For Quick Alerts
ALLOW NOTIFICATIONS  
For Daily Alerts

21 ದಿನಗಳ ಬಳಿಕ ಮತ್ತೆ ಲಾಕ್‌ಡೌನ್ ಡೌಟ್: ರೈಲ್ವೆ ಟಿಕೆಟ್ ಬುಕ್ಕಿಂಗ್ ಶುರು

|

ಕೊರೊನಾವೈರಸ್ ಮಾರಣಾಂತಿಕ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿತ್ತು. ಇದ್ದಕ್ಕಿದ್ದಂತೆ ಉಂಟಾದ ಈ ಪರಿಸ್ಥಿತಿಯಿಂದಾಗಿ ಜನರು ಕಂಗೆಟ್ಟಿರುವುದು ನಿಜ. ಆದರೆ 21 ದಿನಗಳ ಬಳಿಕ ಮತ್ತೆ ಲಾಕ್‌ಡೌನ್ ಆದರೆ ಏನು ಗತಿ ಎಂಬ ಚಿಂತೆಯು ಜನರಲ್ಲಿ ಮನೆಮಾಡಿದೆ.

ಈಗಾಗಲೇ ಮೂರು ತಿಂಗಳ ಕಾಲ ಈ ಲಾಕ್‌ಡೌನ್ ಮುಂದುವರಿಯಬಹುದು ಎಂಬ ಊಹಾಪೋಹದ ಸುದ್ದಿಗಳು ಹರಿದಾಡುತ್ತಿವೆ. ಆದರೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಆ ರೀತಿಯ ಯಾವ ಯೋಚನೆಗಳು ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇದಕ್ಕೆ ಪೂರಕ ಎಂಬಂತೆ ರೈಲ್ವೆ, ವಿಮಾನ ಪ್ರಯಾಣದ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದೆ ಎಂದು ಎಬಿಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಏಪ್ರಿಲ್ 15ರಿಂದ ಟಿಕೆಟ್ ಬುಕ್ಕಿಂಗ್ ಆರಂಭ

ಏಪ್ರಿಲ್ 15ರಿಂದ ಟಿಕೆಟ್ ಬುಕ್ಕಿಂಗ್ ಆರಂಭ

ಏಪ್ರಿಲ್ 15ರಿಂದ ರೈಲ್ವೆ ಟಿಕೆಟ್ ಬುಕಿಂಗ್ ಮಾಡಿಕೊಳ್ಳುತ್ತಿರುವುದರಿಂದ ಕೇಂದ್ರ ಸರ್ಕಾರ 21 ದಿನಗಳ ನಂತರ ಲಾಕ್ ಡೌನ್ ಮತ್ತೆ ಮುಂದುವರಿಸುವುದಿಲ್ಲ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದು ವರದಿ ಹೇಳಿದೆ. ಏಪ್ರಿಲ್ 15ರಿಂದ ಪ್ರಯಾಣಿಕರ ಸೀಟುಗಳನ್ನು ಕಾಯ್ದಿರಿಸಿಕೊಳ್ಳಲು ಭಾರತೀಯ ರೈಲ್ವೆ ಇಲಾಖೆ ಆರಂಭಿಸಿದೆ. ಏಪ್ರಿಲ್ 15ರಿಂದ ದೇಶಾದ್ಯಂತ ಸಂಚರಿಸಲು ಅನುಕೂಲವಾಗಲಿದೆ ಎಂದು ವರದಿ ವಿವರಿಸಿದೆ.

ಹಂತ-ಹಂತವಾಗಿ ರೈಲ್ವೆ ಸಂಚಾರ?

ಹಂತ-ಹಂತವಾಗಿ ರೈಲ್ವೆ ಸಂಚಾರ?

ದೇಶದ ಅತೀ ದೊಡ್ಡ ಸಾರಿಗೆ ವ್ಯವಸ್ಥೆ ಭಾರತೀಯ ರೈಲ್ವೆ ಸಾರಿಗೆ ಸಂಪೂರ್ಣವಾಗಿ ಸ್ಥಬ್ದಗೊಂಡಿದೆ. ಪ್ರಯಾಣಿಕರ ರೈಲು ಸಂಚಾರ ಲಾಕ್‌ಡೌನ್ ಮುಗಿಯುವವರೆಗೂ ಇರಲಿದೆ. ಆದರೆ ಲಾಕ್‌ಡೌನ್ ಬಳಿಕ ಹಂತ, ಹಂತವಾಗಿ ರೈಲ್ವೆ ಸಂಚಾರ ಆರಂಭಿಸುವ ಸಾಧ್ಯತೆ ಇರಬಹುದು ಎಂದು ವರದಿ ತಿಳಿಸಿದೆ. ಐಆರ್‌ಸಿಟಿಸಿ ವೆಬ್ ಸೈಟ್ ನ ರಿಸರ್ವೇಶನ್ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದೆ.

ಮಾರ್ಚ್ 22ರಿಂದ ಮಾರ್ಚ್ 31ರವರೆಗೆ ಪ್ರಯಾಣಿಕರ ರೈಲು ಸೇವೆ ಸ್ಥಗಿತಗೊಳ್ಳಲಿದ್ದು, 9000 ಸರಕು ಸಾಗಣೆ ರೈಲುಗಳು ದಿನಂಪ್ರತಿ ಸಂಚರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು. ಸರ್ಕಾರಿ ಅಧಿಕಾರಿಗಳ ಹೇಳಿಕೆ ಪ್ರಕಾರ, ಏಪ್ರಿಲ್ 15ರಿಂದ ಟಿಕೆಟ್ ಬುಕ್ಕಿಂಗ್ ಅನ್ನು ಐಆರ್ ಸಿಟಿಸಿ ಆರಂಭಿಸಿದೆ.

ಟ್ವೀಟ್ ಮೂಲಕ ರೈಲ್ವೇ ಇಲಾಖೆ ಸ್ಪಷ್ಟನೆ

ಟ್ವೀಟ್ ಮೂಲಕ ರೈಲ್ವೇ ಇಲಾಖೆ ಸ್ಪಷ್ಟನೆ

ಕೆಲವು ಮಾಧ್ಯಮಗಳಲ್ಲಿ ಈಗಾಗಲೇ ಏಪ್ರಿಲ್ 14ರ ಲಾಕ್ ಡೌನ್ ಮುಗಿದ ಬಳಿಕ ಏಪ್ರಿಲ್ 15ರಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಆರಂಭಿಸಿದೆ ಎಂದು ವರದಿ ಮಾಡಿದೆ. ಆದರೆ ಇದು ತಪ್ಪು ಗ್ರಹಿಕೆ ಎಂದು ಭಾರತೀಯ ರೈಲ್ವೆ ಇಲಾಖೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಗೆ 120 ದಿನಗಳ ಕಾಲಾವಧಿ ಇರುತ್ತದೆ. ಹೀಗಾಗಿ ಏಪ್ರಿಲ್ 15ರಂದು ಟಿಕೆಟ್ ಬುಕ್ಕಿಂಗ್ ಆರಂಭಿಸಿರುವುದು ಲಾಕ್ ಡೌನ್ ಘೋಷಿಸುವ ಮೊದಲಿನ ಸಮಯದ್ದಾಗಿದೆ ಎಂದು ತಿಳಿಸಿದೆ.

ಲಾಕ್‌ಡೌನ್ ಮುಗಿದ ಬಳಿಕ ಮುಂಗಡ ಟಿಕೆಟ್ ಬುಕ್ಕಿಂಗ್

ಲಾಕ್‌ಡೌನ್ ಮುಗಿದ ಬಳಿಕ ಮುಂಗಡ ಟಿಕೆಟ್ ಬುಕ್ಕಿಂಗ್

ಲಾಕ್ ಡೌನ್ ಸಮಯದಲ್ಲಿ ಯಾರು ಟಿಕೆಟ್ ಬುಕ್ಕಿಂಗ್ ಮಾಡಿದ್ದಾರೋ ಅವರಿಗೆ ಹಣ ಹಿಂತಿರುಗಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಅನ್ನು ನಾವು ಯಾವತ್ತೂ ನಿಲ್ಲಿಸಿಲ್ಲ. ಇದು ಯಾವುದೇ ಹೊಸ ಘೋಷಣೆಗೆ ಸಂಬಂಧಿಸಿದ್ದಲ್ಲ ಎಂದು ರೈಲ್ವೆ ಇಲಾಖೆ ಹೇಳಿದೆ.


ಈ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಗಮನಿಸಿದರೆ ಏಪ್ರಿಲ್ 15ರ ಬಳಿಕ ರೈಲ್ವೆ ಸಂಚಾರ ಹಂತ ಹಂತವಾಗಿ ಪುನರ್ ಆರಂಭಗೊಳ್ಳುವ ಸಾಧ್ಯತೆ ಇದೆ.

English summary

After April 14 India Lockdown May Be Dought Book Your Train Ticket

The Indian Railways has started accepting bookings for trains from April 15 onwards
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X