For Quick Alerts
ALLOW NOTIFICATIONS  
For Daily Alerts

  ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ ಪಾರ್ಟ್ ಟೈಂ ಕೆಲಸ ಮಾಡಿ ಕೈತುಂಬಾ ಹಣ ಗಳಿಸಿ..

  |

  ಚುನಾವಣೆಗಳು ಸನಿಹಕ್ಕೆ ಬಂದರೆ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿರುತ್ತದೆ. ಕಾರ್ಯಕರ್ತರು ಅವರವರ ಭಾಗಗಳಲ್ಲಿ ಪ್ರಚಾರ ತಂತ್ರಗಳನ್ನು ಹೆಣೆಯುತ್ತಿರುತ್ತಾರೆ. ಅದರಲ್ಲೂ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಬಂದಾಗ ಅನೇಕರಿಗೆ ಉದ್ಯೋಗವಕಾಶ ಕೂಡ ಲಭಿಸುತ್ತದೆ. ಕೆಲ ಕ್ಷೇತ್ರಗಳಲ್ಲಿ ಕೈತುಂಬಾ ಕೆಲಸವಿರುತ್ತದೆ. ಕೆಲವರು ಪಾರ್ಟ್ ಟೈಂ ಕೆಲಸ ಮಾಡಿ ಕೈತುಂಬಾ ಹಣ ಸಂಪಾದನೆ ಮಾಡಬಹುದು. ಹೇಗೆಂದರೆ ಯಾವುದಾದರೂ ಪಕ್ಷ ಅಥವಾ ಅಭ್ಯರ್ಥಿ ಪರವಾಗಿ ಕೆಲಸ ಮಾಡಿ ಹಣ ಗಳಿಸಬಹುದು.

  ಡೇಟಾ ವಿಶ್ಲೇಷಕ

  ನಿಮ್ಮಲ್ಲಿನ ಕೌಶ್ಯಲಕ್ಕೆ ಅನುಗುಣವಾಗಿ ಡೇಟಾ ವಿಶ್ಲೇಷಕರಾಗಿ ಕೆಲಸ ಮಾಡಬಹುದು. ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಚುನಾವಣೆ ಪ್ರಚಾರದ ವೇಳೆ ಅಂಕಿಅಂಶಗಳನ್ನು ಬಯಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಡೇಟಾ ಸಂಗ್ರಹ ಮಾಡಬೇಕಾಗುತ್ತದೆ. ಅದರ ಬಗ್ಗೆ ಮಾಹಿತಿ ಪಡೆಯಲು ಡೇಟಾ ವಿಶ್ಲೇಷಕರ ಅಗತ್ಯವಿರುತ್ತದೆ. ಲೋಕಸಭಾ ಚುನಾವಣೆ ಎಫೆಕ್ಟ್! ಜನ್ ಧನ್ ಖಾತೆಗಳಿಗೆ ತಲಾ 10 ಸಾವಿರ ಜಮಾ..!

  ಸಂಶೋಧಕ

  ಚುನಾವಣೆಗಳ ಸಂದರ್ಭಗಳಲ್ಲಿ ಸಂಶೋಧಕರಿಗೆ ಕೈತುಂಬ ಕೆಲಸವಿರುತ್ತದೆ. ಕ್ಷೇತ್ರದಲ್ಲಿ ಜನರ ಮನಸ್ಥಿತಿಯನ್ನು, ಇಂಗಿತವನ್ನು ಅರಿಯುವುದರ ಜೊತೆ ಜನರಿಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಬೇಕಾಗುತ್ತದೆ. ಅಭ್ಯರ್ಥಿಗಳು ಜನರ ಮನಸ್ಥಿತಿ ಅರಿತು ಅವರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಕ್ಷೇತ್ರದ ಜನರ ಮನಸ್ಥಿತಿಯನ್ನು ತಿಳಿಯುವ, ವಿಶ್ಲೇಷಿಸುವ ಮನೋತಜ್ಞರು/ಅನುಭವಿಗಳು ಬೇಕಾಗುತ್ತದೆ.

  ಸ್ಟ್ರಾಟಜಿ ಮೇಕರ್

  ಸ್ಟ್ರಾಟಜಿ ಮೇಕರ್ ಒಂದು ಸವಾಲಿನ ಕೆಲಸ. ಅನುಭವಿ ಹಾಗೂ ಹಿರಿಯ ಮತ್ತು ನಿರ್ಧಿಷ್ಟ ಪ್ರದೇಶದ ಬಗ್ಗೆ ಹೆಚ್ಚು ಜ್ಞಾನವುಳ್ಳವರಿಗೆ ಈ ಅವಕಾಶ ಸಿಗುತ್ತದೆ. ಇದಕ್ಕೆ ತಕ್ಕ ಹಣ ಕೂಡ ಕೊಡಲಾಗುತ್ತದೆ. ಅಭ್ಯರ್ಥಿ ಹೇಗೆ ಪ್ರಚಾರ ನಡೆಸಬೇಕು, ಮತದಾರರನ್ನು ಸೆಳೆಯಲು ಏನು ಮಾಡಬೇಕು ಎಂಬುದನ್ನು ಸ್ಟ್ರಾಟಜಿ ಮೇಕರ್ ಹೇಳುತ್ತಾರೆ.

  ಇವೆಂಟ್ ಮ್ಯಾನೇಜ್ಮೆಂಟ್

  ಇವೆಂಟ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅನೇಕ ಸೀಸನಲ್ ಸಂದರ್ಭಗಳಲ್ಲಿ ವಿಪುಲ ಅವಕಾಶಗಳಿರುತ್ತವೆ. ಮದುವೆ, ಹುಟ್ಟು ಹಬ್ಬ ಸೇರಿದಂತೆ ಕೆಲ ಸಮಾರಂಭಗಳನ್ನು ಆಯೋಜನೆ ಮಾಡಬೇಕಾಗುತ್ತದೆ. ಚುನಾವಣೆ ಸಂದರ್ಭದಲ್ಲಂತೂ ಇವರಿಗೆ ಕೈತುಂಬ ಕೆಲಸವಿರುತ್ತದೆ. ಅಭ್ಯರ್ಥಿ ಅಥವಾ ಪಕ್ಷದ ಕಾರ್ಯಕ್ರಮಗಳ ಆಯೋಜನೆ, ಅದರ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ.

  ಸೋಷಿಯಲ್ ಮೀಡಿಯಾ ಎಕ್ಸ್ಫರ್ಟ್

  ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಹೆಚ್ಚು ಪ್ರಸಿದ್ಧಿ ಪಡೆದಿದೆ. ಆದ ಕಾರಣ ಸೋಷಿಯಲ್ ಮೀಡಿಯಾ ಎಕ್ಸ್ಫರ್ಟ್ ಅಗತ್ಯತೆ ಕೂಡ ಹೆಚ್ಚಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚು ಪ್ರಭಾವಿಯಾಗಿ ಕ್ಷೇತ್ರ/ಅಭ್ಯರ್ಥಿಗಳ ಬಗ್ಗೆ ಪ್ರಚಾರ ಮಾಡಬಹದು. ಅಭ್ಯರ್ಥಿಗಳು ಹಾಗೂ ಅವರ ಕೆಲಸವನ್ನು ಸುಲಭವಾಗಿ ಸಾಮಾಜಿಕ ಜಾಲತಾಣದ ಮೂಲಕ ಬೇರೆಯವರಿಗೆ ತಿಳಿಸಬಹುದು. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಎಕ್ಸ್ಫರ್ಟ್ ಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ, ಕ್ಯಾಂಪೇನ್ ಕೆಲಸವನ್ನು ಅವರ ಮಾಡಬಹುದು.

  ಕಂಟೆಂಟ್/ಗ್ರಾಫಿಕ್ಸ್ ಡಿಸೈನರ್

  ಚುನಾವಣೆ ಕಾಲದಲ್ಲಿ ಕಂಟೆಂಟ್ ಬರಹಗಾರರಿಗೆ ಹಾಗೂ ಗ್ರಾಫಿಕ್ಸ್ ಡಿಸೈನರ್ ಗಳಿಗೆ ಆಕರ್ಷಕ ಕೆಲಸವಿರುತ್ತದೆ. ಅಭ್ಯರ್ಥಿಯನ್ನು ಆಕರ್ಷಕವಾಗಿ ಜನರಿಗೆ ತಲುಪಿಸುವ ಕೆಲಸ ಈ ತಂತ್ರಜ್ಞರು ಮಾಡಬಹುದು. ಅಭ್ಯರ್ಥಿಗಳು ಕಂಟೆಂಟ್ ರೈಟರ್ ಹಾಗೂ ಗ್ರಾಫಿಕ್ಸ್ ಡಿಸೈನರ್ ಗಳಿಂದ ಅಗತ್ಯ ಕೆಲಸ ಪಡೆಯುತ್ತಾರೆ. ಇಂತಹ ಕೌಶಲ್ಯವಿರುವವರಿಗೆ ಉತ್ತಮ ಸಂಭಾವನೆ ಕೂಡ ಸಿಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಗೆಲುವು?

  English summary

  Lok sabha Election 2019, these part time jobs will help you to get more money

  Loksabha Election 2019, these part time jobs will help you to get more money.
  Story first published: Tuesday, April 9, 2019, 10:39 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more