For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಡಿಜಿಟಲ್ ಅಸಿಸ್ಟೆಂಟ್ ಅಲೆಕ್ಸಾಗೆ, ಬಿಗ್‌ ಬಿ ಅಮಿತಾಬ್‌ ಬಚ್ಚನ್ ಧ್ವನಿ

|

ಅಮೆರಿಕಾದ ಇ-ಕಾಮರ್ಸ್ ದೈತ್ಯ ಅಮೆಜಾನ್ ಸೋಮವಾರ ತನ್ನ ಡಿಜಿಟಲ್ ಅಸಿಸ್ಟೆಂಟ್ ಅಲೆಕ್ಸಾ ಗಾಗಿ ಸೆಲೆಬ್ರೆಟಿಗಳ ಧ್ವನಿ ಹೊಂದಲು ನಟ ಅಮಿತಾಬ್ ಬಚ್ಚನ್ ಅವರೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಪ್ರಕಟಿಸಿದೆ.

 

ಸದ್ಯ ಸಾಕಷ್ಟು ಟ್ರೆಂಡಿಯಾಗಿರುವ ಅಮೆಜಾನ್ ಅಲೆಕ್ಸಾದಲ್ಲಿ ಅಮಿತಾಬ್ ಬಚ್ಚನ್ ಧ್ವನಿ ಬರಲಿದ್ದು, ಈ ಮೂಲಕ ಭಾರತದಲ್ಲಿ ಅಲೆಕ್ಸಾದ ಮೊದಲ ಸೆಲೆಬ್ರೆಟಿಯಾಗಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಈ ಹೊಸ ವೈಶಿಷ್ಟ್ಯ ಲಭ್ಯವಾಗಲಿದೆ.

ಅಮೆಜಾನ್‌ ಅಲೆಕ್ಸಾಗೆ ಬಿಗ್‌ ಬಿ ಅಮಿತಾಬ್‌ ಬಚ್ಚನ್ ಧ್ವನಿ

ಬಚ್ಚನ್ ಅವರ ಧ್ವನಿ ಉಚಿತವಾಗಿ ಲಭ್ಯವಿರುವುದಿನಲ್ಲಿ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಅಮೆಜಾನ್ ಬಳಕೆದಾರರು ಅಲೆಕ್ಸಾ ಗಾಗಿ ಅಮಿತಾಬ್‌ ಧ್ವನಿ ಅನುಭವವನ್ನು ಖರೀದಿಸಬೇಕಾಗುತ್ತದೆ ಎಂದು ಹೇಳಿದರು. ''ಇದರ ಜೊತೆಗೆ ಹಾಸ್ಯ, ಹವಾಮಾನ ಮಾಹಿತಿ, ಶಾಯಾರಿಗಳು, ಪ್ರೇರಕ ಉಲ್ಲೇಖಗಳು, ಸಲಹೆ ಮತ್ತು ಹೆಚ್ಚಿನ ಜನಪ್ರಿಯ ಕೊಡುಗೆಗಳನ್ನು ಒಳಗೊಂಡಿರುತ್ತದೆ" ಎಂದು ಕಂಪನಿಯು ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

ಬಚ್ಚನ್ ಭಾರತದಿಂದ ಅಲೆಕ್ಸಾಗಾಗಿ ಧ್ವನಿ ನೀಡಿದ ಮೊದಲಿಗರಾಗಿದ್ದು, ಆದರೆ ಜಾಗತಿಕವಾಗಿ ಮೊದಲಿಗರಲ್ಲ. ಕಂಪನಿಯು ಮೊದಲು ಅಮೆರಿಕಾ(ಯುಎಸ್) ದಲ್ಲಿ ಒಬ್ಬ ಪ್ರಸಿದ್ಧ ವ್ಯಕ್ತಿಯೊಂದಿಗೆ ಕೆಲಸ ಮಾಡಿದ್ದು, ನಟ ಸ್ಯಾಮ್ಯುಯೆಲ್ ಎಲ್. ಜಾಕ್ಸನ್ ಅವರ ಧ್ವನಿಯನ್ನು ಮೊದಲು ಪರಿಚಯಿಸಲಾಗಿತ್ತು. ಇದಾದ ಬಳಿಕ ವಾಸ್ತವವಾಗಿ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಆ ಸಮಯದಲ್ಲಿ ಬಚ್ಚನ್ ಅವರ ಧ್ವನಿಯನ್ನು ಹೊಂದಲು ಅಮೆಜಾನ್‌ಗೆ ಕೇಳಿದ್ದರು.

English summary

Amazon Will Add Amitabh Bachachan's Voice To Alexa

e-Commerce giant Amazon on Monday announced that the company has partnered with Bollywood actor Amitabh Bachchan to create a celebrity voice for its digital assistant, Alexa.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X