For Quick Alerts
ALLOW NOTIFICATIONS  
For Daily Alerts

ಭಾರತದ ಆರ್ಥಿಕತೆಯಲ್ಲಿ ಭಾರೀ ಪ್ರಗತಿ, ಮುಂಚೂಣಿಯಲ್ಲಿ ದಕ್ಷಿಣ ಭಾರತ: ಕ್ರಿಸಿಲ್

ಭಾರತದಲ್ಲಿ ಆರ್ಥಿಕ ಸೇರ್ಪಡೆ ಗಣನೀಯವಾಗಿ ಸುಧಾರಣೆ ಕಾಣುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಕ್ರಿಸಿಲ್ ಇನ್‍ಕ್ಲೂಸಿವ್ ಇಂಡೆಕ್ಸ್ ಪ್ರಕಾರ ಠೇವಣಿ ಮತ್ತು ಕ್ರೆಡಿಟ್ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.

|

ಭಾರತದಲ್ಲಿ ಆರ್ಥಿಕ ಸೇರ್ಪಡೆ ಗಣನೀಯವಾಗಿ ಸುಧಾರಣೆ ಕಾಣುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಕ್ರಿಸಿಲ್ (ಸಿಆರ್‍ಐಎಸ್‍ಐಎಲ್) ಇನ್‍ಕ್ಲೂಸಿವ್ ಇಂಡೆಕ್ಸ್ ಪ್ರಕಾರ ಠೇವಣಿ ಮತ್ತು ಕ್ರೆಡಿಟ್ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.
ದೇಶದ ಎಲ್ಲಾ 666 ಜಿಲ್ಲೆಗಳಲ್ಲಿ ಆರ್ಥಿಕ ಸೇರ್ಪಡೆಯ ಪ್ರಗತಿಯನ್ನು ಮೌಲ್ಯಮಾಪನ ಮಾಡಿ ಈ ಇಂಡೆಕ್ಸ್ ಅನ್ನು ಸಿದ್ಧಪಡಿಸಲಾಗಿದೆ. ನಿಮ್ಮ ಬಳಿ ರೂ. 1-5 ಲಕ್ಷ ಇದ್ದರೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು?

ಅಂಕಿಅಂಶ ಆಧಾರಿತ ವರದಿ

ಅಂಕಿಅಂಶ ಆಧಾರಿತ ವರದಿ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ), ಮೈಕ್ರೋಫೈನಾನ್ಸ್ ಇನ್‍ಸ್ಟಿಟ್ಯೂಶನ್ ನೆಟ್‍ವರ್ಕ್ ಮತ್ತು ಇನ್‍ಶೂರೆನ್ಸ್ ಇನ್‍ಫರ್ಮೇಶನ್ ಬ್ಯೂರೋ ಆಫ್ ಇಂಡಿಯಾ ಸಂಸ್ಥೆಗಳು ನೀಡಿರುವ ಅಂಕಿಅಂಶಗಳ ಆಧಾರದಲ್ಲಿ ಈ ವರದಿಯನ್ನು ತಯಾರಿಸಲಾಗಿದೆ. ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆಯಿರಿ! ಯಾವ ಬ್ಯಾಂಕ್ ಗೆ ಯಾವ ನಂಬರ್?

ಆರ್ಥಿಕ ಸೇರ್ಪಡೆ ಪ್ರಮಾಣ

ಆರ್ಥಿಕ ಸೇರ್ಪಡೆ ಪ್ರಮಾಣ

ಇದೇ ಮೊದಲ ಬಾರಿಗೆ ಈ ಇಂಡೆಕ್ಸ್ ನಲ್ಲಿ ಜೀವವಿಮಾ ಕ್ಷೇತ್ರದ ಕೊಡುಗೆಯನ್ನು ಲಭ್ಯವಿರುವ ಅಂಕಿಅಂಶಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಕ್ಷೇತ್ರದಿಂದಲೂ ಆರ್ಥಿಕ ಸೇರ್ಪಡೆಗೆ ಗಮನಾರ್ಹವಾದ ಕೊಡುಗೆ ಬಂದಿದೆ.
2013 ರ ಹಣಕಾಸು ಸಾಲಿನಲ್ಲಿ ಆರ್ಥಿಕ ಸೇರ್ಪಡೆ ಪ್ರಮಾಣ ಶೇ. 50.1 ರಷ್ಟು ಇದ್ದರೆ, 2016 ರ ಹಣಕಾಸು ಸಾಲಿನಲ್ಲಿ ಈ ಪ್ರಮಾಣ ಶೇ.58.0 ಕ್ಕೆ ಹೆಚ್ಚಳವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಸ್ವಂತಮನೆ ಕಟ್ಟುವುದು ಈಗ ಸುಲಭ! 

ಕ್ರಿಸಿಲ್ ವ್ಯವಸ್ಥಾಪಕ ನಿರ್ದೇಶಕ ಏನಂತಾರೆ?

ಕ್ರಿಸಿಲ್ ವ್ಯವಸ್ಥಾಪಕ ನಿರ್ದೇಶಕ ಏನಂತಾರೆ?

ಈ ಪ್ರಗತಿ ಬಗ್ಗೆ ಮಾಹಿತಿ ನೀಡಿದ ಕ್ರಿಸಿಲ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶು ಸುಯಾಶ್ ಅವರು, ಕಳೆದ ಮೂರು ವರ್ಷಗಳಿಂದ ಪ್ರಧಾನಮಂತ್ರಿ ಜನ್-ಧನ್ ಯೋಜನೆಯಂತಹ ಹಲವಾರು ಹಣಕಾಸು ಯೋಜನೆಗಳನ್ನು ಜಾರಿಗೊಳಿಸಿರುವ ನೀತಿಗಳಿಂದಾಗಿ ಬ್ಯಾಂಕಿಂಗ್ ಚಟುವಟಿಕೆಗಳೇ ಇಲ್ಲದಂತಹ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆ ಆರಂಭವಾಗುವಂತಾಗಿದೆ. ಇದರಿಂದ ಆರ್ಥಿಕ ಸೇರ್ಪಡೆ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖವಾದ ಅಂಶವೆಂದರೆ 666 ಜಿಲ್ಲೆಗಳ ಪೈಕಿ 336 ಜಿಲ್ಲೆಗಳಲ್ಲಿ ಸರಾಸರಿಗಿಂತ ಹೆಚ್ಚು ಪ್ರಮಾಣದಲ್ಲಿ ಆರ್ಥಿಕ ಸೇರ್ಪಡೆ ಪ್ರಕ್ರಿಯೆ ಪ್ರಗತಿ ಕಂಡಿದೆ'' ಎಂದು ಸಂತಸ ವ್ಯಕ್ತಪಡಿಸಿದರು.

ಜನ್ ಧನ್ ಯೋಜನೆ ಪ್ರಭಾವ

ಜನ್ ಧನ್ ಯೋಜನೆ ಪ್ರಭಾವ

ಆರ್ಥಿಕ ಸೇರ್ಪಡೆ ಹೆಚ್ಚಳಕ್ಕೆ ಜನ್ ಧನ್ ಸಾಕಷ್ಟು ಕೊಡುಗೆ ನೀಡಿದೆಯಲ್ಲದೇ, ಠೇವಣಿ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಪ್ರೇರಕಶಕ್ತಿಯಾದಂತಾಗಿದೆ. 2014 ರ ಆಗಸ್ಟ್‍ನಲ್ಲಿ ಆರಂಭವಾದ ದಿನದಿಂದ ಇಲ್ಲಿವರೆಗೆ 31 ಕೋಟಿ ಠೇವಣಿ ಖಾತೆಗಳು ಆರಂಭವಾಗಿವೆ. ಈ ಪ್ರಗತಿಯು ಇಂಡೆಕ್ಸ್ ಅನ್ನು ಪುನರ್‍ರೂಪಿಸಲು ಕಾರಣವಾಗಿದೆ. ನಾವು ಇನ್‍ಶೂರೆನ್ಸ್ ಅನ್ನು ಇಂಡೆಕ್ಸ್‍ನಿಂದ ಹೊರಗಿಟ್ಟಿದ್ದೆವು. ಈ ಕ್ಷೇತ್ರವನ್ನೂ ಪರಿಗಣಿಸಿದರೆ ಅಖಿಲ ಭಾರತ ಕ್ರಿಸಿಲ್ ಇನ್‍ಕ್ಲೂಸಿವ್ ಸ್ಕೋರ್ ಶೇ. 62.2 ರವರೆಗೆ ಏರಿಕೆಯಾಗುತ್ತದೆ.

ದಕ್ಷಿಣ ಭಾರತ ಮುಂಚೂಣಿ

ದಕ್ಷಿಣ ಭಾರತ ಮುಂಚೂಣಿ

ಈ ಆರ್ಥಿಕ ಸೇರ್ಪಡೆಯಲ್ಲಿ ದಕ್ಷಿಣ ಭಾರತ ತನ್ನ ಮುಂಚೂಣಿಯನ್ನು ಕಾಯ್ದುಕೊಂಡಿದೆ. ಶೇ. 90.9 ರಷ್ಟು ಸಾಧನೆ ಮಾಡಿರುವ ಕೇರಳ ರಾಜ್ಯ ಮೊದಲ ಸ್ಥಾನದಲ್ಲಿದ್ದರೆ, ಉಳಿದ ರಾಜ್ಯಗಳು ಪ್ರಗತಿಯತ್ತ ಹೆಜ್ಜೆ ಹಾಕುತ್ತಿವೆ. ದೇಶದಲ್ಲಿ 34 ಕೋಟಿ ವಿಮಾ ಪಾಲಿಸಿಗಳನ್ನು ನೀಡಲಾಗಿದೆ. ಆದರೆ, ಇದು 165 ಕೋಟಿ ಠೇವಣಿ ಖಾತೆ ಹೊಂದಿರುವವರ ಶೇ. 5 ರಷ್ಟು ಮಾತ್ರ.

ವಿಮಾ ಕ್ಷೇತ್ರ

ವಿಮಾ ಕ್ಷೇತ್ರ

ದೇಶದ ಬಹುತೇಕ ಪ್ರದೇಶಗಳು ಮೈಕ್ರೋಫೈನಾನ್ಸ್ ಕಡೆಗೆ ಒಲವು ತೋರಿವೆ. ಪ್ರಮುಖವಾಗಿ ಪಶ್ಚಿಮ ಭಾಗದಲ್ಲಿ ಹೆಚ್ಚು ಜನರು ಮೈಕ್ರೋಫೈನಾನ್ಸ್ ಅನ್ನು ಹೊಂದಿದ್ದಾರೆ. ಆದಾಗ್ಯೂ, ಪಶ್ಚಿಮ ಮತ್ತು ಪೂರ್ವದ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಪ್ರದೇಶಗಳಲ್ಲಿ ವಿಮಾ ಕ್ಷೇತ್ರದ ಮೂಲಕ ಆರ್ಥಿಕ ಸೇರ್ಪಡೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಸರಾಸರಿಗಿಂತ ಮೇಲ್ಮಟ್ಟ

ಸರಾಸರಿಗಿಂತ ಮೇಲ್ಮಟ್ಟ

ಇದೇ ಮೊದಲ ಬಾರಿಗೆ ರಾಜಸ್ಥಾನ ಸರಾಸರಿಗಿಂತ ಕೆಳಗಿನ ಮಟ್ಟದಿಂದ ಸರಾಸರಿಗಿಂತ ಮೇಲ್ಮಟ್ಟಕ್ಕೆ ಏರಿಕೆಯನ್ನು ಕಂಡಿದೆ. ಅದೇ ರೀತಿ ಹರ್ಯಾಣ ರಾಜ್ಯದಲ್ಲಿಯೂ ಸರಾಸರಿಗಿಂತ ಮೇಲ್ಮಟ್ಟದಿಂದ ಅತ್ಯುತ್ತಮ ಮಟ್ಟಕ್ಕೇರಿದೆ. 2016 ರ ಹಣಕಾಸು ಸಾಲಿನ ಅಂತ್ಯದ ವೇಳೆಗೆ 3.17 ಕೋಟಿ ಹೊಸ ಸಾಲದ ಖಾತೆಗಳು (ಬ್ಯಾಂಕ್ ಮತ್ತು ಮೈಕ್ರೋಫೈನಾನ್ಸ್‍ನಲ್ಲಿ) ಆರಂಭವಾಗಿವೆ. ಕೇವಲ ಎರಡು ವರ್ಷಗಳಲ್ಲಿ ಈ ಸಾಧನೆ ಕಂಡುಬಂದಿದೆ. ಇದೂ ಕೂಡ ಆರ್ಥಿಕ ಸೇರ್ಪಡೆಗೆ ಕೊಡುಗೆ ನೀಡುತ್ತಿದೆ.

ಪಿಂಚಣಿ ಯೋಜನೆ ಬೆಳವಣಿಗೆ

ಪಿಂಚಣಿ ಯೋಜನೆ ಬೆಳವಣಿಗೆ

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, 2013ನೇ ಹಣಕಾಸು ಸಾಲಿನಲ್ಲಿ ಶೇ. 6.3 ರಷ್ಟಿದ್ದ ನ್ಯಾಷನಲ್ ಪೆನ್ಷನ್ ಸ್ಕೀಂ ಪ್ರಮಾಣ 2016 ರ ಹಣಕಾಸು ವರ್ಷದ ವೇಳೆಗೆ ಶೇ.18.7 ಕ್ಕೆ ಹೆಚ್ಚಳವಾಗಿದೆ. ಇದೇ ವೇಳೆ ಸರ್ಕಾರದ ಸಿಬ್ಬಂದಿ ಹೆಚ್ಚು ಹೆಚ್ಚು ಎನ್‍ಪಿಎಸ್ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳು ಅಟಲ್ ಪೆನ್ಷನ್ ಯೋಜನೆಯನ್ನು ಪಡೆಯುತ್ತಿದ್ದಾರೆ.

ಗ್ರಾಹಕ ಸ್ನೇಹಿ ವಾತಾವರಣ

ಗ್ರಾಹಕ ಸ್ನೇಹಿ ವಾತಾವರಣ

ಕ್ರಿಸಿಲ್ ಲಿಮಿಟೆಡ್‍ನ ಪವನ್ ಅಗರ್‍ವಾಲ್ ಅವರು ಮಾತನಾಡಿ, ಭಾರತ ಆರ್ಥಿಕ ಸೇರ್ಪಡೆಯಲ್ಲಿ ಪರಿಪೂರ್ಣತೆಯನ್ನು ತಲುಪಬೇಕಾದರೆ ಇನ್ನೂ ದೂರ ಕ್ರಮಿಸಬೇಕಾಗಿದೆ. ಆದಾಗ್ಯೂ, ಮೈಕ್ರೋಫೈನಾನ್ಸ್, ಸಣ್ಣ ಬ್ಯಾಂಕ್‍ಗಳ ಸ್ಥಾಪನೆ, ವಿಮಾ ಕ್ಷೇತ್ರದ ಸೇರ್ಪಡೆಯಂತಹ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಜನ್ ಧನ್ ಖಾತೆಗಳನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ ಗ್ರಾಹಕ ಸ್ನೇಹಿಯಾದ ವಾತಾವರಣ ಸೃಷ್ಟಿಸಬೇಕಾಗಿದೆ.

English summary

Financial inclusion has to broaden beyond south India: Crisil

ಭಾರತದಲ್ಲಿ ಆರ್ಥಿಕ ಸೇರ್ಪಡೆ ಗಣನೀಯವಾಗಿ ಸುಧಾರಣೆ ಕಾಣುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಕ್ರಿಸಿಲ್ ಇನ್‍ಕ್ಲೂಸಿವ್ ಇಂಡೆಕ್ಸ್ ಪ್ರಕಾರ ಠೇವಣಿ ಮತ್ತು ಕ್ರೆಡಿಟ್ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.
Story first published: Thursday, March 1, 2018, 11:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X