For Quick Alerts
ALLOW NOTIFICATIONS  
For Daily Alerts

ಅನಾಣ್ಯೀಕರಣದ ನಂತರ ತೆರಿಗೆ ಸಂಗ್ರಹ ಮತ್ತು ಡಿಜಿಟಲ್ ಪೇಮೆಂಟ್ ನಲ್ಲಿ ಗಣನೀಯ ಹೆಚ್ಚಳ: ಅರುಣ್ ಜೇಟ್ಲಿ

ನೋಟು ನಿಷೇಧದ ನಂತರ ದೇಶದ ಆರ್ಥಿಕತೆ ಸುಧಾರಿಸಿದ್ದು, ತೆರಿಗೆ ಸಂಗ್ರಹ ಮತ್ತು ಡಿಜಿಟಲ್ ಪೇಮೆಂಟ್ ನಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

|

ನೋಟು ನಿಷೇಧದ ನಂತರ ದೇಶದ ಆರ್ಥಿಕತೆ ಸುಧಾರಿಸಿದ್ದು, ತೆರಿಗೆ ಸಂಗ್ರಹ ಮತ್ತು ಡಿಜಿಟಲ್ ಪೇಮೆಂಟ್ ನಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.
ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳಲು ಸಂಪನ್ಮೂಲ ಸಂಗ್ರಹಕ್ಕೆ ಸರ್ಕಾರಕ್ಕೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.

86.35 ಲಕ್ಷ ಹೊಸ ತೆರಿಗೆದಾರರು

86.35 ಲಕ್ಷ ಹೊಸ ತೆರಿಗೆದಾರರು

ಕಳೆದ 4 ವರ್ಷಗಳಲ್ಲಿ ಐಟಿಆರ್ ಸಲ್ಲಿಕೆ 3.8 ಕೋಟಿಯಿಂದ 6.86 ಕೋಟಿಗೆ ಏರಿಕೆ ಕಂಡಿದೆ. 5ನೇ ವರ್ಷ ಪೂರೈಸುವ ವೇಳೆಗೆ ಸರಕಾರ ಆದಾಯ ತೆರಿಗೆದಾರರ ನೆಲೆಯನ್ನು ದುಪದಪಟ್ಟುಗೊಳಿಸುವ ನಿರೀಕ್ಷೆ ಇದೆ. ೨೦೧೮ರಲ್ಲಿ ಇದುವರೆಗೆ 86.35 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ.

ಜಿಎಸ್‌ಟಿ ಜಾರಿಗೆ ಶಕ್ತಿ

ಜಿಎಸ್‌ಟಿ ಜಾರಿಗೆ ಶಕ್ತಿ

2014-15ರಿಂದ ಇಲ್ಲಿಯವರೆಗೆ ಪರೋಕ್ಷ ತೆರಿಗೆ ಸಂಗ್ರಹ ಶೇ.4.4ರಿಂದ ಶೇ. 5.4ಕ್ಕೆ ಏರಿಕೆಯಾಗಿದೆ. ನೋಟು ಅಮಾನ್ಯತೆಯ ನಂತರ ತೆರಿಗೆದಾರರ ಸಂಖ್ಯೆ ಹೆಚ್ಚಳದ ಪರಿಣಾಮ ಜಿಎಸ್‌ಟಿ ಜಾರಿಗೂ ಪುಷ್ಟಿ ಸಿಕ್ಕಿದೆ. ನಗದು ವಹಿವಾಟು ಕ್ರಮೇಣ ಕಡಿಮೆಯಾಗುತ್ತಿದ್ದು, ಕ್ಯಾಶ್‌ಲೆಸ್‌ ವಹಿವಾಟು ಜನಪ್ರಿಯವಾಗುತ್ತಿದೆ.

ನೋಟು ರದ್ದತಿ ನಂತರ
 

ನೋಟು ರದ್ದತಿ ನಂತರ

ನೋಟು ರದ್ದತಿ ನಂತರ ಬಹುತೇಕ ಹಣ ಬ್ಯಾಂಕುಗಳಿಗೆ ವಾಪಸ್‌ ಬಂದಿರುವುದು ಸಮಸ್ಯೆಯೇ ಅಲ್ಲ. ಕರೆನ್ಸಿ ಜಪ್ತಿ ಮಾಡುವುದು ಕೇಂದ್ರದ ಉದ್ದೇಶವಾಗಿರಲಿಲ್ಲ. ನೋಟು ರದ್ದತಿ ಮೂಲಕ ಆರ್ಥಿಕತೆಗೆ ಔಪಚಾರಿಕ ಚೌಕಟ್ಟು ಒದಗಿಸಲು ಸಾಧ್ಯವಾಯಿತು. ತೆರಿಗೆ ಸಂಗ್ರಹ ಏರಿಕೆಗೆ ಕಾರಣವಾಗಿದೆ.

English summary

Demonetisation, ITR and digital payments increase lot: Arun Jaitley

second anniversary of demonetisation, finance minister Arun Jaitley clarified that the real purpose of demonetisation was not the confiscation of cash .
Story first published: Friday, November 9, 2018, 14:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X