For Quick Alerts
ALLOW NOTIFICATIONS  
For Daily Alerts

ಈ 10 ಕಂಪೆನಿ 4 ತಿಂಗಳಲ್ಲಿ ಸೃಷ್ಟಿಸಿರುವ ಸಂಪತ್ತು 140 ದೇಶದ ಜಿಡಿಪಿಗಿಂತ ಹೆಚ್ಚು

|

ಈ ಲೇಖನದಲ್ಲಿ ನಿಮ್ಮೆದುರು ಬಹಳ ಆಸಕ್ತಿಕರ ಸಂಗತಿಯೊಂದಿದೆ. ಮಾರ್ಚ್ ನಿಂದ ಈಚೆಗೆ, ಅಂದರೆ ನಾಲ್ಕು ತಿಂಗಳಲ್ಲಿ ಭಾರತದ ಹತ್ತು ಕಂಪೆನಿಯ ಷೇರುಗಳು ಸೃಷ್ಟಿಸಿರುವ ಸಂಪತ್ತು ವಿಶ್ವದ 140 ದೇಶಗಳ ಜಿಡಿಪಿಗಿಂತ ಹೆಚ್ಚು. ಭಾರತದ ಷೇರು ಮಾರುಕಟ್ಟೆ ಸೂಚ್ಯಂಕ ಬಿಎಸ್ ಇ ಸೆನ್ಸೆಕ್ಸ್ 50 ಪರ್ಸೆಂಟ್ ಈ ಅವಧಿಯಲ್ಲಿ ಹೆಚ್ಚಾಗಿದೆ.

 

ಸೂಚ್ಯಂಕದಲ್ಲಿನ ಹತ್ತು ಷೇರುಗಳು ಸೇರಿ ಮಾರುಕಟ್ಟೆ ಮೌಲ್ಯ 17.76 ಲಕ್ಷ ಕೋಟಿ ರುಪಾಯಿ ಹೆಚ್ಚಾಗಿದೆ. ಆ ಮೊತ್ತವನ್ನು ಡಾಲರ್ ಗೆ ಪರಿವರ್ತಿಸಿ ಹೇಳಬೇಕೆಂದರೆ, ಇವತ್ತಿನ ದರ 74.8 ರುಪಾಯಿ ಅಂದರೆ 23,700 ಕೋಟಿ ಅಮೆರಿಕನ್ ಡಾಲರ್. ಈ ಮೊತ್ತವು 2019ರಲ್ಲಿ ಪೋರ್ಚುಗಲ್ ಜಿಡಿಪಿ 23,600 USDಗಿಂತ ಹೆಚ್ಚು. ಇದು ಐಎಂಎಫ್ ಅಂದಾಜು ಮಾಡಿರುವ ಜಿಡಿಪಿ.

5 ದಿನದಲ್ಲಿ ರಿಲಯನ್ಸ್ ಬಂಡವಾಳ ಮೌಲ್ಯ 1.48 ಲಕ್ಷ ಕೋಟಿ ರುಪಾಯಿ ಹೆಚ್ಚಳ5 ದಿನದಲ್ಲಿ ರಿಲಯನ್ಸ್ ಬಂಡವಾಳ ಮೌಲ್ಯ 1.48 ಲಕ್ಷ ಕೋಟಿ ರುಪಾಯಿ ಹೆಚ್ಚಳ

ಪೆರು (22,800 USD), ಇರಾಕ್ (22,400 USD), ಗ್ರೀಸ್ (21,400 USD), ನ್ಯೂಜಿಲ್ಯಾಂಡ್ (20,400 USD) ಮತ್ತು 2019ರಲ್ಲಿ 136 ದೇಶಗಳ ಜಿಡಿಪಿ ಈ ಮೇಲ್ಕಂಡ ದೇಶಗಳಿಗಿಂತ ಕಡಿಮೆ ಇದ್ದವು.

ರಿಲಯನ್ಸ್ ಷೇರು ಬೆಲೆ 135 ಪರ್ಸೆಂಟ್ ಏರಿಕೆ

ರಿಲಯನ್ಸ್ ಷೇರು ಬೆಲೆ 135 ಪರ್ಸೆಂಟ್ ಏರಿಕೆ

ಭಾರತದ ಈ ಹತ್ತು ಷೇರುಗಳು ಗಳಿಸಿದ ಅರ್ಧದಷ್ಟು ಮೊತ್ತ, ಅಂದರೆ 10,900 ಕೋಟಿ USD ಅಥವಾ 8.2 ಲಕ್ಷ ಕೋಟಿ ರುಪಾಯಿ ಈಕ್ವೆಡಾರ್ ಮತ್ತು ಸ್ಲೊವೆಕಿಯಾದ ತಲಾ ಜಿಡಿಪಿ ಲೆಕ್ಕಾಚಾರ. ಇಷ್ಟು ಮೊತ್ತ ರಿಲಯನ್ಸ್ ಇಂಡಸ್ಟ್ರೀಸ್ ವೊಂದರಿಂದಲೇ ಬಂದಿದೆ. ಮಾರ್ಚ್ 24ರಂದು 934 ರುಪಾಯಿ ಇದ್ದ ರಿಲಯನ್ಸ್ ಷೇರಿನ ಬೆಲೆ 135 ಪರ್ಸೆಂಟ್ ಏರಿಕೆಯಾಗಿ, ಜುಲೈ 27ರಂದು 2198 ರುಪಾಯಿ ಇತ್ತು. ಬೆಲೆ ಇಳಿಕೆ ಆದಾಗ ರಿಲಯನ್ಸ್ ಷೇರು ಖರೀದಿಸಲು ಬಯಸುತ್ತೇವೆ ಎನ್ನುತ್ತಾರೆ ಹೂಡಿಕೆದಾರರು. ಆನಂತರದ ಸ್ಥಾನಗಳು ಟಿಸಿಎಸ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಇನ್ಫೋಸಿಸ್. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಅಂದಾಜು ಮಾಡುವಂತೆ, ಈ ಕಂಪೆನಿಗಳ ಒಟ್ಟು ಬಂಡವಾಳ ಸೇರಿ ವೆನಿಜುವೆಲಾದ ಜಿಡಿಪಿ ಆಗುತ್ತದೆ.

ಸೆನ್ಸೆಕ್ಸ್ ಟಾಪ್ 10 ಕಂಪೆನಿ ಬಂಡವಾಳ ಮೌಲ್ಯ 66,900 USD
 

ಸೆನ್ಸೆಕ್ಸ್ ಟಾಪ್ 10 ಕಂಪೆನಿ ಬಂಡವಾಳ ಮೌಲ್ಯ 66,900 USD

ಸೆನ್ಸೆಕ್ಸ್ ನಲ್ಲಿ ಇರುವ ಬಂಡವಾಳದ ಆಧಾರದ ಮೇಲಿನ ಟಾಪ್ ಹತ್ತು ಕಂಪೆನಿಗಳ ಮಾರುಕಟ್ಟೆ ಬಂಡವಾಳ 66,900 USD ಆಗುತ್ತದೆ. ಇದನ್ನು ಯಾವುದಾದರೂ ಒಂದು ದೇಶದ ಜಿಡಿಪಿಗೆ ಸಮವೇ ಎಂದು ನೋಡುವುದಾದರೆ ಟಾಪ್ ಇಪ್ಪತ್ತು ಜಿಡಿಪಿಯ ಪಟ್ಟಿಯಲ್ಲಿ ಸ್ಥಾನ ಪಡೆಯುವುದರಲ್ಲಿ ಸ್ವಲ್ಪದರಲ್ಲೇ ತಪ್ಪುತ್ತದೆ. ಜಿಡಿಪಿ ಲೆಕ್ಕದಲ್ಲಿ ಜಗತ್ತಿನ ಟಾಪ್ ಇಪತ್ತನೇ ಸ್ಥಾನದಲ್ಲಿ ಇರುವುದು ಸ್ವಿಟ್ಜರ್ಲೆಂಡ್. ಅದರ ಜಿಡಿಪಿ 71,500 ಅಮೆರಿಕನ್ ಡಾಲರ್. ಇನ್ನು ಇಪ್ಪತ್ತೊಂದನೇ ಸ್ಥಾನದಲ್ಲಿ ಇರುವುದರ ಜಿಡಿಪಿ 56,500 USD. ಲಾರ್ಜ್ ಕ್ಯಾಪ್ ಷೇರುಗಳು ಖರೀದಿ ಮಾಡಿದಲ್ಲಿ ಉತ್ತಮವಾದ ರಿಟರ್ನ್ಸ್ ನೀಡುತ್ತದೆ ಎಂದು ಷೇರು ದಲ್ಲಾಳಿಗಳು ಅಭಿಪ್ರಾಯ ಪಡುತ್ತಾರೆ.

ಮಾರುಕಟ್ಟೆ ಬಂಡವಾಳ 45 ಲಕ್ಷ ಕೋಟಿ ರುಪಾಯಿ ಏರಿಕೆ

ಮಾರುಕಟ್ಟೆ ಬಂಡವಾಳ 45 ಲಕ್ಷ ಕೋಟಿ ರುಪಾಯಿ ಏರಿಕೆ

ಮಾರ್ಚ್ 24ನೇ ತಾರೀಕು ಸೆನ್ಸೆಕ್ಸ್ 25,638 ಪಾಯಿಂಟ್ ಇತ್ತು. ಜುಲೈ 29ನೇ ತಾರೀಕು 38,413 ಪಾಯಿಂಟ್ ತಲುಪಿದೆ. ಅಂದರೆ 49.83 ಪರ್ಸೆಂಟ್ ಏರಿಕೆ ಆಗಿದೆ. ಒಟ್ಟಾರೆ ಈ ಅವಧಿಯಲ್ಲಿ ಮಾರುಕಟ್ಟೆ ಬಂಡವಾಳ 45 ಲಕ್ಷ ಕೋಟಿ ರುಪಾಯಿ ಏರಿಕೆ ಆಗಿದೆ. 60 ಸಾವಿರ USD ಸಂಪತ್ತು ಸೃಷ್ಟಿಯಾಗಿದೆ. ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಜಾಗತಿಕ ಸಂಸ್ಥೆಗಳು ಹೂಡಿಕೆ ಮಾಡಿದ್ದರಿಂದ ಜೂನ್ ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಶೂನ್ಯ ಸಾಲದ ಕಂಪೆನಿ ಆಗಿದೆ. 5G ಟೆಕ್ನಾಲಜಿಗೆ ರಿಲಯನ್ಸ್ ಪ್ರವೇಶಿಸುತ್ತಿದ್ದು, ರೀಟೇಲ್ ವ್ಯವಹಾರದ ವಿಸ್ತರಣೆ ಪ್ರಯತ್ನದಲ್ಲಿದೆ. ಟಿಸಿಎಸ್ ಮತ್ತು ಇನ್ಫೋಸಿಸ್ ತ್ರೈಮಾಸಿಕ ಫಲಿತಾಂಶ ಉತ್ತಮವಾಗಿದೆ. ಬ್ಯಾಂಕಿಂಗ್ ವಲಯದಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಅತ್ಯುತ್ತಮ ಆಯ್ಕೆ ಎನಿಸಿಕೊಂಡಿದೆ.

ಭಾರ್ತಿ ಏರ್ ಟೆಲ್, ಹಿಂದೂಸ್ತಾನ್ ಯುನಿಲಿವರ್

ಭಾರ್ತಿ ಏರ್ ಟೆಲ್, ಹಿಂದೂಸ್ತಾನ್ ಯುನಿಲಿವರ್

ಭಾರ್ತಿ ಏರ್ ಟೆಲ್ ಹಾಗೂ ಹಿಂದೂಸ್ತಾನ್ ಯುನಿಲಿವರ್ ಮಾರುಕಟ್ಟೆ ಮೌಲ್ಯಕ್ಕೆ ತಲಾ 1100 ಕೋಟಿ ಅಮೆರಿಕನ್ ಡಾಲರ್ ಸೇರ್ಪಡೆ ಮಾಡಿವೆ. ಭಾರ್ತಿ ಏರ್ ಟೆಲ್ ಈ ವಾರ ಜೂನ್ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ್ದು, 15,933 ಕೋಟಿ ರುಪಾಯಿ ನಷ್ಟ ದಾಖಲು ಮಾಡಿದೆ. ಹಿಂದೂಸ್ತಾನ್ ಯುನಿಲಿವರ್ ಬೆಳವಣಿಗೆ ಪ್ರಮಾಣದಲ್ಲಿ 8 ಪರ್ಸೆಂಟ್ ಇಳಿಕೆ ಆಗಿದೆ. ಕೊರೊನಾ ಬಿಕ್ಕಟ್ಟು ನಿವಾರಣೆ ಆದ ಮೇಲೆ ಮತ್ತೆ ಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿದೆ ಎಚ್ ಯುಎಲ್. ಅಂದ ಹಾಗೆ ಎಚ್ ಸಿಎಲ್ ಟೆಕ್ನಾಲಜೀಸ್, ಎಚ್ ಡಿಎಫ್ ಸಿ, ಐಟಿಸಿ ಹಾಗೂ ವಿಪ್ರೋ ಈ ಅವಧಿಯಲ್ಲಿ ಹೂಡಿಕೆದಾರರ ಸಂಪತ್ತು 700ರಿಂದ 900 ಕೋಟಿ ಅಮೆರಿಕನ್ ಡಾಲರ್ ಹೆಚ್ಚಳ ಮಾಡಿದೆ.

English summary

10 Indian Stocks Created More Wealth Than GDP Of 140 nations In Just 4 Months!

Within 4 months since March, just 10 Indian stocks have created wealth that exceeds the individual GDP of 140 nations around the world!
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X