For Quick Alerts
ALLOW NOTIFICATIONS  
For Daily Alerts

3 ತಿಂಗಳಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ನೂರಾರು ಕೋಟಿ ರುಪಾಯಿ ವಂಚನೆ

|

ಕೇವಲ ಮೂರು ತಿಂಗಳಿನಲ್ಲಿ ಡೆಬಿಟ್ ಕಾರ್ಡ್ ವಹಿವಾಟು, ಇಂಟರ್ನೆಂಟ್ ಬ್ಯಾಂಕಿಂಗ್‌ನಲ್ಲಿ ನೂರಾರು ಕೋಟಿ ರುಪಾಯಿ ವಂಚನೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯದ ಸಚಿವ ಅನುರಾಗ್ ಠಾಕೂರ್ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.

ಡಿಸೆಂಬರ್ 2019ರವರೆಗೆ ಒಟ್ಟು ದಾಖಲಾದ ಪ್ರಕರಣಗಳು 21,041ರಷ್ಟಿದ್ದು, ಕೇವಲ ಮೂರು ತಿಂಗಳಿನಲ್ಲಿ 129 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಪ್ರಶ್ನೆಗೆ ಉತ್ತರಿಸಲಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ವಂಚನೆ

ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ವಂಚನೆ

ಡೆಬಿಟ್ ಕಾರ್ಡ್ ವಹಿವಾಟು, ಕ್ರೆಡಿಟ್ ಕಾರ್ಡ್‌ , ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಒಟ್ಟು ಆಗಿರುವ 129 ಕೋಟಿ ರುಪಾಯಿ ವಂಚನೆಯಲ್ಲಿ ಬಹುಪಾಲು ನಡೆದಿರುವುದು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಎಂದು ದಾಖಲಾಗಿದೆ.

2019ರ ಅಕ್ಟೋಬರ್‌ನಲ್ಲಿ 85 ಕೋಟಿ ರುಪಾಯಿಗಳನ್ನು ವಂಚಕರು ದೋಚಿದ್ದಾರೆ. ಎಟಿಎಂ ಹಾಗೂ ಡೆಬಿಟ್‌ ಕಾರ್ಡ್ ವಹಿವಾಟಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಗರಿಷ್ಟ ಪ್ರಕರಣಗಳು ದಾಖಲಾಗಿವೆ. ಆದರೆ ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಸಾಮಾನ್ಯ ಮತ್ತು ಸುಲಭ ಮಾರ್ಗವಾಗಿದೆ.

 

2019-20ರ ಹಣಕಾಸು ವರ್ಷದಲ್ಲಿ 50,000 ಕೇಸ್

2019-20ರ ಹಣಕಾಸು ವರ್ಷದಲ್ಲಿ 50,000 ಕೇಸ್

2019ರ ಹಣಕಾಸು ವರ್ಷದಲ್ಲಿ ದೇಶದಲ್ಲಿ ಕೇವಲ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಂಚನೆಗಳ ವಿಷಯದಲ್ಲಿ, ಸುಮಾರು 150 ಕೋಟಿ ರುಪಾಯಿ ವಂಚನೆಗಳಲ್ಲಿ 50,000 ಕೇಸ್‌ಗಳಿವೆ . ಡಿಜಿಟಲ್ ಪಾವತಿಯ ಪ್ರಮಾಣದಲ್ಲಿ ಏರಿಕೆಯೊಂದಿಗೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಭಾವಿಸುವುದು ಸಾಮಾನ್ಯವಾಗಿಬಿಟ್ಟಿದೆ.

ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್ ಇದ್ರೆ ಮೊದಲು ಡಿಲೀಟ್ ಮಾಡಿ: ಇಲ್ಲದಿದ್ರೆ ನಿಮ್ಮ ಹಣ ಗಾಯಬ್ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್ ಇದ್ರೆ ಮೊದಲು ಡಿಲೀಟ್ ಮಾಡಿ: ಇಲ್ಲದಿದ್ರೆ ನಿಮ್ಮ ಹಣ ಗಾಯಬ್

ಸೈಬರ್ ವಂಚನೆಗಳ ನಿಖರವಾದ ಡೇಟಾಬೇಸ್ ಇಲ್ಲ

ಸೈಬರ್ ವಂಚನೆಗಳ ನಿಖರವಾದ ಡೇಟಾಬೇಸ್ ಇಲ್ಲ

‘ಸೈಬರ್ ವಂಚನೆಗಳು' ವಿಭಾಗದಲ್ಲಿ ವರದಿಯಾದ ವಂಚನೆಗಳ ಮಾಹಿತಿ ಲಭ್ಯವಿಲ್ಲ ಎಂದು ಆರ್‌ಬಿಐ ಮಾಹಿತಿ ನೀಡಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಇದಕ್ಕಾಗಿಯೇ ವಂಚನೆಗಳ ಡೇಟಾವನ್ನು ಕಾರ್ಡ್, ಇಂಟರ್ನೆಟ್ , ಎಟಿಎಂ / ಡೆಬಿಟ್ ವಿಭಾಗದಲ್ಲಿ ವರದಿ ಮಾಡಲಾಗಿದೆ

ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಜೊತೆಗೆ ಡಿಜಿಟಲ್ ಪಾವತಿ ಹೆಚ್ಚುತ್ತಿರುವ ಆಯ್ಕೆಗಳೊಂದಿಗೆ, ಸೈಬರ್ ವಂಚನೆಗಳ ನಿಖರವಾದ ಡೇಟಾಬೇಸ್ ಇಲ್ಲದಿರುವುದು ಕಾರ್ಯ ಸುಗಮತೆಗೆ ಅಡ್ಡಿಯಾಗಿದೆ.

 ಎಲ್ಲೆಂದರಲ್ಲಿ ಮೊಬೈಲ್‌ ನಂಬರ್ ಕೊಡದಿರಿ, ಸೈಬರ್ ಕಳ್ಳರಿದ್ದಾರೆ ಎಚ್ಚರಿಕೆ..! ಎಲ್ಲೆಂದರಲ್ಲಿ ಮೊಬೈಲ್‌ ನಂಬರ್ ಕೊಡದಿರಿ, ಸೈಬರ್ ಕಳ್ಳರಿದ್ದಾರೆ ಎಚ್ಚರಿಕೆ..!

ಡಿಜಿಟಲ್ ವಹಿವಾಟು ನೂರಕ್ಕೆ ನೂರರಷ್ಟು ಸುರಕ್ಷಿತವಾಗಿಲ್ಲ?

ಡಿಜಿಟಲ್ ವಹಿವಾಟು ನೂರಕ್ಕೆ ನೂರರಷ್ಟು ಸುರಕ್ಷಿತವಾಗಿಲ್ಲ?

ಡಿಜಿಟಲ್ ವಹಿವಾಟಿನಲ್ಲಿನ ವಂಚನೆಯನ್ನು ನಿಗ್ರಹಿಸಲು ಏಜೆನ್ಸಿಗಳು ಮತ್ತು ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಸಹ, ಫಲಿತಾಂಶಗಳು ಇನ್ನೂ ಸಂಪೂರ್ಣವಾಗಿಲ್ಲ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿಕೆ ಪ್ರಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಂದ ಗ್ರಾಹಕರಿಗೆ ಹಣಕಾಸು ಸೇವೆಗಳ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ಮತ್ತು ಸೇವೆಗಳ ವ್ಯಾಪ್ತಿಯನ್ನು ಹೆಚ್ಚಿಸುವುದರ ಜೊತೆಗೆ , ಉತ್ಪನ್ನಗಳನ್ನು ಸುರಕ್ಷಿತ ರೀತಿಯಲ್ಲಿ ನೀಡುವ ಸೇವೆಯನ್ನು ನೀಡಬೇಕೆಂದು ಹೇಳಿದ್ದಾರೆ.

English summary

100 Plus Crore Lost In Card Payment And Internet Banking In Just 3 Months

In frauds related to debit cards, credit cards, and internet banking, Rs 129 crore has been lost in just three months to December 2019
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X