For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ವಯ ವಂದನ ಯೋಜನೆ(PMVVY) ಎಂದರೇನು? ಏನು ಪ್ರಯೋಜನ?

|

ಹಿರಿಯ ವಯಸ್ಕರಿಗಾಗಿಯೇ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಯೇ ಪ್ರಧಾನ ಮಂತ್ರಿ ವಯ ವಂದನ ಯೋಜನೆಯಾಗಿದೆ. 2017ರಲ್ಲಿ ಕಾರ್ಯಗತಗೊಳಿಸಿದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಹಿರಿಯ ನಾಗರೀಕರ ಅನುಕೂಲಕ್ಕಾಗಿ ಅನುಷ್ಠಾನಗೊಳಿಸಿತು.

 

ಪ್ರಧಾನ ಮಂತ್ರಿ ವಯ ವಂದನ ಯೋಜನೆಯ ಬಳಕೆ ಹೇಗೆ? ಯೋಜನೆಯ ಮೇಲಿನ ಹೂಡಿಕೆಗೆ ವಯಸ್ಸಿನ ಮಿತಿ ಎಷ್ಟು? ಬಡ್ಡಿ ದರ ಎಷ್ಟು ನೀಡಲಾಗುತ್ತದೆ ಎಂದು ತಿಳಿದುಕೊಳ್ಳಲು ಈ ಕೆಳಗಿನ ವಿವರಣೆ ಓದಿ.

ಯೋಜನೆಗೆ ವಯಸ್ಸಿನ ಮಿತಿ ಎಷ್ಟು?

ಯೋಜನೆಗೆ ವಯಸ್ಸಿನ ಮಿತಿ ಎಷ್ಟು?

ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ) ಹಿರಿಯ ನಾಗರಿಕರು 60 ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಪಿಂಚಣಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. 31 ಮಾರ್ಚ್‌ 2020ರವರೆಗೆ ಈ ಯೋಜನೆಯು ಚಾಲ್ತಿಯಲ್ಲಿದ್ದು ಹಿರಿಯ ವಯಸ್ಕರು ಯಾರು ಬೇಕಾದರೂ ಮಾಡಿಸಬಹುದು.

ಬಡ್ಡಿ ದರ ಎಷ್ಟು?

ಬಡ್ಡಿ ದರ ಎಷ್ಟು?

ಪಿಎಂವಿವಿವೈ ಯೋಜನೆಯ ಬಡ್ಡಿ ದರವು ಎಷ್ಟು ಯಾವ ಅವಧಿಗೆ ನೀವು ಹಣ ಡೆಪಾಸಿಟ್ ಮಾಡುತ್ತೀರಾ ಎಂಬುದರ ಮೇಲೆ 8 ರಿಂದ 8.5 ಪರ್ಸೆಂಟ್ ಬಡ್ಡಿ ದರವನ್ನು ನೀಡಲಾಗುತ್ತದೆ. 10 ವರ್ಷಗಳ ಪಿಂಚಣಿ ಅವಧಿ/ಪಾಲಿಸಿ ಅವಧಿ ಇರುತ್ತದೆ. ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಹೀಗೆ ನೀವು ಆಯ್ಕೆ ಮಾಡಿದ ಅವಧಿಯ ಕೊನೆಯಲ್ಲಿ ಪಿಂಚಣಿ ಪಡೆಯಬಹುದು. ಇದರ ಮೇಲೆ ಬಡ್ಡಿ ದರ ಅನ್ವಯವಾಗುತ್ತದೆ.

ಹೂಡಿಕೆ ಮಿತಿ ಹಾಗೂ ಸಿಗುವ ಪಿಂಚಣಿ ಎಷ್ಟು?
 

ಹೂಡಿಕೆ ಮಿತಿ ಹಾಗೂ ಸಿಗುವ ಪಿಂಚಣಿ ಎಷ್ಟು?

ಮಾಸಿಕ ಅವಧಿ
ಕನಿಷ್ಠ ಹೂಡಿಕೆ ಮೊತ್ತ : 1.5 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 1,000 ರುಪಾಯಿ

ಗರಿಷ್ಠ ಹೂಡಿಕೆ ಮೊತ್ತ : 7.50 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 5,000 ರುಪಾಯಿ

ತ್ರೈಮಾಸಿಕ ಅವಧಿ
ಕನಿಷ್ಠ ಹೂಡಿಕೆ ಮೊತ್ತ : 1. 49 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 3,000 ರುಪಾಯಿ

ಗರಿಷ್ಠ ಹೂಡಿಕೆ ಮೊತ್ತ : 7.45 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 15,000 ರುಪಾಯಿ

ಅರ್ಧ-ವಾರ್ಷಿಕ ಅವಧಿ
ಕನಿಷ್ಠ ಹೂಡಿಕೆ ಮೊತ್ತ : 1. 47 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 6,000 ರುಪಾಯಿ

ಗರಿಷ್ಠ ಹೂಡಿಕೆ ಮೊತ್ತ : 7.38 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 30,000 ರುಪಾಯಿ

ವಾರ್ಷಿಕ ಅವಧಿ
ಕನಿಷ್ಠ ಹೂಡಿಕೆ ಮೊತ್ತ : 1.44 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 12,000 ರುಪಾಯಿ

ಗರಿಷ್ಠ ಹೂಡಿಕೆ ಮೊತ್ತ : 7.22 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 60,000 ರುಪಾಯಿ

 

ಮರಣ ಹೊಂದಿದರೆ ಹಣ ಯಾರಿಗೆ ಸಿಗುತ್ತದೆ?

ಮರಣ ಹೊಂದಿದರೆ ಹಣ ಯಾರಿಗೆ ಸಿಗುತ್ತದೆ?

ಪಿಎಂವಿವಿವೈ ಪಾಲಿಸಿ ಅವಧಿಯಲ್ಲಿ ಪಿಂಚಣಿದಾರರು ಮರಣ ಹೊಂದಿದಲ್ಲಿ, ಖರೀದಿ ಮೊತ್ತವನ್ನು ನಾಮಿನಿಗೆ/ಫಲಾನುಭವಿಗೆ ಹಿಂದಿರುಗಿಸಲಾಗುತ್ತದೆ. (ನಾಮಿನಿ ಇಲ್ಲದಿದ್ದರೆ ಕಾನೂನುಬದ್ದ ಉತ್ತರಾಧಿಕಾರಿ)

ಅಕಾಲಿಕ ನಿರ್ಗಮನದ ಅವಕಾಶ

ಅಕಾಲಿಕ ನಿರ್ಗಮನದ ಅವಕಾಶ

ಪಾಲಿಸಿ ಅವಧಿಯ ಸಂದರ್ಭದಲ್ಲಿ ಸ್ವಯಂ ಅಥವಾ ಹೆಂಡತಿಯ ಅನಾರೋಗ್ಯದ ಚಿಕಿತ್ಸೆ ಸಂದರ್ಭದಲ್ಲಿ ಈ ಯೋಜನೆ ಅಕಾಲಿಕ ನಿರ್ಗಮನಕ್ಕೆ ಅವಕಾಶ ಕಲ್ಪಿಸುತ್ತದೆ.

English summary

What Is PMVVY? What Are The Benefits Of This Scheme?

The PMVVY Yojana is a pension scheme for those aged 60 years or more
Story first published: Wednesday, January 8, 2020, 16:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X