For Quick Alerts
ALLOW NOTIFICATIONS  
For Daily Alerts

2018ರ ಭಾರತದ ಟಾಪ್ 10 ಶತಕೋಟ್ಯಾಧಿಪತಿಗಳು

ಭಾರತದ ಅಗ್ರ ಹತ್ತು ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಫೋರ್ಬ್ಸ್ ನಿಯತಕಾಲಿಕೆ 2018 ರಲ್ಲಿ ವಿಶ್ವದ ಶ್ರೀಮಂತ ಶತಕೋಟ್ಯಾಧಿಪತಿಗಳ ಪಟ್ಟಿಯನ್ನು ಬಿಡುಗಡೆಗೊಲಿಸಿದೆ.

By Siddu
|

ಭಾರತದ ಅಗ್ರ ಹತ್ತು ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಫೋರ್ಬ್ಸ್ ನಿಯತಕಾಲಿಕೆ 2018 ರಲ್ಲಿ ವಿಶ್ವದ ಶ್ರೀಮಂತ ಶತಕೋಟ್ಯಾಧಿಪತಿಗಳ ಪಟ್ಟಿಯನ್ನು ಬಿಡುಗಡೆಗೊಲಿಸಿದೆ. ಜಾಗತಿಕ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತೀಯರು ಸ್ಥಾನ ಪಡೆದಿದ್ದು, ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಇವರು 2017ರ ಭಾರತದ ಅತ್ಯಂತ ಶ್ರೀಮಂತ ಸ್ಟಾರ್ಟ್ಅಪ್ ಸ್ಥಾಪಕರು

1. ಮುಖೇಶ್ ಅಂಬಾನಿ

1. ಮುಖೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಫೋರ್ಬ್ಸ್ ಪತ್ರಿಕೆ ಪ್ರಕಾರ 2018 ರಲ್ಲಿ 16.9 ಶತಕೋಟಿ ಡಾಲರ್ ಮೌಲ್ಯ ಏರಿಕೆಯೊಂದಿಗೆ, 40.1 ಶತಕೋಟಿ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ.
ಈ ವರ್ಷ ಅಂಬಾನಿ ಜಾಗತಿಕವಾಗಿ 19ನೇ ಸ್ಥಾನದಲ್ಲಿದ್ದು, ಜಾಗತಿಕವಾಗಿ ಕಳೆದ ವರ್ಷ 33ನೇ ಸ್ಥಾನದಲ್ಲಿದ್ದ ಅಂಬಾನಿ ಈ ಬಾರಿ ವರ್ಷ 19ನೇ ಸ್ಥಾನಕ್ಕೆ ಏರಿದ್ದಾರೆ. ಮುಕೇಶ್ ಅಂಬಾನಿಯ ಆಸ್ತಿ ಶೇ. 72.84ರಷ್ಟು ಏರಿಕೆಯಾಗಿದೆ.

2. ಅಜೀಮ್ ಪ್ರೇಮಜೀ

2. ಅಜೀಮ್ ಪ್ರೇಮಜೀ

2018ರಲ್ಲಿ ಅತಿ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ವಿಪ್ರೋ ಲಿಮಿಟೆಡ್ ಅಧ್ಯಕ್ಷ ಅಜೀಮ್ ಪ್ರೇಮಜೀ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರು 2018ರಲ್ಲಿ 18.8 ಶತಕೋಟಿ ಮೌಲ್ಯದೊಂದಿಗೆ ಜಾಗತಿಕವಾಗಿ 58ನೇ ಸ್ಥಾನಕ್ಕೆ ಏರಿದ್ದಾರೆ. 2017 ರಲ್ಲಿ 14.9 ಶತಕೋಟಿ ಮೌಲ್ಯದೊಂದಿಗೆ 72 ನೇ ಸ್ಥಾನದಲ್ಲಿದ್ದರು.

3. ಲಕ್ಷ್ಮಿ ಮಿತ್ತಲ್
 

3. ಲಕ್ಷ್ಮಿ ಮಿತ್ತಲ್

ಜಾಗತಿಕ ಉಕ್ಕಿನ ಉತ್ಪಾದಕ ಆರ್ಸೆಲರ್ ಮಿತ್ತಲ್ ನ ಅಧ್ಯಕ್ಷ ಮತ್ತು ಸಿಇಒ ಲಕ್ಷ್ಮಿ ಮಿತ್ತಲ್ 2018 ರಲ್ಲಿ 18.5 ಶತಕೋಟಿ ಮೌಲ್ಯದೊಂದಿಗೆ ಭಾರತೀಯ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಮೌಲ್ಯವು 2017 ರಲ್ಲಿ 16.4 ಶತಕೋಟಿ ಡಾಲರ್ ಆಗಿತ್ತು.

4. ಶಿವ ನಾಡರ್

4. ಶಿವ ನಾಡರ್

ಹೆಚ್ಸಿಎಲ್ ಸಂಸ್ಥೆಯ ಸಹ-ಸಂಸ್ಥಾಪಕರಾಗಿರುವ ಶಿವ ನಾಡರ್, ಫೋರ್ಬ್ಸ್ 2018 ರ ಭಾರತೀಯ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದು ಭಾರತದ ಪ್ರಮುಖ ಸಾಫ್ಟ್ವೇರ್ ಸೇವೆ ಒದಗಿಸುವ ಕಂಪನಿಯಾಗಿದೆ. ನಿವ್ವಳ ಮೌಲ್ಯವು 14.6 ಬಿಲಿಯನ್ ಡಾಲರ್ ಆಗಿದೆ ಮತ್ತು ಜಾಗತಿಕವಾಗಿ 98ನೇ ಸ್ಥಾನದಲ್ಲಿದ್ದಾರೆ.

5. ದಿಲೀಪ್ ಶಾಂಘ್ವಿ

5. ದಿಲೀಪ್ ಶಾಂಘ್ವಿ

ದಿಲೀಪ್ ಶಾಂಘ್ವಿ ಸನ್ ಫಾರ್ಮಾಸ್ಯುಟಿಕಲ್ಸ್ನ ಸಹ ಸಂಸ್ಥಾಪಕರಾಗಿದ್ದು,ಇದು ಭಾರತದ ಅತ್ಯಂತ ವಿಶ್ವಾಸಾರ್ಹ ಔಷಧೀಯ ಕಂಪನಿಯಾಗಿದೆ. ಐದನೇ ಅತಿ ಶ್ರೀಮಂತ ಭಾರತೀಯನಾಗಿದ್ದು, ಈ ವರ್ಷ 12.8 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದಾರೆ. ಅವರು ಫೋರ್ಬ್ಸ್ 2018ರ ಜಾಗತಿಕ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿಯೂ 115 ನೇ ಸ್ಥಾನವನ್ನು ಆಕ್ರಮಿಸಿದ್ದಾರೆ.

6. ಕುಮಾರ್ ಮಂಗಲಂ ಬಿರ್ಲಾ

6. ಕುಮಾರ್ ಮಂಗಲಂ ಬಿರ್ಲಾ

ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷರಾಗಿದ್ದ ಕುಮಾರ್ ಮಂಗಲಂ ಬಿರ್ಲಾ ಅವರು 2018 ರಲ್ಲಿ ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿಯಲ್ಲಿದ್ದಾರೆ. 11.8 ಶತಕೋಟಿ ಮೌಲ್ಯದೊಂದಿಗೆ ಅವರು ಆರನೇ ಅತಿ ಶ್ರೀಮಂತ ಭಾರತೀಯರೆನಿಸಿದ್ದು, ಫೋರ್ಬ್ಸ್ ಪಟ್ಟಿ ಪ್ರಕಾರ ಜಾಗತಿಕವಾಗಿ 127ನೇ ಸ್ಥಾನದಲ್ಲಿದ್ದಾರೆ.

7. ಉದಯ್ ಕೊಟಕ್

7. ಉದಯ್ ಕೊಟಕ್

ಕೋಟಾಕ್-ಮಹೀಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಉದಯ್ ಕೋಟಕ್ ಭಾರತದ ಪ್ರಮುಖ ಖಾಸಗಿ ಬ್ಯಾಂಕುಗಳಲ್ಲಿ ಒಂದಾಗಿದೆ. ಅವರು ಫೋರ್ಬ್ಸ್ ಶ್ರೀಮಂತ ಭಾರತೀಯ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಏಳನೆಯ ಸ್ಥಾನದಲ್ಲಿದ್ದು, 10.7 ಶತಕೋಟಿ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ. ಫೋರ್ಬ್ಸ್ ಜಾಗತಿಕ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ 143 ನೇ ಸ್ಥಾನದಲ್ಲಿದ್ದಾರೆ.

8. ರಾಧಾಕಿಶನ್ ದಮಾನಿ

8. ರಾಧಾಕಿಶನ್ ದಮಾನಿ

ರಾಧಾಕಿಶನ್ ದಮಾನಿ ಒಬ್ಬ ಹಿರಿಯ ಹೂಡಿಕೆದಾರರಾಗಿದ್ದು, ಅವರು ಸೂಪರ್ ಮಾರ್ಕೆಟ್ ಸರಣಿ ಡಿ-ಮಾರ್ಟ್ ಅನ್ನು ಹೊಂದಿದ್ದಾರೆ. 2017ರ ಫೋರ್ಬ್ಸ್ ಪಟ್ಟಿಯಲ್ಲಿ ಶ್ರೀಮಂತ ಭಾರತೀಯ ಉದ್ಯಮಿಗಳ ಪೈಕಿ ಅವರು 12 ನೇ ಸ್ಥಾನದಲ್ಲಿದ್ದರು. 2018 ರಲ್ಲಿ 10 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ 8 ನೇ ಸ್ಥಾನದಲ್ಲಿದ್ದಾರೆ.

9. ಗೌತಮ್ ಅದಾನಿ

9. ಗೌತಮ್ ಅದಾನಿ

ಅದಾನಿ ಗ್ರೂಪ್ನ ಸಂಸ್ಥಾಪಕ ಆಗಿರುವ ಗೌತಮ್ ಅದಾನಿ, ಫೋರ್ಬ್ಸ್ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಒಂಬತ್ತನೆಯ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಮೌಲ್ಯವು 9.7 ಶತಕೋಟಿ.

10. ಸೈರಸ್ ಎಸ್. ಪೂನವಾಲಾ

10. ಸೈರಸ್ ಎಸ್. ಪೂನವಾಲಾ

ಸೈರಸ್ ಎಸ್. ಪೂನವಾಲಾ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರಾಗಿದ್ದಾರೆ. ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕರಾಗಿದ್ದು, ಶ್ರೀಮಂತ ಭಾರತೀಯರಲ್ಲಿ 9.1 ಶತಕೋಟಿ ನಿವ್ವಳ ಮೌಲ್ಯದದೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.

Read more about: india money finance news
English summary

Top 10 Indian Billionaires in 2018

Forbes magazine, the business magazine that produces an annual list on the richest billionaires worldwide every year, has published its latest list for the year 2018.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X