For Quick Alerts
ALLOW NOTIFICATIONS  
For Daily Alerts

ಬೆಂಗಳೂರು ನಂಬರ್ 1, ಯಾವುದರಲ್ಲಿ ಗೊತ್ತಾ?

ರಾಷ್ಟ್ರವ್ಯಾಪಿ ಕೌಶಲ್ಯ ಸಮೀಕ್ಷೆ ವರದಿ ಪ್ರಕಾರ, ಉದ್ಯೋಗಶೀಲತೆ (ಅತ್ಯಧಿಕ ಉದ್ಯೋಗ) ವಿಚಾರದಲ್ಲಿ ಸತತ ಎರಡನೇ ವರ್ಷ ಆಂಧ್ರಪ್ರದೇಶ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.

|

ರಾಷ್ಟ್ರವ್ಯಾಪಿ ಕೌಶಲ್ಯ ಸಮೀಕ್ಷೆ ವರದಿ ಪ್ರಕಾರ, ಉದ್ಯೋಗಶೀಲತೆ (ಅತ್ಯಧಿಕ ಉದ್ಯೋಗ) ವಿಚಾರದಲ್ಲಿ ಸತತ ಎರಡನೇ ವರ್ಷ ಆಂಧ್ರಪ್ರದೇಶ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಪಶ್ಚಿಮ ಬಂಗಾಳ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ದೆಹಲಿ ಮೂರನೇ ಸ್ಥಾನದಲ್ಲಿದೆ. ಜಗತ್ತಿನ 25 ಶ್ರೀಮಂತ ದೇಶಗಳು

 

ಬೆಂಗಳೂರು ನಂಬರ್ 1

ಬೆಂಗಳೂರು ನಂಬರ್ 1

ರಾಷ್ಟ್ರವ್ಯಾಪಿ ಕೌಶಲ್ಯ ಸಮೀಕ್ಷೆ ವರದಿ ಪ್ರಕಾರ, ನಗರಗಳ ಪಟ್ಟಿಯಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಚೆನ್ನೈ, ಗುಂಟೂರು, ಲಕ್ನೋ, ಮುಂಬೈ, ನವದೆಹಲಿ, ನಾಸಿಕ್ ಹಾಗೂ ಪುಣೆ ನಗರಗಳು ಸ್ಥಾನ ಪಡೆದಿವೆ.

ಪರೀಕ್ಷೆ

ಪರೀಕ್ಷೆ

ಜುಲೈ 15 ರಿಂದ ಅಕ್ಟೋಬರ್ 30 ರವರೆಗೆ ರಾಷ್ಟ್ರವ್ಯಾಪಿ ಕೌಶಲ್ಯ ಸಮೀಕ್ಷೆ ನಡೆದಿದೆ. ವಿದ್ಯಾರ್ಥಿಗಳಿಗೆ ಇಂಗ್ಲೀಷ್, ವಿಮರ್ಶಾತ್ಮಕ ಚಿಂತನೆ, ಸಂಖ್ಯಾತ್ಮಕ ಸಾಮರ್ಥ್ಯ, ವರ್ತನಾ ಸಾಮರ್ಥ್ಯ, ಡೊಮೇನ್ ಜ್ಞಾನ ಸೇರಿದಂತೆ ಅನೇಕ ವಿಷಯಗಳ ಮೇಲೆ ಪರೀಕ್ಷೆ ನಡೆಸಲಾಗಿತ್ತು.

ಶೇ. 57.1ಕ್ಕೆ ಏರಿಕೆ
 

ಶೇ. 57.1ಕ್ಕೆ ಏರಿಕೆ

ಎಂಬಿಎ ವಿದ್ಯಾರ್ಥಿಗಳಲ್ಲಿ ಶೇ. 3ರಷ್ಟು ಉದ್ಯೋಗಶೀಲತೆ ಇಳಿಕೆಯಾಗಿದ್ದರೆ, ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಉದ್ಯೋಗಶೀಲತಾ ಮಟ್ಟ ಹೆಚ್ಚಾಗಿದೆ. ಹಿಂದಿನ ವರ್ಷದಿಂದ ಈ ವರ್ಷಕ್ಕೆ ಶೇ. 5.6 ರಿಮದ ಶೇ. 57.1ಕ್ಕೆ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

ಗುಜರಾತ್ ವಿಫಲ

ಗುಜರಾತ್ ವಿಫಲ

ರಾಜಸ್ತಾನ ಹಾಗೂ ಹರ್ಯಾಣ ಅಗ್ರ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೆ, ಮಧ್ಯಪ್ರದೇಶ, ಗುಜರಾತ್, ಪಂಜಾಬ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿವೆ. ಉದ್ಯೋಗಿಗಳ ಪ್ರತಿಭೆಯಲ್ಲಿ ಏರಿಕೆ ಕಂಡಿದ್ದು, 2014ರಲ್ಲಿ ಪ್ರತಿಭೆ ಮಟ್ಟ ಶೇ. 33.9ರಷ್ಟಿದ್ದರೆ, ಈಗ ಶೇ. 47.8 ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Read more about: employment jobs bangalore money
English summary

Bangalore tops cities in employability

Andhra Pradesh has topped the list of states with the highest employability for the second year in a row according to a nationwide skills survey.
Story first published: Tuesday, November 20, 2018, 13:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X