For Quick Alerts
ALLOW NOTIFICATIONS  
For Daily Alerts

ಏಷ್ಯಾದ 10 ಶ್ರೀಮಂತ ದೇಶಗಳು

ಏಷ್ಯಾ ಖಂಡವು ವಿಸ್ತೀರ್ಣ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಅತ್ಯಂತ ದೊಡ್ಡ ಖಂಡಗಳಲ್ಲಿ ಒಂದಾಗಿದೆ. ಈ ಖಂಡದಲ್ಲಿ 48 ದೇಶಗಳಿವೆ. ಇಂದು ವಿಶ್ವದಲ್ಲಿ ಅತ್ಯಂತ ವೇಗವಾಗಿ ಆರ್ಥಿಕಾಭಿವೃದ್ಧಿ ಹೊಂದುತ್ತಿರುವ ಖಂಡಗಳಲ್ಲಿ ಏಷ್ಯಾ ಖಂಡವು ಒಂದಾಗಿದೆ.

|

ಏಷ್ಯಾ ಖಂಡವು ವಿಸ್ತೀರ್ಣ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಅತ್ಯಂತ ದೊಡ್ಡ ಖಂಡಗಳಲ್ಲಿ ಒಂದಾಗಿದೆ. ಈ ಖಂಡದಲ್ಲಿ 48 ದೇಶಗಳಿವೆ. ಇಂದು ವಿಶ್ವದಲ್ಲಿ ಅತ್ಯಂತ ವೇಗವಾಗಿ ಆರ್ಥಿಕಾಭಿವೃದ್ಧಿಯನ್ನು ಹೊಂದುತ್ತಿರುವ ಖಂಡಗಳಲ್ಲಿ ಏಷ್ಯಾ ಖಂಡವು ಒಂದಾಗಿದೆ. ವಿಸ್ಮಯಕಾರಿ ವಿಷಯವೆಂದರೆ ಇಲ್ಲಿನ ಕೆಲವು ದೇಶಗಳು ವಿಶ್ವದಲ್ಲೇ ಅತೀ ಶ್ರೀಮಂತವಾಗಿವೆ.

 

ಒಂದು ನಿರ್ದಿಷ್ಟ ದೇಶದ ಶ್ರೀಮಂತಿಕೆಯನ್ನು ನಿರ್ಧರಿಸಲು ನಾವು ಆ ದೇಶದ ಸಂಪತ್ತನ್ನು ಮೌಲ್ಯಮಾಪನ ಮಾಡುವಾಗ ಬಳಸುವ ಉತ್ತಮವಾದ ಮಾಪನವೆಂದರೆ ಒಟ್ಟು ದೇಶೀಯ ಉತ್ಪನ್ನ (GDP). ಜಿಡಿಪಿಯು ದೇಶದ ಆರೋಗ್ಯ, ಆರ್ಥಿಕ ಪರಿಸ್ಥಿತಿ ಹಾಗೂ ಎಲ್ಲಾ ಸರಕುಗಳು ಹಾಗೂ ನಿರ್ದಿಷ್ಟ ಅವಧಿಯ ಮೇಲೆ ನಿರ್ದಿಷ್ಟ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನೆಯಾಗುವ ಸೇವೆಗಳ ಒಟ್ಟು ಡಾಲರ್ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಏಷ್ಯಾದಲ್ಲಿ ಕೆಲವು ದೇಶಗಳು ಅತೀ ಕಡಿಮೆ ಜನಸಂಖ್ಯೆಯನ್ನು, ಇನ್ನು ಕೆಲವು ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. ಕೆಲವು ದೇಶಗಳಲ್ಲಿ ಅರ್ಥಿಕ ವ್ಯವಸ್ಥೆಯು ತೈಲ ಹಾಗೂ ಖನಿಜಗಳಿಂದ ನಡೆಯುತ್ತದೆ.
2018 ರಲ್ಲಿ ಏಷ್ಯಾದಲ್ಲಿ ಅಗ್ರ ಸ್ಥಾನದಲ್ಲಿರುವ 10 ಶ್ರೀಮಂತ ದೇಶಗಳನ್ನು ಇಲ್ಲಿ ಹೆಸರಿಸಲಾಗಿದೆ. ಮುಂದೆ ಓದಿ.. ಜಗತ್ತಿನ ಈ 10 ದೇಶಗಳ ಆರ್ಥಿಕತೆ ತುಂಬಾ ಅಪಾಯದಲ್ಲಿದೆ!

10. ತೈವಾನ್

10. ತೈವಾನ್

ತೈವಾನ್ ಏಷ್ಯಾದ ಪೂರ್ವ ಭಾಗದಲ್ಲಿ ನೆಲೆಗೊಂಡಿದ್ದು, ಜನನಿಬಿಡ ದೇಶಗಳಲ್ಲಿ ಒಂದಾಗಿದೆ. ತೈವಾನ್ ದೇಶವು 13,975 ಚದರ ಮೈಲಿ ವಿಸ್ತಿರ್ಣ ಪ್ರದೇಶದಲ್ಲಿ 23 ಮಿಲಿಯನ್ ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ವ್ಯಾಪಾರ ಅರ್ಥಶಾಸ್ತ್ರ, ಜಾಗತಿಕ ಸ್ಥೂಲ ಮಾದರಿಗಳು ಹಾಗೂ ವಿಶ್ಲೇಷಕರ ನಿರೀಕ್ಷೆಗಳ ಪ್ರಕಾರ, ತೈವಾನ್ ದೇಶದ ಆರ್ಥಿಕತೆಯು ವಾರ್ಷಿಕವಾಗಿ 2.3% ನಷ್ಟು ಪ್ರಮಾಣದಲ್ಲಿ ಬೆಳೆಯುವ ಯೋಜನೆಯಾಗಿದೆ. ಪ್ರಸ್ತುತವಾಗಿ ಈ ದೇಶದ ಜಿಡಿಪಿಯು 520 ಡಾಲರ್ ಬಿಲಿಯನ್ ನಷ್ಟಿದೆ. ಈ ದೇಶದ ಅರ್ಥವ್ಯವಸ್ಥೆಯು ಎಲೆಕ್ಟ್ರಾನಿಕ್, ಪ್ಲ್ಯಾಟ್ ಪ್ಯಾನೆಲ್, ಹಡಗುಗಳು, ಪೆಟ್ರೋಕೆಮಿಕಲ್, ಯಂತ್ರೋಪಕರಣ, ಲೋಹ, ಜವಳಿ, ಪ್ಲಾಸ್ಟಿಕ್ ಹಾಗೂ ರಾಸಾಯನಿಕಗಳ ರಫ್ತಿನಿಂದಾಗಿ ನಡೆಯುತ್ತದೆ. ಈ ದೇಶದ ತಲಾವಾರು GDP ಯು ಸುಮಾರು 21,000 ಡಾಲರ್ ಆಗಿರುವುದರಿಂದ ಒಟ್ಟು ದೇಶೀಯ ಉತ್ಪನ್ನಗಳಿಗೆ ಸಂಬಂಧಪಟ್ಟಂತೆ ತಲಾದಾಯದ ಖರೀದಿ ಶಕ್ತಿಯ ಸಮಾನತೆಯಲ್ಲಿ ವಿಶ್ವದಲ್ಲಿ 18ನೇ ಸ್ಥಾನವನ್ನು ಗಳಿಸಿದೆ. ಈ ದೇಶದಲ್ಲಿ ನಿರುದ್ಯೋಗವು ಕೇವಲ 4% ರಷ್ಟಿದೆ. ಸೇವಾ ಕ್ಷೇತ್ರವು ಶೇ. 73ರಷ್ಟು GDP ಯನ್ನು ಕೊಡುಗೆಯಾಗಿ ನೀಡುತ್ತಿರುವುದರಿಂದ ಇದು ತೈವಾನ್ ದೇಶದ ಬೆನ್ನೆಲುಬಾಗಿದೆ. ವಿಶ್ವದ ಅತೀ ಶ್ರೀಮಂತ 15 ರಾಷ್ಟ್ರಗಳು ಯಾವುವು ಗೊತ್ತೆ?

9. ಜಪಾನ್
 

9. ಜಪಾನ್

ಜಪಾನ್ ಏಷ್ಯಾದ ಪೂರ್ವ ಭಾಗದಲ್ಲಿದ್ದು, ಜಪಾನ್ ನ ತಲಾವಾರು GDP ಯು 44,000 ಡಾಲರ್ ಹಾಗೂ GDP ಯು 4123 ಬಿಲಿಯನ್ ಆಗಿರುವುದರಿಂದ ಆರ್ಥಿಕ ಬಲದ ಆಧಾರದ ಮೇಲೆ ಈ ದೇಶವು ಏಷ್ಯಾದ ಶ್ರೀಮಂತ ದೇಶಗಳಲ್ಲಿ ಒಂದಾಗಿದೆ. 127 ಮಿಲಿಯನ್ ಗಿಂತಲೂ ಹೆಚ್ಚಿನ ಜನಸಂಖ್ಯೆಗೆ ತವರಾಗಿದ್ದು ಕೇವಲ 3% ರಷ್ಟು ಉದ್ಯೋಗದ ದರವನ್ನು ಹೊಂದಿದೆ. ಜಪಾನ್ ದೇಶದ ಅರ್ಥವ್ಯವಸ್ಥೆ ಮೋಟಾರು ವಾಹನಗಳ ರಫ್ತಿನಿಂದಾಗಿ ನಡೆಯುತ್ತಿದೆ. ಇದರಿಂದಾಗಿ ಜಪಾನ್ ದೇಶವು ಆಟೋಮೊಬೈಲ್ ಉತ್ಪಾದನಾ ದೇಶಗಳಲ್ಲಿ ಮೂರನೇ ಸ್ಥಾನವನ್ನು ಹೊಂದಲು ಸಾಧ್ಯವಾಗಿದೆ. ಈ ಸ್ಥಾನವನ್ನು ತಲುಪಲು ಕಾರಣವಾದ ಇತರೆ ಉತ್ಪಾದನೆಗಳೆಂದರೆ ಅರೆವಾಹಕಗಳು, ಕಬ್ಬಿಣ ಮತ್ತು ಸ್ಟೀಲ್ ನ ಉತ್ಪಾದನೆಗಳು, ಆಟೋ ಬಿಡಿಭಾಗಗಳು, ಪ್ಲಾಸ್ಟಿಕ್ ಸಾಮಾಗ್ರಿಗಳು, ಶಕ್ತಿ ಉತ್ಪಾದನಾ ಯಂತ್ರಗಳು ಮುಂತಾದವು. ಗಮನಿಸಬೇಕಾದ ಅಂಶವೆಂದರೆ, ಎಲೆಕ್ಟ್ರಾನಿಕ್ ಸರಕುಗಳ ಅತ್ಯಂತ ದೊಡ್ದ ಉತ್ಪಾದನೆ ಜಪಾನ್ ನಲ್ಲಿ ನಡೆಯುತ್ತದೆ. ಇದರಿಂದಾಗಿ ನಾವಿನ್ಯತೆಯನ್ನು ಹೊಂದಿರುವ ಈ ದೇಶ ಉನ್ನತ ಸ್ಥಾನವನ್ನು ಪಡೆಯಲು ಸಾದ್ಯವಾಗಿದೆ.

8. ಬಹ್ರೇನ್

8. ಬಹ್ರೇನ್

ಬಹ್ರೇನ್ ಪರ್ಷಿಯನ್ ಕೊಲ್ಲಿಯ ಉದ್ದಕ್ಕೂ ಹರಡಿರುವ, ರಾಜಪ್ರಭುತ್ವವನ್ನು ಹೊಂದಿರುವ ಸಣ್ಣದಾದ ಅರಬ್ ದೇಶಗಳಲ್ಲಿ ಒಂದಾಗಿದೆ. ಇಂದು ವಿಶ್ವದ ಪ್ರಬಲ ಕರೆನ್ಸಿಯನ್ನು ಹೊಂದಿರುವ ದೇಶಗಳಲ್ಲಿ ಬಹ್ರೇನ್ ಕೂಡ ಒಂದು. ಅದರ ಮೌಲ್ಯದ ಪರಿಭಾಷೆಯಲ್ಲಿ ಈ ದೇಶವು ಎರಡನೇ ಅಗ್ರಸ್ಥಾನವನ್ನು ಹೊಂದಿದೆ. ಬಹ್ರೇನ್ ನ ಅರ್ಥವ್ಯವಸ್ಥೆಯು ಪ್ರವಾಸೋದ್ಯಮ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಿಂದಾಗಿ ನಡೆಯುತ್ತದೆ. ಇಲ್ಲಿಯ ಬ್ಯಾಂಕಿಂಗ್ ಕ್ಷೇತ್ರ ವಿಶ್ವದಲ್ಲೇ ಅತ್ಯಂತ ಹೆಚ್ಚು ಯಶಸ್ಸನ್ನು ಗಳಿಸಿದೆ. ಅಲ್ಲದೇ, ವಿಶ್ವದಲ್ಲೇ ಆರ್ಥಿಕ ವ್ಯವಸ್ಥೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ದೇಶವು ತೈಲದ ರಫ್ತಿನಲ್ಲಿ ಉನ್ನತ ಸ್ಥಾನದಲ್ಲಿದ್ದು, ಒಟ್ಟು ರಫ್ತಿನ ಶೇ. 60 ಭಾಗವನ್ನು ಆವರಿಸಿದೆ. ಉಳಿದ ಭಾಗ ಅಲ್ಯೂಮಿನಿಯಂ ಹಾಗೂ ಜವಳಿಯದ್ದಾಗಿದೆ. ಬಹ್ರೇನ್, ಅಲ್ಯೂಮಿನಿಯಂ ರಫ್ತಿನಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ.

7. ಇಸ್ರೇಲ್

7. ಇಸ್ರೇಲ್

ಇಸ್ರೇಲ್ ಏಷ್ಯಾದ ಅತೀ ಶ್ರಿಮಂತ ದೇಶಗಳಲ್ಲಿ ಒಂದಾಗಿದ್ದು, ಮೆಡಿಟರೇನಿಯನ್ ಸಮುದ್ರದ ಆಗ್ನೇಯ ತೀರದಲ್ಲಿದೆ. ಇದು ಯಹೂದಿ ರಾಷ್ಟ್ರವಾಗಿದ್ದು, ಅತ್ಯುನ್ನತ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೊಂದಿರುವ 20 ದೇಶಗಳಲ್ಲಿ ಅಗ್ರ ಸ್ಥಾನವನ್ನು ಹೊಂದಿದೆ. ಈ ದೇಶದ ಅರ್ಥವ್ಯವಸ್ಥೆಯು ಉನ್ನತ ತಂತ್ರಜ್ಞಾನ ಪ್ರಗತಿ ಹಾಗೂ ಕೈಗಾರಿಕಾ ಉತ್ಪಾದನೆಯಿಂದಾಗಿ ನಡೆಯುತ್ತದೆ. ಅವುಗಳಲ್ಲಿ ಪ್ರಮುಖವಾದುದು ವಜ್ರದ ಉದ್ಯಮವಾಗಿದೆ.

ಇಸ್ರೇಲ್, ವಿಶ್ವದಲ್ಲೇ ಬಲವಾದ ಶೈಕ್ಷಣಿಕ ಮೂಲ ಸೌಕರ್ಯವನ್ನು ಹಾಗೂ ಉನ್ನತ ಗುಣಮಟ್ಟದ ಇನ್ಕ್ಯುಬೇಷನ್ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದೆ. ಈ ದೇಶದ ಅರ್ಥವ್ಯವಸ್ಥೆಯು ಉನ್ನತ ತಂತ್ರಜ್ಞಾನ ಉತ್ಪನ್ನಗಳು, ದೂರಸಂಪರ್ಕ ಉಪಕರಣಗಳು, ಮಿಲಿಟರಿ ಉಪಕರಣಗಳು, ಔಷಧ, ಯಂತ್ರೋಪಕರಣಗಳು, ಉತ್ಪಾದನಾ ಯಂತ್ರೋಪಕರಣ ಆಧಾರಿತ ಉಪಕರಣಗಳು, ಕತ್ತರಿಸಿದ ವಜ್ರಗಳು ಮತ್ತು ಆಭರಣಗಳು, ಕೃಷಿ ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳು, ರಾಸಾಯನಿಕಗಳು, ಜವಳಿ ಮತ್ತು ಉಡುಪುಗಳ ಬೆಂಬಲದಿಂದ ನಡೆಯುತ್ತದೆ. ಈ ಎಲ್ಲಾ ಉತ್ಪನ್ನಗಳ ರಫ್ತಿನಿಂದಾಗಿ ಪಾಶ್ಚಿಮಾತ್ಯ ಏಷ್ಯಾ ದೇಶವು 33,000 ಯು ಎಸ್ ಡಿ ಯನ್ನು ಹೊಂದಿದ್ದು, ಇದರ ಜಿಡಿಪಿಯು 300 ಬಿಲಿಯನ್ ಆಗಿದೆ.

 

6. ಬ್ರೂನಿ

6. ಬ್ರೂನಿ

ಬ್ರೂನಿ ಏಷ್ಯಾದ ಆಗ್ನೇಯ ಭಾಗದಲ್ಲಿದ್ದು, ಅತ್ಯುನ್ನತ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಈ ದೇಶದ ಜನಸಂಖ್ಯೆಯು ಸುಮಾರು 500,000 ಆಗಿದ್ದು, ಒಟ್ಟು ತಲಾವಾರು ಉತ್ಪನ್ನವು 66,000 ಡಾಲರ್ ಆಗಿದೆ. ಈ ದೇಶದ ಅರ್ಥವ್ಯವಸ್ಥೆಯು ಕಚ್ಚಾತೈಲ ಹಾಗೂ ನೈಸರ್ಗಿಕ ಅನಿಲಗಳ ರಫ್ತಿನಿಂದ ನಡೆಯುತ್ತದೆ. ಈ ಎರಡು ಉತ್ಪನ್ನಗಳ ಆದಾಯವು ದೇಶದ ಅರ್ಧದಷ್ಟು GDP ಯನ್ನು ತಲುಪುವಂತೆ ಮಾಡುತ್ತದೆ. ಬ್ರೂನಿ ತೈಲ ಉತ್ಪಾದನೆಯಲ್ಲಿ ದಕ್ಷಿಣದ ಪೂರ್ವ ದೇಶಗಳಲ್ಲಿ ಮೂರನೇ ಸ್ಥಾನದಲ್ಲಿದ್ದು, ವಿಶ್ವದಲ್ಲಿ ದ್ರವೀಕೃತ ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬ್ರೂನಿ ಸರ್ಕಾರವು ತನ್ನ ನಾಗರೀಕರಿಗೆ ವೈದ್ಯಕೀಯ, ಆಹಾರ ಮತ್ತು ವಸತಿಗಳಿಗೆ ಸಬ್ಸಿಡಿಯನ್ನು ಒದಗಿಸುವುದರಿಂದ ವಿಶ್ವದಲ್ಲೇ ಉತ್ತಮ ಸರ್ಕಾರಗಳಲ್ಲಿ ಒಂದಾಗಿದೆ.

5. ಹಾಂಗ್ ಕಾಂಗ್

5. ಹಾಂಗ್ ಕಾಂಗ್

ಈ ದೇಶವು 1,106 ಚದರ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನು ಆವರಿಸಿದ್ದು, 7 ಮಿಲಿಯನ್ ಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಇದರಿಂದಾಗಿ ವಿಶ್ವದ ಅತ್ಯಂತ ಜನನಿಬಿಡ ಪ್ರದೇಶವನ್ನು ಹೊಂದಿರುವ 5 ದೇಶಗಳಲ್ಲಿ ಒಂದಾಗಿದೆ. ಈ ದೇಶವು ಪೂರ್ವ ಏಷ್ಯಾದಲ್ಲಿ ನೆಲೆಗೊಂಡಿದೆ. ಹಾಂಗ್ ಕಾಂಗ್ ಮುಂದುವರೆಯುತ್ತಿರುವ ಪ್ರಪಂಚದ ಅಂತರಾಷ್ಟ್ರೀಯ ಹಣಕಾಸು ಕೇಂದ್ರಗಳಲ್ಲಿ ಒಂದಾಗಿದೆ. ಅಲ್ಲದೆ, ಜಗತ್ತಿನಲ್ಲಿ ಅತೀ ಹೆಚ್ಚು ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿದೆ. ಇದರ ತಲಾವಾರು ಒಟ್ಟು ದೇಶೀಯ ಉತ್ಪನ್ನವು 36,000 ಡಾಲರ್ ಆಗಿರುವುದರಿಂದ ಏಷ್ಯಾದಲ್ಲಿನ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರಬಲವಾದ ಆರ್ಥಿಕ ವ್ಯವಸ್ಥೆ, ಬಲವಾದ ಕಾನೂನು ವ್ಯವಸ್ಥೆ, ಕಡಿಮೆ ತೆರಿಗೆಯಿಂದಾದ ವಿದೇಶಿ ಹೂಡಿಕೆ ಹಾಗೂ ಸ್ನೇಹಯುತವಾದ ವಿದೇಶಿ ಪದ್ಧತಿ, ಪ್ರವಾಸೋದ್ಯಮ ಹಾಗೂ ಶೇ. 90 GDP ಆದಾಯಕ್ಕೆ ಕಾರಣವಾದ ಸೇವೆಯ ಅವಕಾಶಗಳಿಂದ ಈ ದೇಶದ ಅರ್ಥವ್ಯವಸ್ಥೆಯು ನಡೆಯುತ್ತಿದೆ.

4. ಕುವೈತ್

4. ಕುವೈತ್

ಕುವೈತ್ ಪಶ್ಚಿಮ ಏಷ್ಯಾದ ಪರ್ಷಿಯನ್ ಕೊಲ್ಲಿಯ ತುತ್ತ ತುದಿಯಲ್ಲಿದ್ದು, 4 ಮಿಲಿಯನ್ ಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಒಂದು ವಿಸ್ಮಯಕಾರಿ ಸಂಗತಿಯೆಂದರೆ, ಕುವೈತ್ ನ ದಿನಾರ್ ವಿಶ್ವದಲ್ಲೇ ಅತ್ಯಂತ ಹೆಚ್ಚು ಬೆಲೆಯನ್ನು ಹೊಂದಿರುವ ಮತ್ತು ಉತ್ತಮ ಸ್ಥಾನದಲ್ಲಿರುವ ಕರೆನ್ಸಿಯಾಗಿದೆ. ಈ ದೇಶದ ಅರ್ಥವ್ಯವಸ್ಥೆಯು ಸಂಪೂರ್ಣವಾಗಿ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ಆರ್ಥಿಕ ಸೇವೆಗಳ ಅವಕಾಶಗಳು ಹಾಗೂ ರಸಗೊಬ್ಬರಗಳ ರಫ್ತಿನಿಂದಾಗಿ ನಡೆಯುತ್ತದೆ. ಪೆಟ್ರೋಲಿಯಂ ಉದ್ಯಮವು ಸರ್ಕಾರದ ಶೇ. 95 ನಷ್ಟು ಆದಾಯಕ್ಕೆ ಕಾರಣವಾಗಿದ್ದು ದೇಶದ ಬೆನ್ನೆಲಬು ಆಗಿದೆ. ಈ ದೇಶದ ತಲಾವಾರು ಜಿಡಿಪಿಯು ಹೆಚ್ಚಿದ್ದು, ಅಂದರೆ ಸರಾಸರಿ 40,000 ಡಾಲರ್ ಆಗಿದ್ದು, ಅಗ್ರ 5 ದೇಶಗಳಲ್ಲಿ ಒಂದಾಗಿದೆ.

3. ಸಿಂಗಾಪುರ

3. ಸಿಂಗಾಪುರ

ವಿಶ್ವದ ಏಕೈಕ ದ್ವೀಪದ ದೇಶ ಅಥವಾ ಸಿಂಹ ನಗರವಾಗಿದ್ದು, ಆಗ್ನೇಯ ಏಷ್ಯಾದಲ್ಲಿ ನೆಲೆಗೊಂಡಿದೆ. ಈ ದೇಶದ ಜನಸಂಖ್ಯೆಯು 5 ಮಿಲಿಯನ್ ಗಿಂತಲೂ ಹೆಚ್ಚಿನದಾಗಿದೆ. ಜಗತ್ತಿನಲ್ಲಿ ಇಲ್ಲಿಯ ಅರ್ಥವ್ಯವಸ್ಥೆಯು ತೆರೆದ ಪುಟದಂತಿದ್ದು ವ್ಯಾಪಾರಕ್ಕೆ ಹೆಚ್ಚು ಪರವಾಗಿದೆ. ಖರೀದಿ ಸಾಮರ್ಥ್ಯದ ಪರಿಭಾಷೆಯಲ್ಲಿ ಈ ದೇಶವು ವಿಶ್ವದಲ್ಲೇ ಮೂರನೇಯ ಸ್ಥಾನದಲ್ಲಿದೆ. ಇಲ್ಲಿಯ ತಲಾವಾರು ದೇಶೀಯ ಉತ್ಪನ್ನವು 52,000 ಡಾಲರ್ ಆಗಿದೆ. ಸಿಂಗಾಪುರ ಸೌಹಾರ್ದಯುತವಾದ ಬಂಡವಾಳ ಹೂಡಿಕೆಯ ವಾತಾವರಣ ಹಾಗೂ ರಾಜಕೀಯ ಪರಿಸರವನ್ನು ಹೊಂದಿರುವುದರಿಂದ ಹೂಡಿಕೆದಾರರು ವಿದೇಶಿ ನೇರ ಹೂಡಿಕೆಗಳನ್ನು ಮಾಡುತ್ತಾರೆ. ಈ ಹೂಡಿಕೆಗಳಿಂದ ದೇಶದ ಅರ್ಥಿಕತೆ ಮುನ್ನಡೆಯುತ್ತದೆ. ಸರ್ಕಾರದ ಬಹುಪಾಲು ಆದಾಯಕ್ಕೆ ಕಾರಣ ಇಲ್ಲಿನ ಕೆಲವು ಪ್ರಮುಖ ಎಲೆಕ್ಟ್ರಾನಿಕ್, ರಾಸಾಯನಿಕ ಹಾಗೂ ಸೇವೆಗಳ ರಫ್ತು ಆಗಿದೆ.

2. ಮಕಾವು

2. ಮಕಾವು

ಮಕಾವು ಏಷ್ಯಾದಲ್ಲೇ ಮಾತ್ರವಲ್ಲ ಇಡೀ ವಿಶ್ವದಲ್ಲೇ ಶ್ರೀಮಂತ ದೇಶಗಳಲ್ಲಿ ಒಂದಾಗಿದೆ. ಇಲ್ಲಿ ಸುಮಾರು 600,000 ಜನರು, 11.8 ಚದರ ಮೈಲಿ ವಿಸ್ತೀರ್ಣದಲ್ಲಿ ವಾಸಿಸುತ್ತಿದ್ದು, ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಈ ದೇಶದ ಅರ್ಥವ್ಯವಸ್ಥೆಯು ಹೆಚ್ಚಾಗಿ ಜೂಜು, ಪ್ರವಾಸೋದ್ಯಮ, ಉಡುಪು, ಜವಳಿ, ಪಾದರಕ್ಷೆಗಳು, ಆಟಿಕೆಗಳು, ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು ಹಾಗೂ ಬಿಡಿಭಾಗಗಳಿಂದ ನಡೆಯುತ್ತಿದೆ.
ಮಕಾವು ದೇಶದ ತಲಾವಾರು ಒಟ್ಟು ದೇಶೀಯ ಉತ್ಪನ್ನ ಸುಮಾರು 55,000 ಡಾಲರ್ ಹಾಗೂ GDP ತಲಾ PPPಯು 104,000 ಡಾಲರ್ ಆಗಿದೆ. ವಿಶ್ವದಲ್ಲಿನ ಅಗ್ರ ಸ್ಥಾನದಲ್ಲಿರುವ 20 ದೇಶಗಳಲ್ಲಿ ಮಕಾವು ದೇಶವು ಉನ್ನತವಾದ ಮಾನವ ಅಭಿವೃದ್ದಿ ಸೂಚ್ಯಂಕವನ್ನು ಹೊಂದಿದೆ.

ಅದ್ಭುತವಾದ ವಿಚಾರವೆಂದರೆ ಮಕಾವು ಅಧಿಕ ಜೀವಿತಾವಧಿಯನ್ನು ಹೊಂದಿರುವ ಅಗ್ರ ಮೂರು ದೇಶಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣ ಇಲ್ಲಿಯ ಉಪೋಷ್ಣವಲಯದ ಹವಾಮಾನ, ಉನ್ನತ ಮಟ್ಟದಲ್ಲಿರುವ ಕಲಾತ್ಮಕ ವೈದ್ಯಕೀಯ ಸೇವೆಗಳು ಹಾಗೂ ಸಾಂಪ್ರದಾಯಿಕ ಚೈನೀಸ್ ತಿನಿಸು.

1. ಕತಾರ್

1. ಕತಾರ್

ಕತಾರ್ ದೇಶ ಪಶ್ಚಿಮ ಏಷ್ಯಾದಲ್ಲಿ ನೆಲೆಗೊಂಡಿದ್ದು, ಏಷ್ಯಾ ಖಂಡದಲ್ಲಿಯೇ ಅತೀ ಶ್ರೀಮಂತ ದೇಶವಾಗಿದೆ. ವಿಶ್ವದಲ್ಲೇ ಅತೀ ಹೆಚ್ಚು ತಲಾವಾರು ಆದಾಯವನ್ನು ಹೊಂದಿದ್ದು, 3 ಮಿಲಿಯನ್ ಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರದ ಈ ದೇಶವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಉನ್ನತ ಸ್ಥಾನದಲ್ಲಿದೆ. ಇಲ್ಲಿಯ ತಲಾವಾರು ಒಟ್ಟು ದೇಶೀಯ ಉತ್ಪನ್ನವು ಸುಮಾರು 75,000 ಡಾಲರ್ ಆಗಿದೆ. ಪೆಟ್ರೋಲಿಯಂ ಹಾಗೂ ದೃವೀಕೃತ ಅನಿಲಗಳು ಖತಾರ್ ದೇಶದ ಬೆನ್ನೆಲಬು ಆಗಿದ್ದು, ಸರ್ಕಾರದ ಶೇ. 71 ರಷ್ಟು ಆದಾಯ ಹಾಗು ಸುಮಾರು ಶೇ. 65 ಜಿಡಿಪಿಗೆ ಕಾರಣವಾಗಿವೆ. ವಿಶ್ವದ ಒಟ್ಟು ನೈಸರ್ಗಿಕ ಅನಿಲದ ನಿಕ್ಷೇಪಗಳಲ್ಲಿ ಶೇ. 5ಗಿಂತಲೂ ಹೆಚ್ಚು ಕತಾರ್ ದೇಶದಲ್ಲಿದೆ. ಇದು ವಿಶ್ವದಲ್ಲಿಯೇ ಮೂರನೇಯ ಅತೀ ದೊಡ್ದ ನೈಸರ್ಗಿಕ ನಿಕ್ಷೇಪವಾಗಿದೆ. ಈ ದೇಶವು 2022 ರ FIFA ವಿಶ್ವಕಪ್ ಪಂದ್ಯಾವಳಿಯ ಅತಿಥೇಯವನ್ನು ವಹಿಸಲಿರುವ ಮೊದಲ ಅರಬ್ ದೇಶವಾಗಿದೆ.

ಕೊನೆ ಮಾತು

ಕೊನೆ ಮಾತು

ಈ ಮೇಲೆ ತಿಳಿಸಿದ ದೇಶಗಳು ಏಷ್ಯಾದಲ್ಲಿಯೇ ಅತೀ ಶ್ರೀಮಂತವಾಗಿವೆ. ಇಲ್ಲಿ ತಿಳಿಸಿದ ಮಾಹಿತಿ ನಂಬಲರ್ಹ ಮೂಲಗಳಿಂದ ಅಂದರೆ, ವ್ಯಾಪಾರ ಅರ್ಥಶಾಸ್ತ್ರ, ವಿಶ್ವಬ್ಯಾಂಕ್, ಫ್ಯಾಕ್ಟ್ ಬುಕ್, ಅಂತರಾಷ್ಟ್ರೀಯ ಹಣಕಾಸು ನಿಧಿ ಇವುಗಳಿಂದ ಪಡೆಯಲಾಗಿದೆ. ಈ ದೇಶಗಳಲ್ಲಿ ಕಡಿಮೆ ಉದ್ಯೋಗ ದರವಿರುವುದು ಅಷ್ಟೇ ಸತ್ಯವಾದ ವಿಷಯವಾಗಿದ್ದು, ಇಲ್ಲಿ ಉತ್ತಮವಾದ ಆಡಳಿತ ವ್ಯವಸ್ಥೆ, ಸೌಹಾರ್ದ ಹೂಡಿಕೆ ವಾತವರಣ, ಕಡಿಮೆ ಜನಸಂಖ್ಯೆ, ವಿದ್ಯಾವಂತ, ನುರಿತ, ನಾವಿನ್ಯತೆಯನ್ನು ಹೊಂದಿರುವ ಕಾರ್ಯಪಡೆ ಇದೆ. ಅಲ್ಲದೇ ನೈಸರ್ಗಿಕ ಸಂಪನ್ಮೂಲಗಳ ಆಶೀರ್ವಾದ ಈ ದೇಶಗಳ ಮೇಲೆ ಇದೆ. ಒಂದು ವೇಳೆ ನೀವು ಹೂಡಿಕೆದಾರರಾಗಿದ್ದಲ್ಲಿ, ಈ ದೇಶಗಳನ್ನು ನಿಮ್ಮ ಆಯ್ಕೆಯಾಗಿ ತೆಗೆದುಕೊಂಡರೆ ನೀವೆಂದೂ ತಪ್ಪಾಗಲಾರಿರಿ. ಏಷ್ಯಾದ ಅಗ್ರ 10 ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿಲ್ಲ.

Read more about: money india finance news
English summary

Top 10 Richest Asian Countries

Asia is one of the largest continent on the planet in respect to area, population and has 48 countries in it.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X