For Quick Alerts
ALLOW NOTIFICATIONS  
For Daily Alerts

ಕೊರೊನಾ ಪರಿಣಾಮ: ದೇಶದಲ್ಲಿ ಕೈಗಾರಿಕಾ ಉತ್ಪಾದನೆ ಕುಸಿತ, ಪೆಟ್ರೋಲಿಯಂ ಉತ್ಪನ್ನಗಳಿಗಿಲ್ಲ ಬೇಡಿಕೆ

|

ಕೊರೊನಾವೈರಸ್ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಬಹುತೇಕ ಎಲ್ಲಾ ವಲಯಗಳಲ್ಲಿ ಬೇಡಿಕೆ ಕುಸಿದಿದ್ದು, ವಿದ್ಯುತ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಡಿಕೆ ಇಲ್ಲವಾಗಿದೆ ಎಂದು ಆರ್‌ಬಿಐ ಹೇಳಿದೆ. ಏಪ್ರಿಲ್ ಮಾಹಿತಿ ಆಧರಿಸಿ, ತೈಲ ಬೇಡಿಕೆಯು ಕಡಿಮೆ ಮಟ್ಟದಲ್ಲಿಯೇ ಇರಲಿದೆ, ಆಹಾರ ಪದಾರ್ಥಗಳ ಮೇಲಿನ ದರ ಒತ್ತಡ ಹೆಚ್ಚಿದೆ ಎಂದು ಹೇಳಿದೆ.

 

ಅನೇಕ ಉದ್ಯಮ ವಲಯಗಳಲ್ಲಿ ನಗರ ಮತ್ತು ಗ್ರಾಮೀಣ ಎರಡೂ ಭಾಗದಲ್ಲೂ ಬೇಡಿಕೆ ಕುಸಿದಿದೆ. ಕೈಗಾರಿಕೆ ಉತ್ಪಾದನೆಯು ಮಾರ್ಚ್‌ನಲ್ಲಿ 17 ಪರ್ಸೆಂಟ್ ಇಳಿಕೆ ಸಾಧಿಸಿದೆ, ತಯಾರಿಕೆ ಚಟುವಟಿಕೆಯು 21 ಪರ್ಸೆಂಟ್‌ರಷ್ಟು ಕಡಿಮೆಯಾಗಿದೆ.

 
ಕೊರೊನಾ ಪರಿಣಾಮ: ದೇಶದಲ್ಲಿ ಕೈಗಾರಿಕಾ ಉತ್ಪಾದನೆ ಕುಸಿತ

ಸದ್ಯ ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆಯು ದೇಶಕ್ಕೆ ಭರವಸೆಯ ಬೆಳಕಾಗಿ ಉಳಿದಿದ್ದು, ಆದರೂ ದವಸ-ಧಾನ್ಯಗಳ ಬೆಲೆ ಹೆಚ್ಚಾಗಿದೆ ಎಂದು ಆರ್‌ಬಿಐ ಹೇಳಿದೆ. ಇದರ ನಡುವೆ ರಫ್ತು ಪ್ರಮಾಣದಲ್ಲಿ 60.5 ಪರ್ಸೆಂಟ್‌ರಷ್ಟು ತಗ್ಗಿದ್ದು, ಕಳೆದ 30 ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಿಗೆ ತಲುಪಿದೆ. ಏಪ್ರಿಲ್‌ನಲ್ಲಿ 1 ರಿಂದ ವಿದೇಶಿ ವಿನಿಮಯ ಮೀಸಲು 9.2 ಬಿಲಿಯನ್ ಡಾಲರ್‌ನಷ್ಟು ಏರಿಕೆಯಾಗಿದೆ.

ಸಣ್ಣ ಕೈಗಾರಿಕೆಗಳಿಗೆ ಚೇತರಿಕೆ ನೀಡಲು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ಐಡಿಬಿಐ) ಮತ್ತೆ 90 ದಿನಗಳವರೆಗೂ 15,000 ಕೋಟಿ ಬಿಡುಗಡೆ ಮಾಡಲು ಆರ್‌ಬಿಐ ನಿರ್ಧರಿಸಿದೆ.

English summary

Corona Impact Industry Growth, consumption negative Says RBI

Corona impact Industrial growth, consumption negative, Merchandise exports slumped to the worst level in 30 years, Power and fuel consumption has plunged said RBI On Friday
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X