For Quick Alerts
ALLOW NOTIFICATIONS  
For Daily Alerts

ಏನಿದು ಆರ್‌ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್?, ಇಲ್ಲಿದೆ ಪ್ರಮುಖ ಮಾಹಿತಿ

|

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಎರಡು ನವೀನ ಗ್ರಾಹಕ-ಸ್ನೇಹಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಚಿಲ್ಲರೆ ನೇರ ಯೋಜನೆ ಮತ್ತು ಸಮಗ್ರ ಒಂಬುಡ್ಸ್ ಮನ್ ಯೋಜನೆಗಳ ಮಹತ್ವವನ್ನು ಪ್ರಧಾನಿ ಮೋದಿ ವಿವರಿಸಿದ್ದಾರೆ.

ಈ ಪೈಕಿ ಚಿಲ್ಲರೆ ನೇರ ಯೋಜನೆ ಬಗ್ಗೆ ವಿವರಣೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಈ ಯೋಜನೆಯು ಆತ್ಮ ನಿರ್ಭರ ಭಾರತಕ್ಕೆ ಸಹಕಾರಿ. ಹೂಡಿಕೆದಾರರಿಗೆ ಸಹಾಯ ಮಾಡಲಿದೆ. ನೀವು ಆನ್‌ಲೈನ್ ಮೂಲಕವೇ ಉಚಿತ ಸರ್ಕಾರಿ ಷೇರು ಖಾತೆಗಳನ್ನು ತೆರೆಯಬಹುದು. ನೀವು ಎಲ್ಲಿಗೂ ಹೋಗಬೇಕಾಗಿಲ್ಲ. ಮೊಬೈಲ್‌ ಫೋನ್‌, ಇಂಟರ್‌ನೆಟ್‌ ಮೂಲಕವೇ ಎಲ್ಲಾ ಕಾರ್ಯವನ್ನು ಮಾಡಬಹುದು," ಎಂದು ವಿವರಿಸಿದ್ದಾರೆ.

ಹಾಗಾದರೆ ಈ ಚಿಲ್ಲರೆ ನೇರ ಯೋಜನೆ ಎಂದರೆ ಏನು, ಆರ್‌ಬಿಐ ಯಾಕಾಗಿ ಈ ಯೋಜನೆಯನ್ನು ಆರಂಭ ಮಾಡಿದೆ, ಈ ಯೋಜನೆಯ ಮುಖ್ಯ ಅಂಶಗಳು ಯಾವುದು, ನೀವು ಹೇಗೆ ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.

ಏನಿದು ಆರ್‌ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್?, ಇಲ್ಲಿದೆ ಮಾಹಿತಿ

 ಏನಿದು ಆರ್‌ಬಿಐನ ಚಿಲ್ಲರೆ ನೇರ ಯೋಜನೆ?

ಏನಿದು ಆರ್‌ಬಿಐನ ಚಿಲ್ಲರೆ ನೇರ ಯೋಜನೆ?

ಚಿಲ್ಲರೆ ಹೂಡಿಕೆದಾರರು ಸರ್ಕಾರಿ ಷೇರುಗಳಲ್ಲಿ ಅಧಿಕ ಹೂಡಿಕೆ ಮಾಡುವುದು ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್‌ಬಿಐ ಈ ಚಿಲ್ಲರೆ ನೇರ ಯೋಜನೆ ಅಥವಾ ಆರಂಭ ಮಾಡಿದೆ. ಈ ಯೋಜನೆಯು ಚಿಲ್ಲರೆ ಹೂಡಿಕೆದಾರರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತದೆ. ಇನ್ನು ಈ ಆರ್‌ಬಿಐನ ಚಿಲ್ಲರೆ ನೇರ ಯೋಜನೆ ಮೂಲಕ ಹೂಡಿಕೆದಾರರು ಉಚಿತವಾಗಿ, ಯಾವುದೇ ವೆಚ್ಚವನ್ನು ಭರಿಸದೆಯೇ ತಮ್ಮ ಸರ್ಕಾರಿ ಷೇರು ಖಾತೆಗಳನ್ನು ತೆರೆಯಬಹುದಾಗಿದೆ. ಹೂಡಿಕೆದಾರರು ಆನ್‌ಲೈನ್‌ ಮೂಲಕ ಉಚಿತ ಸರ್ಕಾರಿ ಷೇರು ಖಾತೆಗಳನ್ನು ತೆರೆಯಲು ಈ ಯೋಜನೆ ಅವಕಾಶ ಕಲ್ಪಿಸುತ್ತದೆ. ಹಾಗೆಯೇ ಆನ್‌ಲೈನ್‌ ಮೂಲಕವೇ ಹೂಡಿಕೆದಾರರು ತಮ್ಮ ಉಚಿತ ಸರ್ಕಾರಿ ಷೇರು ಖಾತೆಗಳನ್ನು ನಿರ್ವಹಣೆ ಮಾಡಬಹುದಾಗಿದೆ.

 ಆರ್‌ಬಿಐನ ಚಿಲ್ಲರೆ ನೇರ ಯೋಜನೆಯ ಮಹತ್ವ

ಆರ್‌ಬಿಐನ ಚಿಲ್ಲರೆ ನೇರ ಯೋಜನೆಯ ಮಹತ್ವ

* ಚಿಲ್ಲರೆ ಹೂಡಿಕೆದಾರರು ಆರ್‌ಬಿಐನ ರಿಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್‌ (ಆರ್‌ಡಿಜಿ ಖಾತೆ) ತೆರೆಯಬಹುದು ಹಾಗೂ ನಿರ್ವಹಣೆ ಮಾಡಬಹುದು.
* ಈ ಯೋಜನೆಗಾಗಿಯೇ ಆರ್‌ಬಿಐ ಆನ್‌ಲೈನ್‌ ಪೋರ್ಟಲ್‌ ಅನ್ನು ತೆರೆದಿದ್ದು, ಅದರ ಮೂಲಕ ಚಿಲ್ಲರೆ ಹೂಡಿಕೆದಾರರು ಹೂಡಿಕೆಯನ್ನು ಮಾಡಬಹುದು.
* ಈ ಆನ್‌ಲೈನ್ ಪೋರ್ಟಲ್‌ ನೋಂದಾಯಿತ ಹೂಡಿಕೆದಾರರಿಗೆ ಇತರೆ ಸೌಲಭ್ಯಗಳನ್ನು ನೀಡುತ್ತದೆ. ಸರ್ಕಾರಿ ಭದ್ರತೆಗಳ ಪ್ರಾಥಮಿಕ ವಿತರಣೆಗೆ ಪ್ರವೇಶ ಮತ್ತು ಎನ್‌ಡಿಎಸ್‌-ಒಎಂಗೆ ಪ್ರವೇಶವನ್ನು ಈ ಯೋಜನೆಯ ಮೂಲಕ ಪಡೆಯಬಹುದು.

 ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?
 

ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?

* ಈ ಯೋಜನೆಯಲ್ಲಿ ವಿವರಿಸಿದಂತೆ ಚಿಲ್ಲರೆ ವ್ಯಾಪಾರಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ತಮ್ಮಲ್ಲಿ ಆರ್‌ಜೆಡಿ ಖಾತೆ ಇದ್ದರೆ ಆ ಖಾತೆಯ ನಿರ್ವಹಣೆ ಮಾಡಬಹುದು.
* ಇದಕ್ಕಾಗಿ ವ್ಯಕ್ತಿಯ ಬಳಿ ಭಾರತದ ಉಳಿತಾಯ ಬ್ಯಾಂಕ್‌ ಖಾತೆ, ಪ್ಯಾನ್‌ ಸಂಖ್ಯೆ, ಮಾನ್ಯವಾದ ಇಮೇಲ್‌ ಐಡಿ ಹಾಗೂ ನೋಂದಾಯಿತ ಮೊಬೈಲ್‌ ಸಂಖ್ಯೆ ಇರಬೇಕು.
* ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ, 1999 ರ ಅಡಿಯಲ್ಲಿ ಈ ಸರ್ಕಾರಿ ಷೇರುಗಳಲ್ಲಿ ಅನಿವಾಸಿ ಚಿಲ್ಲರೆ ಹೂಡಿಕೆದಾರರು ಕೂಡಾ ಅರ್ಹರು
* ಆರ್‌ಜೆಡಿ ಖಾತೆಯನ್ನು ಓರ್ವ ವ್ಯಕ್ತಿ ಅಥವಾ ಜಂಟಿಯಾಗಿ ತೆರೆಯಬಹುದು

 ನೀವು ಹೂಡಿಕೆ ಮಾಡಬಹುದೇ, ಸುರಕ್ಷಿತವೇ?

ನೀವು ಹೂಡಿಕೆ ಮಾಡಬಹುದೇ, ಸುರಕ್ಷಿತವೇ?

ಇನ್ನು ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಜನರಲ್ಲಿ ಬರುವ ಪ್ರಶ್ನೆ ನಾವು ಹೂಡಿಕೆ ಮಾಡಬಹುದೇ ಎಂಬುವುದು. ನಾವು ಯಾವುದೇ ಹೂಡಿಕೆಯನ್ನು ಅಪಾಯಕಾರಿ ಎಂದು ಪರಿಗಣಿಸುತ್ತೇವೆ. ಆದರೆ ಇದು ಸರ್ಕಾರಿ ಹೂಡಿಕೆ ಆದ ಕಾರಣದಿಂದಾಗಿ ಸುರಕ್ಷಿತವಾಗಿದೆ. ಈ ಹೂಡಿಕೆಯು ಬೇರೆ ಷೇರಿನಂತೆ ಅಲ್ಲ, ಇದರಲ್ಲಿ ಕಡಿಮೆ ರಿಟರ್ನ್ ಬರುತ್ತದೆ. ಆದರೆ ಬೇರೆ ಷೇರಿಗಿಂತ ಅಧಿಕ ಸುರಕ್ಷಿತವಾಗಿದೆ. ಕೆಲವೊಮ್ಮೆ ಹೆಚ್ಚಿನ ಟರ್ಮ್ ಇರುವ ಕಾರಣದಿಂದಾಗಿ ಅಪಾಯ ಇರಬಹುದು. ಆದ್ದರಿಂದ ಹೂಡಿಕೆ ಮಾಡುವ ಮೊದಲು ಯಾವಾಗಲೂ ನೀವು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ. ನೀವು ಮೆಚ್ಯೂರಿಟಿ ಹೊಂದುವವರೆಗೂ ಹೂಡಿಕೆಯನ್ನು ಹಿಂದಕ್ಕೆ ತೆರೆಯುವುದಿಲ್ಲ ಎಂದು ಆದರೆ ಮಾತ್ರ ಹೂಡಿಕೆಯನ್ನು ಮಾಡಿ.

English summary

What is RBI Retail Direct Scheme? All You Need To Know in Kannada

What is RBI Retail Direct Scheme? Details You Need To Know.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X