For Quick Alerts
ALLOW NOTIFICATIONS  
For Daily Alerts

ಪ್ರತಿ ತಿಂಗಳು 1000 ರುಪಾಯಿಯೊಳಗಿನ ಹೂಡಿಕೆಗೆ 4 ಬೆಸ್ಟ್ SIP

|

ಪ್ರತಿ ತಿಂಗಳು ತುಂಬ ದೊಡ್ಡ ಮೊತ್ತವನ್ನು ಉಳಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಸ್ವಲ್ಪ ಹಣ ಹೂಡಿಕೆ ಮಾಡಿದರೂ ಒಳ್ಳೆ ರಿಟರ್ನ್ಸ್ ಬರಬೇಕು. ಅಂಥ ಯಾವುದಾದರೂ 'ಸುರಕ್ಷಿತ' ಹೂಡಿಕೆಯನ್ನು ಹುಡುಕುವವರ ಸಂಖ್ಯೆ ಹೆಚ್ಚು. ಆದರೆ ಈ ಪ್ರಶ್ನೆಯನ್ನು ಕೇಳುವುದು ಹೇಗೆ ಅಂತ ಸಂಕೋಚ ಪಟ್ಟುಕೊಳ್ಳುವುದುಂಟು. ಯೋಚಿಸಬೇಡಿ. ತುಂಬ ಕಡಿಮೆ ಮೊತ್ತದ ಹಣ ಉಳಿತಾಯಕ್ಕೆ ಅತ್ಯುತ್ತಮ ರಿಟರ್ನ್ಸ್ ಕೊಡಬಲ್ಲಂಥ ಮ್ಯೂಚ್ಯುವಲ್ ಫಂಡ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮ್ಯೂಚ್ಯುವಲ್ ಫಂಡ್ ಗಳಲ್ಲಿ Systematic Investment Plan ಅಥವಾ SIP ಅತ್ಯುತ್ತಮ ಆಯ್ಕೆ. ಆ ಮ್ಯೂಚ್ಯುವಲ್ ಫಂಡ್ ಗಳ ಪೈಕಿ ಡೆಟ್ ಅಥವಾ ಈಕ್ವಿಟಿ ಷೇರು ಯಾವುದರಲ್ಲಿ ಹಣ ತೊಡಗಿಸಬೇಕು ಅನ್ನೋದು ನಿಮ್ಮ ಆಯ್ಕೆ. ಈಕ್ವಿಟಿ ಷೇರುಗಳ ಮೇಲೆ ಮಾಡಿದ ಹೂಡಿಕೆಯು ದೀರ್ಘಾವಧಿಯಲ್ಲಿ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್)ಗಿಂತ ಉತ್ತಮವಾದ ರಿಟರ್ನ್ಸ್ ಕೊಟ್ಟಿದೆ.

ಈ ಲೇಖನದಲ್ಲಿ ನಾಲ್ಕು Systematic Investment Plan (SIP) ನೀಡಲಾಗಿದೆ. ಇವುಗಳಲ್ಲಿ ಪ್ರತಿ ತಿಂಗಳು ರು. 1,000ದಷ್ಟು ಹೂಡಿಕೆ ಮಾಡಿದರೂ ಸಾಕು.

1 ಆಕ್ಸಿಸ್ ಬ್ಲ್ಯೂಚಿಪ್ ಫಂಡ್ (Axis Bluechip Fund)

1 ಆಕ್ಸಿಸ್ ಬ್ಲ್ಯೂಚಿಪ್ ಫಂಡ್ (Axis Bluechip Fund)

ಆಕ್ಸಿಸ್ ಬ್ಲ್ಯೂಚಿಪ್ ಫಂಡ್ 1 ವರ್ಷದಲ್ಲಿ 19 ಪರ್ಸೆಂಟ್ ರಿಟರ್ನ್ಸ್ ನೀಡಿದೆ. ವ್ಯಾಲ್ಯೂ ರೀಸರ್ಚ್ ಆನ್ ಲೈನ್ ನಿಂದ ಈ ಫಂಡ್ ಗೆ 5 ಸ್ಟಾರ್ ರೇಟಿಂಗ್ ನೀಡಲಾಗಿದೆ. ಹೂಡಿಕೆದಾರರು ಆರಂಭದಲ್ಲಿ 5000 ರುಪಾಯಿ ಹೂಡಿಕೆ ಮಾಡಬೇಕು. ಆ ನಂತರ ಎಸ್ ಐಪಿ ದಾರಿಯಲ್ಲಿ ತಿಂಗಳಿಗೆ 500 ರುಪಾಯಿ ಹೂಡಿಕೆ ಮಾಡಿದರೂ ಸಾಕು.

ಆಕ್ಸಿಸ್ ಬ್ಲ್ಯೂಚಿಪ್ ಫಂಡ್ 3 ವರ್ಷದಲ್ಲಿ 18 ಪರ್ಸೆಂಟ್ ರಿಟರ್ನ್ ನೀಡಿದ್ದರೆ, 5 ವರ್ಷದಲ್ಲಿ 10.29 ಪರ್ಸೆಂಟ್ ರಿಟರ್ನ್ ನೀಡಿದೆ. ಇದು ಫಿಕ್ಸೆಡ್ ಡೆಪಾಸಿಟ್ ಗಿಂತ ಒಳ್ಳೆ ರಿಟರ್ನ್. ಈ ಫಂಡ್ ನ ಬಳಿ ಇರುವುದು ಎಚ್ ಡಿಎಫ್ ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ನಂಥ ಕಂಪೆನಿ ಷೇರುಗಳು.

ಗ್ರೋಥ್ ಪ್ಲ್ಯಾನ್ ನಲ್ಲಿ ಸದ್ಯದ NAV 31 ರುಪಾಯಿ ಇದೆ. ಆದ್ದರಿಂದ ನೀವು ಹೂಡಿಕೆ ಮಾಡಬೇಕು ಅಂದರೆ 31 ರುಪಾಯಿ ಮಟ್ಟದಲ್ಲೇ ಹಣ ಹೂಡಬೇಕು.

 

2 ಮಿರೆ ಅಸೆಟ್ ಲಾರ್ಜ್ ಕ್ಯಾಪ್ ಫಂಡ್ (Mirae Asset Large Cap Fund)

2 ಮಿರೆ ಅಸೆಟ್ ಲಾರ್ಜ್ ಕ್ಯಾಪ್ ಫಂಡ್ (Mirae Asset Large Cap Fund)

ವ್ಯಾಲ್ಯೂ ರೀಸರ್ಚ್ ಆನ್ ಲೈನ್ ನಿಂದ 5 ಸ್ಟಾರ್ ರೇಟಿಂಗ್ ಪಡೆದ ಮತ್ತೊಂದು ಫಂಡ್ ಇದು. 1 ವರ್ಷದಲ್ಲಿ ಈ ಫಂಡ್ ಮೂಲಕ 14.25 ಪರ್ಸೆಂಟ್ ರಿಟರ್ನ್ ಬಂದಿದೆ. ಇನ್ನು 5 ವರ್ಷಕ್ಕೆ 11.30 ಪರ್ಸೆಂಟ್ ರಿಟರ್ನ್ ಬಂದಿದೆ. ಯಾರಾದರೂ ಕನಿಷ್ಠ 5,000 ರುಪಾಯಿಯೊಂದಿಗೆ ಇದರಲ್ಲಿ ಹೂಡಿಕೆ ಮಾಡಬಹುದು. ಆ ನಂತರ ತಿಂಗಳಿಗೆ 1,000 ರುಪಾಯಿ ಹೂಡಿಕೆ ಮಾಡಿದರೆ ಸಾಕು. ಅತ್ಯುತ್ತಮ ರಿಟರ್ನ್ ನೀಡುವ ವಿಚಾರದಲ್ಲಿ ಮಿರೆ ಅಸೆಟ್ ಲಾರ್ಜ್ ಕ್ಯಾಪ್ ಫಂಡ್ ನ ಟ್ರ್ಯಾಕ್ ರೆಕಾರ್ಡ್ ತುಂಬ ಚೆನ್ನಾಗಿದೆ. ಇನ್ನು ಹೂಡಿಕೆ ಮಾಡಿರುವುದು ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮುಂತಾದ ಕಂಪೆನಿಗಳಲ್ಲಿ. ದೀರ್ಘಾವಧಿ ಹೂಡಿಕೆಯನ್ನು ಗಮನದಲ್ಲಿಟ್ಟುಕೊಂಡರೆ ಅತ್ಯುತ್ತಮವಾದ ರಿಟರ್ನ್ ಪಡೆಯಬಹುದು.

3 ಐಸಿಐಸಿಐ ಪ್ರುಡೆನ್ಷಿಯಲ್ ಬ್ಲ್ಯೂ ಚಿಪ್ ಫಂಡ್ (ICICI Prudential Blue Chip Fund)

3 ಐಸಿಐಸಿಐ ಪ್ರುಡೆನ್ಷಿಯಲ್ ಬ್ಲ್ಯೂ ಚಿಪ್ ಫಂಡ್ (ICICI Prudential Blue Chip Fund)

ಅಲ್ವಾವಧಿ ಮತ್ತು ಮಧ್ಯಮಾವಧಿಯಲ್ಲಿ ಅತ್ಯುತ್ತಮ ರಿಟರ್ನ್ ನೀಡಿರುವ ಮತ್ತೊಂದು ಫಂಡ್ ಇದು. ಐಸಿಐಸಿಐ ಪ್ರುಡೆನ್ಷಿಯಲ್ ಬ್ಲ್ಯೂ ಚಿಪ್ ಫಂಡ್ 24,000 ಕೋಟಿ ರುಪಾಯಿಯನ್ನು ಲಾರ್ಜ್ ಕ್ಯಾಪ್ ಫಂಡ್ಸ್ ಮೇಲೆ ಹಾಕಿದೆ. ಈ ಫಂಡ್ ಮೂಲಕ 1 ವರ್ಷದಲ್ಲಿ 11.35 ಪರ್ಸೆಂಟ್, 5 ವರ್ಷದಲ್ಲಿ 11.41 ಪರ್ಸೆಂಟ್ ರಿಟರ್ನ್ಸ್ ನೀಡಿದೆ. ದೀರ್ಘಾವಧಿಗೆ ಇದು ಉತ್ತಮವಾದ ಫಂಡ್. ಈ ಫಂಡ್ ಮೂಲಕ ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್ ಮತ್ತು ಭಾರ್ತಿ ಏರ್ ಟೆಲ್ ನಂಥ ಷೇರುಗಳ ಮೇಲೆ ಹೂಡಲಾಗಿದೆ. ಯಾರಾದರೂ ಕನಿಷ್ಠ 100 ರುಪಾಯಿ ಮೊತ್ತವನ್ನು SIP ಮೂಲಕ ಹೂಡಿಕೆ ಮಾಡಬಹುದು.

4 ನಿಪ್ಪನ್ ಇಂಡಿಯಾ ಲಾರ್ಜ್ ಕ್ಯಾಪ್ ಫಂಡ್ (Nippon India Large Cap Fund)

4 ನಿಪ್ಪನ್ ಇಂಡಿಯಾ ಲಾರ್ಜ್ ಕ್ಯಾಪ್ ಫಂಡ್ (Nippon India Large Cap Fund)

ಈ ಫಂಡ್ ಮೂಲಕ ಲಾರ್ಜ್ ಕ್ಯಾಪ್ ಷೇರುಗಳಲ್ಲಿ ಮಾತ್ರ ಹೂಡಿಕೆ ಮಾಡಲಾಗುತ್ತದೆ. 3 ವರ್ಷದ ಅವಧಿಗೆ ಈ ಫಂಡ್ 11.68 ಪರ್ಸೆಂಟ್ ರಿಟರ್ನ್ಸ್ ನೀಡಿದೆ. ಯಾರಾದರೂ 100 ರುಪಾಯಿ ಮೊತ್ತದೊಂದಿಗೆ ಈ ಫಂಡ್ ನಲ್ಲಿ ಹೂಡಿಕೆ ಮಾಡಬಹುದು. ಅದರ ಮೇಲೆ ಪ್ರತಿ ತಿಂಗಳು 100 ರುಪಾಯಿಯಂತೆ ಹೂಡಿಕೆ ಮಾಡಬಹುದು. ಗ್ರೋಥ್ ಪ್ಲ್ಯಾನ್ ಅಡಿಯಲ್ಲಿ ಸದ್ಯಕ್ಕೆ ಈ ಫಂಡ್ ನ NAV ರು. 34.28 ಇದೆ. ನಿರಂತರ SIPಗಾಗಿ ಹುಡುಕುತ್ತಿರುವವರಿಗೆ ಇದು ಅತ್ಯುತ್ತಮ ಪ್ಲ್ಯಾನ್.

English summary

4 Best SIP Investment Idea For Small Investors Upto Rs 1,000

Here are 4 SIPs for small investors, where you can invest small amounts of Rs 1,000 every month.
Story first published: Wednesday, December 11, 2019, 13:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X