For Quick Alerts
ALLOW NOTIFICATIONS  
For Daily Alerts

"USನಲ್ಲಿ ತಾತ್ಕಾಲಿಕ ಉದ್ಯೋಗ ನಷ್ಟದ ಪೈಕಿ ಶೇಕಡಾ 25ರಷ್ಟು ಶಾಶ್ವತ ಆಗಬಹುದು"

|

ಕೊರೊನಾದ ಕಾರಣಕ್ಕೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ತಾತ್ಕಾಲಿಕವಾಗಿ ಉದ್ಯೋಗದಿಂದ ತೆಗೆದಿರುವವರ ಪೈಕಿ ಶೇಕಡಾ ಇಪ್ಪತ್ತೈದರಷ್ಟು ಮಂದಿಗೆ ಶಾಶ್ವತವಾಗಿ ಕೆಲಸ ಇಲ್ಲದಂತಾಗಬಹುದು ಎಂದು ಗೋಲ್ಡ್ ಮ್ಯಾನ್ ಸ್ಯಾಚ್ಸ್ ಗ್ರೂಪ್ ಕಂಪೆನಿ ಅಂದಾಜು ಮಾಡಿದೆ. ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ಆರಂಭದಲ್ಲಿ 2.2 ಕೋಟಿ ಮಂದಿಯನ್ನು ಕಂಪೆನಿಗಳು ಉದ್ಯೋಗದಿಂದ ಕೈ ಬಿಟ್ಟವು.

 

ಆ ಪೈಕಿ ಬಹುತೇಕ ಉದ್ಯೋಗ ಕಡಿತ ತಾತ್ಕಾಲಿಕ ಎನ್ನಲಾಗಿತ್ತು. 1.80 ಕೋಟು ಮಂದಿ ನಿರುದ್ಯೋಗಿಗಳಾಗಿರುವುದು ತಾತ್ಕಾಲಿಕ ಎಂದು ದಾಖಲೆಗಳಲ್ಲಿ ಇತ್ತು. ಯಾವಾಗ ಆರ್ಥಿಕ ಚಟುವಟಿಕೆಗಳು ಶುರುವಾದವೋ ಮೇ, ಜೂನ್, ಜುಲೈ ತಿಂಗಳಲ್ಲಿ ಉದ್ಯೋಗಿಗಳ ಮರುನೇಮಕ ಕೂಡ ಶುರುವಾಯಿತು.

ಮೊದಲ ತ್ರೈಮಾಸಿಕದಲ್ಲಿ US ಆರ್ಥಿಕತೆ 33% ಇಳಿಕೆ: ಸಾರ್ವಕಾಲಿಕ ಹೀನಾಯ ಕುಸಿತ

ಆದರೆ, ಈಗಲೂ 92 ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗಿಯೇ ಇದ್ದಾರೆ. ಈ ವರ್ಷದ ಕೊನೆಗೆ ಹೆಚ್ಚುವರಿ ಉದ್ಯೋಗಗಳ ಸೇರ್ಪಡೆ ಆಗಬಹುದು ಎಂದು ಗೋಲ್ಡ್ ಮ್ಯಾನ್ ಸ್ಯಾಚ್ಸ್ ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ. ಈಗ ತಾತ್ಕಾಲಿಕ ಉದ್ಯೋಗ ನಷ್ಟ ಎದುರಿಸುತ್ತಿರುವವರಲ್ಲಿ ಮತ್ತೆ ಪರ್ಮನೆಂಟ್ ಉದ್ಯೋಗ ಪಡೆದುಕೊಳ್ಳುವ ಸಾಧ್ಯತೆ ಬಹಳ ಕಡಿಮೆ. ಈ ವರ್ಷದ ಕೊನೆಗೆ 56 ಲಕ್ಷ ಉದ್ಯೋಗ ಸೃಷ್ಟಿಯಾಗಬಹುದು, ಅಷ್ಟೇ ಎಂದಿದ್ದಾರೆ.

ಆದರೂ ತಾತ್ಕಾಲಿಕವಾಗಿ ಉದ್ಯೋಗ ಕಳೆದುಕೊಂಡಿದ್ದವರ ಮರು ನೇಮಕ ಮಾಡಿಕೊಳ್ಳುವ ಪ್ರಮಾಣ ಜುಲೈನಲ್ಲಿ ಕಡಿಮೆ ಆಗಿದೆ. ಗೋಲ್ಡ್ ಮ್ಯಾನ್ ಸ್ಯಾಚ್ಸ್ ಅಂದಾಜಿಸುವಂತೆ, ಶೇಕಡಾ ಇಪ್ಪತ್ತೈದರಷ್ಟು ಮಂದಿಗೆ ಶಾಶ್ವತವಾಗಿ ಉದ್ಯೋಗ ಸಿಗುವ ಸಾಧ್ಯತೆ ಇಲ್ಲ. ಆ ಇಪ್ಪತ್ತು ಲಕ್ಷ ಮಂದಿ 2021ರ ತನಕ ನಿರುದ್ಯೋಗಿಗಳಾಗಿಯೇ ಇರಲಿದ್ದಾರೆ.

ಇನ್ನು ನಿರುದ್ಯೋಗ ಭತ್ಯೆ ಒದಗಿಸುವುದಕ್ಕೆ ಸರ್ಕಾರದ ಬಳಿ ಸಂಪನ್ಮೂಲ ಬರಿದಾಗುತ್ತಿದ್ದಂತೆ ತಾತ್ಕಾಲಿಕದಿಂದ ಶಾಶ್ವತ ಉದ್ಯೋಗ ನಷ್ಟದ ಪ್ರಮಾಣ ಮತ್ತೂ ಹೆಚ್ಚಾಗಲಿದೆ. ಜೂನ್ ಗೆ ಹೋಲಿಸಿದಲ್ಲಿ ಜುಲೈನಲ್ಲಿ ಆ ಪ್ರಮಾಣ ಹತ್ತಿರಹತ್ತಿರ ದುಪ್ಪಟ್ಟು ಆಗಿರುವುದೇ ಅದಕ್ಕೆ ನಿದರ್ಶನ ಎನ್ನುತ್ತದೆ ವರದಿ.

ಶಿಕಾಗೋದಲ್ಲಿನ ವಿಶ್ವವಿದ್ಯಾಲಯವು ನಡೆಸಿರುವ ಸಮೀಕ್ಷೆ ಪ್ರಕಾರ, ಉದ್ಯೋಗಿಗಳಿಗೆ ತಾವು ಈ ಹಿಂದೆ ಮಾಡುತ್ತಿದ್ದ ಉದ್ಯೋಗಕ್ಕೇ ಮರುಳುತ್ತೇವೆ ಎಂಬ ಭರವಸೆಯೇ ಇಲ್ಲದಂತಾಗಿದೆ.

English summary

A Quarter Of Temporary Layoffs In US To Be Permanent: Goldman Sachs Report

According to Goldman Sachs, a quarter of temporary layoffs in US become permanent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X