For Quick Alerts
ALLOW NOTIFICATIONS  
For Daily Alerts

ಎನ್‍ಪಿಸಿಐ ಮೈಲಿಗಲ್ಲು: 64 ಮಿಲಿಯನ್ ರೂಪೆ ಗ್ಲೋಬಲ್ ಕಾರ್ಡ್‍ಗಳ ವಿತರಣೆ

|

ಮುಂಬೈ, ಮಾರ್ಚ್ 07: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‍ಪಿಸಿಐ) ಇಂದು ಹೊಸ ಮೈಲುಗಲ್ಲು ಸಾಧಿಸಿದ್ದು, ಒಟ್ಟಾರೆ 64 ಮಿಲಿಯನ್ ರೂಪೆ ಗ್ಲೋಬಲ್ ಕಾಡ್‍ಗಳನ್ನು ವಿತರಿಸಿದೆ. ಇದರ ಮೊದಲ ವಿತರಣೆ 2014ರಲ್ಲಿ ನಡೆಯಿತು. ಎನ್‍ಪಿಸಿಐ ದೇಶದಲ್ಲಿ ರೂಪೇ ಕಾರ್ಡ್ ನೆಟ್‍ವರ್ಕ್ ನಿರ್ವಹಣೆ ಮಾಡಲಿದ್ದು,ರೂಪೆ ಗ್ಲೋಬಲ್ ಕಾರ್ಡ್‍ಗಳನ್ನು ಭಾರತದ ಹೊರಗಡೆ ವಿತರಿಸಲಿದೆ. ಈ ಪಾಲುದಾರಿಕೆಯು ಭಾರತದಲ್ಲಿ ಕಾರ್ಡ್ ಪೇಮೆಂಟ್ ನೆಟ್‍ವರ್ಕ್ ರೂಪೆಯನ್ನು ಜಾಗತಿಕವಾಗಿಯೂ ವಿಸ್ತರಿಸಲು ನೆರವಾಗಿದೆ.

ಎನ್‍ಪಿಸಿಐ ಚೀಫ್ ಆಪರೇಟಿಂಗ್ ಆಫೀಸರ್ ಪ್ರವೀಣ ರೈ ಅವರು, 'ನಾವು ಅಂತಾರಾಷ್ಟ್ರೀಯವಾಗಿ 64 ಮಿಲಿಯನ್ ರೂಪೇ ಗ್ಲೋಬಲ್ ಕಾರ್ಡ್ ಗ್ರಾಹಕರ ಸ್ವೀಕೃತಿ ಚಟುವಟಿಕೆಯ ಮೇಲೆ ಒತ್ತುನೀಡಿದ್ದೇವೆ. ಡಿಸ್ಕವರ್ ಜೊತೆಗೆ ಪಾಲುದಾರಿಕೆಯೊಂದಿಗೆ ರೂಪೆ ಗ್ಲೋಬಲ್ ಕಾರ್ಡ್‍ಗಳನ್ನು 41 ಮಿಲಿಯನ್ ಗೂ ಅಧಿಕ ಮರ್ಚಂಟ್ಸ್‍ಗಳು ಸುಮಾರು 190 ದೇಶದಲ್ಲಿ ಸ್ವೀಕರಿಸುತ್ತಿದ್ದಾರೆ.. 200ಕ್ಕೂ ಅಧಿಕ ಅಂತರರಾಷ್ಟ್ರೀಯ ಕೊಡುಗೆ ಮೂಲಕ ರೂಪೇ ಗ್ಲೋಬಲ್ ಕಾರ್ಡ್‍ದಾರರು ಹೆಚ್ಚಿನ ಅನುಕೂಲ ಪಡೆಯುತ್ತಿದ್ದಾರೆ' ಎಂದರು.

ರುಪೇ ಕಾರ್ಡ್ ಪ್ರಯೋಜನಗಳೇನು?ರುಪೇ ಕಾರ್ಡ್ ಪ್ರಯೋಜನಗಳೇನು?

ಎರಡು ಪೇಮೆಂಟ್ ನೆಟ್‍ವರ್ಕ್‍ಗಳ ನಡುವೆ ಸಂಪರ್ಕ ಕುರಿತು ಮಾತನಾಡಿದ ಅವರು, ಕಾರ್ಯತಂತ್ರ ಒಪ್ಪಂದವು ಸಹ ಬ್ರಾಂಡ್‍ನಲ್ಲಿ ರೂಪೇ-ಡಿಸ್ಕವರ್ ಡೆಬಿಟ್ ಮತ್ತು ಕ್ರೆಡಿಟ್‍ಕಾಡ ವಿತರಿಸಲು ಸಾಧ್ಯವಾಗುತ್ತಿದೆ. ಪ್ರಸ್ತುತ 40 ಬ್ಯಾಂಕ್‍ಗಳಲ್ಲಿ ಇದನ್ನು ವಿತರಿಸಲಾಗುತ್ತಿದೆ. ರೂಪೇ ಗ್ಲೋಬಲ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳು, ನಗದು ವಾಪಸಾತಿಯು ಡಿಸ್ಕವರ್ ಗ್ಲೋಬಲ್ ನೆಟ್‍ವರ್ಕ್ ಮೂಲಕ ಪ್ರಮುಖ ದೇಶಗಳಾದ ಯುಎಸ್‍ಎ, ಸಿಂಗಪುರ, ನೆಟ್‍ವರ್ಕ್, ಡೈನರ್ಸ್ ಕ್ಲಬ್ ಇಂಟರ್ ನ್ಯಾಷನಲ್, ಪಲ್ಸ್ ಮತ್ತು ಸಹಭಾಗಿ ನೆಟ್‍ವರ್ಕ್‍ಗಳಲ್ಲಿ ಸ್ವೀಕೃತವಾಗಲಿವೆ.

64 ಮಿಲಿಯನ್ ರೂಪೆ ಗ್ಲೋಬಲ್ ಕಾರ್ಡ್‍ಗಳ ವಿತರಣೆ

ನಮ್ಮ ಬಾಂಧವ್ಯವು ರೂಪೆ ಗ್ಲೋಬಲ್ ಕಾರ್ಡ್‍ದಾರರಿಗೆ ತಮ್ಮ ಕಾರ್ಡ್‍ಗಳನ್ನು ವಿವಿಧ ದೇಶಗಳಲ್ಲಿ ಡಿಸ್ಕವರ್ ಗ್ಲೋಬಲ್ ನೆಟ್‍ವರ್ಕ್ ಮೂಲಕ ಚಾಲ್ತಿಯಲ್ಲಿದೆ ಎಂದು ಜೋ ಹರ್ಲೆ, ಸೀನಿಯರ್ ಉಪಾಧ್ಯಕ್ಷ, ಮತ್ತು ಮುಖ್ಯಸ್ಥ, ಗ್ಲೋಬಲ್ ಬ್ಯುಸಿನೆಸ್ ಡೆವಲಪ್‍ಮೆಂಟ್, ಡಿಸ್ಕವರ್ ಅವರು ಹೇಳಿದರು.

ರುಪೇ ಕಾರ್ಡ್ ಇದ್ದರೆ ಈ ಪ್ರಯೋಜನ ಪಡೆಯಬಹುದು ರುಪೇ ಕಾರ್ಡ್ ಇದ್ದರೆ ಈ ಪ್ರಯೋಜನ ಪಡೆಯಬಹುದು

ಈಗ ಕಾರ್ಡ್‍ದಾರರ ಸಂಖ್ಯೆ ಹೆಚ್ಚುತ್ತಿದ್ದು, ಹೆಚ್ಚಿನ ಜನರು ಇದನ್ನು ಬಳಸಲು ಶಕ್ತರಾಗುತ್ತಿದ್ದಾರೆ. ಪ್ರಸ್ತುತ ರೂಪೆ ಗ್ಲೋಬಲ್ ಕಾರ್ಡ್ ಅನ್ನು ಐದು ಮಾದರಿಗಳಲ್ಲಿ ನೀಡಲಾಗುತ್ತಿದೆ. ಅವುಗಳು ರೂಪೆ ಕ್ಲಾಸಿಕ್ ಡೆಬಿಟ್ ಕಾರ್ಡ್, ರೂಪೇ ಕ್ಲಾಸಿಕ್ ಕ್ರೆಡಿಟ್‍ಕಾರ್ಡ್, ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್, ರೂಪೇ ಪ್ಲಾಟಿನಂ ಕ್ರೆಡಿಟ್ ಕಾರ್ಡ್ ವiತ್ತು ರೂಪೇ ಸೆಲೆಕ್ಟ್ ಕ್ರೆಡಿಟ್ ಕಾರ್ಡ್ ಅನ್ನು ವಿತರಿಸಲಿದೆ.

English summary

RuPay Global Cards crosses 64 million issuances

National Payments Corporation of India (NPCI) has reached a milestone by issuing over 64 million RuPay Global cards, since first issuing it in 2014. NPCI which manages the RuPay card network in the country issues RuPay Global cards that run on the Discover Network when used outside India. This partnership helped Indian homegrown card payment network RuPay to expand its footprint globally as well. Ms. Praveena Rai, Chief Operating Officer of NPCI said
Story first published: Thursday, March 7, 2019, 19:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X