For Quick Alerts
ALLOW NOTIFICATIONS  
For Daily Alerts

ಹಣದುಬ್ಬರ ಹೆಚ್ಚಿದರೆ ಚಿನ್ನದ ಬೆಲೆ ಯಾಕೆ ತಗ್ಗುತ್ತದೆ?

|

ಬೆಂಗಳೂರು, ಅ. 17: ಹಣದುಬ್ಬರ ಇತ್ಯಾದಿ ಪ್ರಕ್ಷುಬ್ದ ಆರ್ಥಿಕ ಪರಿಸ್ಥಿತಿಯ ಮಧ್ಯೆ ಚಿನ್ನದ ಬೆಲೆ ಹೊಯ್ದಾಟದಲ್ಲಿ ಸಾಗುತ್ತಿದೆ. ಇವತ್ತು 10 ಗ್ರಾಮ್ ಚಿನ್ನದ ಬೆಲೆ 156 ರೂ ಗಳಷ್ಟು ಏರಿಕೆಯಾಗಿ 50,416 ರೂ ಮುಟ್ಟಿದೆ. ಆದರೂ ಒಟ್ಟಾರೆಯಾಗಿ ಚಿನ್ನದ ಬೆಲೆ ತುಸು ಇಳಿಕೆಯ ಟ್ರೆಂಡಿಂಗ್‌ನಲ್ಲಿರುವುದು ಹೌದು.

 

ಇಂದಿನ ಚಿನಿವಾರಪೇಟೆಯ ವಹಿವಾಟಿನಲ್ಲಿ ಚಿನ್ನದ ಬೆಲೆ ಏರಲು ದೀಪಾವಳಿ ಹಬ್ಬದ ಸೀಸನ್ ಕಾರಣ ಇರಬಹುದು. ಆದರೂ ಸದ್ಯದ ಸಂದರ್ಭದಲ್ಲಿ ದೀಪಾವಳಿ ವೇಳೆ ತೀರಾ ಹೆಚ್ಚಿನ ಮಟ್ಟಕ್ಕೆ ಚಿನ್ನದ ಬೆಲೆ ಏರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತದೆ. ಈಗ ಚಿನ್ನದ ಬೆಲೆ ಏರಿಕೆಯಾದರೂ ಅದು ತಾತ್ಕಾಲಿಕ ಮಾತ್ರ. ಸದ್ಯದ ಮಟ್ಟಿಗೆ ಚಿನ್ನಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಷ್ಟೇನೂ ಬೇಡಿಕೆ ಇಲ್ಲ.

ಕುತೂಹಲವೆಂದರೆ, ಹಣದುಬ್ಬರ ಹೆಚ್ಚು ಇದ್ದಾಗ ಹಲವು ವಸ್ತುಗಳ ಬೆಲೆ ಹೆಚ್ಚೇ ಇರುತ್ತದೆ. ಈಗ ಹಣದುಬ್ಬರ ಹೆಚ್ಚಿದೆ, ಡಾಲರ್ ಹೆಚ್ಚಿದೆ, ಆದರೂ ಚಿನ್ನದ ಬೆಲೆ ಯಾಕೆ ಇಳಿಕೆಯಾಗುತ್ತಿದೆ ಎಂಬುದು ಪ್ರಶ್ನೆ.

ಚೈನ್ ಎಫೆಕ್ಟ್

ಚೈನ್ ಎಫೆಕ್ಟ್

ಆರ್ಥಿಕತೆಯ ಅನಿಶ್ಚಿತ ಸ್ಥಿತಿಯಲ್ಲಿ ಸಾಮಾನ್ಯವಾಗಿ ಜನರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಆದರೆ ಈಗ ಚಿನ್ನದ ಬೆಲೆ ಇಳಿಯುತ್ತಿರುವುದು ಮಾತ್ರ ಹಣದುಬ್ಬರ ಏರಿಕೆಯ ಚೈನ್ ಎಫೆಕ್ಟ್. ಅದರಲ್ಲೂ ಅಮೆರಿಕದ ಹಣದುಬ್ಬರದ ಪರಿಣಾಮ ಇದು. ಹಣದುಬ್ಬರ ನಿಯಂತ್ರಿಸಲು ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರಗಳನ್ನು ಹೆಚ್ಚಿಸಿದ ಫಲ ಇದು. ಫೆಡರಲ್ ಬ್ಯಾಂಕ್ ಬಡ್ಡಿ ಏರಿಕೆಯಾಗುತ್ತಿದ್ದಂತೆಯೇ ಭಾರತ ಸೇರಿ ಹಲವು ದೇಶಗಳಲ್ಲಿನ ಹೂಡಿಕೆದಾರರು ತಮ್ಮ ಹಣವನ್ನು ಅಮೆರಿಕಕ್ಕೆ ವಾಪಸ್ ವರ್ಗಾವಣೆ ಮಾಡತೊಡಗಿದರು. ಇದರ ಪರಿಣಾಮವಾಗಿ ಡಾಲರ್ ಮೌಲ್ಯ ಹೆಚ್ಚುತ್ತಾ ಹೋಯಿತು.

ಡಾಲರ್ ಈಗ ಹೂಡಿಕೆದಾರರಿಗೆ ಇನ್ನಷ್ಟು ಆಕರ್ಷಣೀಯ ಎನಿಸಿದೆ. ಬಡ್ಡಿ ದರ ಹೆಚ್ಚಳದಿಂದಾಗಿ ಅಮೆರಿಕದ ಟ್ರೆಷರಿ ಬಾಂಡ್‌ಗಳಿಂದ ಶೇ. 4ರಷ್ಟು ಬಡ್ಡಿ ಸಿಗುತ್ತಿದೆ. ಬಡ್ಡಿ ಸಿಗದ ಚಿನ್ನದ ಮೇಲೆ ಹಣ ವಿನಿಯೋಗಿಸುವುದಕ್ಕಿಂತ ಶೇ. 4ರ ಬಡ್ಡಿ ಕೊಡುವ ಟ್ರೆಷರಿ ಬಾಂಡ್‌ಗಳನ್ನು ಖರೀದಿಸುವುದು ಎಷ್ಟೋ ಮೇಲು ಎಂಬುದು ಹೂಡಿಕೆದಾರರ ಅನಿಸಿಕೆ.

 

ಏನಿದು ಟ್ರೆಷರಿ ಬಾಂಡ್?
 

ಏನಿದು ಟ್ರೆಷರಿ ಬಾಂಡ್?

ಸಾರ್ವಜನಿಕವಾಗಿ ಬಂಡವಾಳ ಶೇಖರಿಸಲು ಸರಕಾರ ಬಾಂಡ್‌ಗಳನ್ನು ವಿತರಿಸುತ್ತದೆ. ಒಂದು ಬಾಂಡ್‌ಗೆ ನಿರ್ದಿಷ್ಟ ಬೆಲೆ ನಿಗದಿ ಇದ್ದು, ನಿರ್ದಿಷ್ಟ ಅವಧಿಯ ನಂತರ ಇಂತಿಷ್ಟು ಬಡ್ಡಿ ಸಮೇತ ರಿಟರ್ನ್ ಸಿಗುತ್ತದೆ. ಭಾರತದಲ್ಲೂ ಗವರ್ನ್ಮೆಂಟ್ ಬಾಂಡ್‌ಗಳನ್ನು ವಿತರಿಸಲಾಗುತ್ತದೆ. ಅಂತೆಯೇ, ಅಮೆರಿಕದಲ್ಲೂ ಟ್ರೆಷರಿ ಬಾಂಡ್‌ಗಳನ್ನು ನೀಡಲಾಗುತ್ತಿದೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಮೆರಿಕಕ್ಕೆ ಈಗ ಬಂಡವಾಳದ ಅಗತ್ಯ ಇದೆ. ಹೀಗಾಗಿ, ಅಧಿಕ ಬಡ್ಡಿ ದರದೊಂದಿಗೆ ಟ್ರೆಷರಿ ಬಾಂಡ್‌ಗಳನ್ನು ಆಫರ್ ಮಾಡಿದೆ. ಈ ಬಾಂಡ್‌ಗಳ ಖರೀದಿಗೆ ಪೈಪೋಟಿ ಇದೆ. ಭಾರತದಲ್ಲಿ ಅನೇಕ ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು (ಎಫ್‌ಪಿಐ) ಇಲ್ಲಿನ ಮ್ಯೂಚುವಲ್ ಫಂಡ್ ಇತ್ಯಾದಿ ಮೇಲೆ ಹಾಕಿದ್ದ ಹೂಡಿಕೆಯನ್ನು ಹಿಂಪಡೆದು ಟ್ರೆಷರಿ ಬಾಂಡ್‌ಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಪರಿಣಾಮವಾಗಿ ಭಾರತದಲ್ಲಿ ಲಕ್ಷಾಂತರ ಕೋಟಿ ರೂ ಬಂಡವಾಳ ಅಮೆರಿಕಕ್ಕೆ ವರ್ಗಾವಣೆ ಆಗಿದೆ.

 

ಚಿನ್ನ ಕೊಳ್ಳಲು ಹಿಂದೇಟು

ಚಿನ್ನ ಕೊಳ್ಳಲು ಹಿಂದೇಟು

ಚಿನ್ನದಲ್ಲಿ ಹೂಡಿಕೆ ಮಾಡಿದರೆ ಸದ್ಯಕ್ಕೆ ಅದು ಬೆಳೆಯುವುದಿಲ್ಲ ಎನ್ನುವ ಭಾವನೆ ಬಂದಿದೆ. ಅಲ್ಲದೇ ಡಾಲರ್ ಪ್ರಬಲವಾಗಿರುವುದರಿಂದ ಚಿನ್ನ ದುಬಾರಿಯೂ ಆಗಿದೆ. ಹೀಗಾಗಿ, ಹೂಡಿಕೆದಾರರು ಚಿನ್ನದಿಂದ ಡಾಲರ್‌ ಇಂಡೆಕ್ಸ್‌ನತ್ತ ವಾಲುತ್ತಿದ್ದಾರೆ.

ಅಮೆರಿಕ ಮಾತ್ರವಲ್ಲ, ಭಾರತ ಹಾಗು ಇತರ ಬಹುತೇಕ ದೇಶಗಳ ಆರ್ಥಿಕತೆಯಲ್ಲಿ ಹಣದುಬ್ಬರ ಹೆಚ್ಚೇ ಇದೆ. ಅಮೆರಿಕದಲ್ಲಿ ಬಡ್ಡಿ ದರಗಳನ್ನು ಸದ್ಯಕ್ಕಂತೂ ಇಳಿಸುವ ಲಕ್ಷಣ ಕಾಣುತ್ತಿಲ್ಲ. ಇನ್ನೊಂದು ವರ್ಷವಾದರೂ ಬಡ್ಡಿ ದರ ಏರದಿದ್ದರೂ ಇಳಿಕೆಯ ಸಾಧ್ಯತೆಯಂತೂ ಇಲ್ಲ ಎನ್ನಲಾಗುತ್ತಿದೆ.

 

ಚಿನ್ನದ ಮೇಲೆ ಹೂಡಿಕೆಗೆ ಸಕಾಲ?

ಚಿನ್ನದ ಮೇಲೆ ಹೂಡಿಕೆಗೆ ಸಕಾಲ?

ಜಾಗತಿಕವಾಗಿ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗಿದೆ. ವರ್ಷಗಟ್ಟಲೆ ಸತತ ಏರಿಕೆ ಕಂಡು ಇತ್ತೀಚೆಗೆ ಕೆಲ ತಿಂಗಳಿಂದ ಚಿನ್ನದ ಬೆಲೆ ಇಳಿಕೆಯಾಗಿದೆ. ಆಗಲೇ ಹೇಳಿದಂತೆ ಚಿನ್ನದ ಬೆಲೆ ಸದ್ಯಕ್ಕಂತೂ ಇಳಿಯಬಹುದು ಎನ್ನುವಂಥ ಪರಿಸ್ಥಿತಿ ಇಲ್ಲ. ಆದರೆ, ಆರ್ಥಿಕ ಪರಿಸ್ಥಿತಿ ಬದಲಾದಂತೆ ಚಿನ್ನಕ್ಕೆ ಮತ್ತೆ ಬೇಡಿಕೆ ಬಂದರೂ ಬರಬಹುದು.

ಹೀಗಾಗಿ, ಚಿನ್ನದ ಬೆಲೆ ತಗ್ಗಿರುವಾಗಲೇ ಅದರ ಮೇಲೆ ಹೂಡಿಕೆ ಮಾಡಿಟ್ಟುಕೊಳ್ಳಬಹುದು ಎನ್ನುವ ಸಲಹೆ ತಜ್ಞರಿಂದ ವ್ಯಕ್ತವಾಗುತ್ತದೆ.

ಚಿನ್ನದ ಇಂದಿನ ದರ
ಅಮೆರಿಕದಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 1656 ಡಾಲರ್ ಇದೆ. 100 ಗ್ರಾಂಗೆ 3.5274 ಔನ್ಸ್ ಆಗುತ್ತದೆ.
ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 50,470 ರೂ ಇದೆ.

 

English summary

Why Gold Rates Decline Despite High Inflation and Dollar Strength

Gold rates in general are declining despite high inflation across the world and dollar is gaining strength. Here's explanation on how is this possible.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X