For Quick Alerts
ALLOW NOTIFICATIONS  
For Daily Alerts

ಎಲ್ಪಿಜಿ ಗ್ರಾಹಕರಿಗೆ ಸಿಹಿಸುದ್ದಿ! ಇಲ್ಲಿದೆ ಸಿಲಿಂಡರ್ ಬೆಲೆ ಇಳಿಕೆ ವಿವರ

ಎಲ್ಪಿಜಿ (ಅಡುಗೆ ಅನಿಲ) ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಮಾರ್ಚ್ ತಿಂಗಳಿನಿಂದ ಅಡುಗೆ ಅನಿಲ ದರ ಕಡಿಮೆಯಾಗಲಿದೆ. ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್ಪಿಜಿ ದರಗಳನ್ನು ಪರಿಷ್ಕರಿಸಲಾಗಿದೆ.

By Siddu
|

ಎಲ್ಪಿಜಿ (ಅಡುಗೆ ಅನಿಲ) ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಮಾರ್ಚ್ ತಿಂಗಳಿನಿಂದ ಅಡುಗೆ ಅನಿಲ ದರ ಕಡಿಮೆಯಾಗಲಿದೆ. ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್ಪಿಜಿ ದರಗಳನ್ನು ಪರಿಷ್ಕರಿಸಲಾಗಿದೆ.

ಗ್ರಾಹಕರಿಗೆ ಹೋಳಿ ಹಬ್ಬಕ್ಕೆ ಸಿಹಿ ಸುದ್ದಿಯಾಗಿದ್ದು, 2017ರ ನಂತರದಲ್ಲಿ ಇದೇ ಮೊದಲ ಬಾರಿಗೆ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ಅಂಬಾನಿ ಧಮಾಕಾ! ರಿಲಯನ್ಸ್ ಬಿಗ್ ಟಿವಿ ಮೂಲಕ 500 ಚಾನೆಲ್ 5 ವರ್ಷ ಸಂಪೂರ್ಣ ಉಚಿತ!!

ಸಬ್ಸಿಡಿ ಸಿಲಿಂಡರ್ ದರ

ಸಬ್ಸಿಡಿ ಸಿಲಿಂಡರ್ ದರ

ಸಬ್ಸಿಡಿ ಇರುವ ಎಲ್ಪಿಜಿ ಸಿಲಿಂಡರ್ ಬೆಲೆ ರೂ. 2.50ರಷ್ಟು ಇಳಿದಿದೆ. ಪ್ರತಿ ಸಿಲಿಂಡರ್ ಗೆ ದೆಹಲಿಯಲ್ಲಿ ರೂ. 2.54, ಕೋಲ್ಕತಾದಲ್ಲಿ ರೂ. 2.36, ಮುಂಬೈನಲ್ಲಿ ರೂ. 2.58 ಮತ್ತು ಚೆನೈನಲ್ಲಿ ರೂ. 2.48 ಇಳಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ವೆಬ್ಸೈಟ್ - iocl.com ಮಾಹಿತಿ ಇದೆ.

ಸಬ್ಸಿಡಿ ರಹಿತ ಎಲ್ಪಿಜಿ ದರ

ಸಬ್ಸಿಡಿ ರಹಿತ ಎಲ್ಪಿಜಿ ದರ

ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದ್ದು, 14.2 ಕೆ.ಜಿ ಸಿಲಿಂಡರ್ ಬೆಲೆ ರೂ. 45.50 ರಿಂದ ರೂ. 47ವರೆಗೆ ಇಳಿಕೆಯಾಗಿದೆ. ಬೆಲೆ ಇಳಿಕೆಯಾದ ನಂತರದಲ್ಲಿ ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ (14.2 ಕೆ.ಜಿ) ಬೆಲೆ ರೂ. 689 ಆಗಿದೆ.

ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಪ್ರತಿ ಸಿಲಿಂಡರ್ ದರ

ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಪ್ರತಿ ಸಿಲಿಂಡರ್ ದರ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ 14.2 ಕೆ.ಜಿ ತೂಕದ ಸಬ್ಸಿಡಿ ಎಲ್ಪಿಜಿ ಸಿಲಿಂಡರ್ ದರ ದೆಹಲಿಯಲ್ಲಿ ರೂ. 493.09, ಕೋಲ್ಕತಾದಲ್ಲಿ ರೂ. 496.07, ಮುಂಬಯಿನಲ್ಲಿ ರೂ. 490.8 ಮತ್ತು ಚೆನ್ನೈನಲ್ಲಿ ರೂ. 481.21 ಆಗಿದೆ.
ಸಬ್ಸಿಡಿ ರಹಿತ ಪ್ರತಿ ಎಲ್ಪಿಜಿ ಸಿಲಿಂಡರ್ ದರ ಕೋಲ್ಕತ್ತಾದಲ್ಲಿ ರೂ. 711.5, ಮುಂಬೈಯಲ್ಲಿ ರೂ. 661 ಮತ್ತು ಚೆನ್ನೈನಲ್ಲಿ ರೂ. 699.5 ಇಳಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಹೇಳಿದೆ.

ಜಾರಿ ಯಾವಾಗ?

ಜಾರಿ ಯಾವಾಗ?

ದೆಹಲಿ, ಕೋಲ್ಕತ್ತಾ, ಚೆನ್ನೈ ಹಾಗೂ ಮುಂಬೈನಲ್ಲಿ ಸಿಲಿಂಡರ್ ಹೊಸ ಬೆಲೆಯ ಪಟ್ಟಿ ಲಭ್ಯವಾಗಿದ್ದು, 2018 ಮಾರ್ಚ್ 1 ರಿಂದ ನೂತನ ದರಗಳು ಜಾರಿಯಾಗಲಿವೆ.

ಹೆಚ್ಚಿನ ಲೇಖನಗಳು

ಹೆಚ್ಚಿನ ಲೇಖನಗಳು

ಇನ್ನಿತರ ಪ್ರಮುಖ ಲೇಖನಗಳ ಲಿಂಕ್ ನೀಡಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಓದಿ..

ಅಂಬಾನಿ ಧಮಾಕಾ! ರಿಲಯನ್ಸ್ ಬಿಗ್ ಟಿವಿ ಮೂಲಕ 500 ಚಾನೆಲ್ 5 ವರ್ಷ ಸಂಪೂರ್ಣ ಉಚಿತ!!ಅಂಬಾನಿ ಧಮಾಕಾ! ರಿಲಯನ್ಸ್ ಬಿಗ್ ಟಿವಿ ಮೂಲಕ 500 ಚಾನೆಲ್ 5 ವರ್ಷ ಸಂಪೂರ್ಣ ಉಚಿತ!!

ಮೋದಿ ಆರೋಗ್ಯ ವಿಮಾ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ? 

ನೀರವ್ ಮೋದಿ ಲೂಟಿ, ಗ್ರಾಹಕರಿಗೆ ಬರೆ! ಎಸ್ಬಿಐ ಬಡ್ಡಿದರ ಹೆಚ್ಚಳ 

ನಿಮ್ಮ ಬಳಿ ರೂ. 1-5 ಲಕ್ಷ ಇದ್ದರೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು? 

ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆಯಿರಿ! ಯಾವ ಬ್ಯಾಂಕ್ ಗೆ ಯಾವ ನಂಬರ್?

English summary

LPG Cylinder Prices Cut: How Much You Have To Pay

LPG consumers will pay Rs. 2.54 less in Delhi, Rs. 2.53 in Kolkata, Rs. 2.57 in Mumbai and Rs. 2.56 less in Chennai for a 14.2 kg cylinder of LPG or cooking gas at subsidised rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X