎನ್‌ಪಿಸಿಐ ಎಂದರೇನು, ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಎನ್‌ಪಿಸಿಐ ಅನ್ನು ಆರಂಭ ಮಾಡಿದೆ. ಡಿಸೆಂಬರ್ 2008 ರಲ್ಲಿ ಭಾರತದ ಹಣಕಾಸು ಸೇವಾ ನಿಗಮವಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಆರಂಭ ಮಾಡಿದೆ.

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ ಪಿಸಿಐ) ಭಾರತದಲ್ಲಿ ಚಿಲ್ಲರೆ ಪಾವತಿ ಮತ್ತು ವಸಾಹತು ವ್ಯವಸ್ಥೆಗಳನ್ನು ನಿರ್ವಹಿಸಲು ಒಂದು ಸಂಸ್ಥೆಯಾಗಿದೆ. ಇದು ಲಾಭರಹಿತ ಸಂಸ್ಥೆಯಾಗಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಐಬಿಎ ಸ್ಥಾಪಿಸಿದ ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 8ರ ಅಡಿಯಲ್ಲಿ ನೋಂದಾಯಿಸಲಾಗಿದೆ.

ತಪ್ಪಾಗಿ ಬೇರೆ ಯುಪಿಐ ಅಡ್ರೆಸ್‌ಗೆ ಹಣ ಕಳಿಸಿದ್ರೆ, ವಾಪಸ್ ಪಡೆಯೋದು ಹೇಗೆ?ತಪ್ಪಾಗಿ ಬೇರೆ ಯುಪಿಐ ಅಡ್ರೆಸ್‌ಗೆ ಹಣ ಕಳಿಸಿದ್ರೆ, ವಾಪಸ್ ಪಡೆಯೋದು ಹೇಗೆ?

ಇದು ಪ್ರಮುಖ ಬ್ಯಾಂಕ್‌ಗಳ ಒಕ್ಕೂಟದ ಒಡೆತನದಲ್ಲಿ ಇದೆ. ಇದಕ್ಕೆ ದೇಶದ ಕೇಂದ್ರ ಬ್ಯಾಂಕ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಉತ್ತೇಜನ ನೀಡಿದೆ. ಇದರ ಮುಖ್ಯ ಕಾರ್ಯಾಲಯ ಮಹಾರಾಷ್ಟ್ರದ ಮುಂಬೈನಲ್ಲಿದೆ. ಆದರೆ ಹಲವಾರು ಮಂದಿಗೆ ಇದು ಯಾವ ರೀತಿ ಕಾರ್ಯ ನಿರ್ವಹಣೆ ಮಾಡುತ್ತದೆ ಎಂಬುವುದು ತಿಳಿದಿಲ್ಲ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಎನ್‌ಪಿಸಿಐನ ಜವಾಬ್ದಾರಿ ಏನು?

ಎನ್‌ಪಿಸಿಐನ ಜವಾಬ್ದಾರಿ ಏನು?

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ ಪಿಸಿಐ) ಲಾಭರಹಿತ ಸಂಸ್ಥೆಯಾಗಿದೆ. ಇದು ಮುಖ್ಯವಾಗಿ ದೇಶದಲ್ಲಿ ಆನ್‌ಲೈನ್ ಪಾವತಿ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಿದೆ. ಇದು ಭಾರತದ ಹಲವಾರು ಬ್ಯಾಂಕ್‌ಗಳ ಒಡೆತನದಲ್ಲಿದೆ. ಭಾರತದ ದೇಶೀಯ ಕಾರ್ಡ್ ನೆಟ್‌ವರ್ಕ್ ಆಗಿರುವ ರುಪೇ ಮತ್ತು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಅನ್ನು ಇದು ನಿರ್ವಹಣೆ ಮಾಡುತ್ತದೆ. ಭಾಗಿದಾರರಿಗೆ ಎನ್‌ಪಿಸಿಐ ನಿಯಮ, ಮಾರ್ಗಸೂಚಿ, ಕರ್ತವ್ಯ, ಜವಾಬ್ದಾರಿ ಮೊದಲಾದವುಗಳನ್ನು ನಿರ್ಧಾರ ಮಾಡುತ್ತದೆ. ಯುಪಿಐ ಸಂಬಂಧಿತ ಕಾರ್ಯವನ್ನು ನಿರ್ವಹಣೆ ಮಾಡುತ್ತದೆ. ಯುಪಿಐನಲ್ಲಿ ಭಾಗವಹಿಸುವ ಬ್ಯಾಂಕ್‌ಗಳು, ಪಿಎಸ್‌ಪಿ ಬ್ಯಾಂಕ್‌ಗಳು, ಥರ್ಡ್ ಪಾರ್ಟಿ ಅಪ್ಲಿಕೇಷನ್ ಪ್ರೊವೈಡರ್‌ಗಳು (ಟಿಪಿಎಪಿ), ಮತ್ತು ಪ್ರಿಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ ವಿತರಕರು (ಪಿಪಿಐಗಳು) ಭಾಗಿಗೆ ಅನುಮೋದನೆಯನ್ನು ಎನ್‌ಪಿಸಿಐ ನೀಡುತ್ತದೆ. ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಸುರಕ್ಷಿತ ಯುಪಿಐ ವ್ಯವಸ್ಥೆ ಮತ್ತು ನೆಟ್‌ವರ್ಕ್ ಅನ್ನು ಎನ್‌ಪಿಸಿಐ ಒದಗಿಸಿದೆ. ಎನ್‌ಪಿಸಿಐ ಆಡಿಟ್ ನಡೆಸಬಹುದು ಮತ್ತು ಯುಪಿಐ ಬಳಕೆ ಮಾಡುವವರಿಂದ ನೇರವಾಗಿ ಅಥವಾ ಮೂರನೇ ವ್ಯಕ್ತಿಯ ಮೂಲಕ ಡೇಟಾ ಮತ್ತು ದಾಖಲೆಗಳನ್ನು ಪಡೆಯಬಹುದು.

 ಎನ್‌ಪಿಸಿಐನ ಪ್ರೋಮೋಟರ್‌ ಬ್ಯಾಂಕುಗಳು

ಎನ್‌ಪಿಸಿಐನ ಪ್ರೋಮೋಟರ್‌ ಬ್ಯಾಂಕುಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)
ಪಂಬಾಜ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)
ಕೆನರಾ ಬ್ಯಾಂಕ್
ಬ್ಯಾಂಕ್ ಆಫ್ ಬರೋಡಾ (ಬಿಒಬಿ)
ಬ್ಯಾಂಕ್ ಆಫ್ ಇಂಡಿಯಾ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಐಸಿಐಸಿಐ ಬ್ಯಾಂಕ್
ಎಚ್‌ಡಿಎಫ್‌ಸಿ ಬ್ಯಾಂಕ್
ಸಿಟಿ ಬ್ಯಾಂಕ್
ಎಚ್‌ಎಸ್‌ಬಿಸಿ

 ಎನ್‌ಪಿಸಿಐ ಸೇವೆಗಳು ಯಾವುದೆಲ್ಲ ಇದೆ?
 

ಎನ್‌ಪಿಸಿಐ ಸೇವೆಗಳು ಯಾವುದೆಲ್ಲ ಇದೆ?

ಯುಪಿಐ: ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಪ್ರಸ್ತುತ ದೇಶದಾದ್ಯಂತ ಹೆಚ್ಚಾಗಿ ಬಳಕೆ ಮಾಡಲಾಗುವ ವ್ಯವಸ್ಥೆಯಾಗಿದೆ. ಜನರು ಯುಪಿಐ ಮೂಲಕವೇ ಹಣಕಾಸು ವಹಿವಾಟು ನಡೆಸುತ್ತಾರೆ. ಸರಳ ಹಾಗೂ ಸುಲಭವಾಗಿ ಹಣಕಾಸು ವಹಿವಾಟು ನಡೆಸಲು ಯುಪಿಐ ಸಹಕಾರಿಯಾದ ಕಾರಣದಿಂದಾಗಿ ಹೆಚ್ಚಾಗಿ ಖ್ಯಾತಿಯನ್ನು ಗಳಿಸಿದೆ.

ಭಾರತ್ ಇಂಟರ್‌ಫೇಸ್ ಫಾರ್ ಮನಿ (ಭೀಮ್/ಬಿಎಚ್‌ಐಎಂ): ಭೀಮ್ ಎಂಬುವುದು ಒಂದು ಆಪ್ ಆಗಿದ್ದು ಇದು ಯುಪಿಐ ಅನ್ನು ಬಳಕೆ ಮಾಡುತ್ತದೆ.
ರುಪೇ: ಎನ್‌ಪಿಸಿಐನ ದೊಡ್ಡ ಯೋಜನೆಯಾದ ಜನಧನ ಯೋಜನೆಯ ಭಾಗವಾಗಿ ರುಪೇಯನ್ನು ಆರಂಭ ಮಾಡಲಾಗಿದೆ. ಇದು ಅಂತರರಾಷ್ಟ್ರೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಆಗಿದ್ದು, ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಪ್ರಿಪೇಯ್ಡ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಇದನ್ನು ಎನ್‌ಪಿಸಿಐ ನಿರ್ವಹಣೆ ಮಾಡುತ್ತದೆ.

ಐಎಂಪಿಎಸ್: ತಕ್ಷಣದ ಪಾವತಿ ಸೇವೆ ಐಎಂಪಿಎಸ್ ತ್ವರಿತವಾಗಿ ಹಣವನ್ನು ವರ್ಗಾಯಿಸುವ ಸೌಲಭ್ಯವನ್ನು ನೀಡುತ್ತದೆ. ಐಎಂಪಿಎಸ್ ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುವುದಿಲ್ಲ. ಮೊಬೈಲ್ ಫೋನ್ ಮೂಲಕ ಇದು ಸಾಧ್ಯ.

 

English summary

What is NPCI and How Does it Work, Explained in Kannada

The Reserve Bank of India (RBI) and the Indian Banks' Association (IBA) launched the National Payments Corporation of India (NPCI). What is NPCI and How Does it Work, Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X