For Quick Alerts
ALLOW NOTIFICATIONS  
For Daily Alerts

ಪತಂಜಲಿ ಹೊಸ ಹೆಜ್ಜೆ! ಅಮೆಜಾನ್, ಫ್ಲಿಪ್ಕಾರ್ಟ್, ಪೇಟಿಎಂ ಜತೆ ಒಪ್ಪಂದ

ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ತನ್ನ ಉತ್ಪನ್ನಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ನಿಶ್ಚಯಿಸಿದೆ. ಪ್ರಸ್ತುತ ಆನ್ಲೈನ್ ಮಾರುಕಟ್ಟೆ ಎಲ್ಲರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

By Siddu
|

ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ತನ್ನ ಉತ್ಪನ್ನಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ನಿಶ್ಚಯಿಸಿದೆ.
ಪ್ರಸ್ತುತ ಆನ್ಲೈನ್ ಮಾರುಕಟ್ಟೆ ಎಲ್ಲರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಪತಂಜಲಿ ಸಂಸ್ಥೆ ಆನ್ಲೈನ್ ವೇದಿಕೆಯನ್ನು ಸಮರ್ಥವಾಗಿ ಬಳಸಲು ಮುಂದಾಗಿದೆ.

ಆನ್ಲೈನ್ ಕಂಪನಿಗಳೊಂದಿಗೆ ಒಪ್ಪಂದ

ಆನ್ಲೈನ್ ಕಂಪನಿಗಳೊಂದಿಗೆ ಒಪ್ಪಂದ

ಪತಂಜಲಿ ಕಂಪನಿ ಅಮೆಜಾನ್, ಫ್ಲಿಪ್ ಕಾರ್ಟ್, ಪೇಟಿಎಂ ಮಾಲ್, 1ಎಂಜಿ, ಬಿಗ್ ಬಾಸ್ಕೆಟ್, ಗ್ರೂಫರ್ಸ್, ಶಾಪ್ ಕ್ಲೂಸ್ ಮತ್ತು ಸ್ನಾಪ್ ಡೀಲ್ ನಂತಹ ದಿಗ್ಗಜ ಸಂಸ್ಥೆಗಳ ಮೂಲಕ ತನ್ನ ಉತ್ಪನ್ನಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ಪತಂಜಲಿಯ ಯಶಸ್ಸಿನ ನಾಗಾಲೋಟಕ್ಕೆ ಕಾರಣಗಳೇನು ಗೊತ್ತೆ?

ಉತ್ಪನ್ನಗಳು ಎಲ್ಲರಿಗೂ ಸಿಗಲಿವೆ

ಉತ್ಪನ್ನಗಳು ಎಲ್ಲರಿಗೂ ಸಿಗಲಿವೆ

ನಾವು ಈಗ ಬೃಹತ್ತಾದ ವೇದಿಕೆಯಲ್ಲಿ ಮುನ್ನಡೆಯುತ್ತಿದ್ದೇವೆ. ಈಗ, ನಮ್ಮ ಎಲ್ಲಾ ಉತ್ಪನ್ನಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ವ್ಯವಸ್ಥಿತವಾದ ಒಪ್ಪಂದವನ್ನು ಹೊಂದಿದ್ದೇವೆ. ಇದರಿಂದ ನಮ್ಮ ಉತ್ಪನ್ನಗಳು ಎಲ್ಲಾ ಗ್ರಾಹಕರನ್ನು ತಲುಪಲಿದೆ ಎಂದು ಸಂಸ್ಥೆ ಹೇಳಿದೆ.

patanjaliayurved.net

patanjaliayurved.net

ಪತಂಜಲಿಯ ಸ್ವಂತ ವೆಬ್ ಪೋರ್ಟಲ್ patanjaliayurved.net ನಲ್ಲಿ ಕಂಪನಿಯು ತನ್ನ ಉತ್ಪನ್ನಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುತ್ತದೆ. ಈ ವೇದಿಕೆಯನ್ನು ಚಿಲ್ಲರೆ ವ್ಯಾಪಾರಿಗಳು ಮತ್ತು ಸಮೂಹಕಾರರು ಹಂಚಿಕೊಳ್ಳಬಹುದು. ಅವರು ಬರುತ್ತಿದ್ದಾರೆ ಮತ್ತು ತಾವು ಬ್ರಾಂಡ್ ಪತಂಜಲಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಕಟಣೆ ಮಾಡುತ್ತಾರೆ" ಎಂದು ಅವರು ಹೇಳಿದರು.

ಶಿಕ್ಷಣ ಮತ್ತು ಆರೋಗ್ಯ ಸೇವೆ

ಶಿಕ್ಷಣ ಮತ್ತು ಆರೋಗ್ಯ ಸೇವೆ

ಹರಿದ್ವಾರ ಮೂಲದ ಪತಂಜಲಿ ಮಕ್ಕಳ ಮತ್ತು ವಯಸ್ಕ ಡೈಪರ್ ಮತ್ತು ಕೈಗೆಟುಕುವ ನೈರ್ಮಲ್ಯ ಕರವಸ್ತ್ರದ (ನ್ಯಾಪ್ ಕಿನ್ಸ್) ವಿಭಾಗಗಳನ್ನು ಪ್ರವೇಶಿಸಿದೆ. ಕಂಪನಿಯು ಕಳೆದ ತಿಂಗಳು ಸೋಲಾರ್ ತಯಾರಿಕೆಯಲ್ಲಿ ತೊಡಗಲಿದೆ ಎಂದು ಘೋಷಿಸಿದೆ. ಎಫ್ಎಂಸಿಜಿ(ವೇಗವಾಗಿ ಚಲಿಸುತ್ತಿರುವ ಗ್ರಾಹಕರ ಸರಕುಗಳು)ವಿಭಾಗದ ಜೊತೆಗೆ, ಪತಂಜಲಿ ಶಿಕ್ಷಣ ಮತ್ತು ಆರೋಗ್ಯ ಸೇವೆಗಳಂತಹ ಇತರೆ ವಲಯಗಳಲ್ಲೂ ಸೇವೆಯಲ್ಲಿ ತೊಡಗಿದೆ.

English summary

Patanjali surprises: ties up with Amazon, Flipkart, Paytm

The Haridwar based company had entered into kids and adult diapers and affordable sanitary napkins segments too.
Story first published: Wednesday, January 10, 2018, 15:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X