For Quick Alerts
ALLOW NOTIFICATIONS  
For Daily Alerts

5 ದಿನದಲ್ಲಿ ಸೆನ್ಸೆಕ್ಸ್ 3000 ಪಾಯಿಂಟ್ಸ್‌ ಇಳಿಕೆ, 12 ಲಕ್ಷ ಕೋಟಿ ರುಪಾಯಿ ಕಣ್ಮರೆ

|

ಕೊರೊನಾವೈರಸ್ ಭೀತಿಯ ಜಗತ್ತಿನ ಮೂಲೆ ಮೂಲೆಗೆ ಹರಡಿದ್ದು, ಷೇರು ಮಾರುಕಟ್ಟೆಯ ಮೇಲೂ ಭಾರೀ ಪರಿಣಾಮ ಬೀರುತ್ತಿದೆ. ಕೇವಲ ಐದು ದಿನದಲ್ಲಿ ಸೆನ್ಸೆಕ್ಸ್‌ 3000 ಪಾಯಿಂಟ್ಸ್ ಇಳಿಕೆ ಕಂಡಿದ್ದು, ಬರೋಬ್ಬರಿ 12 ಲಕ್ಷ ಕೋಟಿ ರುಪಾಯಿ ಸಂಪತ್ತು ಕರಗಿ ಹೋಗಿದೆ.

 

ಷೇರು ಹೂಡಿಕೆದಾರರಿಗೆ ಶುಕ್ರವಾರ ಅಶುಭ ತಂದಿದೆ. ಸೆನ್ಸೆಕ್ಸ್ಸ ಸತತ ಆರನೇ ದಿನವು ಕುಸಿತ ಕಂಡು ಶುಕ್ರವಾರ 1,448.37 ಅಂಶಗಳ ಭಾರೀ ಇಳಿಕೆ ದಾಖಲಿಸಿತು. ಅನೇಕ ದೇಶದಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾವೈರಸ್‌ ಭೀತಿಯ ನಡುವೆ ಸೆನ್ಸೆಕ್ಸ್ ವಾರದಲ್ಲಿ ಭಾರೀ ಕುಸಿತ ಅನುಭವಿಸಿತು.

 
5 ದಿನದಲ್ಲಿ 12 ಲಕ್ಷ ಕೋಟಿ ರುಪಾಯಿ ಕಣ್ಮರೆ

ಸೆನ್ಸೆಕ್ಸ್‌ 1,448.37 ಅಂಶಗಳ ಇಳಿಕೆಯೊಂದಿಗೆ 38,297.29 ಅಂಶಗಳನ್ನು ತಲುಪಿದೆ. ರಾಷ್ಟ್ರೀಯ ಷೇರು ಪೇಟೆ ನಿಫ್ಟಿ 431.55 ಅಂಶಗಳ ಕುಸಿತದ ಮೂಲಕ 11,201.75 ಅಂಶಗಳನ್ನು ಮುಟ್ಟಿದೆ. ಈ ಮೂಲಕ ಒಂದು ವಾರದಲ್ಲಿ ನಿಫ್ಟಿ 7.3 ಪರ್ಸೆಂಟ್ ಹಾಗೂ ಸೆನ್ಸೆಕ್ಸ್‌ 6.8 ಪರ್ಸೆಂಟ್ ಕುಸಿತಗೊಂಡು 2900 ಅಂಶಗಳು ತಗ್ಗಿವೆ.

ಈ ಮಟ್ಟಿನ ಕುಸಿತವು 2008-09ರ ಆರ್ಥಿಕ ಹಿಂಜರಿತದ ಬಳಿಕ ಷೇರುಪೇಟೆ ಕಂಡಂತಹ ಭಾರೀ ಕುಸಿತವಾಗಿದೆ. ಅಲ್ಲದೆ ಐದು ದಿನಗಳಲ್ಲಿ ಹೂಡಿಕೆದಾರರ 12 ಲಕ್ಷ ಕೋಟಿ ರುಪಾಯಿ ಸಂಪತ್ತು ನಾಶವಾಗಿದೆ.

English summary

12 Lakh Crore Wealth Vanishes In Just 5 Days

Sensex suffered its worst weekly decline since the 2008-09 financial crisis. 12 Lakh Crore Wealth Vanishes In Just 5 Days
Story first published: Friday, February 28, 2020, 21:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X