For Quick Alerts
ALLOW NOTIFICATIONS  
For Daily Alerts

ರೈಲ್ವೆ ಇಲಾಖೆಗೆ 22,000 ಕೋಟಿ ಹೆಚ್ಚುವರಿ ಖರ್ಚು; 100 ಆದಾಯ- 98 ವೆಚ್ಚ

|

ಏಳನೇ ವೇತನ ಆಯೋಗದ ಶಿಫಾರಸು ಜಾರಿಯಾದ ಮೇಲೆ 22,000 ಕೋಟಿ ರುಪಾಯಿಯನ್ನು ವೇತನ ಮತ್ತು ಪಿಂಚಣಿಗಾಗಿಯೇ ಭಾರತೀಯ ರೈಲ್ವೆಯಿಂದ ಹೆಚ್ಚುವರಿಯಾಗಿ ವೆಚ್ಚ ಮಾಡಲಾಗುತ್ತಿದೆ. ಇದರಿಂದ ಇಲಾಖೆಯ ಆರ್ಥಿಕ ಆರೋಗ್ಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಬುಧವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ರೈಲ್ವೆಯ ಕಾರ್ಯ ನಿರ್ವಹಣೆ ನಷ್ಟದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೊಸ ಹಳಿಗಳ ನಿರ್ಮಾಣ ಹಾಗೂ ಆರ್ಥಿಕವಾಗಿ ನಷ್ಟವಾದರೂ ಸಾಮಾಜಿಕ ಜವಾಬ್ದಾರಿಯ ಕಾರಣಕ್ಕೆ ಕೆಲವು ರೈಲುಗಳು ಕಾರ್ಯ ನಿರ್ವಹಿಸುತ್ತಿರುವುದಕ್ಕೆ ದೊಡ್ಡ ಮೊತ್ತದ ಹಣ ವೆಚ್ಚವಾಗುತ್ತಿದೆ ಎಂದಿದ್ದಾರೆ.

"ಏಳನೇ ವೇತನ ಆಯೋಗದ ಶಿಫಾರಸು ಜಾರಿಯಾದ ಮೇಲೆ ರೈಲ್ವೆ ಉದ್ಯೋಗಿಗಳ ವೇತನ ಮತ್ತು ಪಿಂಚಣಿಗೆ ಹೆಚ್ಚುವರಿಯಾಗಿ 22,000 ಕೋಟಿ ಖರ್ಚಾಗುತ್ತಿದೆ. ಇದರಿಂದ ಕಾರ್ಯನಿರ್ವಹಣೆಯ ಒಟ್ಟಾರೆ ವೆಚ್ಚ ಹೆಚ್ಚಾಗಿದೆ" ಎಂದು ಗೋಯಲ್ ಮಾಹಿತಿ ನೀಡಿದ್ದಾರೆ.

ರೈಲ್ವೆ ಇಲಾಖೆಗೆ 22,000 ಕೋಟಿ ಹೆಚ್ಚು ಖರ್ಚು;  100 ಆದಾಯ- 98 ವೆಚ್ಚ

ಸ್ವಚ್ಛತೆಗೆ, ಸಬರ್ಬನ್ ರೈಲ್ವೆ ಟ್ರೇನ್ ಗಳಿಗೆ, ಗೇಜ್ ಪರಿವರ್ತನೆಗೆ ಭಾರೀ ಹಣವನ್ನು ಖರ್ಚು ಮಾಡಲಾಗುತ್ತಿದೆ. ಇವೆಲ್ಲಕ್ಕೂ ವೆಚ್ಚವಾಗುತ್ತದೆ ಮತ್ತು ರೈಲ್ವೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ) ಸೋಮವಾರ ಮಂಡಿಸಿದ ವರದಿ ಪ್ರಕಾರ, ರೈಲ್ವೆಯಿಂದ ಆಪರೇಟಿಂಗ್ ರೇಷಿಯೋ 98.44 ಪರ್ಸೆಂಟ್ ದಾಖಲಾಗಿದೆ. ಕಳೆದ 10 ವರ್ಷದಲ್ಲೇ ಇದು ಅತ್ಯಂತ ಗರಿಷ್ಠ ಮಟ್ಟದ್ದಾಗಿದೆ. ಹೀಗಂದರೆ, ರೈಲ್ವೆಗೆ 100 ರುಪಾಯಿ ಆದಾಯ ಬಂದರೆ 98.44 ರುಪಾಯಿ ಖರ್ಚು ಮಾಡುತ್ತದೆ.

English summary

22 Thousand Crore Over Expenditure To Indian Railways

After implementation of 7th pay commission 22,000 crore more expenditure to Indian Railways, said minister Piyush Goyal.
Story first published: Wednesday, December 4, 2019, 18:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X