For Quick Alerts
ALLOW NOTIFICATIONS  
For Daily Alerts

ಪಿಎಫ್ ಖಾತೆಗೆ ಶೇ. 8.8ರಷ್ಟು ಬಡ್ಡಿ!

ಚಾಲ್ತಿಯಲ್ಲಿ ಇಲ್ಲದಿರುವ ಕಾರ್ಮಿಕರ ಭವಿಷ್ಯ ನಿಧಿಯಲ್ಲಿನ ಖಾತೆಗಳಿಗೆ ಶೇ. 8.8ರಷ್ಟು ಬಡ್ಡಿದರ ನೀಡುವಂತೆ ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) ಶೀಘ್ರವೇ ಅಧಿಸೂಚನೆ ಕಳುಹಿಸಲಾಗುವುದೆಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ

By Siddu
|

ಚಾಲ್ತಿಯಲ್ಲಿ ಇಲ್ಲದಿರುವ ಕಾರ್ಮಿಕರ ಭವಿಷ್ಯ ನಿಧಿಯಲ್ಲಿನ ಖಾತೆಗಳಿಗೆ ಶೇ. 8.8ರಷ್ಟು ಬಡ್ಡಿದರ ನೀಡುವಂತೆ ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) ಶೀಘ್ರವೇ ಅಧಿಸೂಚನೆ ಕಳುಹಿಸಲಾಗುವುದೆಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ.

ದೀಪಾವಳಿಯ ವಿಶೇಷ ಕೊಡುಗೆಯಾಗಿದ್ದು, ವಾರದ ಒಳಗಾಗಿಯೇ ಅಧಿಸೂಚನೆ ಹೊರಡಿಸಲು ತಿರ್ಮಾನಿಸಲಾಗಿದೆ ಎಂದರು. ಪಿಎಫ್ UAN ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆ?

ಚಾಲ್ತಿಯಲ್ಲಿಲ್ಲದ ಖಾತೆ ಎಂದರೇನು?

ಚಾಲ್ತಿಯಲ್ಲಿಲ್ಲದ ಖಾತೆ ಎಂದರೇನು?

ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?

ಪ್ರಧಾನಿ ಮೋದಿ ಮತ್ತು ಜೇಟ್ಲಿ ಸೂಚನೆ

ಪ್ರಧಾನಿ ಮೋದಿ ಮತ್ತು ಜೇಟ್ಲಿ ಸೂಚನೆ

ಭವಿಷ್ಯ ನಿಧಿಯ ಚಾಲ್ತಿಯಲ್ಲಿ ಇಲ್ಲದ ಖಾತೆಗಳಿಗೆ ಕಳೆದ 2011ರಿಂದ ಬಡ್ಡಿ ನೀಡಲಾಗಿಲ್ಲ. ಆದರೆ ಬಡ್ಡಿ ನೀಡದೆ ಇರುವ ಖಾತೆಗಳನ್ನು ಚಾಲನೆಗೊಳಿಸುವ ಉದ್ದೇಶದಿಂದ ಬಡ್ಡಿದರ ನೀಡುವಂತೆ ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವ ಅರುಣ್‌ ಜೇಟ್ಲಿ ಸೂಚನೆ ನೀಡಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಂಡಾರು ದತ್ತಾತ್ರೇಯ ಹೇಳಿದರು.

ಶೀಘ್ರ ಪ್ರಕಟಣೆ

ಶೀಘ್ರ ಪ್ರಕಟಣೆ

ಶೇ. 8.8ರಷ್ಟು ಬಡ್ಡಿದರ ನೀಡುವಂತೆ ಶೀಘ್ರವೇ ಪ್ರಕಟಣೆ ಹೊರ ಬರಲಿದ್ದು, ‘ಚಾಲನೆಯಲ್ಲಿ ಇರದ ಪಿಎಫ್ ಖಾತೆಗಳಿಗೆ ಬಡ್ಡಿದರ ನೀಡಲು ಅನುಮತಿ ನೀಡಿ ನಾನು ಸಹಿ ಮಾಡಿದ್ದೇನೆ ಬಂಡಾರು ದತ್ತಾತ್ರೇಯ ಹೇಳಿದರು.

9.70 ಕೋಟಿ ಕಾರ್ಮಿಕರಿಗೆ ಪ್ರಯೋಜನ

9.70 ಕೋಟಿ ಕಾರ್ಮಿಕರಿಗೆ ಪ್ರಯೋಜನ

‘ಚಾಲನೆಯಲ್ಲಿಲ್ಲದ ಪಿಎಫ್ ಖಾತೆಗಳಿಗೆ ಶೇ. 8.8ರಷ್ಟು ಬಡ್ಡಿದರ ನೀಡುವುದರಿಂದ 9.70 ಕೋಟಿ ನೌಕರರಿಗೆ ಪ್ರಯೋಜನವಾಗಲಿದೆ. ಚಾಲನೆಯಲ್ಲಿ ಇಲ್ಲದ ಖಾತೆಗಳನ್ನು ಸಕ್ರಿಯಗೊಳಿಸಿ ಬಡ್ಡಿದರವನ್ನು ನೀಡುವುದರಿಂದ ಕಾರ್ಮಿಕರು ಆ ಮೊತ್ತವನ್ನು ಖಾತೆಯಿಂದ ಪಡೆಯುವುದಿಲ್ಲ. ಇದು ಒಂದು ರೀತಿಯಲ್ಲಿ ಸುರಕ್ಷಿತವಾದ ಹೂಡಿಕೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

English summary

EPFO to pay 8.8% interest to "inoperative" accounts

The government is all set to issue a notification authorising retirement fund body EPFO to pay 8.8 per cent interest to "inoperative" accounts, Union Labour Minister Bandaru Dattatreya said today.
Story first published: Wednesday, November 2, 2016, 13:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X