For Quick Alerts
ALLOW NOTIFICATIONS  
For Daily Alerts

Stock Market Tips- ವೇಗದಲ್ಲಿ ಹಣವೃದ್ಧಿ; 'ಈ 4 ಕಂಪನಿಗಳ ಷೇರು ಕೊಳ್ಳಲು ಸಕಾಲ'

|

ಷೇರುಪೇಟೆಯಲ್ಲಿ ವ್ಯವಹಾರ ನಡೆಸುವುದು ಗ್ಯಾಂಬ್ಲಿಂಗ್ ಎನ್ನುವವರಿದ್ದಾರೆ. ಅದರೆ ಷೇರುಗಳ ಮೇಲೆ ಹೂಡಿಕೆ ಮಾಡಲು ಉದ್ಯಮ ವ್ಯವಹಾರ ಮತ್ತು ಆರ್ಥಿಕ ಮುನ್ನೋಟದ ಅರಿವಿರುವುದು ಸೂಕ್ತ. ಇದೀಗ ಹೂಡಿಕೆ ಸಲಹೆ ನೀಡಲು ಹಲವು ಮಧ್ಯವರ್ತಿ ಸಂಸ್ಥೆಗಳಿವೆ. ಮಾರುಕಟ್ಟೆಯ ಜ್ಞಾನ ಬಲವಾಗಿರುವ ತಜ್ಞರು ಇಂಥ ಸಂಸ್ಥೆಗಳಿರುತ್ತಾರೆ. ಕಿರು ಅವಧಿಯಿಂದ ಹಿಡಿದು ದೀರ್ಘಕಾಲೀನ ಹೂಡಿಕೆಗಳ ಅಗತ್ಯಕ್ಕೆ ತಕ್ಕಂತೆ ಇಂಥವರು ಸಲಹೆ ನೀಡುತ್ತಾರೆ. ಆಕಸ್ಮಿಕ ಬೆಳವಣಿಗೆಗಳಿಂದ ಷೇರುಪೇಟೆ ಕುಸಿತಗೊಳ್ಳುವುದನ್ನು ಹೊರತುಪಡಿಸಿದರೆ ಸಾಮಾನ್ಯವಾಗಿ ಇವರ ಸಲಹೆಗಳು ನಿಖರವಾಗಿರುತ್ತದೆ.

ಇಂಥ ಸಲಹೆಗಾರ ಸಂಸ್ಥೆಗಳಲ್ಲಿ ಐಸಿಐಸಿಐ ಡೈರೆಕ್ಟ್ ಕೂಡ ಒಂದು. ಕಿರು ಅವಧಿಯಲ್ಲಿ ಒಳ್ಳೆಯ ಲಾಭ ಕೊಡಬಲ್ಲ ನಾಲ್ಕು ಷೇರುಗಳನ್ನು ಇದು ಇತ್ತೀಚಿನ ವರದಿಯಲ್ಲಿ ಪ್ರಸ್ತಾಪಿಸಿದೆ. ಅಲ್ಟ್ರಾಟೆಕ್ ಸಿಮೆಂಟ್, ಮಿಶ್ರಾ ಧಾತು ನಿಗಮ್, ಯೂನಿಯನ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್‌ನ ಷೇರುಗಳ ಖರೀದಿಸುವಂತೆ ಐಸಿಐಸಿಐ ಡೈರೆಕ್ಟ್ ಸಲಹೆ ನೀಡಿದೆ. ಅದರ ಪ್ರಕಾರ ಈ ಕಂಪನಿಗಳ ಷೇರುಗಳು 3 ತಿಂಗಳಲ್ಲಿ ಶೇ. 8ರಷ್ಟು ಲಾಭ ತಂದುಕೊಡಬಲ್ಲುವಂತೆ.

1) ಅಲ್ಟ್ರಾಟೆಕ್ ಸಿಮೆಂಟ್: ಶೇ. 6

1) ಅಲ್ಟ್ರಾಟೆಕ್ ಸಿಮೆಂಟ್: ಶೇ. 6

ಭಾರತದ ಅತಿದೊಡ್ಡ ಸಿಮೆಂಟ್ ಕಂಪನಿಗಳಲ್ಲಿ ಒಂದೆನಿಸಿದ ಅಲ್ಟ್ರಾಟೆಕ್ ಸಿಮೆಂಟ್‌ನ ಷೇರು ಬೆಲೆ ಸದ್ಯ ಒಂದಕ್ಕೆ 6,894 ರೂ ಇದೆ. ಇನ್ನು ಮೂರು ತಿಂಗಳಲ್ಲಿ ಈ ಷೇರು ಬೆಲೆ 7290 ರೂಗೆ ಏರಿಕೆ ಆಗಬಹುದು ಎಂಬುದು ಐಸಿಐಸಿಐ ಡೈರೆಕ್ಟ್‌ನವರ ಅಂದಾಜು. ಅಂದರೆ ಮೂರು ತಿಂಗಳಲ್ಲಿ ನೀವು ಶೇ. 6ರಷ್ಟು ಲಾಭ ನಿರೀಕ್ಷಿಸಬಹುದು.

ಅಲ್ಟ್ರಾಟೆಕ್ ಸಿಮೆಂಟ್ ಬಗ್ಗೆ ಭರವಸೆ ಹೊಂದಲು ಕಾರಣವಿದೆ. ಕಳೆದ 3 ವರ್ಷದಲ್ಲಿ ಸಂಸ್ಥೆಯ ಷೇರು ಬೆಲೆ ಶೇ. 63ರಷ್ಟು ಹೆಚ್ಚಾಗಿದೆ. ಒಟ್ಟು ಬಂಡವಾಳ 2 ಲಕ್ಷ ಕೋಟಿಗೆ ತೀರಾ ಸಮೀಪ ಇದೆ. ಭಾರತದಲ್ಲಿ ಇನ್‌ಫ್ರಾಸ್ಟ್ರಕ್ಚರ್ ಕ್ಷೇತ್ರ ಸದ್ಯೋಭವಿಷ್ಯದಲ್ಲಿ ಉತ್ತಮವಾಗಿ ಬೆಳವಣಿಗೆ ಕಾಣಲಿದೆ. ಸಿಮೆಂಟ್ ಕಂಪನಿಗಳಿಗೆ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತದೆ. ಇರುವ ಸಿಮೆಂಟ್ ಕಂಪನಿಗಳ ಪೈಕಿ ಅಲ್ಟ್ರಾಟೆಕ್ ಸಂಸ್ಥೆ ಷೇರುಪೇಟೆಯಲ್ಲಿ ಬಹಳ ಗಮನಾರ್ಹವಾಗಿ ಬೆಳೆಯಬಲ್ಲುದು. ಇದೇ ಕಾರಣಕ್ಕೆ ಐಸಿಐಸಿಐ ಡೈರೆಕ್ಟ್ ಸಂಸ್ಥೆ ಅಲ್ಟ್ರಾಟೆಕ್ ಸಿಮೆಂಟ್ ಷೇರಿಗೆ ರೆಕಮೆಂಟ್ ಮಾಡಿದಂತಿದೆ.

ಡಿವಿಡೆಂಡ್ ನೀಡುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಉತ್ತಮವಾ?ಡಿವಿಡೆಂಡ್ ನೀಡುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಉತ್ತಮವಾ?

 

2) ಮಿಶ್ರಾ ಧಾತು ನಿಗಮ್: ಶೇ. 8

2) ಮಿಶ್ರಾ ಧಾತು ನಿಗಮ್: ಶೇ. 8

ಡಿಫೆನ್ಸ್ ಕ್ಷೇತ್ರದ ಸಾರ್ವಜನಿಕ ವಲಯ ಸಂಸ್ಥೆ ಮಿಶ್ರ ಧಾತು ನಿಗಮ್ ಬಗ್ಗೆ ಐಸಿಐಸಿಐ ಡೈರೆಕ್ಟ್ ಬಹಳ ಭರವಸೆ ಇಟ್ಟಿದೆ. ಈ ಸಂಸ್ಥೆಯ ಷೇರುಗಳನ್ನು ಕೊಳ್ಳಿ ಎಂದು ನೇರ ಸಲಹೆಯನ್ನು ನೀಡಿದೆ. ಮೂರು ತಿಂಗಳಲ್ಲಿ ಶೇ. 8ರಷ್ಟು ರಿಟರ್ನ್ ಕೊಡಬಹುದು ಎಂದು ಬಹಳ ವಿಶ್ವಾಸದಲ್ಲಿ ಶಿಫಾರಸು ಮಾಡಿದೆ.

ಸದ್ಯ ವಿಶ್ರ ಧಾತು ನಿಗಮ್‌ನ ಷೇರು ಬೆಲೆ 253 ರೂಪಾಯಿ ಇದೆ. ಮೂರು ತಿಂಗಳಲ್ಲಿ ಷೇರು ಬೆಲೆ 274 ರೂಪಾಯಿಗೆ ಏರಿಕೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಹೆಚ್ಚೂಕಡಿಮೆ 50 ವರ್ಷಗಳ ಹಿಂದೆ ಆರಂಭವಾಗಿ ಹೈದರಾಬಾದ್‌ನಲ್ಲಿ ಮುಖ್ಯಕಚೇರಿ ಹೊಂದಿರುವ ಮಿಶ್ರ ಧಾತು ನಿಗಮ್ (ಮಿಧಾನ್) ರಕ್ಷಣಾ ವಲಯದ ಮ್ಯಾನುಫ್ಯಾಕ್ಚರಿಂಗ್‌ನಲ್ಲಿ ತೊಡಗಿರುವ ಪ್ರಮುಖ ಸಂಸ್ಥೆಗಳಲ್ಲಿ ಒಂದು. ಮೆಟಲ್ ಮತ್ತು ಮೆಟಲ್ ಅಲಾಯ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಭಾರತದಲ್ಲಿ ಟೈಟೇನಿಯಂ ಉತ್ಪಾದಿಸುವ ಏಕೈಕ ಸಂಸ್ಥೆ ಎನಿಸಿದೆ. ಡಿಫೆನ್ಸ್ ಮಾತ್ರವಲ್ಲ ಏರೋಸ್ಪೇಸ್, ಅಣು ಶಕ್ತಿ, ವಿದ್ಯುತ್ ಉತ್ಪಾದನೆ ಇತ್ಯಾದಿ ಉನ್ನತ ತಂತ್ರಜ್ಞಾನದ ಉದ್ಯಮಗಳಿಗೆ ಮಿಶ್ರ ಧಾತು ನಿಗಮ್ ಸೇವೆ ಒದಗಿಸುತ್ತದೆ.

ಕಳೆದ ಐದು ವರ್ಷಗಳಲ್ಲಿ ಇದರ ಷೇರುಪೇಟೆ ಸಾಧನೆಯನ್ನು ಅವಲೋಕಿಸಿದರೆ ಹೂಡಿಕೆದಾರರಿಗೆ ಶೇ. 182ರಷ್ಟು ಲಾಭ ಬಂದಿರುವುದನ್ನು ಗಮನಿಸಬಹುದು. ಇದರ ಉತ್ಪನ್ನಗಳಿಗೆ ಯಾವತ್ತೂ ಬೇಡಿಕೆ ಕಡಿಮೆ ಆಗುವುದಿಲ್ಲ. ಹೀಗಾಗಿ, ಮಿಧಾನಿಯ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ಒಳ್ಳೆಯ ರಿಟರ್ನ್ ಪಡೆಯಬಹುದು ಎಂದು ಸಲಹೆ ಕೊಡಲಾಗಿದೆ.

 

3) ಯೂನಿಯನ್ ಬ್ಯಾಂಕ್: ಶೇ. 5

3) ಯೂನಿಯನ್ ಬ್ಯಾಂಕ್: ಶೇ. 5

ಐಸಿಐಸಿಐ ಡೈರೆಕ್ಟ್‌ನ ತಂಡದವರು ರೆಕಮೆಂಟ್ ಮಾಡಿರುವ ನಾಲ್ಕು ಷೇರುಗಲ್ಲಿ ಯೂನಿಯನ್ ಬ್ಯಾಂಕ್ ಕೂಡ ಒಂದು. ಸದ್ಯ ಯೂನಿಯನ್ ಬ್ಯಾಂಕ್ 55 ರೂಪಾಯಿ ಷೇರುಬೆಲೆ ಹೊಂದಿದೆ. ಮುಂದಿನ 3 ತಿಂಗಳಲ್ಲಿ ಇದು 58 ರೂಪಾಯಿ ಅಗುವ ಸಾಧ್ಯತೆ ಇದೆ. ಅಂದರೆ ಶೇ. 5ರಷ್ಟು ಬೆಳೆಯಬಹುದು ಎಂದು ಅಂದಾಜಿಸಲಾಗಿದೆ.

ಈ ರಾಜ್ಯದಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ಸೇವೆ ಮನೆ ಬಾಗಿಲಿಗೆ!ಈ ರಾಜ್ಯದಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ಸೇವೆ ಮನೆ ಬಾಗಿಲಿಗೆ!

ಮೂರು ತಿಂಗಳ ಹಿಂದೆ ಯೂನಿಯನ್ ಬ್ಯಾಂಕ್‌ನ ಷೇರು ಬೆಲೆ 48.50 ರೂಪಾಯಿ ಇತ್ತು. ಈಗ ಶೇ. 40ಕ್ಕಿಂತ ಹೆಚ್ಚು ಲಾಭವನ್ನು ಹೂಡಿಕೆದಾರರಿಗೆ ನೀಡಿದೆ. ಈ ಅವಧಿಯಲ್ಲಿ ಆದಷ್ಟು ಬೆಳವಣಿಗೆಯನ್ನು ಮುಂದಿನ ಮೂರು ತಿಂಗಳಲ್ಲಿ ನಿರೀಕ್ಷಿಸುವುದು ಕಷ್ಟವಾದರೂ ಶೇ. 5ರಷ್ಟು ಲಾಭ ನಿರೀಕ್ಷೆಗೆ ಮೋಸವಿಲ್ಲ ಎನ್ನಲಾಗುತ್ತಿದೆ.

 

4) ಇಂಡಿಯನ್ ಬ್ಯಾಂಕ್: ಶೇ. 5

4) ಇಂಡಿಯನ್ ಬ್ಯಾಂಕ್: ಶೇ. 5

ಇದೂ ಕೂಡ ಪ್ರಮುಖ ಸರ್ಕಾರಿ ಬ್ಯಾಂಕ್ ಅಗಿದ್ದು ಲಾಭದಲ್ಲಿ ನಡೆಯುತ್ತಿದೆ. ಇದರ ಒಂದು ಷೇರು ಬೆಲೆ ಸದ್ಯ ಮಾರುಕಟ್ಟೆಯಲ್ಲಿ 249 ರೂಪಾಯಿ ಇದೆ. ಐಸಿಐಸಿಐ ಡೈರೆಕ್ಟ್‌ನ ಅಂದಾಜು ಪ್ರಕಾರ 3 ತಿಂಗಳಲ್ಲಿ ಶೇ. 5ರಷ್ಟು ವೃದ್ಧಿಹೊಂದಿ ಪ್ರತೀ ಷೇರಿಗೆ 261 ರೂ ಬೆಲೆ ಸಿಗುವ ಸಾಧ್ಯತೆ ಇದೆ. ಕಳೆದ 3 ವರ್ಷದ ಅವಧಿಯಲ್ಲಿ ಇಂಡಿಯನ್ ಬ್ಯಾಂಕ್ ಷೇರುಗಳು ಶೇ. 85ರಷ್ಟು ಲಾಭ ತಂದಿವೆ. ಬಹುತೇಕ ಸರ್ಕಾರಿ ಬ್ಯಾಂಕ್‌ಗಳು ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿವೆ. ಅವುಗಳ ಪೈಕಿ ಯೂನಿಯನ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಕಿರು ಅವಧಿಯಲ್ಲಿ ಅಧಿಕ ಮೈಲೇಜ್ ನೀಡಬಲ್ಲಂತಹ ಷೇರುಗಳಾಗಿವೆ ಎಂಬುದು ಐಸಿಐಸಿಐ ಡೈರೆಕ್ಟ್‌ನ ತಜ್ಞರ ಅಭಿಮತ.

ಗಮನಿಸಿ: ಐಸಿಐಸಿಐ ಡೈರೆಕ್ಟ್ ಎಂಬುದು ಷೇರುಪೇಟೆಯಲ್ಲಿ ಬ್ರೋಕರೇಜ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ನೀಡಲಾಗಿರುವ ಸಲಹೆಗಳು ಬಹುತೇಕ ಐಸಿಐಸಿಐ ಡೈರೆಕ್ಟ್‌ನ ವರದಿಯನ್ನು ಆಧರಿಸಿದ್ದಾಗಿವೆ.

 

English summary

4 Best Shares For Great Return In Short Period: ICICI Direct Report

Stock brokerage firm ICICI Direct has in its recent report recommends investors to buy shares of Ultratech cements, Mishtra Dhatu Nigam, Union Bank and Indian Bank. Know reason behind this.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X