For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಕೂಡಾ ನಿಮ್ಗೆ ದಂಡ ಕೊಡುತ್ತದೆ !

By Mahesh
|

ಬ್ಯಾಂಕ್ ಕೂಡಾ ನಿಮ್ಗೆ ದಂಡ ಕೊಡುತ್ತದೆ !
ಬ್ಯಾಂಕ್ ನಿಂದ ಗ್ರಾಹಕರು ದಂಡ ಹಾಕಿಸಿಕೊಂಡು ಹಣ ಕಟ್ಟುವುದು ಮಾಮೂಲಿ. ಅದರೆ, ಬ್ಯಾಂಕಿಗೆ ದಂಡ ವಿಧಿಸಿ, ಗ್ರಾಹಕರಿಗೆ ದಿನವೊಂದಕ್ಕೆ 100 ರು ದಂಡ ನೀಡುವಂತಿದ್ದರೆ. ಇದು ಸಾಧ್ಯವೇ? ಹೌದು, ಆರ್ ಬಿಐ ನಿಯಮದ ಪ್ರಕಾರ ಇದು ಸಾಧ್ಯವಿದೆ.

ನಿಮ್ಮ ಬ್ಯಾಂಕ್ ಖಾತೆ ಹಣವಿಲ್ಲದೆ ಖಾಲಿ ಬ್ಯಾಲೆನ್ಸ್ ಆಗಿದ್ದಾಗ (minimum balance ನಿರ್ವಹಣೆ ಸಾಧ್ಯವಾಗದ ಸಂದರ್ಭ) ಅಥವಾ ಚೆಕ್ ಕಳೆದು ಹೋದಾಗ, ಕ್ರೆಡಿಟ್ ಕಾರ್ಡ್ ಪೇಮೆಂಟ್ ವಿಳಂಬವಾದಾಗ ಮುಂತಾದ ಸಂದರ್ಭಗಳಲ್ಲಿ ಖಾತೆದಾರರಿಗೆ ಬ್ಯಾಂಕ್ ದಂಡ ವಿಧಿಸುವುದು ಮಾಮೂಲಿ.ಆದರೆ ಬ್ಯಾಂಕ್ ಗಳು ಕೂಡ ಕೆಲವು ಸಂದರ್ಭದಲ್ಲಿ ಖಾತೆದಾರರಿಗೆ ದಂಡ ಕೊಡಬೇಕಾಗುತ್ತದೆ ಎನ್ನುವುದು ಗ್ರಾಹಕರಿಗೆ ಇದುವರೆಗೂ ತಿಳಿದಿಲ್ಲ.

ಎಟಿಎಂ ಅಥವಾ ಡೆಬಿಟ್ ಕಾರ್ಡ್ ನಿಂದ ನಾವು ಎಟಿಎಂನಲ್ಲಿ ಹಣವನ್ನು ತೆಗೆದಾಗ ಕೆಲವೊಮ್ಮೆ ಎಟಿಎಂ ಯಂತ್ರದ ದೋಷದಿಂದಾಗಿ ಹಣ ಬರದಿದ್ದರೂ ಖಾತೆಯಿಂದ ಹಣ ಕಡಿತಗೊಂಡಿರುವ ರಸೀತಿ ಬರುತ್ತದೆ. ಮತ್ತೆ ಕೆಲವು ಸಲ ಪ್ರೋಸೆಸ್ ರಿಜೆಕ್ಟೆಡ್ ಎಂಬ ಸಂದೇಶ ಬರುತ್ತದೆ. ಆದರೆ ಖಾತೆಯಲ್ಲಿ ನಾವು ನಮೂದಿಸಿದಷ್ಟು ಹಣ ಕಡಿತಗೊಂಡಿರುತ್ತದೆ.

ಈ ಬಗ್ಗೆ ಕೆಲವು ಗ್ರಾಹಕರು ಬ್ಯಾಂಕಿಗೆ ದೂರು ಸಲ್ಲಿಸಿ ಸುಮ್ಮನಾಗುತ್ತಾರೆ. ಆದರೆ, ಉಳಿದಂತೆ ಯಾರು ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ.

ಗ್ರಾಹಕರು ಏನು ಮಾಡಬೇಕು?: ಸಮಯದಲ್ಲಿ ಗ್ರಾಹಕರು ಖಾತೆಯಿರುವ ಸಮೀಪದ ಬ್ಯಾಂಕ್ ಖಾತೆಗೆ ಹೋಗಬೇಕು ಅಥವಾ ಎಟಿಎಂ ಅಥವಾ ಡೆಬಿಡ್ ಕಾರ್ಡ್ ನ ಹಿಂಬದಿಯಲ್ಲಿರುವ ಸಹಾಯವಾಣಿಗೆ ಕರೆ ಮಾಡಬೇಕು. ದೂರವಾಣಿ ಅಥವಾ ಲಿಖಿತ ದೂರು ನೀಡಿದ ದೂರು ಸಂಖ್ಯೆಯನ್ನು ಪಡೆದುಕೊಳ್ಳಬೇಕು.

ಗ್ರಾಹಕ ದೂರು ನೀಡಿದ ಏಳು ದಿನದ ಒಳಗಡೆ ಗ್ರಾಹಕನ ಖಾತೆ ಬ್ಯಾಂಕ್ ಹಣವನ್ನು ಜಮಾ ಮಾಡಬೇಕು. ಇಲ್ಲವಾದಲ್ಲಿ 8ನೇ ದಿನದಿಂದ ಆರಂಭಿಸಿ(ರಜಾದಿನವೂ ಸೇರಿದಂತೆ) ಪ್ರತೀ ದಿನಕ್ಕೆ ನೂರರಂತೆ ಹಣ ಜಮಾ ಆಗುವ ತನಕ ದಂಡ ತೆರಬೇಕಾಗುತ್ತದೆ. ಇದಕ್ಕಾಗಿ ಗ್ರಾಹಕರು 30 ದಿನಗಳ ಒಳಗಡೆ ದೂರು ನೀಡುವುದು ಮುಖ್ಯ ಎಂದು ಆರ್ ಬಿಐ ಹೇಳಿದೆ.

English summary

FYI: Banks pay you Rs 100 per day as fine | ನಿಮ್ಗೆ ಬ್ಯಾಂಕಿನಿಂದ ದಿನಕ್ಕೆ 100 ರು ಸಿಗುತ್ತೆ!

Banks pay you Rs 100 per day as fine under the circumstances when the ATM machine fails to spit out the cash, but you get a receipt stating that the amount has been withdrawn. Provide your PIN number. And after a few seconds you get the cash and corresponding cash withdrawal receipt.
Story first published: Tuesday, November 20, 2012, 13:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X