For Quick Alerts
ALLOW NOTIFICATIONS  
For Daily Alerts

2050ರಲ್ಲಿ ಪ್ರಪಂಚ ಆಳುವ ದೇಶಗಳು

2050 ರ ವೇಳೆಗೆ ವಿಶ್ವದ ಆರ್ಥಿಕ ಶಕ್ತಿಯಾಗಿ, ಜಗತ್ತನ್ನು ಆಳಬಲ್ಲ ದೇಶವಾಗಿ ಯಾವ ರಾಷ್ಟ್ರಗಳು ಪೈಪೋಟಿ ನಡೆಸಲಿವೆ? ಯಾವ ಯಾವ ದೇಶಗಳ ನಡುವೆ ಆರ್ಥಿಕ ಸಮರ ಏರ್ಪಡಲಿದೆ? ಇತ್ಯಾದಿ ವಿಚಾರಗಳ ಕುರಿತು ಲೆಕ್ಕಾಚಾರಗಳು ನಡೆದಿವೆ.

By Siddu
|

ಜಾಗತಿಕವಾಗಿ ಮುಂದಿನ ಮೂವತ್ತು ವರ್ಷಗಳಲ್ಲಿ ಏನೇನೆಲ್ಲಾ ಆಗಬಹುದು, ಆರ್ಥಿಕವಾಗಿ ಯಾವ ಬದಲಾವಣೆ, ಯಾವ ಕ್ರಾಂತಿಗಳಾಗಬಹುದು, ಹೀಗೆ ಹಲವು ಕ್ಷೇತ್ರಗಳ ವಿವಿಧ ಲೆಕ್ಕಾಚಾರಗಳು, ಸಂಶೋಧನೆಗಳು, ವರದಿಗಳು ನಮ್ಮಲ್ಲಿನ ಕುತೂಹಲಕ್ಕೆ ಕಾರಣವಾಗಿರುತ್ತವೆ.

2050 ರ ವೇಳೆಗೆ ವಿಶ್ವದ ಆರ್ಥಿಕ ಶಕ್ತಿಯಾಗಿ, ಜಗತ್ತನ್ನು ಆಳಬಲ್ಲ ದೇಶಗಳಾಗಿ ಯಾವ ರಾಷ್ಟ್ರಗಳು ಪೈಪೋಟಿ ನಡೆಸಲಿವೆ? ಯಾವ ಯಾವ ದೇಶಗಳ ನಡುವೆ ಆರ್ಥಿಕ ಸಮರ ಏರ್ಪಡಲಿದೆ? ಇತ್ಯಾದಿ ವಿಚಾರಗಳ ಕುರಿತು ಲೆಕ್ಕಾಚಾರಗಳು ನಡೆದಿವೆ.

2050ರಲ್ಲಿ ಜಗತ್ತನ್ನು ಆಳಬಲ್ಲ ದೇಶಗಳು ಯಾವುವು ಎಂಬ ಕುತೂಹಲ ನಿಮಗೂ ಕೂಡ ಇರಬಹುದಲ್ಲವೆ? ಅಂತಹ ಕುತೂಹಲಕಾರಿ ರೋಚಕ ಮಾಹಿತಿ ಇಲ್ಲಿದೆ ಓದಿ..

1. ಚೀನಾ

1. ಚೀನಾ

2050ರಲ್ಲಿ ಜಗತ್ತನ್ನು ಆಳಬಲ್ಲ ಶಕ್ತಿಯಾಗಿ ಚೀನಾ ಮೊದಲ ಸ್ಥಾನದಲ್ಲಿ ನಿಲ್ಲಲಿದೆ. ಚೀನಾ ಪ್ರಕಟಿಸಿರುವ ಆರ್ಥಿಕ ಪೂರ್ವಾನುಮಾನದ ಪ್ರಕಾರ ಅಂದು ಜಗತ್ತಿನ ಅತಿ ದೊಡ್ಡ ಅರ್ಥಿಕತೆ ಹೊಂದಿರುವ ರಾಷ್ಟ್ರವಾಗಿರಲಿದೆ. ಅತಿ ಹೆಚ್ಚು ಜನಸಂಖ್ಯೆ ಹಾಗೂ GDP (ಒಟ್ಟು ದೇಶೀಯ ಉತ್ಪನ್ನ) ದರ ವಾರ್ಷಿಕವಾಗಿ ಈಗ ಕೇವಲ 4.4% ಮಾತ್ರವೇ ಇದ್ದರೂ 2000ನೇ ಇಸವಿಯಿಂದ ಸತತ ಪಡೆಯುತ್ತಿರುವ ಅಭಿವೃದ್ದಿ ಮುಂದಿನ ವರ್ಷಗಳಲ್ಲಿ ನಾಗಾಲೋಟ ಪಡೆಯಲಿದೆ.

2. ಭಾರತ

2. ಭಾರತ

2050ರಲ್ಲಿ ಜಗತ್ತನ್ನು ಆಳಬಲ್ಲ ವಿಶ್ವದ ಹಾಗು ಏಷಿಯಾದ ಎರಡನೇ ದೇಶವೇ ನಮ್ಮ ಭಾರತ. ಅಮೇರಿಕಾ ಈಗಿರುವ ಸ್ಥಾನವನ್ನು ಪಡೆಯಲಿರುವ ಭಾರತ ವಿಶ್ವದ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಮೂರನೆಯ ಸ್ಥಾನದಿಂದ ಎರಡನೆಯ ಸ್ಥಾನಕ್ಕೆ ಜಿಗಿಯಲಿದೆ. ವಾರ್ಷಿಕ 7.7% ಇರುವ GDP ಮುಂದಿನ ವರ್ಷಗಳಲ್ಲಿ ಏರಿಕೆ ಪಡೆಯಲಿದ್ದು ಉಳಿದ 32 ದೇಶಗಳ ಹಣಕಾಸಿಗಿಂತಲೂ ಡಾಲರು ವಿರುದ್ದ ಉತ್ತಮ ವಿನಿಮಯ ದರವನ್ನು ಪಡೆಯಲಿದೆ.  ವಿಶ್ವದ 10 ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಭಾರತ

3. ಅಮೇರಿಕಾ
 

3. ಅಮೇರಿಕಾ

ಜಗತ್ತಿನ ದೊಡ್ಡಣ್ಣನಾಗಿರುವ ಅಮೇರಿಕಾ 2050ರಲ್ಲಿ ವಿಶ್ವದ ಅತಿ ದೊಡ್ಡ ಆರ್ಥಿಕ ಸ್ಥಿತಿಯಲ್ಲಿ ಮೂರನೆಯ ಸ್ಥಾನ ಪಡೆಯಲಿದೆ. ಅಂಕಿ ಅಂಶ ತಜ್ಞರ ಪ್ರಕಾರ ಅತಿ ನಿಧಾನವಾಗಿ ಏರುತ್ತಿರುವ ಜನಸಂಖ್ಯೆ ಹಾಗೂ ವಾರ್ಷಿಕ GDP ಇಳಿಮುಖವಾಗುವುದು ಈ ಕುಸಿತಕ್ಕೆ ಕಾರಣವಾಗಲಿದೆ.

4. ಇಂಡೋನೇಶಿಯಾ

4. ಇಂಡೋನೇಶಿಯಾ

2050ರಲ್ಲಿ ಪ್ರಮುಖ ದೇಶವಾಗಲಿರುವ ಇಂಡೋನೇಶಿಯಾ ಇಂದಿನ ಸ್ಥಿತಿಯಿಂದ ದಾಪುಗಾಲು ಹಾಕುತ್ತಾ ನಾಲ್ಕನೆಯ ಸ್ಥಾನಕ್ಕೆ ತಲುಪಲಿದೆ. 2016ರಲ್ಲಿ ವಿಶ್ವದ ಎಂಟನೆಯ ಅತಿ ಪ್ರಬಲ ದೇಶವಾಗಿದ್ದ ಇಂಡೋನೇಶಿಯಾ ನಾಲ್ಕನೆಯ ಸ್ಥಾನಕ್ಕೇರಲಿದೆ.

5. ಬ್ರೆಜಿಲ್

5. ಬ್ರೆಜಿಲ್

ಬ್ರೆಜಿಲ್ ದೇಶದ ಆರ್ಥಿಕತೆ ಸಹಾ ನಿಧಾನವಾಗಿ ಏರುತ್ತಿದೆ. ಆದರೆ ಇತರ E7 ದೇಶಗಳಾದ ಮೆಕ್ಸೋಕೋ ಹಾಗೂ ಇಂಡೋನೇಶಿಯಾ ದೇಶಗಳ ನಾಗಾಲೋಟಕ್ಕೆ ಇದರ ಅಭಿವೃದ್ದಿಯ ವೇಗ ಸಾಟಿಯಾಗಲಾರದು. ಇದೇ ಕಾರಣಕ್ಕೆ ಬ್ರೆಜಿಲ್ ಎರಡು ಸ್ಥಾನ ಮಾತ್ರ ಮೇಲೇರುವ ಸಂಭವವಿದೆ. 2016ರಲ್ಲಿ ಏಳನೆಯ ಸ್ಥಾನ ಹೊಂದಿರುವ ಬ್ರೆಜಿಲ್ 2050ರಲ್ಲಿ ಐದನೆಯ ಸ್ಥಾನಕ್ಕೇರಲಿದೆ.

6. ರಷ್ಯಾ

6. ರಷ್ಯಾ

ಪ್ರಸ್ತುತ ಆರನೆಯ ಸ್ಥಾನದಲ್ಲಿರುವ ರಷ್ಯಾ 2050ರಲ್ಲಿಯೂ ತನ್ನ ಸ್ಥಾನವನ್ನು ಉಳಿಸಿಕೊಳ್ಳಲಿದೆ. E7 ದೇಶವಾಗಲು ಅರ್ಹತೆಯನ್ನು ಕಳೆದುಕೊಂಡಿರುವ ರಷ್ಯಾಕ್ಕೆ ಇಳಿಮುಖವಾಗುತ್ತಿರುವ ಜನಸಂಖ್ಯೆ ಹಾಗೂ ನಿರೀಕ್ಷೆಗೂ ಕಡಿಮೆ ಜಿಡಿಪಿ ಏರಿಕೆ ಮುಂದಿನ ಮೂವತ್ತಮೂರು ವರ್ಷಗಳ ಕಾಲ ರಷ್ಯಾವನ್ನು ಇದೇ ಸ್ಥಾನದಲ್ಲಿ ಉಳಿಸಿಕೊಳ್ಳಲಿದೆ.

7. ಮೆಕ್ಸಿಕೋ

7. ಮೆಕ್ಸಿಕೋ

ಅಮೇರಿಕಾಧ್ಯಕ್ಷ ಟ್ರಂಪ್ ಎರಡೂ ದೇಶಗಳ ನಡುವೆ ಗೋಡೆ ಕಟ್ಟುತ್ತಾರೋ ಇಲ್ಲವೋ, ಆದರೆ ಮೆಕ್ಸಿಕೋ ದೇಶದ ಆರ್ಥಿಕತೆ ಮಾತ್ರ 2050 ರಲ್ಲಿ ವಿಶ್ವದ ಏಳನೆಯ ಸ್ಥಾನ ಪಡೆಯಲು ನೆರವಾಗಲಿದೆ. ಪ್ರಸ್ತುತ 2016 ರಲ್ಲಿ ಹನ್ನೊಂದನೆಯ ಸ್ಥಾನದಲ್ಲಿದ್ದ ಮೆಕ್ಸಿಕೋ ದೇಶದ ಜನಸಂಖ್ಯೆ ಏಕಪ್ರಕಾರದ ಜನಸಂಖ್ಯೆಯ ಹಾಗೂ ಜಿಡಿಪಿ ಏರಿಕೆಯ ಈ ಅಭಿವೃದ್ದಿಗೆ ನೆರವಾಗಲಿದೆ.

8. ಜಪಾನ್

8. ಜಪಾನ್

ಇದುವರೆಗೆ ಏಶ್ಯಾದ ಶಕ್ತಿಮೂಲ ಎಂದು ಪರಿಗಣಿಸಲ್ಪಟ್ಟಿದ್ದ ಜಪಾನ್ ನಾಲ್ಕು ಸ್ಥಾನ ಇಳಿಯಲಿದೆ. 32 ದೇಶಗಳಲ್ಲಿಯೇ ಅತಿ ಕಡಿಮೆ ಆರ್ಥಿಕ ಪ್ರಗತಿ ಸಾಧಿಸುತ್ತಿರುವ ಜಪಾನ್ ವಾರ್ಷಿಕ ಕೇವಲ 1.1% ಪ್ರಗತಿ ಸಾಧಿಸಿದೆ ಎಂದು PwC ವರದಿ ಸಲ್ಲಿಸಿದೆ. ಅಲ್ಲದೇ ಜನಸಂಖ್ಯೆಯ ಏರಿಕೆ ಗತಿಯೂ ಅತಿ ಕಡಿಮೆಯಾಗಿದ್ದು ವಾರ್ಶಿಕ 0.5%ರಷ್ಟು ಕಡಿಮೆಯಾಗುತ್ತಾ ಸಾಗಿರುವುದು ಆತಂಕಕಾರಿಯಾಗಿದೆ.

9. ಜರ್ಮನಿ

9. ಜರ್ಮನಿ

ಇನ್ನೊಂದು ಕಡೆಯಲ್ಲಿ ಜರ್ಮನಿ ಅಷ್ಟೊಂದು ಅದೃಷ್ಟಶಾಲಿಯಾಗಿಲ್ಲ. 2016 ರಲ್ಲಿ ಐದನೆಯ ಸ್ಥಾನದಲ್ಲಿದ್ದ ಜರ್ಮನಿ 2050 ರಲ್ಲಿ ಒಂಭತ್ತನೆಯ ಸ್ಥಾನ ಪಡೆಯಲಿದೆ. ಕಾರಣ? ಅತಿ ನಿಧಾನವಾದ ಆರ್ಥಿಕ ಪ್ರಗತಿ ಕೇವಲ ವಾರ್ಷಿಕ 1.7% ಇರುವುದು ಹಾಗೂ ನಾಗರಿಕರ ಕೆಲಸ ಮಾಡುವ ವಯಸ್ಸು ಕಡಿಮೆಯಾಗುತ್ತಿರುವುದು ಪ್ರಮುಖ ಕಾರಣವಾಗಿದೆ. ಇಂದಿನ ದಿನಗಳಲ್ಲಿ ವಲಸಿಗರು ಹೆಚ್ಚು ಹೆಚ್ಚಾಗಿ ಆಗಮಿಸುತ್ತಿದ್ದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ.

10. ಇಂಗ್ಲೆಂಡ್

10. ಇಂಗ್ಲೆಂಡ್

PwC ತಜ್ಞರು ಅನುಮಾನಿಸುವ ಪ್ರಕಾರ ಬ್ರೆಕ್ಸಿಟ್ ಪ್ರಕರಣ ಈ ದೇಶದ ಆರ್ಥಿಕತೆಗೆ ಅಡ್ಡಿಯಾಗಲಿದೆ. ಮಧ್ಯಮ-ಅವಧಿ, ದೀರ್ಘಾವಧಿಯ ಪೂರ್ವಾನುಮಾನಗಳು ಆಶಾವಾದ ತೋರ್ಪಡಿಸುತ್ತಿದ್ದರೂ 2050ರಲ್ಲಿ ಈಗಿರುವ ಸ್ಥಾನದಿಂದ ಒಂದು ಸ್ಥಾನ ಕೆಳಕ್ಕಿಳಿಯಲಿದೆ. ಇದಕ್ಕೆ ಪ್ರಮುಖ ಕಾರಣ ನಾಗರಿಕರ ಕೆಲಸ ಮಾಡುವ ವಯಸ್ಸು ಹೆಚ್ಚುತ್ತಿರುವುದು ಹಾಗೂ ಕ್ರಮಬದ್ದವಾದ ಆರ್ಥಿಕ ಪ್ರಗತಿಯಾಗಿವೆ.

11. ಟರ್ಕಿ

11. ಟರ್ಕಿ

ನಾಗಾಲೋಟದ ಆರ್ಥಿಕ ಪ್ರಗತಿ ಪಡೆಯುತ್ತಿರುವ E7 ದೇಶಗಳಲ್ಲಿ ಒಂದಾಗಿರುವ ಟರ್ಕಿ ಮುಂದಿನ ಮೂವತ್ತಮೂರು ವರ್ಷಗಳಲ್ಲಿ ಅದ್ಭುತ ಪ್ರಗತಿ ಸಾಧಿಸಲಿದೆ. ಸತತವಾದ GDP ಏರಿಕೆ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆ ಇದಕ್ಕೆ ಪ್ರಮುಖ ಕಾರಣವಾಗಿವೆ. 2016ರಲ್ಲಿ ಹದಿನಾಲ್ಕನೆಯ ಸ್ಥಾನದಲ್ಲಿದ್ದ ಟರ್ಕಿ 2050ರಲ್ಲಿ ಹನ್ನೊಂದನೇ ಸ್ಥಾನ ಪಡೆಯಲಿದೆ.

12. ಫ್ರಾನ್ಸ್

12. ಫ್ರಾನ್ಸ್

ಫ್ರಾನ್ಸ್ ಸಹಾ ಈ ಪಟ್ಟಿಯಲ್ಲಿ ಎರಡು ಸ್ಥಾನ ಇಳಿಯಲಿದೆ. ಇತರ ಪಶ್ಚಿಮ ಯೂರೋಪಿಯನ್ ಆರ್ಥಿಕತೆಯಲ್ಲಿ ಉಳಿದ ದೇಶಗಳಿಗಿಂತ ಫ್ರಾನ್ ನಿಧಾನವಾಗಿ ಕುಸಿಯುತ್ತಿದೆ. ಈ ದೇಶದ ನಾಗರಿಕರ ಕೆಲಸ ಮಾಡುವ ವಯಸ್ಸು ಒಂದೇ ಪ್ರಕಾರ ಇರುವುದು ಈ ಕುಸಿತ ನಿಧಾನವಾಗಲು ಕಾರಣವಾಗಿದೆ.

13. ಸೌದಿ ಅರೇಬಿಯಾ

13. ಸೌದಿ ಅರೇಬಿಯಾ

ಪ್ರಸ್ತುತ ತೈಲವನ್ನೇ ಬಹುವಾಗಿ ಅವಲಂಬಿಸಿರುವ ಈ ದೇಶ ಮುಂದಿನ ದಿನಗಳಲ್ಲಿ ಇತರ ಆರ್ಥಿಕತೆಯತ್ತ ತನ್ನ ಗಮನ ಹರಿಸಲು ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಹಲವು ಉದ್ಯೋಗಗಳನ್ನು ಕೇವಲ ಸೌದಿ ನಾಗರಿಕರಿಗೆ ಮೀಸಲಿರಿಸುವುದೂ ಒಂದು. ವಾರ್ಷಿಕ ಆರ್ಥಿಕ ಪ್ರಗತಿ 5.1% ಇರಲಿದ್ದು ಇದರ ಕಾರಣದಿಂದ ಎರಡು ಸ್ಥಾನ ಏರಿ ಹದಿಮೂರನೇ ಸ್ಥಾನ ಪಡೆಯಲಿದೆ.

14. ನೈಜೀರಿಯಾ

14. ನೈಜೀರಿಯಾ

ಪ್ರಗತಿಯ ನಾಗಾಲೋಟದಲ್ಲಿ ಮೂರನೆಯ ಸ್ಥಾನದಲ್ಲಿರುವ ನೈಜೀರಿಯಾ ಆಫ್ರಿಕಾದ ಅತಿ ಹೆಚ್ಚು ಆರ್ಥಿಕ ಪ್ರಗತಿಯ ನಾಗಾಲೋಟ ಪಡೆಯುತ್ತಿರುವ ದೇಶವಾಗಿದೆ. ಈ ನಾಗಾಲೋಟದ ಪರಿಣಾಮವಾಗಿ 2050ರಲ್ಲಿ ಹದಿನಾಲ್ಕನೇ ಸ್ಥಾನ ಪಡೆಯಲಿದೆ. PwC ವರದಿಗಳ ಪ್ರಕಾರ ಪ್ರಗತಿಯಲ್ಲಿ ವೈವಿಧ್ಯತೆಯನ್ನು ಪಡೆಯುವ ಮೂಲಕ ಮೂಲಸೌಕರ್ಯಗಳನ್ನು ಹೆಚ್ಚಿಸುವುದು ಹಾಗೂ ಬ್ರಷ್ಟಾಚಾರವನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸುವುದು ಈ ಏರಿಕೆಗೆ ಕಾರಣವಾಗಿದೆ.

15. ಈಜಿಪ್ಟ್

15. ಈಜಿಪ್ಟ್

ಈ ದೇಶದ ಜನಸಂಖ್ಯೆ ಸತತವಾಗಿ ವಾರ್ಷಿಕ 1.4% ರಷ್ಟು ಜನಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. GDPಯಲ್ಲಿ 6.6% ರಷ್ಟು ಏರಿಕೆ ಕಾಣುವ ಮೂಲಕ ಮುಂದಿನ ವರ್ಷಗಳಲ್ಲಿ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. 2016ರಲ್ಲಿ ಇಪ್ಪತ್ತೊಂದನೆಯ ಸ್ಥಾನದಲ್ಲಿದ್ದ ಈಜಿಪ್ಟ್ ಈ ಕ್ರಮಗಳಿಂದಾಗಿ 2050ರಲ್ಲಿ ಹದಿನೈದನೇ ಸ್ಥಾನಕ್ಕೇರಲಿದೆ.

16. ಪಾಕಿಸ್ತಾನ

16. ಪಾಕಿಸ್ತಾನ

ಈಜಿಪ್ಟ್ ನಂತೆಯೇ ಪಾಕಿಸ್ತಾನದಲ್ಲಿಯೂ ಜನಸಂಖ್ಯೆ ಸತತವಾಗಿ ಹಾಗೂ ವೇಗವಾಗಿ ವಾರ್ಷಿಕ 1.4% ರ ಗತಿಯಲ್ಲಿ ಏರುತ್ತಿದೆ ಎಂದು ವರದಿಗಳು ತಿಳಿಸಿವೆ. ತನ್ಮೂಲಕ 2016ರಲ್ಲಿ 24ನೇ ಸ್ಥಾನದಲ್ಲಿದ್ದ ಪಾಕಿಸ್ತಾನ 2050ರಲ್ಲಿ ಹದಿನಾರನೇ ಸ್ಥಾನಕ್ಕೇರಲಿದೆ.

17. ಇರಾನ್

17. ಇರಾನ್

ಈ ದೇಶದ ಜನಸಂಖ್ಯೆಯ ಏರಿಕೆ ವಾರ್ಷಿಕ 0.4% ರಷ್ಟು ಮಾತ್ರವೇ ಏರುತ್ತಿದೆ ಹಾಗೂ ವಾರ್ಷಿಕ GDP ಏರಿಕೆ 5.5% ರಷ್ಟಿದೆ. ಈ ಅಂಕಿ ಅಂಶಗಳು ಪ್ರಸ್ತುತ ಹದಿನೆಂಟನೆಯ ಸ್ಥಾನದಲ್ಲಿದ್ದ ಇರಾನ್ ದೇಶವನ್ನು ಹದಿನೇಳನೇ ಸ್ಥಾನಕ್ಕೇರಿಸಲಿದೆ.

18. ದಕ್ಷಿಣ ಕೊರಿಯಾ

18. ದಕ್ಷಿಣ ಕೊರಿಯಾ

ಕುಸಿಯುತ್ತಿರುವ ಜನಸಂಖ್ಯೆ ಏರಿಕೆಯ ಗತಿ ಈ ದೇಶವನ್ನು 32 ದೇಶಗಳಲ್ಲಿಯೇ ಅತಿ ಕಡಿಮೆ ಕೆಲಸ ಮಾಡುವ ನಾಗರಿಕರ ಪಟ್ಟಿಗೆ ಸೇರಿಸಿದೆ. ಪರಿಣಾಮವಾಗಿ 2016ರಲ್ಲಿ ಹದಿಮೂರನೇ ಸ್ಥಾನದಲ್ಲಿದ್ದುದನ್ನು 2050ರಲ್ಲಿ ಹದಿನೆಂಟನೆಯ ಸ್ಥಾನಕ್ಕೆ ಇಳಿಸಲಿದೆ.

19. ಫಿಲಿಪ್ಪೀನ್ಸ್

19. ಫಿಲಿಪ್ಪೀನ್ಸ್

ಪ್ರಗತಿಯ ನಾಗಾಲೋಟದಲ್ಲಿ ಎರಡನೆಯ ಸ್ಥಾನದಲ್ಲಿರುವ ಫಿಲಿಪ್ಪೀನ್ಸ್ 2016ರಲ್ಲಿ ಇಪ್ಪತ್ತೆಂಟನೆಯ ಸ್ಥಾನದಲ್ಲಿದ್ದುದು 2050ರಲ್ಲಿ ಹತ್ತೊಂಭತ್ತನೆಯ ಸ್ಥಾನ ಪಡೆಯಲಿದೆ. ಈ ಅವಧಿಯಲ್ಲಿ ಆರ್ಥಿಕ ನಿರ್ವಹಣೆ ಉತ್ತಮವಾಗಿಯೇ ಇದ್ದರೂ PwC ವರದಿಗಳ ಪ್ರಕಾರ ಜನಸಂಖ್ಯೆಯ ಏರಿಕೆ ಇದಕ್ಕೆ ಪ್ರಮುಖ ಕಾರಣವಾಗಲಿದೆ.

20. ವಿಯೆಟ್ನಾಂ

20. ವಿಯೆಟ್ನಾಂ

ಒಟ್ಟು ಮೂವತ್ತೆರಡು ದೇಶಗಳ ವಿಶ್ಲೇಷಣೆಯಲ್ಲಿ ವಿಯೆಟ್ನಾಂ ಹೆಚ್ಚಿನ ಪ್ರಗತಿ ದಾಖಲಿಸಿದೆ. 2016ರಲ್ಲಿ ಮೂವತ್ತೆರಡನೆಯ ಹಾಗೂ ಕಟ್ಟ ಕಡೆಯ ಸ್ಥಾನದಲ್ಲಿದ್ದ ವಿಯೆಟ್ನಾಂ ಹನ್ನೆರಡು ಸ್ಥಾನ ಮುಂದುವರೆದು ಇಪ್ಪತ್ತನೆಯ ಸ್ಥಾನ ಪಡೆದಿದೆ. ಬಾಂಗ್ಲಾದೇಶದ ಕಥೆಯೂ ಇದೇ ಆಗಿದ್ದರೂ ಇದರ ಅತ್ಯಧಿಕ ಜನಸಂಖ್ಯಾ ಸ್ಪೋಟ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಪಡೆಯಲಾಗದ ಪ್ರಗತಿ ಇದರ ಹಿನ್ನಡೆಗೆ ಕಾರಣವಾಗಿವೆ. 2030ರಲ್ಲಿ ಪ್ರಪಂಚವನ್ನು ಆಳುವ ದೇಶಗಳು

English summary

The countries that will rule the world in 2050

Wonder which major industrialized countries will be richer or poorer 33 years from now? Accountancy firm PwC has just released a report outlining growth forecasts to 2050 for 32 of the largest economies in the world.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X