For Quick Alerts
ALLOW NOTIFICATIONS  
For Daily Alerts

ಮಧ್ಯಂತರ ಬಜೆಟ್ ಮಂಡನೆ: ಮತದಾರರನ್ನು ಸೆಳೆಯಲು ಮೋದಿ ಸರ್ಕಾರ ಏನು ಮಾಡಬಹುದು?

ನರೇಂದ್ರ ಮೋದಿ ಸರ್ಕಾರ ಮಂಡಿಸುತ್ತಿರುವ ಕೊನೆಯ ಮಧ್ಯಂತರ ಬಜೆಟ್ ಇದಾಗಿದ್ದು, ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮತದಾರರನ್ನು ಸೆಳೆಯಲು ಇದು ಕೊನೆಯ ಅವಕಾಶ ಆಗಿದೆ.

|

ನರೇಂದ್ರ ಮೋದಿ ಸರ್ಕಾರ ಮಂಡಿಸುತ್ತಿರುವ ಕೊನೆಯ ಮಧ್ಯಂತರ ಬಜೆಟ್ ಇದಾಗಿದ್ದು, ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮತದಾರರನ್ನು ಸೆಳೆಯಲು ಇದು ಕೊನೆಯ ಅವಕಾಶ ಆಗಿದೆ.

ಲೋಕಸಭಾ ಚುನಾವಣೆ ಬರುವ ಮೇ ತಿಂಗಳಲ್ಲಿ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ರೇಲ್ವೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರು ಮಧ್ಯಂತರ ಹಣಕಾಸು ಸಚಿವರಾಗಿ ಇಂದು ಕೊನೆಯ ಬಜೆಟ್ ನ್ನು ಮಂಡಸಲಿದ್ದಾರೆ.

ಮಧ್ಯಂತರ ಬಜೆಟ್: ಮತದಾರರನ್ನು ಸೆಳೆಯಲು ಮೋದಿ ಸರ್ಕಾರ ಏನು ಮಾಡಬಹುದು?

ಉದ್ಯೋಗ ಸೃಷ್ಟಿಯಲ್ಲಿ ಮೋದಿ ಸರ್ಕಾರ ವಿಫಲವಾಗಿರುವುದು ಬಿಜೆಪಿಗೆ ದೊಡ್ಡ ಹೊಡೆತವಾಗಿದ್ದು, ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಸಂಭವಿಸಿದೆ ಎಂದು ಎನ್ಎಸ್ಎಸ್ಒ ವರದಿ ಸೋರಿಕೆಯಾಗಿರುವುದು ಇಡೀ ದೇಶದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಉದ್ಯೋಗ ಸೃಷ್ಟಿ ವೈಫಲ್ಯ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಘಡ್ ರಾಜ್ಯಗಳಲ್ಲಿ ಬಿಜೆಪಿಯ ಸೋಲು ಪ್ರಸ್ತುತ ಬಜೆಟ್ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ರೈತರ ಸಾಲಮನ್ನಾ, ಯುವಕರಿಗೆ ಉದ್ಯೋಗ ಸೃಷ್ಟಿ, ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಹಲವಾರು ಯೋಜನೆಗಳನ್ನು ಘೋಷಿಸಿ ಮತದಾರರನ್ನು ಆಕರ್ಷಿಸುವ ಅವಶ್ಯಕತೆ ಇದೆ ಎನ್ನಲಾಗಿದೆ.

ರೈತರ ವರ್ಗದ ಸಮಸ್ಯೆಗಳು, ತೆರಿಗೆ ಸುಧಾರಣಾ ಕ್ರಮ, ಜಿಎಸ್ಟಿಯಿಂದ ಬಡ ಮತ್ತು ಮಧ್ಯಮ ವರ್ಗದ ವ್ಯಾಪರದ ಮೇಲಾಗಿರುವ ಹೊಡೆತ ನಿವಾರಣೆ ಕ್ರಮಗಳು ಕೊನೆಯ ಬಜೆಟ್ ನ ಪ್ರಮುಖ ಅಂಶಗಳಾಗಬಹುದು.
ಇಂದು 11 ಗಂಟೆಗೆ ಪಿಯೂಷ್ ಗೋಯಲ್ ಅವರು ಬಜೆಟ್ ಮಂಡನೆ ಮಾಡಲಿದ್ದು, ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಘೋಷಿಸಲಿರುವ ಎಲ್ಲಾ ಜನಪ್ರಿಯ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ಬಜೆಟ್ 2019: ನೀವು ನಿರೀಕ್ಷೆ ಮಾಡಬಹುದಾದ 5 ತೆರಿಗೆ ವಿನಾಯಿತಿಗಳ ಪಟ್ಟಿ ಇಲ್ಲಿದೆ..

English summary

Budget 2019: This budget is a make-or-break chance for Narendra Modi to woo voters

ನರೇಂದ್ರ ಮೋದಿ ಸರ್ಕಾರ ಮಂಡಿಸುತ್ತಿರುವ ಕೊನೆಯ ಮಧ್ಯಂತರ ಬಜೆಟ್ ಇದಾಗಿದ್ದು, ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮತದಾರರನ್ನು ಸೆಳೆಯಲು ಇದು ಕೊನೆಯ ಅವಕಾಶ ಆಗಿದೆ.ಲೋಕಸಭಾ ಚುನಾವಣೆ ಬರುವ ಮೇ ತಿಂಗಳಲ್ಲಿ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ರೇಲ್ವೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರು ಮಧ್ಯಂತರ ಹಣಕಾಸು ಸಚಿವರಾಗಿ ಇಂದು ಕೊನೆಯ ಬಜೆಟ್ ನ್ನು ಮಂಡಸಲಿದ್ದಾರೆ.
Story first published: Friday, February 1, 2019, 8:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X