For Quick Alerts
ALLOW NOTIFICATIONS  
For Daily Alerts

54,000ಕ್ಕೂ ಹೆಚ್ಚು ಪ್ರಯಾಣಿಕರು, 30 ಸಾವಿರ ಟಿಕೆಟ್ ಮಾರಾಟ, 10 ಕೋಟಿ ಆದಾಯ

|

ಮತ್ತೆ ರೈಲು ಸಂಚಾರ ಆರಂಭಿಸುವ ಬಗ್ಗೆ ಘೋಷಣೆ ಆಗಿ, ಮೇ 11ರಿಂದ ಆನ್ ಲೈನ್ ಟಿಕೆಟ್ ಮಾರಾಟ ಶುರುವಾಗಿದೆ. ಐಆರ್ ಸಿಟಿಸಿಯಿಂದ ಆನ್ ಲೈನ್ ನಲ್ಲಿ 54,000ಕ್ಕೂ ಹೆಚ್ಚು ಪ್ರಯಾಣಿಕರಿಂದ ಅಂದಾಜು 30 ಸಾವಿರ ಟಿಕೆಟ್ ಮಾರಾಟವಾಗಿದೆ. ಅದು ಕೇವಲ ಮೂರು ಗಂಟೆಯೊಳಗಾಗಿ. ಎಲ್ಲ ಮೂರು ಏಸಿ ಕ್ಲಾಸ್ ಟಿಕೆಟ್ ಗಳು ಮುಂಬೈ ಸೆಂಟ್ರಲ್- ನವ ದೆಹಲಿ ಮಧ್ಯೆ ಮೇ 18ರ ತನಕ ಮಾರಾಟ ಆಗಿದೆ.

ಅಧಿಕಾರಿಗಳು ಸೋಮವಾರ ರಾತ್ರಿ 9 ಗಂಟೆ ತನಕದ ಮಾಹಿತಿಯನ್ನು ಆಧರಿಸಿ ಹೇಳಿರುವ ಪ್ರಕಾರ, ಈ ಏಸಿ ರೈಲುಗಳಿಗೆ ಮಾರಾಟ ಮಾಡಿರುವ ಟಿಕೆಟ್ ಗಳಿಂದ 10 ಕೋಟಿ ರುಪಾಯಿ ಆದಾಯ ಬಂದಿದೆ. ಹೌರಾದಿಂದ ಬರುವ ಹಾಗೂ ದೆಹಲಿಯಿಂದ ತೆರಳುವ ರೈಲುಗಳಿಗೆ ತುಂಬ ವೇಗವಾಗಿ ಟಿಕೆಟ್ ಬುಕ್ ಆಗಿದೆ.

ದೆಹಲಿಯಿಂದ ಹದಿನೈದು ಪ್ರಮುಖ ನಗರಗಳನ್ನು ಸಂಪರ್ಕಿಸುವ ಮೂವತ್ತು ರೈಲುಗಳಿಗಾಗಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಅನ್ನು ಸೋಮವಾರ ಸಂಹೆ ನಾಲ್ಕು ಗಂಟೆಯಿಂದ ಆರಂಭಿಸುವುದಾಗಿ ಘೋಷಿಸಿತ್ತು. ಆದರೆ ಅದು ಎರಡು ಗಂಟೆ ತಡವಾಯಿತು. ಒಂದೂವರೆ ಗಂಟೆಯೊಳಗೆ ಹದಿನೆಂಟು ಸಾವಿರ ಟಿಕೆಟ್ ಬುಕ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

54,000  ಪ್ರಯಾಣಿಕರು, 30 ಸಾವಿರ ಟಿಕೆಟ್ ಮಾರಾಟ, 10 ಕೋಟಿ ಆದಾಯ

ತಮಗೆ ಬೇಕಾದ ಮಾರ್ಗಕ್ಕೆ ಟಿಕೆಟ್ ಬುಕ್ ಮಾಡಲು ಆಗುತ್ತಿಲ್ಲ ಎಂದು ಕೆಲವರು ದೂರಿದ್ದರು. ಟ್ವಿಟ್ಟರ್ ಮೂಲಕ ಐಆರ್ ಸಿಟಿಸಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

English summary

30 Thousand Railway Tickets Booked Within 3 Hours

After resuming rail service 30,000 tickets booked within 3 hours on May 11, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X