Englishहिन्दी മലയാളം தமிழ் తెలుగు

2025ರ ವೇಳೆಗೆ ಇವು ಪ್ರಪಂಚದ ಅತ್ಯಂತ ಶ್ರೀಮಂತ 15 ನಗರಗಳು ಎನಿಸಲಿವೆ!

Written By: Siddu
Subscribe to GoodReturns Kannada

ಮೆಗಾಸಿಟಿಗಳೆಂದು ಕರೆಯಲ್ಪಡುವ ಹೆಚ್ಚು ಹೆಚ್ಚು ನಗರಗಳು ಇಂದು ಹೊರಹೊಮ್ಮುತ್ತಿವೆ. ಈ ನಗರಗಳು ಇಂದು ಹೆಚ್ಚಿನ ಜನಸಂಖ್ಯೆ ಮತ್ತು ಸಂಪತ್ತಿನ ಕೇಂದ್ರಗಳಾಗಿ ಬದಲಾಗುತ್ತಿವೆ. ಮೆಕಿನ್ಸೆ (McKinsey) ಮತ್ತು ಕಂಪನಿಯ ಅಂಕಿ ಅಂಶಗಳ ಮಾಹಿತಿಯ ಪ್ರಕಾರ ಭವಿಷ್ಯದಲ್ಲಿ ವಿಶ್ವವನ್ನು ಆಳುವ ನಗರಗಳ ಪಟ್ಟಿಯನ್ನು ನಾವು ಈ ಕೆಳಗೆ ಬಹಿರಂಗಪಡಿಸುತ್ತಿದ್ದೇವೆ. ಅವುಗಳು ವಿವರ ಇಲ್ಲಿದೆ ನೋಡಿ..

1. ಲಂಡನ್

ಇಂಗ್ಲೆಂಡಿನ ರಾಜಧಾನಿಯಾದ ಲಂಡನ್‌ನಲ್ಲಿ ಭೂಮಿಯ ಬೆಲೆಗಳು (property prices) ಅಪಾಯಕಾರಿ ದರದಲ್ಲಿ ಏರಿಕೆಯಾಗುತ್ತಿದೆ. ಇದರ ಒಂದು ಭಾಗವಾಗಿ ವಿದೇಶಿ ಖರೀದಿದಾರರಿಗೆ ಧನ್ಯವಾಧಗಳನ್ನು ಹೇಳಲೇಬೇಕು. ಇದರ ಪರಿಣಾಮ ಲಂಡನ್ನಿನ ಹತ್ತಿರದ ಉಪನಗರಗಳಾದ ವಾಲ್ತಂ ಫಾರೆಸ್ಟ್, ಲೆವಿಶಮ್ ಮತ್ತು ಹಾವರಿಂಗ್ ಕಡೆಗೆ ಸಂಚರಿಸುವುದರಲ್ಲಿ ಯಾವುದೇ ಅಚ್ಚರಿ ಇಲ್ಲ. ಮೆಕಿನ್ಸೆ ಮತ್ತು ಕಂಪನಿಯ ಸಂಶೋಧನೆ ಪ್ರಕಾರ ಲಂಡನ್ನಿನ ಜನಸಂಖ್ಯೆಯು 2025ರ ವೇಳೆಗೆ 14.8 ರಿಂದ 16 ಮಿಲಿಯನ್‌ಗೆ ಏರಿಕೆಯಾಗಲಿದೆ. ಬ್ರಿಟನ್ ನ ಒಟ್ಟು ಅರ್ದದಷ್ಟು ಪಾಲನ್ನು ಪರಿಗಣಿಸುವ ಒಟ್ಟು ಜಿಡಿಪಿ 752 ಶತಕೋಟಿ ಡಾಲರ್‌ನಿಂದ 973 ಶತಕೋಟಿ ಡಾಲರ್‌ಗೆ ಹೆಚ್ಚಾಗಲಿದೆ. ವಿಶ್ವದ ಅತೀ ಶ್ರೀಮಂತ 15 ರಾಷ್ಟ್ರಗಳು ಯಾವುವು ಗೊತ್ತೆ?

2. ಪ್ಯಾರಿಸ್

"ದಿ ಸಿಟಿ ಅಫ್ ಲವ್" ಎಂದು ಹೆಸರಾಗಿರುವ ಪ್ಯಾರಿಸ್ ನಗರದ ಜನಸಂಖ್ಯೆಯೂ 2025ರ ವೇಳೆಗೆ 11.8 ಮಿಲಿಯನ್ ನಿಂದ 12.8 ಮಿಲಿಯನ್‌ಗೆ ಹೆಚ್ಚಾಗಲಿದೆ. ಒಟ್ಟು ಜಿಡಿಪಿಯು 954 ರಿಂದ 971 ಬಿಲಿಯನ್ ಡಾಲರ್ ಗೆ ಏರಿಕೆಯಾಗುತ್ತದೆ. ಇದಕ್ಕೆ ಕಾರಣ ಇತ್ತೀಚಿನ ಭದ್ರತೆಯ ಸಮಸ್ಯೆಗಳ ಹೊರತಾಗಿಯೂ ಅಂತರಾಷ್ಟ್ರೀಯ ಹೂಡಿಕೆದಾರರು ಪ್ಯಾರಿಸ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಆಸ್ತಿಯನ್ನು ಖರೀದಿಸುತ್ತಿದ್ದಾರೆ. ಈ ಬೇಡಿಕೆಯು ಪ್ಯಾರಿಸ್ಸಿನ ಹತ್ತಿರದ ಉಪನಗರಗಳಿಗೂ ಹರಡುತ್ತಿದೆ.

3. ರಾಂಸ್ಟಾಡ್ (ನೆದರ್ಲ್ಯಾಂಡ್)

ನೆದರ್ಲ್ಯಾಂಡ್‌ನ ಅಮ್ಸ್ಟರ್ ಡ್ಯಾಮ್, ರೋಟರ್ಡಮ್, ಡೆನ್ ಹಾಗ್ ಮತ್ತು ಉಟ್ರೆಕ್ಟ್ ಎಂಬ ನಾಲ್ಕು ದೊಡ್ಡ ನಗರಗಳನ್ನು ರಾಂಸ್ಟಾಡ್ ತನ್ನೊಳಗೆ ಹೊಂದಿದೆ. ಇಲ್ಲಿನ ಜನಸಂಖ್ಯೆಯು 2025ರ ವೇಳೆಗೆ 7 ರಿಂದ 7.2 ಮಿಲಿಯನ್ ಗೆ ಏರಿಕೆಯಾಗಲಿದೆ. ಜಿಡಿಪಿಯು 364 ಬಿಲಿಯನ್ 462 ಬಿಲಿಯನ್ ಗೆ ಏರಿಕೆಯಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ರೋಟರ್ಡ್ಯಾಮ್ ಅಮ್ಸ್ಟಾರ್ಡ್ಯಾಂನಿಂದ ಒಂದು ಗಂಟೆಯ ಪ್ರಯಾಣವಾಗಿದೆ. ಈ ಬಂದರು ನಗರವೂ ಅಂತರರಾಷ್ಟ್ರೀಯ ವ್ಯವಹಾರ ಕೇಂದ್ರವಾಗುತ್ತಿದೆ. ಅನೇಕ ಕಂಪನಿಗಳು ಇಲ್ಲಿ ತಮ್ಮ ಯುರೋಪಿಯನ್ ಕಛೇರಿಗಳನ್ನು ಸ್ಥಾಪಿಸುತ್ತಿವೆ.

4. ರೈನ್ ರುಹ್ರ್ - ಜರ್ಮನಿ

ಈ ಪಟ್ಟಿಯಲ್ಲಿರುವ ಇತರ ಮೆಗಾಸಿಟಿಗಳಂತೆಯೇ ಕೋಲ್ನ್, ಡಸೆಲ್ಡಾರ್ಫ಼್, ಡಾರ್ಟ್ಮಂಡ್, ಎಸ್ಸೆನ್, ಡುಯಿಸ್ಬರ್ಗ್, ಬೊಚಮ್ ವುಪುರ್ಟಾಲ್ ಗಳನ್ನು ಒಳಗೊಂಡಿರುವ ರೈನ್ ರುಹ್ರ್ ಜನಸಂಖ್ಯೆಯು ವಾಸ್ತವವಾಗಿ 11.2 ಮಿಲಿಯನ್ ನಿಂದ 11.1 ಮಿಲಿಯನ್‌ಗೆ ಇಳಿಯುವ ಸಾದ್ಯತೆಯಿದೆ. ಇದರ ಹೊರತಾಗಿಯೂ ಜಿಡಿಪಿ 485 ಬಿಲಿಯನ್ ನಿಂದ 625 ಬಿಲಿಯನ್ ಗೆ ಜಿಗಿಯುತ್ತದೆ. ರೈನ್ ರುಹ್ರ್ ಈಗಾಗಲೇ ಜರ್ಮನಿಯ ಅತ್ಯಂತ ಪ್ರಭಾವಶಾಲಿ ಜನರ ಮನೆಗಳನ್ನು ಹೊಂದಿದ್ದು, ಅದರೊಂದಿಗೆ 12 ಫಾರ್ಚುನ್ 500 ಕಂಪನಿಯನ್ನೊಳಗೊಂಡಂತೆ ಹಣಕಾಸು ಸೌಲಭ್ಯ ಹೊಂದಿರುವ ದೇಶದ ಅತ್ಯಂತ ಯಶಸ್ವಿ ನಗರ ಪ್ರದೇಶಗಳಲ್ಲಿ ಒಂದಾಗಿದೆ.

5. ಗ್ರೇಟರ್ ಇಸ್ತಾನ್‌ಬುಲ್, ಟರ್ಕಿ

ಇಸ್ತಾನ್ಬುಲ್ ಜನಸಂಖ್ಯೆಯು ಮುಂಬರುವ ವರ್ಷಗಳಲ್ಲಿ 10.9 ರಿಂದ 14.8 ಮಿಲಿಯನ್ ಗೆ ಏರಿಕೆಯಾಗಲಿದೆ. 2025ರ ವೇಳೆಗೆ ಇದರ ಜಿಡಿಪಿ ಆದಾಯವು 188 ಬಿಲಿಯನ್ ಡಾಲರ್ ನಿಂದ 480 ಬಿಲಿಯನ್ ಡಾಲರ್ ಗೆ ಏರಿಕೆಯಾಗುವ ಸಾಧ್ಯತೆ ಇದೆ. ಮಧ್ಯಮ ಆದಾಯದ ಕುಟುಂಬಗಳು ಮತ್ತು ಪ್ರಾರಂಭಿಕ ಉದ್ಯಮಶೀಲರಾಗಿ ಬೆಳೆಯುತ್ತಿರುವವರ ಉಪಸ್ಥಿತಿಯಿಂದ ಜಿಡಿಪಿಯು ಹೆಚ್ಚಳದ ಮುನ್ಸೂಚನೆಯನ್ನು ನೀಡುತ್ತಿದೆ.

6. ಮಾಸ್ಕೋ

ಹಿಂದಿನ ವರ್ಷಗಳ ವರದಿಯು ವ್ಯಾಪಾರ ಮತ್ತು ಕಛೇರಿ ಹುದ್ದೆಯಿಂದ ಶೇ. 26 ರಷ್ಟು ಕುಸಿದಿದೆ ಎಂದು ಸೂಚಿಸಿದೆ. ಮೆಕಿನ್ಸೆ ಮತ್ತು ಕಂಪನಿಯು ಮಾಸ್ಕೋದ ಜನಸಂಖ್ಯೆಯು 2025ರ ಹೊತ್ತಿಗೆ 11.5 ಮಿಲಿಯನ್ ನಿಂದ 12.6 ಮಿಲಿಯನ್ ಗೆ ಬೆಳೆಯಬಹುದೆಂದು ನಿರೀಕ್ಷಿಸಲಾಗಿದೆ. 2025ರ ವೇಳೆಗೆ ಜಿಡಿಪಿಯು 326 ಬಿಲಿಯನ್ ಡಾಲರ್ ನಿಂದ 689 ಬಿಲಿಯನ್ ಡಾಲರ್ ಅಂದರೆ ಎರಡುಪಟ್ಟಿಗಿಂತ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.

7. ಚಾಂಗ್ ಕ್ಯೂಯಿಂಗ್ ಮತ್ತು ಚೆಂಗ್ಡು, ಚೀನಾ

ಚಾಂಗ್ ಕ್ಯೂಯಿಂಗ್ ನ ಜನಸಂಖ್ಯೆಯು 2025ರ ವೇಳೆಗೆ 15.6 ಮಿಲಿಯನ್ ನಿಂದ 19.3 ಮಿಲಿಯನ್ ಗೆ ಏರಿಕೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಒಟ್ಟು ಜಿಡಿಪಿ ದೊಡ್ಡ ಬದಲಾವಣೆಯನ್ನು ಹೊಂದಲಿದೆ. ಅದು 89 ಬಿಲಿಯನ್ ಡಾಲರ್‌ನಿಂದ 459 ಬಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ. ಕಾರಣ ಮೆಗಾಸಿಟಿ ಮತ್ತು ಯುರೋಪಿಯನ್ ರಪ್ತು ದೇಶಗಳ ನಡುವಿನ ವೇಗದ ರೈಲುಗಳು ಸ್ಥಳಿಯ ಆರ್ಥಿಕತೆಯನ್ನು ಗಾಬರಿಗೊಳಿಸುವ ಪ್ರಮಾಣದಲ್ಲಿ ಬಲಪಡಿಸುತ್ತಿದೆ.

8. ಶಾಂಘೈ

2025ರ ವೇಳೆಗೆ ಶಾಂಘೈನ ಜನಸಂಖ್ಯೆಯು 22.3 ಮಿಲಿಯನ್ ನಿಂದ 30.9 ಮಿಲಿಯನ್ ಗೆ ಏರಿಕೆಯಾಗಲಿದೆ. ಶಾಂಘೈ ಒಟ್ಟು ಜಿಡಿಪಿಯು ಎಲ್ಲಾ ಮೆಗಾಸಿಟಿಗಳ ಹೋಲಿಸಿದರೆ ಇದು 251 ಬಿಲಿಯನ್ ಡಾಲರ್‌ನಿಂದ 1.1 ಟ್ರಿಲಿಯನ್‌ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಮೆಕಿನ್ಸೆ ವರದಿ ಬಹಿರಂಗಗೊಳಿಸಿರುವಂತೆ ಅಭಿವೃದ್ಧಿಯ ಪ್ರಮುಖ ಅಂಶಗಳೆಂದರೆ ಬಲವಾದ ವಿದೇಶಿ ಹೂಡಿಕೆ ಮತ್ತು ಮುಖ್ಯವಾಗಿ ಕಾಲೇಜು ವಿದ್ಯಾವಂತ ಜನರನ್ನು ಹೊಂದಿರುವ ಕಾರ್ಮಿಕ ಶಕ್ತಿ, ಸುತ್ತಮುತ್ತಲಿನ ನಗರಗಳು. ನ್ಯಾನ್ಜಿಂಗ್ ಮತ್ತು ಹ್ಯಾಂಗ್ ಝೂ ಸಹ ಶಾಂಘೈನ ಉತ್ಕರ್ಷದಿಂದ ಪ್ರಯೋಜನ ಪಡೆದುಕೊಳ್ಳಲಿವೆ.

9. ಬೋಹೈ ಎಕಾನಾಮಿ ರಿಮ್, ಚೀನಾ

ಬೋಹೈ ಬೀಜಿಂಗ್ ಮತ್ತು ಟಿಯಾಂಜಿನ್ ಸುತ್ತಲಿನ ಆರ್ಥಿಕ ಪ್ರದೇಶವಾಗಿದೆ. ಬೀಜಿಂಗ್ ಜನಸಂಖ್ಯೆಯು 18.8 ಮಿಲಿಯನ್ ನಿಂದ 29.6 ಮಿಲಿಯನ್‌ಗೆ ಏರಿಕೆಯಾಗುತ್ತದೆ ಎಂದು ವರದಿ ತಿಳಿಸಿದೆ. ಅದರ GDP 206 ಬಿಲಿಯನ್ ಡಾಲರ್ ನಿಂದ 1 ಟ್ರಿಲಿಯನ್‌ಗೆ ಹೆಚ್ಚಾಗುತ್ತದೆ. ನೆರೆಯ ಟಿಯಾಂಜಿನ್ ಜನಸಂಖ್ಯೆಯು 11 ಮಿಲಿಯನ್ ನಿಂದ 15.1 ಮಿಲಿಯನ್ ಮತ್ತು ಅದರ ಜಿಡಿಪಿ 129 ಬಿಲಿಯನ್ ಡಾಲರ್ ನಿಂದ 624 ಬಿಲಿಯನ್ ಡಾಲರ್‌ಗೆ ಹೋಗಲಿದೆ ಎಂದು ನಿರೀಕ್ಷಿಸಲಾಗಿದೆ. ಸಮೀಪದ ನಗರಗಳಾದ ಡೇಲಿಯನ್, ಟ್ಯಾಂಗ್ಶಾನ್ ಮತ್ತು ಕಿಂಗ್ಡಾವೊವನ್ನು ಭವಿಷ್ಯದ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.

10. ಪಿಯರ್ ರಿವರ್ ಡೆಲ್ಟಾ, ಚೀನಾ

ಈ ಮೆಗಾಸಿಟಿಯು ಶೆನ್‌ಝೆನ್ ನಗರವನ್ನು ಸೇರಿದಂತೆ ಚೀನಾದ ಹೆಚ್ಚಿನ ಉತ್ಪದನಾ ಹೃದಯ ಭಾಗವನ್ನು ಒಳಗೊಂಡಿದೆ. ಇಲ್ಲಿನ ಜನಸಂಖ್ಯೆಯು 11 ಮಿಲಿಯನ್ ನಿಂದ 14.9 ಮಿಲಿಯನ್‍‌ಗೆ ಬೆಳೆಯುತ್ತದೆ. ಜಿಡಿಪಿ 146 ಬಿಲಿಯನ್ ನಿಂದ 573 ಬಿಲಿಯನ್ ಗೆ ಏರಿಕೆಯಾಗಲಿದೆ. ಅಲ್ಲದೆ ಗುವಾಂಗ್ ಝೂನ ಜನಸಂಖ್ಯೆಯು 10.3 ಮಿಲಿಯನ್‌ನಿಂದ 13.7 ಮಿಲಿಯನ್‌ಗೆ ಹಾಗೂ ಜಿಡಿಪಿಯು 142 ಬಿಲಿಯನ್ ನಿಂದ 524 ಬಿಲಿಯನ್‍‌ಗೆ ಹೋಗುತ್ತದೆ.
ಫೋಶನ್ ಮತ್ತು ಡೊಂಗ್ಗುವಾನ್‍ನ ಶೀಘ್ರ ಬೆಳವಣಿಗೆಯು ವ್ಯವಸಾಯದಿಂದ ಉತ್ಪಾದನೆ ಮತ್ತು ಸೇವೆಗಳಿಗೆ ಬದಲಾಗುವ ಕಾರಣದಿಂದಾಗಿ ಹೆಚ್ಚಿನ ವ್ಯವಹಾರಗಳು ಮತ್ತು ಜನರು ಈ ಪ್ರದೇಶಕ್ಕೆ ಸೇರುತ್ತಾರೆ.

11. ತೈಯಿಯೋ ಬೆಲ್ಟ್, ಜಪಾನ್

ಟೊಕಿಯೊ, ನಗೋಯಾ ಮತ್ತು ಒಸಾಕಾ ಈ ಮೂರು ನಗರಗಳನ್ನು ಸೇರಿಸಿ ತೈಯಿಯೊ ಬೆಲ್ಟ್ ಎಂದು ರೂಪಿಸಲಾಗಿದ್ದು, ಇದನ್ನು ಅತ್ಯಂತ ಪ್ರಕಾಶಮಾನವಾದ ಭವಿಷ್ಯಕ್ಕಾಗಿ ಹೊಂದಿಸಲಾಗಿದೆ. ಆಶ್ಚರ್ಯಕರವಾಗಿ, ಇದರ ಜಿಡಿಪಿ ಕ್ಷಿಪ್ರ ಬೆಳವಣಿಗೆ (ಟೊಕಿಯೊ 1.8 ಟ್ರಿಲಿಯನ್‍ ಡಾಲರ್‌ನಿಂದ 2.2 ಟ್ರಿಲಿಯನ್ ಡಾಲರ್, ನ್ಯಾಗೊಯಾ 444 ಬಿಲಿಯನ್ ಡಾಲರ್‌ನಿಂದ 524 ಬಿಲಿಯನ್ ಡಾಲರ್ ಮತ್ತು ಒಸಾಕಾ 818 ಬಿಲಿಯನ್ ಡಾಲರ್ ನಿಂದ 914 ಬಿಲಿಯನ್ ಡಾಲರ್) ಇದ್ದರೂ, ಅದರ ಜನಸಂಖ್ಯೆಯು 2010-2025 ರಿಂದಲೂ ಒಸಾಕಾ ಹೊರತುಪಡಿಸಿ, ಉಳಿದ ಭಾಗದಲ್ಲಿ ಜನಸಂಖ್ಯೆಯು ಸ್ವಲ್ಪ ಕುಸಿಯುತ್ತದೆ.

12. ಸಿಂಗಾಪುರ್

ಈ ಮೆಗಾಸಿಟಿಯ ಜನಸಂಖ್ಯೆಯು ಮುಂದಿನ ಕೆಲವು ವರ್ಷಗಳಲ್ಲಿ (2025 ರ ಹೊತ್ತಿಗೆ 5 ಮಿಲಿಯನ್ ರಿಂದ 5.8 ಮಿಲಿಯನ್) ಹೆಚ್ಚು ಬೆಳೆಯುವ ನಿರೀಕ್ಷೆ ಇಲ್ಲವಾದರೂ, ಅದರ ಒಟ್ಟು ಜಿಡಿಪಿಯು 223 ಬಿಲಿಯನ್ ಡಾಲರ್ ನಿಂದ 454 ಬಿಲಿಯನ್ ಡಾಲರ್‌ಗೆ ಹೆಚ್ಚಾಗುತ್ತದೆ. ಇತ್ತೀಚಿನ ಆರ್ಥಿಕ ಸಮಸ್ಯೆಗಳ ಹೊರತಾಗಿಯೂ, ಸಿಂಗಪೂರ್‌ನ ಭವಿಷ್ಯದ ಆರ್ಥಿಕತೆಯ ಬಗ್ಗೆ ಹೊಸದಾಗಿ ಸಮಿತಿ ರಚನೆಯಾಗಿದ್ದು, ಈ ಸಮಿತಿಯು ಸಿಂಗಾಪುರದ ಆರ್ಥಿಕ ಅಭಿವೃದ್ಧಿಗಾಗಿ ಐದು ಉಪ-ಸಮಿತಿಗಳನ್ನು ಘೋಷಿಸಿತು.

13. ಸಾವೋ ಪಾಲೋ, ಬ್ರೆಜಿಲ್

ಮೆಕಿನ್ಸೆ ಮತ್ತು ಕಂಪೆನಿಯ ಸಂಶೋಧನೆಯು ಬಹಿರಂಗಪಡಿಸಿರುವ ವರದಿಯ ಪ್ರಕಾರ ದಕ್ಷಿಣ ಅಮೆರಿಕದ ಆರ್ಥಿಕ ಶಕ್ತಿಯೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಈ ಮೆಗಾಸಿಟಿ ವೇಗವಾಗಿ ಬೆಳೆಯುತ್ತಿದೆ. ಇದರ ಜನಸಂಖ್ಯೆಯು 19.6 ಮಿಲಿಯನ್ ನಿಂದ 23.2 ಮಿಲಿಯನ್‌ಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜಿಡಿಪಿಯು 437 ಬಿಲಿಯನ್ ಡಾಲರ್ ನಿಂದ 913 ಬಿಲಿಯನ್ ಡಾಲರ್‌‍ಗೆ ಏರಿಕೆಯಾಗಲಿದೆ. ನಗರವು ಎಲ್ಲಾ ವಲಯಗಳಿಂದಲೂ ಪ್ರಮುಖ ಕಂಪನಿಗಳಿಗೆ ನೆಲೆಯಾಗಿದೆ. ಅನೇಕ ಬೆಳವಣಿಗೆಗಳು ನಡೆಯುತ್ತಿರುವುದರಿಂದ ಭೂಮಿ ಬಳಕೆ ಮತ್ತು ಸಾರಿಗೆ, ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸುವುದಕ್ಕಾಗಿ 2015ರಲ್ಲಿ ಹೊಸ ನಗರ ಮಾಸ್ಟರ್ ಪ್ಲಾನ್ ಬಿಡುಗಡೆಯಾಗಿತ್ತು.

14. ಬೋಸ್ಟನ್- ನ್ಯೂಯರ್ಕ್ - ವಾಷಿಂಗ್ಟನ್ ಕಾರಿಡಾರ್

ಈ ಕ್ಲಸ್ಟರ್ ನಗರಗಳು ಅಮೆರಿಕದ ಶೈಕ್ಷಣಿಕ ಮಿದುಳು, ಹಣಕಾಸು ಕೇಂದ್ರ ಮತ್ತು ರಾಜಕೀಯ ಬಂಡವಾಳವನ್ನು ಹೊಂದಿದೆ. ಮೆಕಿನ್ಸೆ ವರದಿಯ ಪ್ರಕಾರ ಇದು ಪ್ರಬಲವಾದ ವಿಷಯಗಳನ್ನು ಮಾತ್ರ ಉತ್ತಮಗೊಳಿಸುವ ಸಾಧ್ಯತೆಯಿದೆ. ನ್ಯೂಯಾರ್ಕ್ ಜನಸಂಖ್ಯೆಯು 18.9 ಮಿಲಿಯನ್ ನಿಂದ 19.6 ಕ್ಕೆ ಏರಲಿದೆ. ಅದರ ಒಟ್ಟು ಜಿಡಿಪಿ 1.1 ಟ್ರಿಲಿಯನ್ ಡಾಲರ್ ನಿಂದ 1.5 ಟ್ರಿಲಿಯನ್ ಡಾಲರ್‍ ಗೆ ಏರಲಿದೆ. ವಾಷಿಂಗ್ಟನ್ 5.6 ಮಿಲಿಯನ್ ನಿಂದ 6.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಲು ಯಶಸ್ವಿಯಾಗಲಿದೆ. ಇದರ ಜಿಡಿಪಿಯು 392 ಬಿಲಿಯನ್ ನಿಂದ 600 ಬಿಲಿಯನ್‌ಗೆ ಏರಿಕೆಯಾಗುತ್ತದೆ.

15. ಚಿಕಾಗೋ

ಬಲವಾದ ಸಾರಿಗೆ ಸಂಪರ್ಕಗಳು, ಕಡಿಮೆ ವ್ಯಾಪಾರ ಮತ್ತು ಜೀವನ ವೆಚ್ಚಗಳು ಮತ್ತು ವಾಣಿಜ್ಯ ಆಸ್ತಿ ಹೂಡಿಕೆದಾರರಿಗೆ ಹೆಚ್ಚಿನ ಲಾಭ ಸೇರಿದಂತೆ ಅನೇಕ ಅಂಶಗಳನ್ನು ಈ ಮೆಗಾಸಿಟಿಯು ಹೊಂದಿದೆ. ನಗರದ ಜನಸಂಖ್ಯೆಯು 9.4 ಮಿಲಿಯನ್ ನಿಂದ 10.1 ಮಿಲಿಯನ್‌ಗೆ ಏರಿಕೆಯಾಗುತ್ತದೆ ಮತ್ತು ಜಿಡಿಪಿ 496 ಬಿಲಿಯನ್ ಡಾಲರ್‍ ನಿಂದ 661 ಬಿಲಿಯನ್ ಡಾಲರ್‌‍ಗೆ ಏರಿಕೆಯಾಗಲಿದೆ ಎಂದು ವರದಿ ಹೇಳಿದೆ. ಜಿಡಿಪಿಯ ದೊಡ್ಡ ಪ್ರಮಾಣದ ವರ್ಧನೆಯು ವಿದ್ಯಾಭ್ಯಾಸ ಮಾಡುವ ಸಹಸ್ರಾರು ಜನಸಂಖ್ಯೆಯಿಂದ ಹೆಚ್ಚಾಗುತ್ತದೆ. ಇದು ನಿರಂತರವಾಗಿ ಟೆಕ್ ಜಗತ್ತನ್ನು ಅಭಿವೃದ್ಧಿಪಡಿಸುತ್ತದೆ.

Read more about: rich cities, india, world, economy, gdp, finance news, usa
English summary

These 15 cities will be the world's richest in 2025

More and more so-called megacities are emerging across the world, becoming centers of population and wealth in the way that whole countries used to be. Using data from McKinsey & Company we reveal the cities likely to dominate the world in the future.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns