For Quick Alerts
ALLOW NOTIFICATIONS  
For Daily Alerts

ಎರಡನೇ ಮಹಾಯುದ್ಧಕ್ಕೂ ಮೊದಲಿನ ಕಾರು 132 ಕೋಟಿ ರುಪಾಯಿಗೆ ಹರಾಜು

|

ಕಾರು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಆರಾಮಾಗಿ ಕುಟುಂಬ ಸಮೇತ ತೆರಳಲು ಬಹಳ ಸಹಕಾರಿ. ಹೀಗಾಗಿಯೇ ಕಾರು ಖರೀದಿ ಮಾಡಬೇಕು ಎಂದು ಅನೇಕರು ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ದುಡ್ಡಿರೋರ ಕಥೆಯೇ ಬೇರೆ ಅದರಲ್ಲೂ ಹಣ ಇದ್ದೋರು ಮುಗಿದೇ ಹೋಯ್ತು. ಕೋಟಿ ಕೋಟಿ ರುಪಾಯಿ ಹಣ ಕೊಟ್ಟು ದುಬಾರಿ ಕಾರು ಖರೀದಿಸುತ್ತಾರೆ.

ಹೊಸ ಕಾರನ್ನು ಖರೀದಿಸುವ ಜನರು ಒಂದೆಡೆಯಾದ್ರೆ ಇನ್ನೂ ಕೆಲವರ ಕಾರು ಕ್ರೇಜ್ ಬೇರೆ ರೀತಿಯದ್ದೇ ಆಗಿದೆ. ಅದೇನಂದ್ರೆ ಹೊಸ ಹೊಸ ಮಾದರಿಯ ಕಾರು ಖರೀದಿಯನ್ನು ಖರೀದಿಸುವುದು ಒಂದೆಡೆಯಾದ್ರೆ, ಹಳೆಯ ಆ್ಯಂಟಿಕ್ ಪೀಸ್ ಕಾರ್‌ಗಳನ್ನು ಸಂಗ್ರಹಿಸುವುದು ಮತ್ತಷ್ಟು ಜನರಿಗೆ ಹವ್ಯಾಸವಾಗಿಟ್ಟುಕೊಂಡಿರುತ್ತಾರೆ.

ಹೀಗೆ ಹಳೆಯ ಕಾಲದ ಯಾರೋ ಸೆಲೆಬ್ರೆಟಿ ಬಳಸಿದ ಕಾರು, ಇಲ್ಲವೇ ಹಲವಾರು ವರ್ಷಗಳ ಹಿಂದೆ ಯಾರೋ ಗಣ್ಯ ವ್ಯಕ್ತಿ, ವಿಶೇಷ ಸಂದರ್ಭದಲ್ಲಿ ಬಳಸಿದ ಕಾರುಗಳನ್ನು ಹರಾಜಿಗೆ ಇಡಲಾಗಿರುತ್ತದೆ. ಈ ಹರಾಜಿನ ವೇಳೆ ಕೋಟಿ ಕೋಟಿ ಬಿಡ್ ಮಾಡಿ ಕಾರು ಖರೀದಿಗೆ ಜನರು ಮುಗಿಬೀಳುತ್ತಾರೆ. ಈ ರೀತಿಯಲ್ಲಿ 2019 ರಲ್ಲಿ ಅತಿ ಹೆಚ್ಚು ಹಣಕ್ಕೆ ಬಿಡ್ ಆದ ಕಾರುಗಳು ಯಾವುವು? ಎಷ್ಟು ಹಣಕ್ಕೆ ಸೇಲಾಗಿವೆ? ಅವುಗಳ ವಿಶೇಷತೆ ಏನು ಎಂಬುದನ್ನು ತಿಳಿಯಲು ಈ ಕೆಳಗಿನ ಮಾಹಿತಿ ಓದಿ

1. 1939 ಆಲ್ಫಾ ರೋಮಿಯೋ 8C 2900

1. 1939 ಆಲ್ಫಾ ರೋಮಿಯೋ 8C 2900

2019ರಲ್ಲಿ ಅತಿ ಹೆಚ್ಚು ಬೆಲೆಗೆ ಹರಾಜಾದ ಅತ್ಯಂತ ಹಳೆಯ ಕಾರು ಎಂದರೆ ಅದು ಇದೇ ನೋಡಿ. ಅತ್ಯಂತ ಹಳೆಯ ಕಾರುಗಳಲ್ಲಿ ಒಂದಾಗಿರುವ 5 ಆಲ್ಫಾ ರೋಮಿಯೋ 8 ಸಿ 2900 ಬಿ ಮಾದರಿಗಳಲ್ಲಿ ಒಂದಾಗಿದೆ. ಇದು ಎರಡನೇ ಮಹಾಯುದ್ಧಕ್ಕೂ ಮೊದಲು ತಯಾರಾದ ಕಾರಾಗಿದೆ . ಫೆರಾರಿಯನ್ನು ಸೊಗಸಾದ ವಾಹನ ವಿನ್ಯಾಸದ ಮಾದರಿಯಾಗಿದೆ.

ಈ ಕಾರು 2.9-ಲೀಟರ್ ಇನ್ಲೈನ್ -8 ಎಂಜಿನ್ ಇದ್ದು ಸೊಗಸಾಗಿ ನಿರ್ಮಿಸಲಾಗಿದೆ. ಇದು 2019 ರಲ್ಲಿ ಆರ್ಟ್‌ಕ್ಯೂರಿಯಲ್ ಪ್ಯಾರಿಸ್ ರೆಟ್ರೊಮೊಬೈಲ್ ಹರಾಜಿನಲ್ಲಿ 1,85,63,605 ಅಮೆರಿಕನ್ ಡಾಲರ್‌ಗೆ (ಭಾರತದ ರುಪಾಯಿಗಳಲ್ಲಿ ಸುಮಾರು 132 ಕೋಟಿ, 33 ಲಕ್ಷದ 80,836) ಮಾರಾಟವಾಯಿತು. ಇದು 2019ರಲ್ಲಿ ಅತಿ ಹೆಚ್ಚು ಬೆಲೆಗೆ ಹರಾಜಾದ ಅತ್ಯಂತ ಹಳೆಯ ಕಾರಾಗಿದೆ.

 

2. 1994 ಮೆಕ್ಲಾರೆನ್ F1 LM- ಸ್ಪೆಸಿಫಿಕೇಶನ್
 

2. 1994 ಮೆಕ್ಲಾರೆನ್ F1 LM- ಸ್ಪೆಸಿಫಿಕೇಶನ್

ಕಳೆದ ವರ್ಷ ವಿಶ್ವದಲ್ಲೇ ಅತಿ ಹೆಚ್ಚು ಬೆಲೆಗೆ ಹರಾಜಾದ ಕಾರು ಎಂದರೆ ಮೆಕ್ಲಾರೆನ್ ಮರ್ಕ್ವಿ. ಲಿಮಿಟೆಡ್ ಎಡಿಷನ್ ಕಾರುಗಳನ್ನು ತಯಾರಿಸುವ ಮೆಕ್ಲಾರೆ 64 ಮೆಕ್ಲಾರೆನ್ F1 ಕಾರುಗಳನ್ನು ತಯಾರಿಸಿತು. ಅದರಲ್ಲಿ ಎರಡು ಕಾರು ಮಾತ್ರ ಮೆಕ್ಲಾರೆನ್ F1 LM- ಸ್ಪೆಸಿಫಿಕೇಶನ್ ಕಾರುಗಳಾಗಿವೆ.

ಎಲ್ಎಂ ಎಂದರೆ ಲೆ ಮ್ಯಾನ್ಸ್, ಮತ್ತು ಇದನ್ನು ನಿರ್ಮಿಸಿದ ನಂತರ, ಮೆಕ್ಲಾರೆನ್ 680-ಎಚ್‌ಪಿ ಜಿಟಿಆರ್ ಎಂಜಿನ್, ಹೆಚ್ಚುವರಿ ಏರೋ, ಹೊಸ ಹೆಡ್‌ಲೈಟ್ ಮತ್ತು ರೇಸ್-ಸ್ಪೆಕ್ ಡ್ಯಾಂಪರ್‌ಗಳನ್ನು ಅಳವಡಿಸಿದ್ದಾರೆ. ಈ ಕಾರು ಎಲ್ಲರೂ ಹುಬ್ಬೇರಿಸುವಂತೆ ಹರಾಜಿನಲ್ಲಿ ಸೇಲಾಯಿತು. ಬಿಡ್ ಆರಂಭವಾದ ಕೇವಲ ಐದು ನಿಮಿಷಗಳಲ್ಲಿ ಈ ಕಾರು 1,98,05,000 ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 141 ಕೋಟಿ, 14 ಲಕ್ಷದ 13,228) ಗೆ ಹರಾಜಾಯಿತು. ಇದು 1960 ರ ನಂತರದ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಕಾರು ಮತ್ತು ಸಾರ್ವಜನಿಕವಾಗಿ ಮಾರಾಟವಾದ 14 ನೇ ಅತ್ಯಂತ ದುಬಾರಿ ಕಾರು.

 

3. 1958 ಫೆರಾರಿ 250 ಜಿಟಿ LWB ಕ್ಯಾಲಿಫೋರ್ನಿಯಾ ಸ್ಪೈಡರ್

3. 1958 ಫೆರಾರಿ 250 ಜಿಟಿ LWB ಕ್ಯಾಲಿಫೋರ್ನಿಯಾ ಸ್ಪೈಡರ್

ಬಳಲುತ್ತಿರುವ ಮಾರುಕಟ್ಟೆಯ ಹೊರತಾಗಿಯೂ, ಫೆರಾರಿಯ ಕ್ಯಾಲಿಫೋರ್ನಿಯಾ ಸ್ಪೈಡರ್ಸ್ಗೆ ಇನ್ನೂ ಬಾರೀ ಬೇಡಿಕೆ ಇದೆ. ಕ್ಯಾಲಿಫೋರ್ನಿಯಾ ಸ್ಪೈಡರ್ಸ್ ನಿರ್ಮಿಸಿದ 50 ಲಾಂಗ್-ವೀಲ್ ಬೇಸ್‌ಗಳಲ್ಲಿ ಇದು 11ನೇ ಕಾರಾಗಿದೆ.

1960 ರ ದಶಕದಲ್ಲಿ, ಮುಖ್ಯವಾಗಿ ಫ್ಲೋರಿಡಾದಲ್ಲಿ ನಡೆದ ಎಸ್‌ಸಿಸಿಎ ರೇಸ್‌ನಲ್ಲಿ ಈ ಕಾರನ್ನು ಬಳಸಲಾಗಿತ್ತು. ಆ ವೇಳೆ ಈ ಕಾರು ಹತ್ತು ಮಿಲಿಯನ್ ಡಾಲರ್‌ಗಳಿಗೆ ಮಾರಲಾಗಿತ್ತು. ಆದರೆ ಕಾರು ಖರೀದಿ ಮಾಡಿದವರು ಕೆಲವೇ ವರ್ಷಗಳಲ್ಲಿ ನಂಬಲಾಗದ ಲಾಭ ಪಡೆದರು. ಇದೇ ಕಾರು 2019 ರಲ್ಲಿ ಗುಡಿಂಗ್ ಪೆಬಲ್ ಬೀಚ್ ಹರಾಜಿನಲ್ಲಿ 9,90,5000 ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 70 ಕೋಟಿ, 62 ಲಕ್ಷದ 76,025) ಕ್ಕೆ ಮಾರಾಟವಾಯಿತು.

 

4. 2014 ಲ್ಯಾಂಬೊರ್ಗಿನಿ ವೆನೆನೊ ರೋಡ್‌ಸ್ಟರ್

4. 2014 ಲ್ಯಾಂಬೊರ್ಗಿನಿ ವೆನೆನೊ ರೋಡ್‌ಸ್ಟರ್

ಈಕ್ವಟೋರಿಯಲ್ ಗಿನಿಯ ಅಧ್ಯಕ್ಷರ ಮಗನಿಂದ ಸ್ವಿಸ್ ಅಧಿಕಾರಿಗಳು ವಶಪಡಿಸಿಕೊಂಡ ಕಾರು ಇದಾಗಿದೆ. ಲ್ಯಾಂಬೊರ್ಗಿನಿ ವೆನೆನೊ ರೋಡ್ಸ್ಟರ್‌ನ ಕೇವಲ 9 ಕಾರುಗಳನ್ನು ಮಾತ್ರ ತಯಾರಿಸಲಾಗಿದ್ದು, ಪ್ರತಿಯೊಂದೂ ತನ್ನ 6.5-ಲೀಟರ್ ವಿ 12 ನಿಂದ 7500 - 8,500 ಹೆಚ್‌ಪಿ ಹಾರ್ಸ್‌ಪವರ್ ಎಂಜಿನ್‌ಗಳನ್ನು ಹೊಂದಿದೆ. ಲ್ಯಾಂಬೊರ್ಗಿನಿ ಎಲ್ಲಾ ಕಾರುಗಳನ್ನು 3,30,300 ಅಮೆರಿಕನ್ ಡಾಲರ್‌ಗೆ ಮಾರಾಟ ಮಾಡಿತು.

ಆದರೆ ಇದು ಸ್ವಿಟ್ಜರ್ಲೆಂಡ್‌ನ ಜಿನೀವಾ ಸರೋವರದ ತೀರದಲ್ಲಿ ನಡೆದ ಹರಾಜಿನಲ್ಲಿ ಇದೇ ಕಾರು 8,33,7182 ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 59 ಕೋಟಿ 38 ಲಕ್ಷದ 82,485)ಗೆ ಮಾರಾಟವಾಯಿತು.

 

5. 1962 ಫೆರಾರಿ 250 ಜಿಟಿ SWB ಬರ್ಲಿನೆಟ್ಟಾ

5. 1962 ಫೆರಾರಿ 250 ಜಿಟಿ SWB ಬರ್ಲಿನೆಟ್ಟಾ

2019ರಲ್ಲಿ ಈ ಹಿಂದೆ ಹೇಳಿದ ಫೆರಾರಿ ಕಾರಿಗಿಂತ ಹೆಚ್ಚಾಗಿ ಶಾರ್ಟ್-ವೀಲ್ ಬೇಸ್ ಫೆರಾರಿ 250 ಜಿಟಿ ಮೊದಲನೆಯದಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾಯಿತು. 2016 ರ ಪೆಬ್ಬಲ್ ಬೀಚ್ನಲ್ಲಿ ಕೊನೆಯದಾಗಿ ಮಾರಾಟವಾದಾಗ ಬೆಲೆಗಿಂತಲೂ ಒಂದು ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಾಗಿದೆ.

ಸಂಪೂರ್ಣ ವಿನ್ಯಾಸಗೊಳಿಸಿ ತಯಾರಿಸಲಾಗಿದ್ದ ಈ ಕಾರು ಒಳಗೆ ಪೂರ್ತಿ ಚರ್ಮದಿಂದ ತಯಾರಿಸಲಾಗಿದೆ. ಈ ಕಾರು 2019ರ ಕಾರ್ಯಕ್ರಮದಲ್ಲಿ
81,45,000 ಅಮೆರಿಕನ್ ಡಾಲರ್‌ ( ಭಾರತದ ರುಪಾಯಿಗಳಲ್ಲಿ ಸುಮಾರು 58 ಕೋಟಿ 02 ಲಕ್ಷದ 94,597)ಕ್ಕೆ ಮಾರಾಟ ಮಾಡಲಾಯಿತು.

ಈ ಮೇಲಿನ ಐದು ಕಾರುಗಳು 2019ರಲ್ಲಿ ವಿಶ್ವದ ಅನೇಕ ಕಡೆ ನಡೆದ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಬಿಡ್ ಆದ ಕಾರುಗಳಾಗಿವೆ.

 

English summary

5 Most Expensive Cars Sold At Auction In 2019

These are the 5 Most Expensive Cars Sold At Auction In 2019
Story first published: Tuesday, February 11, 2020, 18:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X