For Quick Alerts
ALLOW NOTIFICATIONS  
For Daily Alerts

ಮುಗಿದ ಹಗ್ಗ ಜಗ್ಗಾಟ! ಜೆಡಿಎಸ್ ಗೆ ಹಣಕಾಸು ಹಾಗು ಕಾಂಗ್ರೆಸ್ ಗೆ ಗೃಹ ಖಾತೆ

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿ(ಎಸ್)ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಸಮಸ್ಯೆ ಬಹುತೇಕ ಬಗೆಹರಿದಿದೆ. ಹಣಕಾಸು ಖಾತೆಯ ಮೇಲೆ ಎರಡು ಪಕ್ಷಗಳು ಕಣ್ಣಿಟ್ಟು, ಹಗ್ಗಜಗ್ಗಾಟದಲ್ಲಿ ತೊಡಗಿದ್ದವು.

|

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿ(ಎಸ್) ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಸಮಸ್ಯೆ ಬಹುತೇಕ ಬಗೆಹರಿದಿದೆ. ಹಣಕಾಸು ಖಾತೆಯ ಮೇಲೆ ಎರಡು ಪಕ್ಷಗಳು ಕಣ್ಣಿಟ್ಟು, ಹಗ್ಗಜಗ್ಗಾಟದಲ್ಲಿ ತೊಡಗಿದ್ದವು. ಆದರೆ ಹಣಕಾಸು ಖಾತೆ ಜೆಡಿಎಸ್ ಹಾಗು ಗೃಹ ಖಾತೆ ಕಾಂಗ್ರೆಸ್ ಪಾಲಾಗಲಿದ್ದು, ಸಂಪುಟ ವಿಸ್ತರಣೆಯಲ್ಲಿದ್ದ ಸಮಸ್ಯೆಗಳು ಹೆಚ್ಚುಕಡಿಮೆ ಬಗೆಹರಿದಂತಾಗಿವೆ.

ಮುಗಿದ ಹಗ್ಗ ಜಗ್ಗಾಟ!  ಜೆಡಿಎಸ್ ಗೆ ಹಣಕಾಸು ಹಾಗು ಕಾಂಗ್ರೆಸ್ ಗೆ ಗೃಹ

ಹಣಕಾಸು, ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆಗಳು ಜೆಡಿಎಸ್ ಗೆ ಪಾಲಾಗಿವೆ. ಅದೇ ರೀತಿ ಗೃಹ, ಇಂಧನ, ಜಲಸಂಪನ್ಮೂಲ ಸೇರಿದಂತೆ ಇನ್ನಿತರ ಪ್ರಮುಖ ಖಾತೆಗಳು ಕಾಂಗ್ರೆಸ್‌ ಪಾಲಾಗಲಿವೆ.

ಖಾತೆಗಳ ಹಂಚಿಕೆ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಉಳಿದ ಖಾತೆ ಹಂಚಿಕೆ ಬಗ್ಗೆ ಅಂತಿಮ ನಿರ್ಧಾರವಾಗಲಿದೆ.

34 ಮಂತ್ರಿ ಸ್ಥಾನಗಳಲ್ಲಿ 22 ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್ ಪೈಪೋಟಿಯಲ್ಲಿದ್ದು, ಇನ್ನುಳಿದ 12 ಸ್ಥಾನಗಳು ಜೆಡಿ(ಎಸ್) ಪಾಲಾಗಲಿವೆ.

English summary

JD(S) likely to get finance ministry, Congress may go with home ministry

JD(S) likely to get finance ministry, Congress may go with home ministry
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X