For Quick Alerts
ALLOW NOTIFICATIONS  
For Daily Alerts

ಜಿಯೋ V/s ಏರ್‌ಟೆಲ್: 599 ರೂ. ಪ್ರಿಪೇಯ್ಡ್‌ ಯೋಜನೆಯಲ್ಲಿ, ಯಾವುದು ಉತ್ತಮ?

|

ಬಹುದೊಡ್ಡ ಗ್ರಾಹಕರನ್ನು ಹೊಂದಿರುವ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ನಡುವೆ ಭಾರತದಲ್ಲಿ ಸ್ಪರ್ಧೆ ಬಹು ಜೋರಾಗಿದೆ. ಈ ಎರಡು ಟೆಲಿಕಾಂ ಕಂಪನಿಗಳ ಹಗ್ಗ ಜಗ್ಗಾಟದ ಲಾಭ ಗ್ರಾಹಕರಿಗೆ ಸಿಗುತ್ತಿದೆ. ಏಕೆಂದರೆ ಇಬ್ಬರ ಬಹುತೇಕ ಯೋಜನೆಗಳು ಒಂದೇ ರೀತಿಯಲ್ಲಿ ಇರುತ್ತದೆ. ಆದರೂ ಎರಡು ಟೆಲಿಕಾಂ ಕಂಪನಿಯ ಪ್ರಿಪೇಯ್ಡ್‌ ಇತರೆ ಪ್ರಯೋಜನಗಳಲ್ಲಿ ವ್ಯತ್ಯಾಸಗಳಿವೆ.

 

ಆದರೆ ಏರ್‌ಟೆಲ್‌ಗೆ ಹೋಲಿಸಿದರೆ ರಿಲಯನ್ಸ್ ಜಿಯೋ ಯೋಜನೆಗಳು ಸ್ವಲ್ಪ ಅಗ್ಗವಾಗಿದೆ ಮತ್ತು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿದೆ. ಹೀಗಾಗಿ ರಿಲಯನ್ಸ್ ಜಿಯೋ 599 ರೂಪಾಯಿ ಪ್ರಿಪೇಯ್ಡ್ ಯೋಜನೆ ಮತ್ತು ಏರ್‌ಟೆಲ್‌ನ 599 ರೂಪಾಯಿ ಪ್ರಿಪೇಯ್ಡ್ ಪ್ಲಾನ್‌ ನಡುವೆ ವ್ಯತ್ಯಾಸವನ್ನು ನಾವು ನಿಮಗೆ ತಿಳಿಸಲಿದ್ದೇವೆ. ಈ ಎರಡರಲ್ಲಿ ಯಾವುದು ಉತ್ತಮ ಎಂದು ನೀವೆ ಆಯ್ದುಕೊಳ್ಳಿ.

ರಿಲಯನ್ಸ್ ಜಿಯೋ 599 ರೂಪಾಯಿ ಯೋಜನೆ

ರಿಲಯನ್ಸ್ ಜಿಯೋ 599 ರೂಪಾಯಿ ಯೋಜನೆ

ರಿಲಯನ್ಸ್ ಜಿಯೋದ 599 ರೂಗಳ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಬಳಕೆದಾರರು ಒಟ್ಟು 168 GB ಡೇಟಾವನ್ನು ಪಡೆಯುತ್ತಾರೆ. ಅಂದರೆ, 2GB ಹೈಸ್ಪೀಡ್ ಇಂಟರ್ನೆಟ್ ಡೇಟಾ ಪ್ರತಿದಿನ ಲಭ್ಯವಿದೆ ಮತ್ತು ಇದರ ವ್ಯಾಲಿಡಿಟಿ 84 ದಿನಗಳು. ಇದಲ್ಲದೇ, ಬಳಕೆದಾರರು ಈ ಪ್ಲಾನ್‌ನಲ್ಲಿ ಪ್ರತಿದಿನ 100 SMS ಪಡೆಯುತ್ತಾರೆ. ಮತ್ತು ಯಾವುದೇ ನೆಟ್‌ವರ್ಕ್‌ಗೆ ಕರೆ ಮಾಡಲು, ನೀವು ಅದರಲ್ಲಿ ಅನಿಯಮಿತ ಕರೆ ಪ್ರಯೋಜನವನ್ನು ಪಡೆಯುತ್ತೀರಿ.

ಜಿಯೋ 599 ರೂಪಾಯಿ ಯೋಜನೆ

ಜಿಯೋ 599 ರೂಪಾಯಿ ಯೋಜನೆ

ಜಿಯೋ 599 ರೂಪಾಯಿ ಯೋಜನೆಯ ಇತರೆ ಪ್ರಯೋಜನಗಳ ಬಗ್ಗೆ ನೋಡುವುದಾದರೆ , ಈ ಪ್ರಿಪೇಯ್ಡ್ ಯೋಜನೆಯಲ್ಲಿ ಅನೇಕ ಆ್ಪ್‌ಗಳು ಉಚಿತ ಚಂದಾದಾರಿಕೆಯನ್ನು ಪಡೆಯುತ್ತವೆ, ಉದಾಹರಣೆಗೆ JioTV, JioCinema, Jio News, JioSecurity ಮತ್ತು Jio Cloud ಪ್ರವೇಶವು ಉಚಿತವಾಗಿ ಲಭ್ಯವಿದೆ.

ಜಿಯೋ VS ಏರ್‌ಟೆಲ್‌ VS ವೊಡಾಫೋನ್ ಐಡಿಯಾ: 56 ದಿನಗಳ ಬೆಸ್ಟ್‌ ಪ್ರಿಪೇಯ್ಡ್‌ ಯೋಜನೆಜಿಯೋ VS ಏರ್‌ಟೆಲ್‌ VS ವೊಡಾಫೋನ್ ಐಡಿಯಾ: 56 ದಿನಗಳ ಬೆಸ್ಟ್‌ ಪ್ರಿಪೇಯ್ಡ್‌ ಯೋಜನೆ

ಏರ್‌ಟೆಲ್ 599 ರೂ. ಪ್ರಿಪೇಯ್ಡ್ ಯೋಜನೆ
 

ಏರ್‌ಟೆಲ್ 599 ರೂ. ಪ್ರಿಪೇಯ್ಡ್ ಯೋಜನೆ

ಭಾರ್ತಿ ಏರ್‌ಟೆಲ್‌ನ 599 ರೂಪಾಯಿ ಪ್ಲಾನ್ ಬಗ್ಗೆ ನೋಡುವುದಾದರೆ ಬಳಕೆದಾರರು ಇದರಲ್ಲಿ 2GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಕರೆ ಮಾಡುವಾಗ, ನೀವು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆಗಳನ್ನು ಮಾಡಬಹುದು. ಈ ಯೋಜನೆಯಲ್ಲಿ 100 ಎಸ್‌ಎಂಎಸ್‌ಗಳು ಲಭ್ಯವಿದೆ. ಆದರೆ ವ್ಯಾಲಿಡಿಟಿ ಕಡೆ ನೋಡುವುದಾದರೆ, ಬಳಕೆದಾರರು ಕೇವಲ 56 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ.

ಏರ್‌ಟೆಲ್ ಯೋಜನೆಯ ಇತರೆ ಪ್ರಯೋಜನಗಳು

ಏರ್‌ಟೆಲ್ ಯೋಜನೆಯ ಇತರೆ ಪ್ರಯೋಜನಗಳು

ಏರ್‌ಟೆಲ್‌ನಲ್ಲಿ ಕೂಡ ಇತರೆ ಆ್ಯಪ್‌ಗಳ ಉಚಿತ ಸಬ್‌ಸ್ಕ್ರಿಪ್ಶನ್ ಕೂಡ ಲಭ್ಯವಿದೆ. ಆದರೆ ಇದನ್ನು ಜಿಯೋ ತನ್ನ 599 ರೂ. ಪ್ಲಾನ್‌ನಲ್ಲಿ ನೀಡುವುದಿಲ್ಲ. ಇದರಲ್ಲಿ, 1 ವರ್ಷಕ್ಕೆ ಡಿಸ್ನಿ + ಹಾಟ್‌ಸ್ಟಾರ್‌ನ ವಿಐಪಿ ಚಂದಾದಾರಿಕೆ ಮತ್ತು 1 ತಿಂಗಳ ಕಾಲ ಅಮೆಜಾನ್ ಪ್ರೈಮ್‌ನ ಮೊಬೈಲ್ ಆವೃತ್ತಿ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿದೆ.

ಇದರ ಹೊರತಾಗಿ, 100 ರೂಪಾಯಿಗಳ ಕ್ಯಾಶ್‌ಬ್ಯಾಕ್ ಅಪೊಲೊ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ, ಉಚಿತ ಹಲೋ ಟ್ಯೂನ್ಸ್, ವಿಂಕ್ ಮ್ಯೂಸಿಕ್, ಉಚಿತ ಆನ್‌ಲೈನ್ ಕೋರ್ಸ್‌ಗಳು ಮತ್ತು ಫಾಸ್ಟ್‌ಟ್ಯಾಗ್‌ನಲ್ಲಿ ಲಭ್ಯವಿದೆ.

 ಗೂಗಲ್ ಪೇನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಬದಲಿಸುವುದು ಹೇಗೆ? ಗೂಗಲ್ ಪೇನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಬದಲಿಸುವುದು ಹೇಗೆ?

ಹಾಗಾದರೆ ಯಾವ ಯೋಜನೆ ಉತ್ತಮ?

ಹಾಗಾದರೆ ಯಾವ ಯೋಜನೆ ಉತ್ತಮ?

ನೀವು ಡೇಟಾಕ್ಕಾಗಿ ಈ ಪ್ಲಾನ್ ಅನ್ನು ಆರಿಸಿಕೊಂಡರೆ ಮಾತ್ರ ಜಿಯೋ 599 ಪ್ಲಾನ್ ನಿಮಗೆ ಉತ್ತಮವಾಗಿರುತ್ತದೆ. ಏಕೆಂದರೆ ಇದರಲ್ಲಿ ನೀವು 84GB ಗೆ ಪ್ರತಿದಿನ 2GB ಡೇಟಾವನ್ನು ಪಡೆಯುತ್ತೀರಿ. ಆದರೆ ನೀವು OTT ಪ್ಲಾಟ್‌ಫಾರ್ಮ್‌ನ ಉಚಿತ ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯಬೇಕೆಂದು ಬಯಸಿದರೆ, ಏರ್‌ಟೆಲ್ 599 ರೂ. ಪ್ಲಾನ್ ಆಯ್ಕೆ ಉತ್ತಮವಾಗಿರುತ್ತದೆ.

English summary

Airtel Vs Jio: Rs 599 Best Prepaid Plan Details Here

Here the Rs 599 Prepaid plan of Bharti airtel and reliance jio explained in Kannada
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X