For Quick Alerts
ALLOW NOTIFICATIONS  
For Daily Alerts

ಪಾಕಿಸ್ತಾನದ ಮೇಲೆ ಐಎಎಫ್ ಜೆಟ್ ದಾಳಿ, ರೂಪಾಯಿ ಮೌಲ್ಯ ಕುಸಿತ

ಭಾರತೀಯ ವಾಯುಪಡೆಯ ಯುದ್ದ ವಿಮಾನಗಳು ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸಿದ ಸುದ್ದಿ ಷೇರುಪೇಟೆ ಮೇಲೆ ಭಾರೀ ಪರಿಣಾಮ ಬೀರಿದೆ.

|

ಭಾರತೀಯ ವಾಯುಪಡೆಯ ಯುದ್ದ ವಿಮಾನಗಳು ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸಿದ ಸುದ್ದಿ ಷೇರುಪೇಟೆ ಮೇಲೆ ಭಾರೀ ಪರಿಣಾಮ ಬೀರಿದೆ. ಪಾಕಿಸ್ತಾನದ ಮೇಲೆ ಐಎಎಫ್ ಜೆಟ್ ದಾಳಿಯಿಂದ ಷೇರು ಮಾರುಕಟ್ಟೆ ಕುಸಿತ ಕಂಡಿದ್ದು, ರುಪಾಯಿ ಮೌಲ್ಯ ಕುಸಿದಿದೆ.

ಪಾಕಿಸ್ತಾನದ ಮೇಲೆ ಐಎಎಫ್ ಜೆಟ್ ದಾಳಿ, ರೂಪಾಯಿ ಮೌಲ್ಯ ಕುಸಿತ

ವಾಯುಪಡೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಮೂರು ದಿನದ ನಂತರ ಮೊದಲ ಬಾರಿಗೆ ಭಾರತೀಯ ರೂಪಾಯಿ ಕುಸಿತ ಕಂಡಿದೆ. ಬೆಳಿಗ್ಗೆ ಸಮಯ 9.04 ಗಂಟೆಗೆ 71.2475 ಪ್ರತಿ ಡಾಲರ್ ಗೆ ರೂಪಾಯಿ ಶೇ. 0.4 ಕುಸಿದಿದ್ದು, ನಿಫ್ಟಿ ಸ್ಟಾಕ್ ಫ್ಯೂಚರ್ಸ್ ಶೇ. 0.7 ರಷ್ಟು ಇಳಿಕೆಯಾಗಿದೆ. ಷೇರಪೇಟೆ ಆರಂಭವಾಗುವ ಮುನ್ನವೇ ವಾಯುಸೇನೆಯ ದಾಳಿ ಜಾಲತಾಣಗಳಲ್ಲಿ ವರದಿ ಪ್ರಕಟವಾಗಿತ್ತು. ನಿಪ್ಟಿ ಸೂಚ್ಯಂಕ ೩೫.೬೦ ಅಂಶ ಕುಸಿತದೊಂದಿಗೆ ದಿನದ ವಹಿವಾಟು ಆರಂಭಿಸಿತ್ತು. ಬಿಎಸ್ಎಇ ಸೆನ್ಸೆಕ್ಸ್ ೧೨೩.೬೫ ಅಂಶಗಳ ಕುಸಿತದೊಂದಿಗೆ ಇಂದಿನ ವಹಿವಾಟು ಆರಂಭಿಸಿತ್ತು. ಬ್ಯಾಂಕಿಂಗ್, ಆಟೋಮೊಬ್ಐಲ್, ಇಂಧನ, ಗ್ರಾಹಕ ಉಪಯೋಗಿ ಸರಕು, ಮೂಲಸೌಕರ್ಯ, ಔಷಧಿ ಒಳಗೊಂಡಂತೆ ಎಲ್ಲಾ ವಲಯದ ಷೇರುಗಳ ಮೌಲ್ಯವು ಇಳಿಕೆಯಾಗಿದೆ.

ಇಂದು ನಸುಕಿನ ಜಾವ ಭಾರತೀಯ ವಾಯುಸೇನೆ ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ ಅಡಗು ತಾಣದ ಮೇಲೆ ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?

ಬೆಳಗಿನ ಜಾವ ಸುಮಾರು 3.30ಕ್ಕೆ 1000 ಕೆಜಿ ಬಾಂಬ್‌ ನ್ನು ಉಗ್ರರ ನೆಲೆ ಮೇಲೆ ಹಾಕಲಾಗಿದೆ. ಒಟ್ಟು 12 ಮಿರಾಜ್‌ ಯುದ್ಧ ವಿಮಾನಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. 21 ನಿಮಿಷಗಳ ಕಾಲ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿ 12 ವಾಯುಪಡೆ ವಿಮಾನಗಳು ಸುರಕ್ಷಿತವಾಗಿ ವಾಪಸ್‌ ಬಂದಿವೆ ಎಂದು ವರದಿಯಾಗಿದೆ.

English summary

Rupee slides as IAF jets attack terror camps in Pakistan

The rupee slid 0.4 percent to 71.2475 per dollar, while Nifty stock futures dropped 0.7 percent at 9:04 a.m. Mumbai time.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X