For Quick Alerts
ALLOW NOTIFICATIONS  
For Daily Alerts

ಶೀಘ್ರದಲ್ಲೇ ಹೊಸ 200 ನೋಟು ಬರಲಿದೆ, ಹಳೆ ನೋಟುಗಳ ಚಲಾವಣೆ..?

ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ರೂ. 200 ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲು ಸಿದ್ದವಾಗಿದೆ. ಮಹಾತ್ಮ ಗಾಂಧೀಜಿ ಸರಣಿಯಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಸಹಿ ಇರುವ ಹೊಸ ನೋಟುಗಳು ಬರಲಿವೆ.

|

ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ರೂ. 200 ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲು ಸಿದ್ದವಾಗಿದೆ. ಮಹಾತ್ಮ ಗಾಂಧೀಜಿ ಸರಣಿಯಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಸಹಿ ಇರುವ ಹೊಸ ನೋಟುಗಳು ಬರಲಿವೆ.
ಏಪ್ರಿಲ್ 23 ರಂದು ಆರ್ಬಿಐ ಅಧಿಸೂಚನೆ ಹೊರಡಿಸಿದ್ದು, ಈಗಾಗಲೇ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳಂತೆ ಇರಲಿವೆ ಎಂದು ತಿಳಿಸಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಸಹಿ ಹೊರತುಪಡಿಸಿದರೆ ಪ್ರಸ್ತುತ ಚಾಲ್ತಿಯಲ್ಲಿರುವ ನೋಟುಗಳಿಗೆ ಮತ್ತು ಹೊಸ ನೋಟುಗಳಿಗೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ಹೇಳಲಾಗಿದೆ.

ಹಳೆ ನೋಟು, ಹೊನೋಟು ವೈಶಿಷ್ಟತೆ

ಹಳೆ ನೋಟು, ಹೊನೋಟು ವೈಶಿಷ್ಟತೆ

ಈ ಹೊಸ ನೋಟುಗಳು ಚಲಾವಣೆಗೆ ಬಂದರೂ ಹಳೆಯ ನೋಟುಗಳು ಚಲಾವಣೆಯಲ್ಲಿ ಇರಲಿವೆ. ಈಗಾಗಲೇ ಚಾಲ್ತಿಯಲ್ಲಿರುವ ನೋಟುಗಳಿಗೆ ಮತ್ತು ಹೊಸ ನೋಟುಗಳಿಗೆ ಯಾವುದೇ ಪ್ರಮುಖ ವ್ಯತ್ಯಾಸ ಇರುವುದಿಲ್ಲ.
ನೋಟಿನ ಮುಂಭಾಗದಲ್ಲಿ ಮಹಾತ್ಮ ಗಾಂಧಿ ಚಿತ್ರವಿದ್ದರೆ, ಹಿಂಭಾಗದಲ್ಲಿ ಸಾಂಚಿಯ ಸ್ತೂಪ ಸ್ಮಾರಕದ ಚಿತ್ರವಿದೆ. ಜತೆಗೆ ಅಶೋಕ ಲಾಂಛನವಿದ್ದು, ಇವು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. 200 ಮುಖಬೆಲೆಯ ಹೊಸ ನೋಟುಗಳ ಗಾಢ ಹಳದಿ ಬಣ್ಣ ಹೊಂದಿದ್ದು, 66mm x 146 mm ಅಳತೆಯನ್ನು ಹೊಂದಿವೆ. ಹೊಸ ರೂ. 100 ನೋಟು ಬಿಡುಗಡೆ, ಅಸಲಿ-ನಕಲಿ ಕಂಡು ಹಿಡಿಯುವುದು ಹೇಗೆ?

200 ನೋಟಿನ ಮುಂಬಾಗದ ವಿಶೇಷತೆ

200 ನೋಟಿನ ಮುಂಬಾಗದ ವಿಶೇಷತೆ

- ದೇವನಾಗರಿಯಲ್ಲಿ ಮುಖಬೆಲೆ ಸಂಖ್ಯೆ २००
- ಮಧ್ಯದಲ್ಲಿ ಮಹಾತ್ಮ ಗಾಂಧಿ ಭಾವಚಿತ್ರ
- ಸೂಕ್ಷ್ಮ ಅಕ್ಷರಗಳಲ್ಲಿ 'ಆರ್ಬಿಐ', 'ಭಾರತ', 'ಭಾರತ' ಮತ್ತು '200'
- ಭದ್ರತೆ ಎಳೆ, ಎಳೆಗಳ ಬಣ್ಣವು ಹಸಿರಿನಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ.
- ಗ್ಯಾರಂಟಿ ಷರತ್ತು
ಮಹಾತ್ಮ ಗಾಂಧಿ ಭಾವಚಿತ್ರದ ಬಲಕ್ಕೆ ಪ್ರಾಮಿಸ್ ಕ್ಲಾಸ್, ಆರ್ಬಿಐ ಲಾಂಛನ
- ಗವರ್ನರ್ ಸಹಿ
- ಬಲಭಾಗದಲ್ಲಿ ಅಶೋಕ ಪಿಲ್ಲರ್ ಲಾಂಛನ
- ಮಹಾತ್ಮ ಗಾಂಧಿ ಭಾವಚಿತ್ರ ಮತ್ತು ಎಲೆಕ್ಟ್ರಾಟೈಪ್ (200) ವಾಟರ್ ಮಾರ್ಕ್
-ನಂಬರ್ ಪ್ಯಾನೆಲ್

ನೋಟಿನ ಹಿಂಬಾಗ

ನೋಟಿನ ಹಿಂಬಾಗ

- ಎಡಭಾಗದಲ್ಲಿ ನೋಟು ಮುದ್ರಣ ವರ್ಷ
- ಸ್ವಚ್ಛ ಭಾರತ್ ಲೋಗೋ
- ಭಾಷಾ ಫಲಕ
- ಸಾಂಚಿ ಸ್ತೂಪದ ವಿಶೇಷ ಚಿತ್ರ
- ದೇವನಾಗರಿಯಲ್ಲಿ२०० ಸಂಖ್ಯೆ

ಹೊಸ ನೋಟುಗಳ ಚಲಾವಣೆ

ಹೊಸ ನೋಟುಗಳ ಚಲಾವಣೆ

2016 ನವೆಂಬರ್ ನಲ್ಲಿ ರೂ. 1000, 500 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ನಂತರ ರೂ. 2000 , 500, 200, 50 , 100 ಹಾಗು 10 ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲಾಗಿದೆ. ಆದರೆ ತದನಂತರದಲ್ಲಿ ನೋಟುಗಳ ಪೂರೈಕೆಯಲ್ಲಿ ಸಮಸ್ಯೆ ಎದುರಾಯಿತು. ನೋಟುಗಳ ಗಾತ್ರಕ್ಕೆ ಅನುಗುಣವಾಗಿ ಎಟಿಎಂ ಕೇಂದ್ರಗಳಲ್ಲಿ ಬದಲಾವಣೆ ಮಾಡಿದ್ದರಿಂದ ಸರ್ಕಾರಕ್ಕೆ ಭಾರೀ ಖರ್ಚು ಮಾಡಬೇಕಾಯಿತು.

Read more about: notes demonetization money rbi
English summary

New Rs 200 currency notes coming soon, This will be the big difference

The Reserve Bank of India is set to introduce new Rs 200 currency notes in the Mahatma Gandhi (New) Series soon. In a notification released on April 23.
Story first published: Thursday, April 25, 2019, 12:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X