For Quick Alerts
ALLOW NOTIFICATIONS  
For Daily Alerts

ನೇಪಾಳದಲ್ಲಿ ನೋಟ್ ನಿರ್ಬಂಧ : ಭಾರತದ ಪ್ರವಾಸಿಗರಿಗೆ ಆಘಾತ

|

ಭಾರತದ ನೆರೆ ರಾಷ್ಟ್ರ ನೇಪಾಳದ ಸರ್ಕಾರವು ಪ್ರವಾಸಿಗರಿಗೆ ಆಘಾತಕಾರಿ ಸುದ್ದಿಯೊಂದನ್ನು ಸೋಮವಾರ (ಜನವರಿ 21)ದಂದು ನೀಡಿದೆ. 100 ರುಪಾಯಿ ಮೌಲ್ಯಕ್ಕೂ ಅಧಿಕ ಮೊತ್ತದ ಭಾರತೀಯ ಕರೆನ್ಸಿಗಳ ಚಲಾವಣೆಯನ್ನು ನೇಪಾಳ ನಿಷೇಧಿಸಿದೆ.

ನೇಪಾಳಕ್ಕೆ ಬರುವ ಪ್ರವಾಸಿಗರ ಪೈಕಿ ಭಾರತೀಯರೇ ಅತಿ ಹೆಚ್ಚು ಎಂಬ ಅಂಕಿ ಅಂಶವಿದೆ. ಆದರೂ, ಭಾರತದ 2000, 500 ಹಾಗೂ 200 ರೂ. ನೋಟುಗಳ ಚಲಾವಣೆ ಮೇಲೆ ನಿಷೇಧ ಹೇರಿದೆ.

ನೇಪಾಳದಲ್ಲಿ ನೋಟ್ ನಿರ್ಬಂಧ : ಭಾರತದ ಪ್ರವಾಸಿಗರಿಗೆ ಆಘಾತ

 

ಈ ನಿರ್ಧಾರದಿಂದ ಭಾರತೀಯ ಪ್ರವಾಸಿಗರಿಗೆ ಆಘಾತವನ್ನುಂಟು ಮಾಡಿದೆ. ನೇಪಾಳದಲ್ಲಿ ಭಾರತೀಯ ನೋಟುಗಳ ಚಲಾವಣೆಗೆ ಮಾನ್ಯತೆಯಿದೆ. ಆದರೆ, ಕಳೆದ ಎರಡು ವರ್ಷಗಳ ಹಿಂದೆ 1000 ಹಾಗೂ 500 ರೂಪಾಯಿ ನೋಟುಗಳ ಚಲಾವಣೆಯನ್ನು ನಿಷೇಧಿಸಿ, ಮೋದಿ ಸರ್ಕಾರವು ನೋಟ್ ಬ್ಯಾನ್ ಜಾರಿಗೊಳಿಸಿತ್ತು.

ಇದಾದ ಬಳಿಕ 2000, 500 ಹಾಗೂ 200 ರೂ. ಮುಖ ಬೆಲೆಯ ನೋಟುಗಳು ಚಲಾವಣೆಗೆ ತರಲಾಗಿತ್ತು. ಈ ನೋಟುಗಳನ್ನು ನೇರವಾಗಿ ನೇಪಾಳದಲ್ಲೂ ಬಳಸಬಹುದಾಗಿತ್ತು.

ಆದರೆ, ನೇಪಾಳ ರಾಷ್ಟ್ರ ಬ್ಯಾಂಕ್ ನೀಡಿರುವ ಪ್ರಕಟಣೆಯಂತೆ, ಬ್ಯಾಂಕ್, ಅರ್ಥಿಕ ಸಂಸ್ಥೆಗಳು ಭಾರತದ 100 ರುಪಾಯಿ ಮೌಲ್ಯಕ್ಕೂ ಅಧಿಕ ಮೊತ್ತದ ಕರೆನ್ಸಿಗಳನ್ನು ಹೊಂದದಂತೆ ನಿರ್ಬಂಧಿಸಲಾಗಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.

2020ರ ವೇಳೆಗೆ 2 ಮಿಲಿಯನ್ ಪ್ರವಾಸಿಗರನ್ನು ಕಾಣುವ ವಿಸಿಟ್ ನೇಪಾಳ್ ಅಭಿಯಾನ ನಡೆಸುತ್ತಿರುವ ನೇಪಾಳ ಸರ್ಕಾರವು ಇನ್ನೊಂದೆಡೆ, ನೋಟ್ ಚಲಾವಣೆ ಮೇಲೆ ನಿರ್ಬಂಧ ಹೇರುವ ಮೂಲಕ ಪ್ರವಾಸಿಗರು, ಉದ್ಯಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

English summary

Nepal's central bank announces ban of Indian notes above ₹100

Nepal's central bank has banned the use of Indian currency notes of ₹2,000, ₹500 and ₹200 denominations, a move that could affect Indian tourists visiting the Himalayan nation where Indian currency is widely used.
Story first published: Monday, January 21, 2019, 20:09 [IST]
Company Search
COVID-19