For Quick Alerts
ALLOW NOTIFICATIONS  
For Daily Alerts

ಎರಡನೇ ಜಾಗತಿಕ ಯುದ್ಧದ ನಂತರ ಅಮೆರಿಕಕ್ಕೆ ಬಿದ್ದ ಮಹಾ ಹೊಡೆತ

|

ವಾಷಿಂಗ್ಟನ್, ಜೂನ್ 5: ಮಹಾಮಾರಿ ಕೊರೊನಾವೈರಸ್‌ ಜಗತ್ತಿನ ಅರ್ಥವ್ಯವಸ್ಥೆಯ ಮುಂದಾಳು ಅಮೆರಿಕದ ಜಂಘಾಬಲವನ್ನೇ ಉಡುಗಿಸಿದೆ. ಆ ದೇಶದಲ್ಲಿ ಕೊರೊನಾವೈರಸ್ ಹಾವಳಿ ವ್ಯಾಪಕವಾಗಿದ್ದು, ಒಂದೂವರೆ ಲಕ್ಷ ಜನ ಮರಣ ಹೊಂದಿದ್ದಾರೆ.

 

ಇನ್ನೊಂದೆಡೆ ಕೊರೊನಾ ಅಮೆರಿಕದ ಅರ್ಥ ವ್ಯವಸ್ಥೆಯನ್ನು ಹೈರಾಣಾಗಿಸಿದೆ. ಇದಕ್ಕೆ ತಾಜಾ ಉದಾಹರಣೆಯಂದರೆ ಎರಡನೇ ಮಹಾಯುದ್ಧದ ನಂತರ ಇದೇ ಮೊದಲ ಬಾರಿಗೆ ನಿರುದ್ಯೋಗದ ಪ್ರಮಾಣ ತೀವ್ರ ಏರಿಕೆಯಾಗಿರುವುದು ಕಂಡು ಬಂದಿದೆ. ಇದು ಪ್ರಸ್ತುತ ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಸ್ ಸರ್ಕಾರವನ್ನು ಅಲುಗಾಡಿಸುತ್ತಿದೆ.

ಕೊರೊನಾವೈರಸ್ ಲಾಕ್‌ಡೌನ್ ಎಫೆಕ್ಟ್: 30 ಲಕ್ಷ ಕೋಟಿ ರುಪಾಯಿ ನಷ್ಟದ ಅಂದಾಜುಕೊರೊನಾವೈರಸ್ ಲಾಕ್‌ಡೌನ್ ಎಫೆಕ್ಟ್: 30 ಲಕ್ಷ ಕೋಟಿ ರುಪಾಯಿ ನಷ್ಟದ ಅಂದಾಜು

ಅಮೆರಿಕದಲ್ಲಿ ನಿರುದ್ಯೋಗ ದರವು ಮೇ ತಿಂಗಳಲ್ಲಿ ಸುಮಾರು 20% ರಷ್ಟಿ ಹೆಚ್ಚಳ ಕಂಡಿದೆ. ಇದು ಎರಡನೆಯ ಮಹಾಯುದ್ಧದ ನಂತರದ ಕಂಡು ಬಂದ ಅತಿ ದೊಡ್ಡ ದಾಖಲೆಯಾಗಿದೆ. ಒಟ್ಟಾರೆ ಅಮೆರಿಕದಲ್ಲಿ ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ಇಲ್ಲಿಯವರೆಗೆ 2.9 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಸುಧಾರಿಸಿಕೊಳ್ಳಲು ಹಲವಾರು ವರ್ಷ ಬೇಕು

ಸುಧಾರಿಸಿಕೊಳ್ಳಲು ಹಲವಾರು ವರ್ಷ ಬೇಕು

ಅಮೆರಿದಲ್ಲಿ ಕಳೆದ 75 ವರ್ಷಗಳಿಂದ ಕಂಡು ಬರದ ಭೀಕರ ಸನ್ನಿವೇಶ ಕಂಡು ಬಂದಿದೆ. ಅಲ್ಲಿನ ಕಾರ್ಮಿಕ ಇಲಾಖೆಯು ಮಾಸಿಕ ಉದ್ಯೋಗ ವರದಿಯನ್ನು ಬಿಡುಗಡೆ ಮಾಡಿದ್ದು, ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳಲು ಹಲವಾರು ವರ್ಷಗಳು ಬೇಕಾಗುತ್ತದೆ ಎಂದು ಮುನ್ಸೂಚನೆ ನೀಡಿದ್ದಾರೆ.

ಸಮೀಕ್ಷೆಗಳಿಂದ ಸಂಗ್ರಹಿಸಲಾಗಿದೆ

ಸಮೀಕ್ಷೆಗಳಿಂದ ಸಂಗ್ರಹಿಸಲಾಗಿದೆ

ಉದ್ಯೋಗ ವರದಿಯನ್ನು ಎರಡು ಪ್ರತ್ಯೇಕ ಸಮೀಕ್ಷೆಗಳಿಂದ ಸಂಗ್ರಹಿಸಲಾಗಿದೆ. ಅರ್ಥಶಾಸ್ತ್ರಜ್ಞರ ಸಮೀಕ್ಷೆಯ ಪ್ರಕಾರ, ಮೇ ತಿಂಗಳಲ್ಲಿ ನಿರುದ್ಯೋಗ ದರವು 19.8% ಕ್ಕೆ ಏರಿದೆ. ಏಪ್ರಿಲ್‌ನಲ್ಲಿ ನಿರುದ್ಯೋಗ ದರವು 14.7% ಕಂಡು ಬಂದಿತ್ತು.

ಪರಿಸ್ಥಿತಿ ಕೆಟ್ಟದ್ದಾಗಿದೆ
 

ಪರಿಸ್ಥಿತಿ ಕೆಟ್ಟದ್ದಾಗಿದೆ

ಲಾಸ್ ಏಂಜಲೀಸ್‌ನ ಮೇರಿಮೌಂಟ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಸಂಗ್ ವಾನ್ ಅವರು, ''ನಾವು ಕಳೆದ ವರ್ಷ ಇದ್ದ ಮಹೋನ್ನತ ಸ್ಥಾನ ತಲುಪಲು ಬಹುಶಃ ಒಂದು ದಶಕ ಬೇಕಾಗುತ್ತದೆ. ಗ್ರಾಹಕರ ವಿಶ್ವಾಸ, ಉತ್ಪಾದನೆ ಮತ್ತು ಸೇವಾ ಕೈಗಾರಿಕೆಗಳು ಸ್ಥಿರವಾಗುತ್ತಿವೆ. ಇವು ಕಡಿಮೆ ಮಟ್ಟದಲ್ಲಿದ್ದರೂ, ಪರಿಸ್ಥಿತಿ ಕೆಟ್ಟದ್ದಾಗಿದೆ'' ಎಂದು ಹೇಳುತ್ತಾರೆ.

ಅಮೆರಿಕನ್ನರು ಉದ್ಯೋಗ ನಷ್ಟ ಅನುಭವಿಸುತ್ತಿದ್ದಾರೆ

ಅಮೆರಿಕನ್ನರು ಉದ್ಯೋಗ ನಷ್ಟ ಅನುಭವಿಸುತ್ತಿದ್ದಾರೆ

ಲಾಕ್‌ಡೌನ್ ಪರಿಣಾಮವಾಗಿಯೇ ಇಂದು ಅಮೆರಿಕನ್ನರು ಉದ್ಯೋಗ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದೆ. 2007-09ರ ಅಮೆರಿಕದ ಮಹಾ ಆರ್ಥಿಕ ಹಿಂಜರಿತದ ಸಮಯದಲ್ಲಿ ಕಳೆದುಹೋದ ಉದ್ಯೋಗಕ್ಕಿಂತ ಈಗ ಸಂಭವಿಸಿರುವುದು ಮೂರು ಪಟ್ಟು ಹೆಚ್ಚು ಎನ್ನಲಾಗುತ್ತಿದೆ. ಆಗ ನಿರುದ್ಯೋಗ ವಿಷಯದಲ್ಲಿ ಅಮೆರಿಕ ಸುಧಾರಿಸಿಕೊಳ್ಳಲು ಆರು ವರ್ಷವೇ ಬೇಕಾಯಿತು.

English summary

America Unemployment Rate Increase Near 20 Per Cent Ahead Of Coronavirus Outbreak

America's Unemployment Rate Increase Near 20 Per Cent Ahead Of Coronavirus Outbreak. this is highest Unemployment rate after 2 nd world war.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X