For Quick Alerts
ALLOW NOTIFICATIONS  
For Daily Alerts

Budget 2023: ಚಿನ್ನದ ಬೆಲೆ ಏರಿಕೆ ನಡುವೆ, ಆಮದು ಸುಂಕ ಇಳಿಕೆಗೆ ಗೋಲ್ಡ್ ಇಂಡಸ್ಟ್ರಿ ಆಗ್ರಹ

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-2024ನೇ ಹಣಕಾಸು ವರ್ಷದ ಆವಯ್ಯವ ಪಟ್ಟಿ (ಬಜೆಟ್) ಅನ್ನು ಮಂಡಿಸಲಿದ್ದಾರೆ. ಈ ಬಜೆಟ್ ಮೇಲೆ ತಮ್ಮ ನಿರೀಕ್ಷೆಗಳು ಏನಿದೆ ಎಂಬುವುದನ್ನು ಈಗಾಗಲೇ ಹಲವಾರು ವಲಯಗಳು ತಿಳಿಸಿದೆ. ಈಗಾಗಲೇ ಜ್ಯುವೆಲ್ಲರಿ ಇಂಡಸ್ಟ್ರಿ ಹಲವಾರು ಬಜೆಟ್ ನಿರೀಕ್ಷೆಗಳನ್ನು ತಿಳಿಸಿದೆ. ಗೋಲ್ಡ್ ಇಂಡಸ್ಟ್ರಿ ತನ್ನದೇ ಆದ ಪ್ರತ್ಯೇಕ ನಿರೀಕ್ಷೆಗಳನ್ನು ಹೊಂದಿದೆ.

ಈಗಾಗಲೇ ತೆರಿಗೆ ಕಡಿತ, ವಿನಾಯಿತಿ ಮೊದಲಾದ ನಿರೀಕ್ಷೆಗಳನ್ನು ವ್ಯಕ್ತಪಡಿಸಿದೆ. ಅದು ಕೂಡಾ 2024ರಲ್ಲಿ ಲೋಕಸಭೆ ಚುನಾವಣೆಯಾದ ಕಾರಣ ಮತ್ತು ಮೋದಿ ಸರ್ಕಾರದ ಈ ಆಡಳಿತಾವಧಿಯ ಕೊನೆಯ ಬಜೆಟ್ ಆದ ಕಾರಣ ಎಲ್ಲ ವಲಯಗಳ ನಿರೀಕ್ಷೆ ಹೆಚ್ಚಾಗಿದೆ. ಗೋಲ್ಡ್ ಜ್ಯುವೆಲ್ಲರಿ ಇಡಸ್ಟ್ರಿ ಚಿನ್ನದ ಆಮದು ಸುಂಕವನ್ನು ಸರ್ಕಾರ ಕಡಿತ ಮಾಡಬಹುದು ಎಂಬ ನಿರೀಕ್ಷೆಯಲ್ಲಿದೆ.

Budget 2023 Expectations: ಜ್ಯುವೆಲ್ಲರಿ ರಫ್ತುದಾರರ ಬಜೆಟ್ ನಿರೀಕ್ಷೆಗಳೇನು?Budget 2023 Expectations: ಜ್ಯುವೆಲ್ಲರಿ ರಫ್ತುದಾರರ ಬಜೆಟ್ ನಿರೀಕ್ಷೆಗಳೇನು?

ಕಳೆದ ವರ್ಷವೂ ಗೋಲ್ಡ್ ಇಂಡಸ್ಟ್ರಿ ಚಿನ್ನದ ಆಮದು ಸುಂಕ ಇಳಿಕೆಯ ನಿರೀಕ್ಷೆಯನ್ನು ಹೊಂದಿತ್ತು. ಆದರೆ ಕೇಂದ್ರ ಸರ್ಕಾರವು ಕಳೆದ ಬಜೆಟ್‌ನಲ್ಲಿ ವಜ್ರ ಮತ್ತು ರತ್ನದ ಮೇಲಿನ ಆಮದು ಸುಂಕವನ್ನು ಶೇಕಡ 5ಕ್ಕೆ ಇಳಿಸಿದೆ. ಅದಕ್ಕೂ ಮುನ್ನ ಆಮದು ಸುಂಕವು ಶೇಕಡಾ 7.5 ರಷ್ಟಿತ್ತು. ಚಿನ್ನದ ಆಮದು ಸುಂಕದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿರಲಿಲ್ಲ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

 Budget 2023: ಚಿನ್ನ ಆಮದು ಸುಂಕ ಇಳಿಕೆಗೆ ಗೋಲ್ಡ್ ಇಂಡಸ್ಟ್ರಿ ಆಗ್ರಹ

ಆಮದು ಸುಂಕ ಇಳಿಸಲು ಆಗ್ರಹ

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಐಶ್ರಾಪ್‌ ಜೆಮ್ಸ್ & ಜ್ಯುವೆಲ್ಲರ್ಸ್‌ನ ಡೈರೆಕ್ಟರ್ ವೈಭವ್ ಸಾರಫ್, "ಚುನಾವಣೆಗೂ ಮುನ್ನ ನಡೆಯುವ, ಕೇಂದ್ರ ಸರ್ಕಾರದ ಆಡಳಿತಾವಧಿಯ ಕೊನೆಯ ಬಜೆಟ್ ಇದಾದ ಕಾರಣ ನಾವು ಹಲವಾರು ನಿರೀಕ್ಷೆಗಳನ್ನು ಹೊಂದಿದ್ದೇವೆ. ಬೆಳವಣಿಗೆಗೆ ಹೆಚ್ಚು ಒತ್ತು ನೀಡುವ ಮತ್ತು ತೆರಿಗೆ ಸ್ನೇಹಿ ಬಜೆಟ್ ಇದಾಗಲಿದೆ ಎಂಬ ನಿರೀಕ್ಷೆಯಿದೆ. ತೆರಿಗೆ ಕಡಿತ ಹೊರತುಪಡಿಸಿ ನಾವು ಚಿನ್ನದ ಆಮದು ಸುಂಕ ಕಡಿತ ಮಾಡುವ ನಿರೀಕ್ಷೆಯನ್ನು ಹೊಂದಿದ್ದೇವೆ," ಎಂದು ತಿಳಿಸಿದ್ದಾರೆ.

"ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ದರವು ಸಾರ್ವಕಾಲಿಕವಾಗಿ ಏರಿಕೆಯಾಗುತ್ತಿದೆ. ಬೆಲೆಯು ಕೊಂಚ ಇಳಿಕೆ ಮಾಡುವುದು ಅಗತ್ಯವಾಗಿದೆ. ಅಧಿಕ ಡಾಲರ್ ಎಕ್ಸ್‌ಚೇಂಜ್‌ನಿಂದಾಗಿ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಚಿನ್ನದ ಬೆಲೆಯ ನಡುವೆ ಭಾರೀ ವ್ಯತ್ಯಾಸವಿದೆ. ನಾವು ಚಿನ್ನದ ಬೆಲೆ ಇಳಿಸಬೇಕಾದರೆ, ಆಮದು ಸುಂಕವನ್ನು ಕಡಿತಗೊಳಿಸುವುದು ಮುಖ್ಯವಾಗಿದೆ," ಎಂದು ಕೂಡಾ ಹೇಳಿದ್ದಾರೆ.

Budget 2022: ವಜ್ರಗಳು ಮತ್ತು ರತ್ನದ ಮೇಲಿನ ಆಮದು ಸುಂಕ ಶೇ.5ಕ್ಕೆ ಇಳಿಕೆBudget 2022: ವಜ್ರಗಳು ಮತ್ತು ರತ್ನದ ಮೇಲಿನ ಆಮದು ಸುಂಕ ಶೇ.5ಕ್ಕೆ ಇಳಿಕೆ

"ಸ್ಥಳೀಯವಾಗಿ ಅಭಿವೃದ್ಧಿಗೆ ಹೆಚ್ಚಿನ ನಿಧಿ ಹಂಚಿಕೆ ಮಾಡಿದರೆ, ಉದ್ಯೋಗ ಹೆಚ್ಚಳವಾಗಬಹುದು. ದೊಡ್ಡ ಪಟ್ಟಣ, ನಗರಗಳಿಗೆ ವಲಸೆ ಹೋಗುವುದು ಕೂಡಾ ಕಡಿಮೆಯಾಗಬಹುದು. ಇದು ಸಣ್ಣ ಪಟ್ಟಣ, ಗ್ರಾಮೀಣ ಪ್ರದೇಶಗಳ ಆರ್ಥಿಕ ಸ್ಥಿತಿ ಬೆಳವಣಿಗೆಗೆ ಸಹಕಾರಿಯಾಗಲಿದೆ. ಜಾಗತಿಕ ಆರ್ಥಿಕ ಹಿಂಜರಿತ, ಆರ್ಥಿಕ ಮಂದಗತಿಯನ್ನು ಎದುರಿಸಲು ನಮ್ಮ ಆರ್ಥಿಕತೆಯನ್ನು ಸಿದ್ಧಗೊಳಿಸುತ್ತದೆ. ಜಿಎಸ್‌ಟಿ ತೆರಿಗೆ ರಚನೆಯನ್ನು ಸರಳಗೊಳಿಸಬೇಕಾಗಿದೆ," ಎಂದು ಕೂಡಾ ಐಶ್ರಾಪ್‌ ಜೆಮ್ಸ್ & ಜ್ಯುವೆಲ್ಲರ್ಸ್‌ನ ಡೈರೆಕ್ಟರ್ ವೈಭವ್ ಸಾರಫ್ ಅಭಿಪ್ರಾಯಿಸಿದ್ದಾರೆ.

"ಈ ಬಜೆಟ್ ಜ್ಯುವೆಲ್ಲರಿ ಇಂಡಸ್ಟ್ರಿಯಲ್ಲಿ ಹೆಚ್ಚಿನ ಪಾರದರ್ಶಕೆ ಸೃಷ್ಟಿಗೆ ಸಹಕಾರಿಯಾಗಲಿದೆ ಎಂಬ ಭರವಸೆಯನ್ನು ನಾನು ಹೊಂದಿದ್ದೇನೆ. ಪಾರದರ್ಶಕತೆ ಹೆಚ್ಚಾದಷ್ಟು ಇಂಡಸ್ಟ್ರಿ ಬೆಳೆಯಲು ಸಾಧ್ಯವಾಗುತ್ತದೆ," ಎಂದು ಮತ್ತೋರ್ವ ತಜ್ಞರು ಹೇಳಿದ್ದಾರೆ.

English summary

Union Budget 2023: Gold industry wants FM Sitharaman to reduce import duty

Union Budget 2023: The Budget 2023 will be presented by Finance Minister Nirmala Sitharaman in the Parliament on February 1. old industry wants FM Sitharaman to reduce import duty, bring more transparency to sector.
Story first published: Monday, January 30, 2023, 15:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X