For Quick Alerts
ALLOW NOTIFICATIONS  
For Daily Alerts

52.5 ಲಕ್ಷ ಕೋಟಿ ಆಸ್ತಿ ಇರುವ ಎಡಿಐಎನಿಂದ ಜಿಯೋದಲ್ಲಿ ಹೂಡಿಕೆ

|

ವಿಶ್ವದ ಅತ್ಯಂತ ದೊಡ್ಡ ಸವರನ್ ವೆಲ್ತ್ ಫಂಡ್ ಆದ ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿಯಿಂದ (ಎಡಿಐಎ) ಜಿಯೋ ಪ್ಲಾಟ್ ಫಾರ್ಮ್ ಗೆ 5,683.5 ಕೋಟಿ ರುಪಾಯಿ ಹೂಡಿಕೆ ಮಾಡಲಾಗುವುದು. ಆ ಮೂಲಕ ಜಿಯೋ ಪ್ಲಾಟ್ ಫಾರ್ಮ್ ನಲ್ಲಿನ 1.16 ಪರ್ಸೆಂಟ್ ಷೇರಿನ ಪಾಲನ್ನು ತನ್ನದಾಗಿಸಿಕೊಳ್ಳಲಿದೆ.

ಏಳು ವಾರದೊಳಗಿನ ಅವಧಿಯಲ್ಲಿ ಜಿಯೋ ಪ್ಲಾಟ್ ಫಾರ್ಮ್ ಗೆ ಹರಿದುಬರುತ್ತಿರುವ ಎಂಟನೇಹೂಡಿಕೆ ಇದೆ. ವಿಶ್ವದಲ್ಲೇ ಎಲ್ಲೂ ಕಂಡು, ಕೇಳರಿಯದ ಸತತ ಬಂಡವಾಳ ಹರಿವಿನ ಉದಾಹರಣೆಯನ್ನು ಜಿಯೋ ಪ್ಲಾಟ್ ಫಾರ್ಮ್ ನೀಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ತೈಲದಿಂದ, ರೀಟೇಲ್- ಟೆಲಿಕಾಂ ತನಕ ನಾನಾ ವಲಯಗಳ ವ್ಯವಹಾರದಲ್ಲಿ ವ್ಯಾಪಿಸಿದೆ.

ಸಂತಸ ಹಂಚಿಕೊಂಡಿರುವ ಮುಕೇಶ್ ಅಂಬಾನಿ

ಸಂತಸ ಹಂಚಿಕೊಂಡಿರುವ ಮುಕೇಶ್ ಅಂಬಾನಿ

ಇದೀಗ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 21 ಪರ್ಸೆಂಟ್ ಗಿಂತ ಸ್ವಲ್ಪ ಹೆಚ್ಚಿನ ಷೇರು ಪ್ರಮಾಣವನ್ನು ಮಾರಾಟ ಮಾಡುವ ಮೂಲಕ 97,885.65 ಕೋಟಿ ರುಪಾಯಿಯನ್ನು ಸಂಗ್ರಹಿಸಿದೆ. ಇನ್ನು ಈ ವ್ಯವಹಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಕೇಶ್ ಅಂಬಾನಿ, ನಾಲ್ಕು ದಶಕಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಎಡಿಐಎ ಹೂಡಿಕೆ ಮಾಡಿರುವುದು ಸಂತೋಷ ತಂದಿದೆ. ವಿಶ್ವದಾದ್ಯಂತ ದೀರ್ಘಾವಧಿ ಹೂಡಿಕೆಯನ್ನು ಯಶಸ್ವಿಯಾಗಿ ಮಾಡಿರುವ ಶ್ರೇಯ ಅದಕ್ಕೆ ಸಲುತ್ತದೆ ಎಂದಿದ್ದಾರೆ. ಇನ್ನು ಎಡಿಐಎ ಖಾಸಗಿ ಈಕ್ವಿಟೀಸ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಹಮದ್ ಷಾವನ್ ಅಲ್ದಹೇರಿ ಮಾತನಾಡಿ, ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ, ಪ್ರಾದೇಶಿಕವಾಗಿಯೂ ಆಳವಾದ ಹಿಡಿತ ಇರುವ ಕಂಪೆನಿಗಳಲ್ಲಿ ಹೂಡಿಕೆಯನ್ನು ಮುಂದುವರಿಸಿದ್ದೇವೆ ಎಂದಿದ್ದಾರೆ.

ಯಾವ ಜಾಗತಿಕ ಕಂಪೆನಿಯಿಂದ ಎಷ್ಟು ಮೊತ್ತ ಹೂಡಿಕೆ

ಯಾವ ಜಾಗತಿಕ ಕಂಪೆನಿಯಿಂದ ಎಷ್ಟು ಮೊತ್ತ ಹೂಡಿಕೆ

ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿ 5,683.5 ಕೋಟಿ

ಸಿಲ್ವರ್ ಲೇಕ್ 4,547 ಕೋಟಿ

ಮುಬದಾಲ 9,093 ಕೋಟಿ

ಕೆಕೆಆರ್ 11,367 ಕೋಟಿ

ಜನರಲ್ ಅಟ್ಲಾಂಟಿಕ್ 6,598 ಕೋಟಿ

ವಿಸ್ಟಾ 11,367 ಕೋಟಿ

ಸಿಲ್ವರ್ ಲೇಕ್ 5,656 ಕೋಟಿ

ಫೇಸ್ ಬುಕ್ 43,574 ಕೋಟಿ

ಎಡಿಐಎಗೆ 52.5 ಲಕ್ಷ ಕೋಟಿ ಆಸ್ತಿ

ಎಡಿಐಎಗೆ 52.5 ಲಕ್ಷ ಕೋಟಿ ಆಸ್ತಿ

ಈ ಮೂಲಕ ಎಲ್ಲ ಕಂಪೆನಿಗಳೂ ಸೇರಿ ಜಿಯೋ ಪ್ಲಾಟ್ ಫಾರ್ಮ್ 97,885.65 ಕೋಟಿ ರುಪಾಯಿಯನ್ನು ಸಂಗ್ರಹಿಸಿದೆ. ಅಂದ ಹಾಗೆ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಡಿಜಿಟಲ್ ಸೇವೆಯನ್ನು ಒದಗಿಸುವ ರಿಲಯನ್ಸ್ ಇಂಡಸ್ಟ್ರೀಸ್ ಗೆ ಸೇರಿದ ಜಿಯೋ ಪ್ಲಾಟ್ ಫಾರ್ಮ್ ಗೆ ಒಟ್ಟು 38.8 ಕೋಟಿ ಗ್ರಾಹಕರಿದ್ದಾರೆ. ಎಡಿಐಎ ಅಂದಾಜು ಆಸ್ತಿ ಮೌಲ್ಯ 70 ಸಾವಿರ ಕೋಟಿ ಅಮೆರಿಕನ್ ಡಾಲರ್. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 52.5 ಲಕ್ಷ ಕೋಟಿ ರು. ಭಾರತದ ಹಲವು ಈಕ್ವಿಟಿಗಳಲ್ಲಿ ಎಡಿಐಎ ಹೂಡಿಕೆ ಮಾಡಿದೆ. ಈಚೆಗೆ ಮೂಲಸೌಕರ್ಯ, ರಿಯಲ್ ಎಸ್ಟೇಟ್ ಹಾಗೂ ಖಾಸಗಿ ಈಕ್ವಿಟಿಗಳಲ್ಲೂ ಅದರ ಆಸಕ್ತಿಯನ್ನು ಹಿಗ್ಗಿಸಿಕೊಂಡಿದೆ. ಅಂದ ಹಾಗೆ 1976ನೇ ಇಸವಿಯಿಂದಲೂ ಅಬುಧಾಬಿ ಸರ್ಕಾರದ ಪರವಾಗಿ ಎಡಿಐಎ ಹೂಡಿಕೆ ಮಾಡುತ್ತಿದೆ.

English summary

Abu Dhabi Investment Authority Will Invest 5,683 Crore In Jio Platforms

Abu Dhabi Investment Authority (ADIA), biggest sovereign fund will invest 5,683.5 crore in Reliance Industries Jio platform.
Story first published: Monday, June 8, 2020, 21:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X