For Quick Alerts
ALLOW NOTIFICATIONS  
For Daily Alerts

ಪ್ರಸನ್ನಕುಮಾರ್ ರಾವ್ ಗೆ ಏಷ್ಯಾದ ಕಾರ್ಪೊರೇಟ್ ಎಕ್ಸಲೆನ್ಸ್ ಪ್ರಶಸ್ತಿ

|

ಹೈಡೆಲ್‍ಬರ್ಗ್ ಪ್ರಾಮಿನೆಂಟ್ ಫ್ಲೂಯಿಡ್ ಕಂಟ್ರೋಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಕುಮಾರ್ ರಾವ್ ಅವರಿಗೆ ಉತ್ಪಾದನಾ ಕೈಗಾರಿಕೆ ಕ್ಷೇತ್ರದಲ್ಲಿ ಪ್ರತಿಷ್ಠಿತ ಕಾರ್ಪೊರೇಟ್ ಎಕ್ಸಲೆನ್ಸ್ ಪ್ರಶಸ್ತಿ ಲಭಿಸಿದೆ.

2019 ನೇ ಸಾಲಿಗೆ ಎಂಟರ್ ಪ್ರೈಸಸ್ ಏಷ್ಯಾ ಆಫ್ ಮಲೇಷ್ಯಾ ಈ ಪ್ರತಿಷ್ಠಿತ ಪ್ರಶಸ್ತಿಗೆ ರಾವ್ ಅವರನ್ನು ಆಯ್ಕೆ ಮಾಡಿದ್ದು, ದೆಹಲಿಯ ಹಯಾತ್ ಹೊಟೇಲ್‍ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾವ್ ಅವರು, "ನಮ್ಮ ಅತ್ಯುತ್ಕೃಷ್ಟವಾದ ಉತ್ಪನ್ನಗಳು, ಸೇವೆಗಳು ಮತ್ತು ಭಾರತದ ಪ್ರಮುಖವಾದ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆಯನ್ನು ಗಮನಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ನನಗೆ ಹೆಮ್ಮೆ ಮತ್ತು ಗೌರವ ಎನಿಸುತ್ತಿದೆ. ಭಾರತದಲ್ಲಿ ತಯಾರಾಗುತ್ತಿರುವ ಉನ್ನತ ದರ್ಜೆಯ ಉತ್ಪನ್ನಗಳಿಗೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಥಾನ ಸಿಗುತ್ತಿದೆ ಎಂಬುದರ ಸಂಕೇತ ಇದಾಗಿದೆ. ಅತ್ಯುತ್ಕೃಷ್ಟವಾದ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಸೇವೆಗೆ ನಮ್ಮ ತಂಡ ಕಾರಣವಾಗಿದೆ'' ಎಂದು ಶ್ಲಾಘಿಸಿದರು.

ಎಂಟರ್ ಪ್ರೈಸಸ್ ಏಷ್ಯಾದಿಂದ ಏಷ್ಯಾ ಪೆಸಿಫಿಕ್ ಎಂಟರ್ ಪ್ರನ್ಯುವರ್ಶಿಪ್ ಅವಾರ್ಡ್(ಎಪಿಇಎ) ಯನ್ನು ಉದ್ಯಮಶೀಲತ್ವದ ಶ್ರೇಷ್ಠತೆಯನ್ನು ಪರಿಗಣಿಸಿ ಪ್ರಾದೇಶಿಕ ಪ್ರಶಸ್ತಿ ಪರಿಗಣನೆ ಕಾರ್ಯಕ್ರಮದಡಿ ನೀಡಲಾಗುತ್ತದೆ. ಏಷ್ಯಾದಾದ್ಯಂತ ಅತ್ಯುತ್ತಮ ಆವಿಷ್ಕಾರ, ಉತ್ತಮ ಪದ್ಧತಿಗಳು ಮತ್ತು ಉದ್ಯಮಶೀಲತ್ವದ ಬೆಳವಣಿಗೆ, ಪರಿಸರಸ್ನೇಹಿ ಪದ್ಧತಿ ಅಳವಡಿಕೆ, ಸುಸ್ಥಿರ ಆರ್ಥಿಕತೆ ಮತ್ತು ಸಾಮಾಜಿಕ ಬೆಳವಣಿಗೆಯ ಮೂಲಕ ಸದೃಢ ಏಷ್ಯಾ ನಿರ್ಮಾಣಕ್ಕೆ ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ ಈ ಎಪಿಇಎಗೆ ಅಯ್ಕೆ ಮಾಡಲಾಗುತ್ತದೆ.

ಪ್ರತಿವರ್ಷ ಉನ್ನತ ಮಟ್ಟದ ಉದ್ಯಮಿಗಳಿಗೆ ಪ್ರಶಸ್ತಿ

ಪ್ರತಿವರ್ಷ ಉನ್ನತ ಮಟ್ಟದ ಉದ್ಯಮಿಗಳಿಗೆ ಪ್ರಶಸ್ತಿ

ಈ ಪ್ರಶಸ್ತಿಗಳನ್ನು ಪ್ರತಿವರ್ಷ ಉನ್ನತ ಮಟ್ಟದ ಉದ್ಯಮಿಗಳಿಗೆ ನೀಡಲಾಗುತ್ತದೆ ಮತ್ತು ಪ್ರಶಸ್ತಿ ಸಮಾರಂಭಗಳು 14 ಕ್ಕೂ ಹೆಚ್ಚು ದೇಶಗಳಲ್ಲಿ ನಡೆಯುತ್ತವೆ. ಎಂಟರ್ ಪ್ರೈಸಸ್ ಏಷ್ಯಾ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಈ ಪ್ರಶಸ್ತಿಯನ್ನು ನೀಡುತ್ತಿದೆ. ಈ ಎಪಿಇಎಗೆ ಆಯ್ಕೆಯಾಗುವವರು ವಿಶ್ವದಲ್ಲಿ ಅತ್ಯಂತ ಕಠಿಣವಾದ ಸ್ಪರ್ಧೆಯಲ್ಲಿ ತಮ್ಮ ಕೌಶಲ್ಯ ಮತ್ತು ಅನುಭವವನ್ನು ಸಾಬೀತುಪಡಿಸಬೇಕು. ಜನರಲ್ಲಿ ಹೂಡಿಕೆ ಮತ್ತು ಉದ್ಯಮಶೀಲತ್ವದ ಜವಾಬ್ದಾರಿ ಸೇರಿದಂತೆ ಉದ್ಯಮಶೀಲತ್ವದ ಶ್ರೇಷ್ಠವಾದ ಗುಣಮಟ್ಟಗಳನ್ನು ಎತ್ತಿಹಿಡಿಯುವ ವಾಗ್ದಾನ ಮಾಡಬೇಕು.

ಸುರತ್ಕಲ್ ಎನ್ ಐಟಿ ಹಳೆ ವಿದ್ಯಾರ್ಥಿ

ಸುರತ್ಕಲ್ ಎನ್ ಐಟಿ ಹಳೆ ವಿದ್ಯಾರ್ಥಿ

ಸುರತ್ಕಲ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೆಯ ವಿದ್ಯಾರ್ಥಿಯಾಗಿರುವ ಪ್ರಸನ್ನಕುಮಾರ್ ರಾವ್ ಅವರು ಭಾರತದಲ್ಲಿ ಡೋಸಿಂಗ್ ಪಂಪ್ಸ್, ಕಂಟ್ರೋಲರ್ ಗಳು ಮತ್ತು ಕ್ಲೋರಿನ್ ಡೈ ಆಕ್ಸೈಡ್ ಜನರೇಟರ್ ಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉದ್ಯಮಿಯಾಗಿದ್ದಾರೆ. ಅವರು ಅಂತರಾಷ್ಟ್ರೀಯ ಗುಣಮಟ್ಟದ "ಪ್ರಾಮಿನೆಂಟ್" ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಕೆಗೆ ಕಾರಣರಾದವರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನ ಹೈಡೆಲ್‍ಬರ್ಗ್ ಪ್ರಾಮಿನೆಂಟ್ ಫ್ಲೂಯಿಡ್ ಕಂಟ್ರೋಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಪ್ರಾಮಿನೆಂಟ್ ಜಿಎಂಬಿಎಚ್ ಅಂಗಸಂಸ್ಥೆಯಾಗಿದೆ

ಪ್ರಾಮಿನೆಂಟ್ ಜಿಎಂಬಿಎಚ್ ಅಂಗಸಂಸ್ಥೆಯಾಗಿದೆ

ಹೈಡೆಲ್‍ಬರ್ಗ್ ಪ್ರಾಮಿನೆಂಟ್ ಫ್ಲೂಯಿಡ್ ಕಂಟ್ರೋಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಡೋಸಿಂಗ್ ಪಂಪ್ಸ್, ಕಂಟ್ರೋಲರ್ ಗಳು ಮತ್ತು ಇನ್ನಿತರೆ ಪ್ರಮುಖ ಉತ್ಪನ್ನಗಳು ಮತ್ತು ಮೆಕ್ಯಾನಿಕಲ್, ಕೆಮಿಕಲ್ ಹಾಗೂ ಪ್ರೊಸೆಸ್ ಇಂಡಸ್ಟ್ರೀಸ್ ಸೇವೆಗಳಲ್ಲಿ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಜರ್ಮನಿಯ ಪ್ರಾಮಿನೆಂಟ್ ಜಿಎಂಬಿಎಚ್ ಅಂಗಸಂಸ್ಥೆಯಾಗಿದೆ.

ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳು

ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳು

ಪ್ರಸನ್ನಕುಮಾರ್ ರಾವ್ ಅವರ ನಾಯಕತ್ವದಲ್ಲಿ ಕಂಪನಿಯು ಮೊದಲು ಜಂಟಿ ಸಹಭಾಗಿತ್ವದ ಕಂಪನಿಯಾಗಿತ್ತು, ನಂತರ ಸಂಪೂರ್ಣ ಅಂಗಸಂಸ್ಥೆಯಾಗಿ ಬೆಳೆದಿದೆ. ಭಾರತದಲ್ಲಿ ತಯಾರಾಗುತ್ತಿರುವ ಈ ಕಂಪನಿಯ ಉತ್ಪನ್ನಗಳು ಅತ್ಯುತ್ಕೃಷ್ಟ ಗುಣಮಟ್ಟವನ್ನು ಹೊಂದಿದ್ದು, ಯೂರೋಪ್, ಉತ್ತರ ಅಮೆರಿಕಾ ಮತ್ತು ಏಷ್ಯಾ ಪೆಸಿಫಿಕ್ ಮಾರುಕಟ್ಟೆಗಳಿಗೆ ರಫ್ತಾಗುತ್ತಿವೆ. ಕಂಪನಿಯ ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳು ಸುಲಭ ದರದಲ್ಲಿ ಲಭ್ಯವಾಗುತ್ತಿವೆ.

English summary

Prasanna Kumar Rao wins Corporate Excellence Award from Enterprise Asia

Prasanna Kumar Rao, Managing Director, Heidelberg Prominent Fluid Controls India Pvt Ltd, received the Corporate Excellence award in the Manufacturing Industry, from Enterprise Asia of Malaysia for the year 2019, in a grand event which was conducted at Andaz, Hyatt Hotel, Delhi.
Story first published: Tuesday, April 30, 2019, 16:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X