For Quick Alerts
ALLOW NOTIFICATIONS  
For Daily Alerts

Year Ender 2022: ಉದ್ಯಮ ಲೋಕದ ಮೇಲೆ ಪ್ರಭಾವ ಬೀರಿದ ಬಿಗ್ ನ್ಯೂಸ್‌ಗಳು

|

2022ರ ವರ್ಷ ಕೊನೆಯಾಗುತ್ತಿದ್ದು ಹೊಸ ವರ್ಷ 2023 ಆರಂಭವಾಗಲು ಇನ್ನು ಕೆಲವೇ ದಿನಗಳು ಇದೆ. ಈಗಾಗಲೇ ಹೊಸ ವರ್ಷವನ್ನು ಸ್ವಾಗತಿಸಲು ಹಲವಾರು ಮಂದಿ ಸಿದ್ಧರಾಗಿದ್ದಾರೆ. ಹೊಸ ವರ್ಷಕ್ಕಾಗಿ ಹೊಸ ಮಾಸಿಕ ಬಜೆಟ್ ಅನ್ನು ಕೂಡಾ ರಚನೆ ಮಾಡಿರುವವರು ಕೂಡಾ ಇದ್ದಾರೆ. ಆದರೆ 2022 ವರ್ಷ ಮಾತ್ರ ಹಣಕಾಸು, ವ್ಯಾಪಾರ ವಿಚಾರಕ್ಕೆ ಬಂದರೆ ಭಾರೀ ಸುದ್ದಿಯಾದ ವರ್ಷವಾಗಿದೆ.

2022ರಲ್ಲಿ ಹಲವಾರು ವ್ಯಾಪಾರ ಸಂಬಂಧಿತ ಪ್ರಮುಖ ಬೆಳವಣಿಗೆಗಳು ಆಗಿದ್ದು ಅದು ಭಾರೀ ದೊಡ್ಡ ಸುದ್ದಿಯಾಗಿದೆ. ಈ ಬೆಳವಣಿಗೆಯು ಮುಂದಿನ ವರ್ಷ ಅಂದರೆ 2023ರಲ್ಲಿಯೂ ಹಣಕಾಸಿನ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆಯಿದೆ.

Year Ender 2022: ಈ ವರ್ಷ ವಿವಾದಕ್ಕೆ ಒಳಗಾದ ಬಾಸ್‌ಗಳು ಇವರೇ ನೋಡಿ!Year Ender 2022: ಈ ವರ್ಷ ವಿವಾದಕ್ಕೆ ಒಳಗಾದ ಬಾಸ್‌ಗಳು ಇವರೇ ನೋಡಿ!

ಈ ವರ್ಷ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಜಾಗತಿಕವಾಗಿ ಕೇಂದ್ರಿಯ ಬ್ಯಾಂಕುಗಳು ಹಲವಾರು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣದುಬ್ಬರ ಹತೋಟಿಗೆ ತರುವ ನಿಟ್ಟಿನಲ್ಲಿ ರೆಪೋ ದರವನ್ನು ಒಟ್ಟು ಐದು ಬಾರಿ ಹೆಚ್ಚಳ ಮಾಡಿದೆ. ಇನ್ನು ಹಲವಾರು ವಿಚಾರಗಳು ವ್ಯಾಪಾರ ವಲಯದ ಮೇಲೆ ಪ್ರಭಾವ ಬೀರಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....

 ವರ್ಷದಲ್ಲಿ 5 ಬಾರಿ ರೆಪೋ ಏರಿಕೆ

ವರ್ಷದಲ್ಲಿ 5 ಬಾರಿ ರೆಪೋ ಏರಿಕೆ

ಈ ಮೇಲೆಯೇ ಹೇಳಿದಂತೆ ಈ ವರ್ಷದಲ್ಲಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಐದು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ. ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಆರ್‌ಬಿಐ ಮೇ ತಿಂಗಳಿನಲ್ಲಿ ರೆಪೋ ದರವನ್ನು 40 ಮೂಲಾಂಕ ಹೆಚ್ಚಿಸಿದೆ. ಅದಾದ ಬಳಿಕ ಆರ್‌ಬಿಐ ಜೂನ್‌ ತಿಂಗಳಿನಲ್ಲಿ 50 ಬಿಪಿಎಸ್, ಆಗಸ್ಟ್‌ನಲ್ಲಿ 50 ಬಿಪಿಎಸ್, ಸೆಪ್ಟೆಂಬರ್‌ನಲ್ಲಿ 50 ಬಿಪಿಎಸ್, ಡಿಸೆಂಬರ್‌ನಲ್ಲಿ 35 ಬಿಪಿಎಸ್ ದರ ಹೆಚ್ಚಳ ಮಾಡಿದೆ. ಪ್ರಸ್ತುತ ರೆಪೋ ದರ ಶೇಕಡ 6.25ಕ್ಕೆ ಏರಿಕೆಯಾಗಿದೆ.

 ಡಿಜಿಟಲ್ ಕರೆನ್ಸಿ ಜಾರಿ ಮಾಡಿದ ಸೆಂಟ್ರಲ್ ಬ್ಯಾಂಕ್

ಡಿಜಿಟಲ್ ಕರೆನ್ಸಿ ಜಾರಿ ಮಾಡಿದ ಸೆಂಟ್ರಲ್ ಬ್ಯಾಂಕ್

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ 1ರ ಗುರುವಾರದಂದು ರಿಟೇಲ್ ಡಿಜಿಟಲ್ ಕರೆನ್ಸಿಯನ್ನು (e₹-R) ಪ್ರಾಯೋಗಿಕವಾಗಿ ಆರಂಭ ಮಾಡಿದೆ. ಇದನ್ನು ಸಿಬಿಡಿಸಿ ಅಥವಾ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಎಂದು ಕೂಡಾ ಕರೆಯಲಾಗುತ್ತದೆ. ನಗದು ರಹಿತ ವಹಿವಾಟಿಗೆ ಅಧಿಕ ಪ್ರೇರಣೆ ನೀಡುವ ನಿಟ್ಟಿನಲ್ಲಿ ಆರ್‌ಬಿಐ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸಿದೆ. ಈ ಹೊಸ ಸಿಸ್ಟಮ್‌ನಲ್ಲಿ ಬೇರೆ ಬೇರೆ ಪೇಮೆಂಟ್ ವಿಧಾನವಿದೆ. ಜನರು ಬ್ಯಾಂಕ್‌ನಿಂದ ಮೊದಲು ಡಿಜಿಟಲ್ ಕರೆನ್ಸಿಯನ್ನು ಖರೀದಿ ಮಾಡಬಹುದು. ಬಳಿಕ ಇದು ವ್ಯಾಲೆಟ್ ರೂಪದಲ್ಲಿರುತ್ತದೆ. ನೀವು ಯಾವುದೇ ವಸ್ತುವನ್ನು ಖರೀದಿ ಮಾಡುವಾಗ ಡಿಜಿಟಲ್ ಕರೆನ್ಸಿ ರೂಪದಲ್ಲಿ ಪಾವತಿ ಮಾಡಬಹುದು. ಇದು ಸದ್ಯ ಪ್ರಾಯೋಗಿಕ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ವಿಸ್ತರಣೆ ಮಾಡಲಾಗುತ್ತದೆ.

 ಟ್ವಿಟ್ಟರ್‌ ಅನ್ನು ಖರೀದಿಸಿದ ಎಲಾನ್ ಮಸ್ಕ್

ಟ್ವಿಟ್ಟರ್‌ ಅನ್ನು ಖರೀದಿಸಿದ ಎಲಾನ್ ಮಸ್ಕ್

2022ರಲ್ಲಿ ಟ್ವಿಟ್ಟರ್ ಅನ್ನು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಖರೀದಿ ಮಾಡಿದ್ದಾರೆ. ಸುಮಾರು 44 ಬಿಲಿಯನ್ ಡಾಲರ್‌ಗೆ ಅಕ್ಟೋಬರ್‌ನಲ್ಲಿ ಟ್ವಿಟ್ಟರ್‌ ಅನ್ನು ಖರೀದಿಸಿದ್ದಾರೆ. ಅದಾದ ಬಳಿಕ ಟ್ವಿಟ್ಟರ್‌ನಲ್ಲಿ ಹಲವಾರು ಬೆಳವಣಿಗಳು ಕಂಡು ಬಂದಿದೆ. ಟ್ವಿಟ್ಟರ್‌ ಭಾರೀ ನಷ್ಟವನ್ನು ಅನುಭವಿಸಿದೆ. ಹಾಗೆಯೇ ಸಂಸ್ಥೆಯಲ್ಲಿ ಹಲವಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಟ್ವಿಟ್ಟರ್ ಡೀಲ್ ಕಾನೂನು ಹೋರಾಟಗಳ ಬಳಿಕ ನಡೆದಿದೆ.

 ಟೆಕ್ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ

ಟೆಕ್ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ

ವಿಶ್ವದಾದ್ಯಂತ ಆರ್ಥಿಕ ಹಣದುಬ್ಬರ ತೀರಾ ಅಧಿಕವಾಗಿದೆ. ಹಲವಾರು ಟೆಕ್ ಸಂಸ್ಥೆಗಳು ನಷ್ಟದಲ್ಲಿದ್ದು ಉದ್ಯೋಗ ಕಡಿತವನ್ನು ಮಾಡಿದೆ. ರಷ್ಯಾ ಉಕ್ರೇನ್ ಯುದ್ಧ ಕೂಡಾ ಇದಕ್ಕೆ ಪರಿಣಾಮ ಉಂಟು ಮಾಡಿದೆ. ಫೇಸ್‌ಬುಕ್, ಟ್ವಿಟ್ಟರ್, ಮೆಟಾ, ಬೈಜೂಸ್, ಡಿಸ್ನಿ ಮೊದಲಾದ ಸಂಸ್ಥೆಗಳು ಶೇಕಡ 1ರಿಂದ ಶೇಕಡ 13ರವರೆಗೆ ಉದ್ಯೋಗ ಕಡಿತವನ್ನು ಮಾಡಿದೆ.

 ಭಾರತದಲ್ಲಿ 5ಜಿ ಸೇವೆ ಆರಂಭ

ಭಾರತದಲ್ಲಿ 5ಜಿ ಸೇವೆ ಆರಂಭ

ಅಕ್ಟೋಬರ್ ಒಂದರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತದಲ್ಲಿ 5ಜಿ ಸೇವೆಗೆ ಚಾಲನೆ ನೀಡಿದ್ದಾರೆ. 5ಜಿ ಅಲ್ಟ್ರಾ ಸ್ಪೀಡ್ ಇಂಟರ್‌ನೆಟ್ ಆಗಿದ್ದು, ಈ ಸೇವೆ ಆರಂಭದ ಬಳಿಕ ಮೊಬೈಲ್ ಫೋನ್‌ನಲ್ಲಿ ಇಂಟರ್‌ನೆಟ್ ಬಳಕೆ ಸ್ಪೀಡ್ ಅಧಿಕವಾಗಲಿದೆ. ಪ್ರಥಮವಾಗಿ ಈ ಸೇವೆಯನ್ನು 13 ನಗರಗಳಲ್ಲಿ ಆರಂಭ ಮಾಡಲಾಗಿದೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಚಂಡೀಗಢ, ಗುರುಗ್ರಾಮ, ಹೈದಾರಾಬಾದ್, ಲಕ್ನೋ, ಪುಣೆ, ಗಾಂಧಿನಗರ, ಅಹಮದಾಬಾದ್, ಜಮ್ನನಗರ್‌ನಲ್ಲಿ ಸೇವೆಯು ಆರಂಭ ಮಾಡಲಾಗುತ್ತಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಭಾರತದಲ್ಲಿ 5ಜಿ ಸೇವೆಯನ್ನು ನೀಡಲು ಆರಂಭಿಸಿದೆ. ವೊಡಾಫೋನ್ ಐಡಿಯಾ ಇನ್ನೂ ಕೂಡಾ 5ಜಿ ಸೇವೆ ಆರಂಭ ಮಾಡಿಲ್ಲ.

 ಇಂಟರ್‌ನೆಟ್‌ನಲ್ಲಿ ಚಾಟ್‌ಜಿಪಿಟಿ ಹವಾ

ಇಂಟರ್‌ನೆಟ್‌ನಲ್ಲಿ ಚಾಟ್‌ಜಿಪಿಟಿ ಹವಾ

ಸ್ವತಂತ್ರ ಸಂಶೋಧನಾ ಸಂಸ್ಥೆಯಾದ ಓಪನ್ಎಐ OpenAI ಭಾರತದಲ್ಲಿ ನವೆಂಬರ್‌ನಲ್ಲಿ ಚಾಟ್‌ಜಿಪಿಟಿ (ChatGPT) ಅನ್ನು ಆರಂಭ ಮಾಡಿದೆ. ಇದೊಂದು ಚಾಟ್ ಬಾಟ್ ಆಗಿದೆ. ಇದು ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡಿದೆ. ಪ್ರಮುಖವಾಗಿ ಯಾವುದೇ ಸಾಮಾನ್ಯ ಭಾಷೆಯನ್ನು ಅರ್ಥಮಾಡಿಕೊಳ್ಳ, ಹಾಗೆಯೇ ಅದೇ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಬಲ್ಲ ಸಾಮರ್ಥ್ಯವನ್ನು ಹೊಂದಿರುವ ಕಾರಣದಿಂದಾಗಿ ಈ ಚಾಟ್‌ಬಾಟ್ ಭಾರೀ ಫೇಮಸ್ ಆಗಿದೆ.

 ಎಫ್‌ಟಿಎಕ್ಸ್ ಅಧಃಪತನ

ಎಫ್‌ಟಿಎಕ್ಸ್ ಅಧಃಪತನ

ಈ ವರ್ಷದಲ್ಲಿ ವಿಶ್ವದಾದ್ಯಂತ ಕ್ರಿಪ್ಟೋ ಕರೆನ್ಸಿ ಬಗ್ಗೆ ಭಾರೀ ಚರ್ಚೆಗಳು ನಡೆದಿದೆ. ಕ್ರಿಪ್ಟೋ ಕರೆನ್ಸಿ ಉತ್ತಮವೇ ಅಥವಾ ಸುರಕ್ಷಿತವೇ ಎಂಬ ಬಗ್ಗೆ ಭಾರೀ ವಿವಾದಗಳು ನಡೆದಿದೆ. ಎಫ್‌ಟಿಎಕ್ಸ್ ಭಾರೀ ನಷ್ಟವನ್ನು ಹೊಂದಿದೆ. ಎಫ್‌ಟಿಎಕ್ಸ್‌ನಿಂದ ಕ್ರಿಪ್ಟೋ ಹಣವನ್ನು ಲಪಟಾಯಿಸಲಾಗಿದೆ. ಅದರ ಅಂಗ ಸಂಸ್ಥೆಯಾದ ಅಲಾಮೆಡಾ ರೀಸರ್ಚ್ ಕಂಪನಿಗೆ ಫಂಡ್‌ಗಳನ್ನು ರವಾನಿಸಲಾಗಿದೆ ಎಂಬಂತಹ ಸುದ್ದಿ ಬಂದವು. ಸ್ಯಾಮ್ ಬ್ಯಾಂಕ್‌ಮ್ಯಾನ್ ಎಫ್‌ಟಿಎಕ್ಸ್‌ನ ಸಿಇಒ ಹುದ್ದೆಯಿಂದ ಕೆಳಕ್ಕೆ ಇಳಿದಿದ್ದು ಬಂಧನ ಕೂಡಾ ಮಾಡಲಾಗಿದೆ.

English summary

Year Ender 2022: Big News that Dominated the Business World in 2022

Year Ender 2022: Many major events happened in business world this year as well, some of them will impact our lives in next year as well. details in kannada. Year Ender 2022: Many major events happened in business world this year as well, some of them will impact our lives in next year as well. details in kannada.
Story first published: Wednesday, December 28, 2022, 11:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X